logo
ಕನ್ನಡ ಸುದ್ದಿ  /  Karnataka  /  Pramod Muthalik: Muthalik Called Upon Hindus To Keep Talwar And Sword At Home; The Statement Criticised

Pramod Muthalik: ಮನೆಯಲ್ಲಿ ತಲ್ವಾರ್‌, ಖಡ್ಗ ಇಟ್ಕೊಳ್ಳಿ ಎಂದು ಹಿಂದುಗಳಿಗೆ ಕರೆ ನೀಡಿದ ಮುತಾಲಿಕ್‌; ಟೀಕೆಗೆ ಒಳಗಾಯಿತು ಹೇಳಿಕೆ

HT Kannada Desk HT Kannada

Jan 13, 2023 02:36 PM IST

ಪ್ರಮೋದ್‌ ಮುತಾಲಿಕ್‌

  • Pramod Muthalik: ನಮ್ಮ ಹೆಣ್ಣುಮಕ್ಕಳ ಮೇಲೆ ಇತರರು ಕಣ್ಣಹಾಕಬಾರದು ಎಂದಾದರೆ ಮನೆಯಲ್ಲಿ ತಲ್ವಾರ್‌, ಖಡ್ಗ ಮುಂತಾದ ಆಯುಧಗಳನ್ನು ಇಟ್ಟುಕೊಳ್ಳಿ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಕರೆ ನೀಡಿದ್ದಾರೆ. ಈ ಹೇಳಿಕೆ ಈಗ ತೀವ್ರ ಟೀಕೆಗೆ ಒಳಗಾಗಿದೆ. 

ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌ (twitter)

ಕಲಬುರಗಿ: ನಮ್ಮ ಸಮಾಜದ ಹೆಣ್ಣುಮಕ್ಕಳ ಮೇಲೆ ಅನ್ಯರು ಕಣ್ಣುಹಾಕಬಾರದು ಎಂದಾದರೆ ಎಲ್ಲ ಹಿಂದುಗಳು ತಮ್ಮ ಮನೆಯಲ್ಲಿ ತಲ್ವಾರ್‌, ಖಡ್ಗ ಮುಂತಾದ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ (Pramod Muthalik) ಕರೆ ನೀಡಿದ್ದಾರೆ. ಅವರ ಈ ಹೇಳಿಕೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

MLC Elections2024 :ಕರ್ನಾಟಕದಲ್ಲಿ ವಿಧಾನಪರಿಷತ್‌ ಚುನಾವಣೆಗೆ ದಿನಾಂಕ ಘೋಷಣೆ, ಯಾವಾಗ ಮತದಾನ?

Bangalore Crime: ಬೆಂಗಳೂರಲ್ಲಿ ವಾಯುವಿಹಾರ ಹೊರಟಿದ್ದ ದಂಪತಿ ಮೇಲೆ ಹಲ್ಲೆ, ನಾಲ್ವರು ಆರೋಪಿಗಳು ಪರಾರಿ

ಪ್ರಮೋದ್‌ ಮುತಾಲಿಕ್‌ ಅವರು ಗುರುವಾರ ಕಲಬುರಗಿಯಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಮಾತನಾಡಿದ ವೇಳೆ, ಈ ರೀತಿ ಕರೆ ನೀಡಿದ್ದರು. ಅನ್ಯಮತೀಯರು ನಮ್ಮ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಬಾರದು ಎಂಬ ಎಚ್ಚರಿಕೆ ನಮಗೆ ಇದೆ ಎಂದಾದರೆ, ಹಿಂದುಗಳು ತಮ್ಮ ಮನೆಗಳಲ್ಲಿ ತಲ್ವಾರ್, ಖಡ್ಗ, ಚಾಕು, ಚೂರಿ ಮತ್ತು ಇತರೆ ಹರಿತ ಆಯುಧಗಳನ್ನಿಡಬೇಕು ಎಂದು ಹೇಳಿದರು.

ಆಯುಧಗಳನ್ನು ಎಲ್ಲೋ ಬಚ್ಚಿಟ್ಟರೆ ಪ್ರಯೋಜನವಾಗಲ್ಲ. ಆ ಆಯುಧಗಳು ಜನರಿಗೆ ಕಾಣುವಂತೆ ಇರಬೇಕಾದ್ದು ಕೂಡ ಅಗತ್ಯ. ಈ ಮನೆಯ ಹೆಣ್ಣುಮಗಳ ತಂಟೆಗೆ ಹೋದರೆ ಪ್ರಾಣ ಹೋದೀತು ಎಂಬ ಭಯ ಅನ್ಯರಲ್ಲಿ ಬರಬೇಕು.

ಆಯುಧ ಪೂಜೆಯ ದಿನದಂದು ಟ್ರ್ಯಾಕ್ಟರ್, ಸ್ಕೂಟರ್ ಮೊದಲಾದವುಗಳಿಗೆ ಪೂಜೆ ಮಾಡುವ ಬದಲು ತಲ್ವಾರ್, ಕೊಡಲಿಗಳಿಗೆ ಪೂಜೆ ಮಾಡಬೇಕು. ಮನೆಯಲ್ಲಿ ಈ ರೀತಿ ಆಯುಧಗಳನ್ನು ಇಡುವುದು ಅಪರಾಧವಲ್ಲ. ಇದಕ್ಕೆ ಪರವಾನಗಿಯೂ ಬೇಕಾಗಿಲ್ಲ. ಪೊಲೀಸರು ಅದನ್ನು ಪ್ರಶ್ನಿಸಲಾಗದು ಎಂದು ಮುತಾಲಿಕ್‌ ಹೇಳಿದರು.

ಲವ್‌ ಜಿಹಾದ್‌ ತಡೆಯುವ ದೃಷ್ಟಿಯಲ್ಲಿ ಅವರು ಈ ಹೇಳಿಕೆ ನೀಡಿದ್ದು, ಇದನ್ನು ಅನೇಕರು ತೀವ್ರವಾಗಿ ಟೀಕಿಸತೊಡಗಿದ್ದಾರೆ.

ಗಮನಿಸಬಹುದಾದ ಸುದ್ದಿ

Shabarimala News: ಅಯ್ಯಪ್ಪ ಸನ್ನಿಧಿಗೆ ಹೊರಟಿದೆ ತಿರುವಾಭರಣ; ನಾಳೆಯೇ ಮಕರ ಜ್ಯೋತಿ ದರ್ಶನ

Sabarimala News: ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನ ಮಕರಜ್ಯೋತಿ ದರ್ಶನಕ್ಕೆ ಸಿದ್ಧತೆ ನಡೆಸಿದೆ. ಅಯ್ಯಪ್ಪ ಭಕ್ತರು ಕೂಡ ಸನ್ನಿಧಾನ ತಲುಪುವ ದಾವಂತದಲ್ಲಿದ್ದು, ಜ್ಯೋತಿ ದರ್ಶನಕ್ಕೆ ಕಾತರರಾಗಿದ್ದಾರೆ. ತಿರುವಾಭರಣ ಮೆರವಣಿಗೆ ಸನ್ನಿಧಾನದ ಕಡೆಗೆ ಹೊರಟಿದ್ದು, ನಾಳೆ ಸಂಜೆ ತಲುಪಲಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Karnataka assembly election 2023: ಒಂದೇ ಕಡೆ ಸ್ಪರ್ಧಿಸಿದರೆ ಸೋಲು ಖಚಿತ; ಸಿದ್ದರಾಮಯ್ಯಗೆ ʻಮನೆದೇವರʼ ಎಚ್ಚರಿಕೆ

Karnataka assembly election 2023: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ? ಕೋಲಾರ ಅಥವಾ ವರುಣಾ? ದೈವವಾಣಿಯನ್ನು ಅವರು ನಂಬ್ತಾರಾ? ಎರಡು ಕಡೆ ಸ್ಪರ್ಧಿಸುತ್ತಾರಾ? ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Karnataka cabinet expansion: ಸಂಪುಟ ಭರ್ತಿಗೆ ʻಸಂಕ್ರಾಂತಿʼ ಮುಹೂರ್ತ?; ಈಶ್ವರಪ್ಪ, ಜಾರಕಿಹೊಳಿ ಮತ್ತಿನ್ಯಾರಿಗೆ ಎಳ್ಳುಬೆಲ್ಲ?

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆ ತಿಂಗಳು ಬಾಕಿ. ಸಚಿವ ಸಂಪುಟ ವಿಸ್ತರಣೆ, ಖಾಲಿ ಸ್ಥಾನಗಳ ಭರ್ತಿ ವಿಚಾರ ಪದೇಪದೆ ಮುನ್ನೆಲೆಗೆ ಬರುತ್ತಿದೆ. ಕೆ.ಎಸ್‌.ಈ‍ಶ್ವರಪ್ಪ, ರಮೇಶ್‌ ಜಾರಕಿಹೊಳಿ ಅಸಮಾಧಾನ ಶಮನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻಸಂಕ್ರಾಂತಿʼ ಮುಹೂರ್ತ ಫಿಕ್ಸ್‌ ಮಾಡಿದ್ದಾರಾ? ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Karnataka election 2023: ಜೆಡಿಎಸ್‌ ಜತೆಗೆ ಮೈತ್ರಿ; ಬಿಜೆಪಿ ನಾಯಕರ ಲೆಕ್ಕಾಚಾರ ಏನು?

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ. ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳುವುದಕ್ಕೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆಯೇ? ಅಥವಾ ಕಳೆದ ಸಲದಂತೆ ಅತಂತ್ರವಾಗಬಹುದೇ? ಆದರೆ ಆಡಳಿತ ಚುಕ್ಕಾಣಿ ಹಿಡಿಯಲು ಮೈತ್ರಿ ಅನಿವಾರ್ಯವಾದೀತು. ಆಗ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಬಿಜೆಪಿ? ಇಷ್ಟಕ್ಕೂ ಬಿಜೆಪಿ ನಾಯಕರ ಈಗಿನ ಲೆಕ್ಕಾಚಾರ ಏನು? ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು