logo
ಕನ್ನಡ ಸುದ್ದಿ  /  ಕರ್ನಾಟಕ  /  Trillion Economy Karnataka: ಲಕ್ಷ ಕೋಟಿ ಆರ್ಥಿಕತೆಯಾಗುವತ್ತ ಕರ್ನಾಟಕ- 9 ಆರ್ಥಿಕ ಕಾರ್ಯತಂತ್ರ; ಮಹತ್ವದ ಮುನ್ನೋಟ ವರದಿ ಬಿಡುಗಡೆ

Trillion economy Karnataka: ಲಕ್ಷ ಕೋಟಿ ಆರ್ಥಿಕತೆಯಾಗುವತ್ತ ಕರ್ನಾಟಕ- 9 ಆರ್ಥಿಕ ಕಾರ್ಯತಂತ್ರ; ಮಹತ್ವದ ಮುನ್ನೋಟ ವರದಿ ಬಿಡುಗಡೆ

HT Kannada Desk HT Kannada

Oct 18, 2022 02:05 PM IST

google News

Karnataka: A $1 Trillion GDP Vision ಎಂಬ ಮುನ್ನೋಟ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು.

    • Karnataka- A $1 Trillion GDP Vision: ಯೋಜನಾ ಇಲಾಖೆಯ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22 ರ ಆಧಾರದ ಮೇಲೆ ಹೆಚ್ಚಿನ ವಿಶ್ಲೇಷಣೆಯೊಂದಿಗೆ “Karnataka: A $1 Trillion GDP Vision” ಎಂಬ ಮುನ್ನೋಟ ವರದಿಯನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು. ಇದರಲ್ಲಿ 10 ವರ್ಷಗಳಲ್ಲಿ ಇದನ್ನು ಸಾಧಿಸುವ 9 ಕಾರ್ಯತಂತ್ರಗಳಿವೆ. 
Karnataka: A $1 Trillion GDP Vision ಎಂಬ ಮುನ್ನೋಟ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು.
Karnataka: A $1 Trillion GDP Vision ಎಂಬ ಮುನ್ನೋಟ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು. (CMO)

ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯವನ್ನು 1 ಲಕ್ಷ ಕೋಟಿ ರೂಪಾಯಿ ಆರ್ಥಿಕ ವ್ಯವಸ್ಥೆಯನ್ನಾಗಿ ರೂಪಿಸಲು ಅಗತ್ಯವಾದ ಮುನ್ನೋಟ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬಿಡುಗಡೆ ಮಾಡಿದರು.

ʻKarnataka: A $1 Trillion GDP Visionʼ ಎಂಬ ಆರ್ಥಿಕ ಮುನ್ನೋಟ ವರದಿ ಇದು. ಇದನ್ನು ಆರ್ಥಿಕ ತಜ್ಞರಾದ ಮೋಹನ್‌ದಾಸ್‌ ಪೈ, ನಿಶಾ ಹೊಳ್ಳ ಅವರು ಯೋಜನಾ ಇಲಾಖೆಯ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22 ಅನ್ನು ಆಧರಿಸಿ ಮುಖ್ಯಮಂತ್ರಿಯವರ ಸೂಚನೆ ಅನುಸಾರ ಸಿದ್ದಪಡಿಸಿದ್ದಾರೆ ಎಂದು ಸಿಎಂಒ ವರದಿ ಹೇಳಿದೆ.

ಮುನ್ನೋಟ ವರದಿ ಬಿಡುಗಡೆ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಐ.ಎಸ್‌.ಎನ್‌. ಪ್ರಸಾದ್, ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, FICCI ಕರ್ನಾಟಕ & ಮೆಕೆನ್ಸಿ ಪ್ರತಿನಿಧಿಗಳು ಹಾಗೂ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಿದ್ದರು.

Karnataka: A $1 Trillion GDP Vision ವರದಿಯಲ್ಲಿ ಏನಿದೆ?

ಕರ್ನಾಟಕದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯ ಸಮಗ್ರ ವಿಶ್ಲೇಷಣೆಯನ್ನು ಈ ವರದಿಯು ಪ್ರಸ್ತುತಪಡಿಸುತ್ತದೆ. ಇದು ಭಾರತದ ಅಗ್ರ 5 ರಾಜ್ಯಗಳ ಆರ್ಥಿಕತೆಗಳ ಪೈಕಿ ಒಂದಾದ ಕರ್ನಾಟಕವು ಸತತವಾಗಿ ಉತ್ತಮ ಸ್ಥಾನ ಪಡೆಯಲು ಕಾರಣವಾದ ವಿವಿಧ ಅಂಶಗಳನ್ನು ವಿವರಿಸುತ್ತದೆ. 2022ನೇ ಆರ್ಥಿಕ ವರ್ಷದಲ್ಲಿ ರಾಜ್ಯವು ಮೂರನೇ ಅತಿ ಹೆಚ್ಚು GDP ಯನ್ನು ಹೊಂದಿದ್ದು, ಪ್ರಮುಖ ರಾಜ್ಯಗಳ ಪೈಕಿ ಅತಿ ಹೆಚ್ಚು ತಲಾದಾಯವನ್ನು ಹೊಂದಿರುತ್ತದೆ ಮತ್ತು ರಾಜ್ಯದ ಒಟ್ಟು ಆರ್ಥಿಕತೆಯಲ್ಲಿ ಸೇವಾವಲಯವು ಶೇ.66ರಷ್ಟು ಪಾಲನ್ನು ನೀಡುತ್ತಿದೆ. ಇದು ದೃಢವಾದ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳನ್ನು ಸಹ ಹೊಂದಿರುತ್ತದೆ.

ಕೋವಿಡ್‌-19 ಮಹಾಮಾರಿಯಿಂದಾಗಿ ಉಂಟಾದ ಆರ್ಥಿಕ ಹಿಂಜರಿತದ ಪರಿಣಾಮದ ಹೊರತಾಗಿಯೂ, ಸಾಂಕ್ರಾಮಿಕ ವರ್ಷಗಳಲ್ಲಿ ಕರ್ನಾಟಕವು ಅಸಾಧಾರಣವಾಗಿ ಉತ್ತಮ ಸಾಧನೆ ಮಾಡಿದೆ. ಈ ಪ್ರಯತ್ನದ ಸಮಯದಲ್ಲಿ ಹಣಕಾಸು ನಿಭಾಯಿಸುವಲ್ಲಿ ಮತ್ತು ಅಗತ್ಯವಿರುವವರಿಗೆ ಆರ್ಥಿಕ ಜೀವನೋಪಾಯ ನೀಡುವಲ್ಲಿ ರಾಜ್ಯ ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಸಾಂಕ್ರಾಮಿಕ ರೋಗದ ಹೆನ್ನಲೆಯಲ್ಲಿಯೂ 2022ರ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು USD 273 ಬಿಲಿಯನ್ ಗಳಾಗಿದ್ದು 2026 ರ ವೇಳೆಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವನ್ನು USD 500 ಬಿಲಿಯನ್ ಗೆ ಮತ್ತು 2032 ರ ಹೊತ್ತಿಗೆ USD 1 ಟ್ರಿಲಿಯನ್ ಅನ್ನು ತಲುಪುವ ಸುವರ್ಣ ಗುರಿಗಳ ಹಿನ್ನೆಲೆಯಲ್ಲಿ ರಾಜ್ಯದ ಬೆಳವಣಿಗೆಯ ಅಂಶಗಳ ಮರು-ಮೌಲ್ಯಮಾಪನಕ್ಕೆ ವರದಿಯು ಕರೆ ನೀಡುತ್ತದೆ.

ಭಾರತದಲ್ಲಿ ಉದ್ಯೋಗ ಸೃಜನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕವು ಒಂದಾಗಿದೆ; ಆರ್ಥಿಕ ವರ್ಷ 2022ರಲ್ಲಿ ಕರ್ನಾಟಕವು 13.6 ಲಕ್ಷ ಔಪಚಾರಿಕ ಉದ್ಯೋಗಗಳನ್ನು ಸೃಜಿಸಿದೆ ಎಂದು EPFO ​​ಅಂಕಿ ಅಂಶಗಳು ಸೂಚಿಸುತ್ತವೆ. ಇದು ಭಾರತದ ಒಟ್ಟು ಉದ್ಯೋಗಗಳಲ್ಲಿ ಶೇ.11ರಷ್ಟು ಪಾಲನ್ನು ಹೊಂದಿರುತ್ತದೆ. ಈ ಪೈಕಿ 4.4 ಲಕ್ಷ ಜನರು 22-25 ವಯೋಮಾನದವರಾಗಿದ್ದು (ನೂತನ ಪದವೀಧರರು) ಇದು ರಾಷ್ಟ್ರದಲ್ಲಿ 13ರಷ್ಟು ಪಾಲನ್ನು ಹೊಂದಿರುತ್ತದೆ. ಪ್ರಸ್ತುತ ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 10ರಷ್ಟು ಜನರು 60 ಕ್ಕಿಂತ ಹೆಚ್ಚಿನ ವಯಸ್ಕರಾಗಿದ್ದು ಇದು 2031 ರಲ್ಲಿ ಶೇ. 15 ಕ್ಕೆ ಹೆಚ್ಚಳವಾಗುತ್ತದೆ ಎಂದು ಅಂದಾಜಿಸಲಾಗಿದೆ. 2032ರ ವೇಳೆಗೆ ರಾಜ್ಯವು USD 1 ಟ್ರಿಲಿಯನ್‌ ಜಿಡಿಪಿ ಗುರಿಯತ್ತಾ ಸಾಗುತ್ತಿರುವ ಸಂದರ್ಭದಲ್ಲಿ ಆರ್ಥಿಕ ಉತ್ಪಾದನೆಯನ್ನು ಬೆಂಬಲಿಸುವ ಕೌಶಲ್ಯ ಭರಿತ ಕಾರ್ಯಪಡೆಯನ್ನು ಹೆಚ್ಚಿಸುವ ಅವಕಾಶಗಳೊಂದಿಗೆ ಅಧಿಕವಾಗುತ್ತಿರುವ ಹಿರಿಯ ನಾಗರೀಕರಿಗೆ ಸಾಮಾಜಿಕ ಭದ್ರತೆ ನೀಡುವುದು ನಿರ್ಣಾಯಕವಾಗಿದೆ. ಈ ವಿಶ್ಲೇಷಣೆಯು ಸಂಪ್ರದಾಯವಾದಿ/ ಸಾಧಿಸಬಹುದಾದ ಬೆಳವಣಿಗೆಯ ದರಗಳನ್ನು ಆಧರಿಸಿದೆ.

ವರದಿ ವಿಚಾರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಏನು ಹೇಳಿದ್ರು?

COVID-19 ಸಾಂಕ್ರಾಮಿಕ ಸಮಯದಲ್ಲಿ ಕರ್ನಾಟಕವು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ ಮತ್ತು ಬೆಳವಣಿಗೆಯನ್ನು ತ್ವರಿತಗೊಳಿಸಲು ಹಲವಾರು ನೀತಿ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ವರದಿ ಬಿಡುಗಡೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಈ ದಶಕದಲ್ಲಿ USD 1 ಟ್ರಿಲಿಯನ್ ಗುರಿಯನ್ನು ತಲುಪಲು ಮತ್ತು ಭಾರತದ USD 10 ಟ್ರಿಲಿಯನ್‌ ಗುರಿಯ ಅವಿಭಾಜ್ಯ ಅಂಗವಾಗಲು ನಾವು ಹೆಚ್ಚಿನ ಆಶಾವಾದದಿಂದ ಎದುರು ನೋಡುತ್ತಿದ್ದೇವೆ. 2026 ರ ವೇಳೆಗೆ ಭಾರತವು USD 5 ಟ್ರಿಲಿಯನ್ ಗುರಿಯನ್ನು ತಲುಪುತ್ತಿದ್ದಂತೆ, ನಾವು ದೇಶದ GDP ಗಿಂತ ವೇಗವಾಗಿ ಬೆಳೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಈ ಗುರಿಗಳ ಸಾಧನೆಗೆ ಗಣನೀಯವಾಗಿ ಕೊಡುಗೆ ನೀಡುತ್ತೇವೆ.

ಕರ್ನಾಟಕದ ನಮ್ಮ ಎಲ್ಲ ನಾಗರಿಕರ ಆರ್ಥಿಕ ಸ್ಥಿತಿ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಜೀವನಮಟ್ಟವನ್ನು ಸುಧಾರಿಸುವಲ್ಲಿ ನಾವು ಬದ್ಧರಾಗಿದ್ದೇವೆ. ಈ ದಶಕದಲ್ಲಿ ಕರ್ನಾಟಕವು USD 1 ಟ್ರಿಲಿಯನ್ ಆರ್ಥಿಕತೆಯನ್ನು ತಲುಪುವ ದೃಷ್ಟಿಯ ಕುರಿತು 3one4 ಕ್ಯಾಪಿಟಲ್‌ ಸಂಸ್ಥೆಯ ಟಿ.ವಿ. ಮೋಹನ್‌ದಾಸ್ ಪೈ ಮತ್ತು ನಿಶಾ ಹೊಳ್ಳ ಅವರು ಸಿದ್ದಪಡಿಸಿರುವ ಈ ವರದಿಯನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಆರ್ಥಿಕತೆಗೆ 9 ಆರ್ಥಿಕ ಕಾರ್ಯತಂತ್ರಗಳು

1. ಕೃಷಿ ವಲಯವನ್ನು ತಂತ್ರಜ್ಞಾನ, ಬ್ರ್ಯಾಂಡಿಂಗ್‌, ಮಾರುಕಟ್ಟೆ ಮತ್ತು ರಪ್ತು ಮೂಲಕ ಉತ್ತೇಜಿಸುವುದು

2. ಕಾರ್ಮಿಕ ಆಧಾರಿತ ಕೈಗಾರಿಕೆಗಳ ಮೂಲಕ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸುವುದು (ಉದಾ: ವಿದ್ಯುತ್ ಉಪಕರಣಗಳು, ಯಂತ್ರೊಪಕರಣಗಳು ಪಿಟೋಪಕರಣಗಳು)

3. ಮೂಲಭೂತ ಸೌಕರ್ಯಗಳಿಗೆ ವೆಚ್ಚವನ್ನು ಹೆಚ್ಚಿಸುವ ಮೂಲಕ ನಿರ್ಮಾಣ ವಲಯದ ಮೌಲ್ಯವರ್ಧನೆಯನ್ನುಉತ್ತೇಜಿಸುವುದು

4. ಬೆಂಗಳೂರು ಹೊರತುಪಡಿಸಿ - 200 ಸಣ್ಣಪಟ್ಟಣಗಳಲ್ಲಿ ವ್ಯವಸ್ಥಿತ ನಗರೀಕರಣ

5. NITI ಆಯೋಗದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನುವಿಸ್ತರಿಸುವುದು

6. ಉತ್ಪಾದನೆ ಮತ್ತು ರಫ್ತು ಕೈಗಾರಿಕೆಗಳ ಮೌಲ್ಯವರ್ಧನೆಯನ್ನು ಹೆಚ್ಚಿಸಲು ವಿಶೇಷವಾದ ಹೈಟೆಕ್ ಉದ್ಯಮಗಳ ಸೃಜನೆ

7. ಬೆಂಗಳೂರು: ಗ್ಲೋಬಲ್ ಹೈಟೆಕ್ ಸಿಟಿ ಆಗಲು ಹೆಚ್ಚಿನ ಹೂಡಿಕೆಮಾಡುವುದು

8. ಫೀಡ್‌ಫಾರ್ವರ್ಡ್‌ ಸಾಮರ್ಥ್ಯಗಳು ಮತ್ತು ಬೆಳವಣಿಗೆಯ ಚಾಲಕಗಳನ್ನು (Growth Drivers) ನಿರ್ಮಿಸಲು ಮಾಹಿತಿ ತಂತ್ರಜ್ಞಾನ ಸೇವಾವಲಯವನ್ನು ತ್ವರಿತಗೊಳಿಸುವುದು

9. ನವೋದ್ಯಮಗಳ ಇಕೋಸಿಸ್ಟಮ್‌ನ್ನು ಬಲಪಡಿಸಲು ಹೂಡಿಕೆ ಮಾಡುವುದು

ಸಿಎಂ ಬೊಮ್ಮಾಯಿ ಕಾರ್ಯತಂತ್ರವೇನು?

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಕೊನೆಯಲ್ಲಿ, ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು 1 ಟ್ರಿಲಿಯನ್ USD ಅನ್ನು ಶೀಘ್ರವಾಗಿ ಸಾಧಿಸಲು ವಲಯದ ಬೆಳವಣಿಗೆಯನ್ನು ತ್ವರಿತಗೊಳಿಸಲು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ:

USD1 ಟ್ರಿಲಿಯನ್ ಡಾಲರ್‌ಗಳನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನ ಮಾಡುವ ಕುರಿತು ಅಪರ ಮುಖ್ಯ ಕಾರ್ಯದರ್ಶಿ-ಹಣಕಾಸು ಇಲಾಖೆಯ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರಗತಿಯ ನಿಯಮಿತ ಪರಿಶೀಲನೆಯೊಂದಿಗೆ ಮುಖ್ಯ ಕಾರ್ಯದರ್ಶಿ, ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ-, ಶ್ರೀ ಮೋಹನ್ ದಾಸ್ ಪೈ, FICCI ಮತ್ತು ಮೆಕೆನ್ಸಿಯ ಪ್ರತಿನಿಧಿಗಳನ್ನು ಒಳಗೊಂಡ ಗುಂಪು ರಚನೆಯಾಗಲಿದೆ. ಫಲಿತಾಂಶ ಆಧಾರಿತ ಉದ್ದೇಶಿತ ಬಜೆಟ್‌ಗೆ ಅನುಕೂಲವಾಗುವಂತೆ ಡಿಸೆಂಬರ್ 2022 ರೊಳಗೆ ಕ್ರಿಯಾ ಯೋಜನೆ ಸಿದ್ಧವಾಗಲಿದೆ. ಕರ್ನಾಟಕದಿಂದ ಒಂದು ಟ್ರಿಲಿಯನ್ USD ಕೊಡುಗೆಯೊಂದಿಗೆ 5 ಟ್ರಿಲಿಯನ್ ಭಾರತದ ಗುರಿಯೊಂದಿಗೆ ನಾವು ಹೊಂದಿಕೊಳ್ಳಬೇಕು.

ಬೆಳವಣಿಗೆಯ ದರಗಳನ್ನು ಹೆಚ್ಚಿಸಲು ಮಂಗಳೂರು ಬಂದರು ವಿಸ್ತರಣೆಗಾಗಿ ಅಗಾಧ ಸಂಭಾವ್ಯತೆಯನ್ನು ಪರಿಗಣಿಸಿ ಕರಾವಳಿ ಕಾರಿಡಾರ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಮೂಲಕ ರಫ್ತನ್ನು ಹೆಚ್ಚಿಸುವುದು

ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮೂಲಸೌಕರ್ಯ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ

ಅಭಿವೃದ್ಧಿಯನ್ನು ಉತ್ತೇಜಿಸಲು ಜನರ ಆರ್ಥಿಕ ಸಾಮರ್ಥ್ಯಗಳನ್ನು ಹೆಚ್ಚಿಸುವುದು

ಕೈಗಾರಿಕಾ, ಕೃಷಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಕೈಗಾರಿಕಾ ವಲಯದ ಸಾಮರ್ಥ್ಯವನ್ನು ಹೆಚ್ಚಿಸುವುದರ ಮೂಲಕ ಕೃಷಿ ಮತ್ತು ಸೇವಾ ವಲಯದ ಬೆಳವಣಿಗೆಯನ್ನು ಕಾಣಬಹುದಾಗಿದೆ.

ಕೈಗಾರಿಕೆ ಮತ್ತು ಖಾಸಗಿ ವಲಯಗಳೆರಡೂ ಸಾಂಪ್ರದಾಯಿಕ ಬೆಳವಣಿಗೆಯ ಪಥವನ್ನು ಮುರಿಯಲು ಪರಿಹಾರಗಳನ್ನು ಕಂಡುಹಿಡಿಯಬೇಕು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ