logo
ಕನ್ನಡ ಸುದ್ದಿ  /  ಕರ್ನಾಟಕ  /  Basavaraj Bommai: ಆರ್‌ಎಸ್‌ಎಸ್‌ ಬಗ್ಗೆ ಗೊತ್ತಿಲ್ಲದ ರಾಹುಲ್‌ ಬಾಯಿಗೆ ಬಂದಂತೆ ಮಾತನಾಡುತ್ತಾರೆ: ಬೊಮ್ಮಾಯಿ ಕಿಡಿ!

Basavaraj Bommai: ಆರ್‌ಎಸ್‌ಎಸ್‌ ಬಗ್ಗೆ ಗೊತ್ತಿಲ್ಲದ ರಾಹುಲ್‌ ಬಾಯಿಗೆ ಬಂದಂತೆ ಮಾತನಾಡುತ್ತಾರೆ: ಬೊಮ್ಮಾಯಿ ಕಿಡಿ!

HT Kannada Desk HT Kannada

Dec 05, 2022 09:18 AM IST

ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

    • ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ಮಹಿಳಾ ವಿರೋಧಿಗಳಾಗಿದ್ದು, ಅವರು ಕೇವಲ 'ಜೈಶ್ರೀರಾಮ್‌' ಘೋಷಣೆ ಕೂಗುತ್ತಾರೆಯೇ ಹೊರತು, 'ಜೈ ಸಿಯಾ ರಾಮ್‌' ಎಂದು ಹೇಳುವುದಿಲ್ಲ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ರಾಹುಲ್‌ ಗಾಂಧಿ ಅವರಿಗೆ ಯಾವ ವಿಷಯದ ಮೇಲೂ ಪೂರ್ಣ ಜ್ಷಾನವಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ತಮ್ಮ ಭಾರತ್‌ ಜೋಡೋ ಯಾತ್ರೆಯುದ್ದಕ್ಕೂ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದೇಶದಲ್ಲಿ ಕೋಮುದ್ವೇಷ, ಲಿಂಗ ಅಸಮಾನತೆ ಹೆಚ್ಚಾಗಲು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರಣ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದೇ ಪ್ರಕಟ; 10ನೇ ತರಗತಿ ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು

Hassan Scandal: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನಿಖರವಾದ ಸಾಕ್ಷಿಗಳಿದ್ದರೆ ಎಲ್ಲರನ್ನೂ ಬಂಧಿಸುತ್ತೇವೆ: ಡಾ.ಪರಮೇಶ್ವರ್‌

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ಮಹಿಳಾ ವಿರೋಧಿಗಳಾಗಿದ್ದು, ಅವರು ಕೇವಲ 'ಜೈಶ್ರೀರಾಮ್‌' ಘೋಷಣೆ ಕೂಗುತ್ತಾರೆಯೇ ಹೊರತು, 'ಜೈ ಸಿಯಾ ರಾಮ್‌' ಎಂದು ಹೇಳುವುದಿಲ್ಲ. ಇದು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದರು.

ಅಷ್ಟೇ ಅಲ್ಲದೇ ಬಿಜೆಪಿಯಲ್ಲಿ ಯಾವುದೇ ಮಹಿಳಾ ವಿಭಾಗವಿಲ್ಲ ಎಂದಿದ್ದ ರಾಹುಲ್‌ ಗಾಂಧಿ, ಬಿಜೆಪಿ ಕೂಡ ತನ್ನ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ ರೀತಿಯಲ್ಲೇ ಮಹಿಳಾ ವಿರೋಧಿಯಾಗಿದೆ ಎಂದು ಆರೋಪಿಸಿದ್ದರು.

ರಾಹುಲ್‌ ಗಾಂಧಿ ಅವರ ಈ ಹೇಳೀಕೆಗೆ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಆರ್‌ಎಸ್‌ಎಸ್‌ ಬಗ್ಗೆ ಸರಿಯಾದ ಜ್ಞಾನ ಸಂಪಾದಿಸುವಂತೆ ಅವರಿಗೆ ಸಲಹೆ ನೀಡಿದ್ದಾರೆ.

ಇದೀಗ ಆರ್‌ಎಸ್‌ಎಸ್‌ ಮತಗ್ತು ಬಿಜೆಪಿ ಕುರಿತಂತೆ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಹುಲ್‌ ಗಾಂಧಿ ಅವರ ಅರ್ಧ ಜ್ಞಾನ ಬಹಳ ಅಪಾಯಕಾರಿ ಎಂದು ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್‌ ಬಗ್ಗೆ ರಾಹುಲ್ ಗಾಂಧಿಗೆ ಸಂಪೂರ್ಣ ಮಾಹಿತಿ ಇಲ್ಲ. ಆರ್‌ಎಸ್‌ಎಸ್‌ನಲ್ಲಿ ದುರ್ಗಾ ಸೇನೆ ಎಂಬ ಮಹಿಳಾ ವಿಭಾಗವಿದೆ. ನಾವು ಯಾವುದೇ ಕಾರ್ಯಕ್ರಮವನ್ನು 'ಭಾರತ್ ಮಾತಾ ಕಿ ಜೈ' ಘೋಷಣೆಗಳೊಂದಿಗೆ ಪ್ರಾರಂಭಿಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.

ರಾಹುಲ್‌ ಗಾಂಧಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ ಮೊದಲು, ಅದರ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆಯಬೇಕು. ಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ, ಜನರು ಅದನ್ನು ಒಪ್ಪುವುದಿಲ್ಲ. ಕಾಂಗ್ರೆಸ್‌ ಪಕ್ಷದ ಶ್ರೇಷ್ಠತೆಯನ್ನು ಸಾರುವ ಭರದಲ್ಲಿ ದೇಶಭಕ್ತ ಸಂಘಟನೆಗಳನ್ನು ಹಾಗೂ ರಾಜಕೀಯ ಪಕ್ಷಗಳನ್ನು ವಿನಾಕಾರಣ ಟೀಕಿಸುವುದು ಸರಿಯಲ್ಲ ಎಂದು ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಹೋದಲ್ಲಿ, ಬಂದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಟೀಕಿಸುತ್ತಿದ್ದಾರೆ. ಅವರ ಟೀಕೆಗಳಲ್ಲಿ ಸತ್ಯಾಂಶವೇ ಇರುವುದಿಲ್ಲ. ಭಾರತದ ಪುಣ್ಯಭೂಮಿಯನ್ನು ತಾಯಿಯಂತೆ ನೋಡುವ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ, ರಾಹುಲ್‌ ಗಾಂಧಿ ಅವರು ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂದು ಪಾಠ ಮಾಡುವ ಅವಶ್ಯಕತೆಯಿಲ್ಲ ಎಂದು ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ಸಾವರ್ಕರ್‌ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದ ಹೇಡಿ ಎಂದಿದ್ದ ರಾಹುಲ್‌ ಗಾಂಧಿ, ಭಾರೀ ವಿವಾದ ಸೃಷ್ಟಿಸಿದ್ದರು. ಬಳಿಕ ಮಧ್ಯಪ್ರದೇಶದಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮಹಿಳಾ ವಿರೋಧಿ ಎಂದು ಆರೋಪಿಸಿದ್ದರು.

ಇಂದಿನ ಪ್ರಮುಖ ಸುದ್ದಿ

Gujarat election: ಮೋದಿ, ಶಾ, ಪಾಂಡ್ಯ ಸಹೋದರರು; ಅಭ್ಯರ್ಥಿಗಳಿಗಿಂತ ಸೆಲೆಬ್ರಿಟಿ ಮತದಾರರೇ ಇಂದಿನ ಆಕರ್ಷಣೆ

ಗುಜರಾತ್ ಅಖಾಡದಲ್ಲಿರುವ ಸ್ಪರ್ಧಿಗಳ ಹೊರತಾಗಿ, ಕೆಲ ಗಣ್ಯ ಮತದಾರರು ಕೂಡಾ ಇಂದು ಹಕ್ಕು ಚಲಾಯಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯ ಮತದಾರರ ಮತದಾನಕ್ಕೆ ಇಂದಿನ ಚುನಾವಣಾ ಕಣ ಸಾಕ್ಷಿಯಾಗಲಿದೆ.‌ ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

    ಹಂಚಿಕೊಳ್ಳಲು ಲೇಖನಗಳು