logo
ಕನ್ನಡ ಸುದ್ದಿ  /  ಕರ್ನಾಟಕ  /  Mysuru News: ಮೈಸೂರಿನಲ್ಲಿ ಉತ್ಪಾದನೆಯಾಗಲಿದೆ ಅತ್ಯಾಧುನಿಕ ಡ್ರೋನ್‌, ಇ-ಪ್ಲೇನ್ ಜತೆಗೆ ವಿನ್ಯಾಸ್‌ ಮೈತ್ರಿ

Mysuru News: ಮೈಸೂರಿನಲ್ಲಿ ಉತ್ಪಾದನೆಯಾಗಲಿದೆ ಅತ್ಯಾಧುನಿಕ ಡ್ರೋನ್‌, ಇ-ಪ್ಲೇನ್ ಜತೆಗೆ ವಿನ್ಯಾಸ್‌ ಮೈತ್ರಿ

HT Kannada Desk HT Kannada

May 21, 2023 09:32 AM IST

ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಲಿಟಿಕ್ಸ್ ಮತ್ತು ಇ-ಪ್ಲೇನ್ ಸಂಸ್ಥೆಗಳಿಂದ ಎಂಓಯು ಒಪ್ಪಂದಕ್ಕೆ ಸಹಿ

    • ಮೈಸೂರಿನ ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಲಿಟಿಕ್ಸ್ ಸಂಸ್ಥೆಯು ಯುಎವಿ ಮತ್ತು ಎಲೆಕ್ಟ್ರಿಕ್ ಫ್ಲೈಯಿಂಗ್ ವಾಹನಗಳ ತಯಾರಿಕೆಗಾಗಿ ಇ-ಪ್ಲೇನ್ ಕಂಪನಿಯೊಂದಿಗೆ ಎಂಓಯು ಒಪ್ಪಂದಕ್ಕೆ ಸಹಿ ಮಾಡಿದೆ.
 ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಲಿಟಿಕ್ಸ್  ಮತ್ತು ಇ-ಪ್ಲೇನ್ ಸಂಸ್ಥೆಗಳಿಂದ ಎಂಓಯು ಒಪ್ಪಂದಕ್ಕೆ ಸಹಿ
ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಲಿಟಿಕ್ಸ್ ಮತ್ತು ಇ-ಪ್ಲೇನ್ ಸಂಸ್ಥೆಗಳಿಂದ ಎಂಓಯು ಒಪ್ಪಂದಕ್ಕೆ ಸಹಿ

ಮೈಸೂರು: ನಗರದ ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಲಿಟಿಕ್ಸ್ ಸಂಸ್ಥೆಯು ಯುಎವಿ ಮತ್ತು ಎಲೆಕ್ಟ್ರಿಕ್ ಫ್ಲೈಯಿಂಗ್ ವಾಹನಗಳ ತಯಾರಿಕೆಗಾಗಿ ಇ-ಪ್ಲೇನ್ ಕಂಪನಿಯೊಂದಿಗೆ ಎಂಓಯು ಒಪ್ಪಂದಕ್ಕೆ ಸಹಿ ಮಾಡಿದೆ. ಮೈಸೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡೂ ಸಂಸ್ಥೆಗಳ ಪ್ರಮುಖರು ಎಂಓಯು ಒಪ್ಪಂದಕ್ಕೆ ಸಹಿ ಹಾಕಿದರು. ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಜಾಗತಿಕ ಮಟ್ಟದಲ್ಲಿ ಈ ವಾಹನಗಳ ಉತ್ಪಾದನೆ ಬೃಹತ್‌ ಮಟ್ಟದ ಏರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಈ ಒಪ್ಪಂದವು ಬಹಳ ಪ್ರಮುಖವಾದದ್ದಾಗಿದೆ.

ಟ್ರೆಂಡಿಂಗ್​ ಸುದ್ದಿ

Hassan Sex Scandal; ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಕೇಸ್‌ ಏನಾಯಿತು, ಇದುವರೆಗಿನ 10 ಪ್ರಮುಖ ಅಂಶಗಳು

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ; ದಿವಂಗತ ವಿದ್ಯಾ ಸರಸ್ವತಿ ಚೂಂತಾರು - ವ್ಯಕ್ತಿ ವ್ಯಕ್ತಿತ್ವ ಅಂಕಣ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

ಈ ಒಪ್ಪಂದವು ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾದ ಆಶಯದೊಂದಿಗೆ ಕಾರ್ಯೋನ್ಮುಖವಾಗಿರುತ್ತದೆ. ಜತೆಗೆ ಪ್ರಮುಖ ಕಾರ್ಯತಂತ್ರದ ವಿಭಾಗಗಳಿಗೆ ಡ್ರೋನ್‌ ಸೇವೆಯನ್ನು ನೀಡಲು ಮಾನವ ರಹಿತ ವಿಮಾನ ಮತ್ತು ಹಾರುವ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ನೆರವಾಗಲಿದೆ. ಈ ಒಪ್ಪಂದದ ಪ್ರಕಾರ ವಿನ್ಯಾಸ್ ಸಂಸ್ಥೆಯು ಇ-ಬೇಸ್ ಕಂಪೆನಿಯ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಮೈಸೂರಿನ ಉತ್ಪಾದನಾ ಘಟಕದಲ್ಲಿ ಅತ್ಯಾಧುನಿಕ ಡ್ರೋನ್‌ಗಳ ಬಿಡಿಭಾಗಗಳನ್ನು ತಯಾರಿಸಿ ಜೋಡಣೆ ಮಾಡಲಾಗುತ್ತದೆ. ಈ ಸಂಸ್ಥೆಯು ವಿಶ್ವದಾದ್ಯಂತ ತನ್ನ ಗ್ರಾಹಕರಿಗೆ ಮಾರುಕಟ್ಟೆ ಸೇವೆ ಒದಗಿಸಲಿದೆ. ಈ ವಿದ್ಯುನ್ಮಾನ ಹಾರಾಟದ ವಿಮಾನ ಹಾಗೂ ವಾಹನಗಳನ್ನು ಭೂ ಭದ್ರತೆ ಮತ್ತು ಕಾವಲು, ವಿತರಣೆ, ರೈಲು ತಪಾಸಣೆ ಮತ್ತು ಚಾರಣ ಮತ್ತಿತರ ಅವಶ್ಯಕತೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ವಾಹನಗಳು ಮೈಸೂರಿನಲ್ಲಿ ತಯಾರಾಗುತ್ತದೆ ಎಂಬುದು ಮೈಸೂರಿಗೆ ಹೆಮ್ಮೆಯ ಸಂಗತಿ.

ಈ ಕುರಿತು ಮಾತನಾಡಿರುವ ವಿನ್ಯಾಸ್ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ನರೇಂದ್ರ ನಾರಾಯಣನ್ ಅವರು, ವಿವಿಧ ವಲಯಗಳಿಗೆ ಅತ್ಯುತ್ತಮವಾದ ಡ್ರೋನ್ ತಂತ್ರಜ್ಞಾನದ ಪರಿಹಾರಗಳನ್ನು ನೀಡಲು ನಮ್ಮ ವಿನ್ಯಾಸ ಮತ್ತು ಉತ್ಪಾದನಾ ಪರಿಮಿತಿಯನ್ನು ಸಂಯೋಜಿಸಲು ಇ-ಪ್ಲೇನ್ ಸಂಸ್ಥೆಯೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇ-ಪ್ಲೇನ್ ನ ವಿಶ್ವ ದರ್ಜೆಯ ತಂತ್ರಜ್ಞಾನ ಹಾಗೂ ನಮ್ಮ ಇಂಜಿನಿಯರಿಂಗ್ ಬಳಸಿಕೊಂಡು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡ್ರೋನ್‌ ಮಾರುಕಟ್ಟೆಗೆ ನಮ್ಮದೇ ಆದ ಕೊಡುಗೆ ನೀಡಬೇಕೆಂಬುದು ನಮ್ಮ ಉದ್ದೇಶ. ಈ ಉದ್ದೇಶ ನಿಸ್ಸಂದೇಹವಾಗಿ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇ-ಪ್ಲೇನ್ ಕಂಪನಿಯ ಸ್ಥಾಪಕರು ಮತ್ತು ಸಿಇಒ ಆದ ಪ್ರೊಫೆಸರ್ ಸತ್ಯ ಚಕ್ರವರ್ತಿಯವರು ಮಾತನಾಡಿ, ನಾವು ಏರ್ ಟ್ಯಾಕ್ಸಿ ಮತ್ತು ಯುಎವಿ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ನಮ್ಮ ತಂತ್ರಜ್ಞಾನದ ಮೂಲಕ ನಗರದೊಳಗಿನ ಪ್ರಯಾಣ ಮತ್ತು ಸಾರಿಗೆಯನ್ನು ಮರುವ್ಯಾಖ್ಯಾನಿಸುವ ಪ್ರಯತ್ನದಲ್ಲಿದ್ದೇವೆ. ಡ್ರೋನ್ ಗಳು ಮತ್ತು ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳಲ್ಲಿ ಅಳವಡಿಸಿರುವ ನಮ್ಮ ಪ್ರತ್ಯೇಕವಾದ eVTOL ತಂತ್ರಜ್ಞಾನವು ಅತ್ಯಾಧುನಿಕವಾದುದು. ಮೇಕ್ ಇನ್ ಇಂಡಿಯಾ ಯೋಜನೆಗೆ ಕೊಡುಗೆ ನೀಡುವ ಉದ್ದೇಶದಿಂದ ಸ್ವದೇಶೀಕರಣ, ವಿನ್ಯಾಸ, ಇಂಜಿನಿಯರಿಂಗ್ ಮತ್ತು ಉತ್ಪಾದನೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ. ಭಾರತವು ಇನೋವೇಟಿವ್ ಗ್ಲೋಬಲ್ ಕೇಂದ್ರವಾಗಲು ಮುಂಚೂಣಿಯಲ್ಲಿದ್ದು, ಅದಕ್ಕೆ ಕೊಡುಗೆ ನೀಡುವ ಪಾಲುದಾರರಾಗಲು ನಾವು ಬಯಸುತ್ತೇವೆ ಎಂದು ತಿಳಿಸಿದರು.

ವರದಿ: ಧಾತ್ರಿ ಭಾರದ್ವಾಜ್‌

    ಹಂಚಿಕೊಳ್ಳಲು ಲೇಖನಗಳು