logo
ಕನ್ನಡ ಸುದ್ದಿ  /  ಕರ್ನಾಟಕ  /  ಅಮೆರಿಕ ಚುನಾವಣೆ ಬೆಂಗಳೂರಲ್ಲಿ ಜಾಗರಣೆ; ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸಿ

ಅಮೆರಿಕ ಚುನಾವಣೆ ಬೆಂಗಳೂರಲ್ಲಿ ಜಾಗರಣೆ; ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸಿ

Umesh Kumar S HT Kannada

Nov 05, 2024 06:10 PM IST

google News

ಅಮೆರಿಕ ಚುನಾವಣೆ: ವಾಣಿಜ್ಯೋದ್ಯಮಿ ಮತ್ತು ಕ್ಯಾಟೋಫ್ ಗೇಮಿಂಗ್ ಸಂಸ್ಥಾಪಕ ಆಂಥೋನಿ ಕ್ಲೋರ್ ಬೆಂಗಳೂರಲ್ಲಿ ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸುವ ಕಾರ್ಯಕ್ರಮ ಆಯೋಜಿಸಿರುವುದು ಗಮನಸೆಳೆದಿದೆ.

  • US election 2024: ಬೆಂಗಳೂರಿನಲ್ಲಿರುವ ಅಮೆರಿಕನ್ ವಾಣಿಜ್ಯೋದ್ಯಮಿ ಮತ್ತು ಕ್ಯಾಟೋಫ್ ಗೇಮಿಂಗ್ ಸಂಸ್ಥಾಪಕ ಆಂಥೋನಿ ಕ್ಲೋರ್ ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸಿ ಎಂದು ಸವಾಲೊಡ್ಡಿದ್ದಾರೆ.

ಅಮೆರಿಕ ಚುನಾವಣೆ:  ವಾಣಿಜ್ಯೋದ್ಯಮಿ ಮತ್ತು ಕ್ಯಾಟೋಫ್ ಗೇಮಿಂಗ್ ಸಂಸ್ಥಾಪಕ ಆಂಥೋನಿ ಕ್ಲೋರ್ ಬೆಂಗಳೂರಲ್ಲಿ ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸುವ ಕಾರ್ಯಕ್ರಮ ಆಯೋಜಿಸಿರುವುದು ಗಮನಸೆಳೆದಿದೆ.
ಅಮೆರಿಕ ಚುನಾವಣೆ: ವಾಣಿಜ್ಯೋದ್ಯಮಿ ಮತ್ತು ಕ್ಯಾಟೋಫ್ ಗೇಮಿಂಗ್ ಸಂಸ್ಥಾಪಕ ಆಂಥೋನಿ ಕ್ಲೋರ್ ಬೆಂಗಳೂರಲ್ಲಿ ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸುವ ಕಾರ್ಯಕ್ರಮ ಆಯೋಜಿಸಿರುವುದು ಗಮನಸೆಳೆದಿದೆ. (X HT News)

ಬೆಂಗಳೂರು: ಅಮೆರಿಕ ಚುನಾವಣೆಯ ಮತದಾನ ಇಂದು (ನವೆಂಬರ್ 5) ನಡೆಯುತ್ತಿದ್ದು, ಅಮೆರಿಕದ ಮುಂದಿನ ಅಧ್ಯಕ್ಷರು ಯಾರೆಂಬುದನ್ನು ಅಲ್ಲಿನ ಮತದಾರರು ನಿರ್ಣಯಿಸಲಿದ್ದಾರೆ. ಈ ಮತದಾನ ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ತನಕ ನಡೆಯಲಿದೆ. ಅಲ್ಲಿ ಈ ಪ್ರಕ್ರಿಯೆ ನಡೆಯುತ್ತಿರುವಾಗ ನಮ್ಮ ಬೆಂಗಳೂರಲ್ಲಿ ರಾತ್ರಿಯಾಗಿರುತ್ತದೆ. ಸರಳವಾಗಿ ಹೇಳಬೇಕು ಎಂದರೆ, ಭಾರತೀಯ ಕಾಲಮಾನ ಪ್ರಕಾರ ಇಂದು (ನವೆಂಬರ್ 5) ಸಂಜೆ 4.30ರಿಂದ ನವೆಂಬರ್ 6ರ ಬೆಳಗ್ಗೆ 6.30ರ ತನಕ ಅಮೆರಿಕ ಚುನಾವಣೆಯ ಅಧಿಕೃತ ಮತದಾನ ನಡೆಯಲಿದೆ. ಬೆಂಗಳೂರಿನಲ್ಲಿರುವ ಅಮೆರಿಕನ್ ವಾಣಿಜ್ಯೋದ್ಯಮಿ ಮತ್ತು ಕ್ಯಾಟೋಫ್ ಗೇಮಿಂಗ್ ಸಂಸ್ಥಾಪಕ ಆಂಥೋನಿ ಕ್ಲೋರ್ ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಮೆರಿಕನ್ ಮತದಾರರ ಆಯ್ಕೆ ಯಾರು- ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಥವಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌? ಯಾರಾಗಿರಬಹುದು ಊಹಿಸುವುದು ಕೂಡ ಖುಷಿ ಕೊಡುವ ವಿಚಾರ ಅಲ್ವ. ಹಾಗಾಗಿ, ಅಮೆರಿಕ ಚುನಾವಣೆ ಅಂದ್ರೆ ಇಂದು ಬೆಂಗಳೂರಲ್ಲಿ ಜಾಗರಣೆ. ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸಿ ಎಂದು ಆ ವಾಣಿಜ್ಯೋದ್ಯಮಿ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ 100ಕ್ಕೂ ಹೆಚ್ಚು ಜನ ಹೆಸರು ನೋಂದಾಯಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅಮೆರಿಕ ಚುನಾವಣೆ: ಹ್ಯಾಂಬರ್ಗರ್, ದೋಸೆ, ಪಿಬಿಜೆ ಇಡ್ಲಿ ತಿನ್ನುತ್ತ ಗೆಲ್ಲೋರು ಯಾರೆಂದು ಊಹಿಸಿ

ಭಾರತದ ಐಟಿ ರಾಜಧಾನಿಯ ಸ್ಟಾರ್ಟ್‌ಅಪ್ ಮತ್ತು ರೆಸ್ಟೋರೆಂಟ್ ಕೇಂದ್ರವಾದ ಇಂದಿರಾನಗರದಲ್ಲಿ ಮಂಗಳವಾರ ಸಂಜೆ ನಡೆಯಲಿರುವ "ಯುಎಸ್ ಎಲೆಕ್ಷನ್ ಶೋಡೌನ್ ಚಾಲೆಂಜ್ ಮತ್ತು ಪ್ರಿಡಿಕ್ಟ್-ಅಥಾನ್" ಎಂಬ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಚುನಾವಣಾ ಕಾರ್ಯಕ್ರಮಕ್ಕೆ ಈಗಾಗಲೇ 100 ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಇದು ಚುನಾವಣಾ ಭವಿಷ್ಯ, ರಾಪಿಡ್ ಫೈರ್ ಚಾಲೆಂಜ್‌ ಮತ್ತು "ರಾಜಕೀಯ ಕರೋಕೆ" ನಂತಹ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕದ ಚುನಾವಣೆಗಳ ಕುರಿತು ಮೀಮ್‌ಗಳು, ಜಿಐಎಫ್‌ಗಳು ಮತ್ತು ಜೋಕ್‌ಗಳನ್ನು ಸಹ ಪ್ರದರ್ಶಿಸಲಾಗುತ್ತದೆ ಎಂದು ವಿವರಿಸಲಾಗಿದೆ. ಇದು ಮೂರು ಗಂಟೆಯ ಕಾರ್ಯಕ್ರಮವಾಗಿದ್ದು, ಅಮೆರಿಕನ್‌ ನಮ್ಮ ಬೆಂಗಳೂರು ಫ್ಯೂಷನ್ ಮೆನು ಇರಲಿದೆ. ಇದರಲ್ಲಿ ಹ್ಯಾಂಬರ್ಗರ್‌, ದೋಸೆ, ಪಿಬಿಆಂಡ್‌ಜೆ (ಪಿನಟ್‌ ಬಟರ್ ಮತ್ತು ಜೆಲ್ಲಿ) ಇಡ್ಲಿ ಕೂಡ ಲಭ್ಯವಿದೆ.

ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ಪ್ರಚಾರ ಅಂತ್ಯ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಮತದಾನ ಶುರುವಾಗಿದ್ದು, ನಿನ್ನೆ (ಸೋಮವಾರ) ಅಧ್ಯಕ್ಷೀಯ ಅಭ್ಯರ್ಥಿಗಳಾದ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರನ್ನು ಅಂತ್ಯಗೊಳಿಸಿದ್ದಾರೆ. ಒಪಿನಿಯನ್ ಪೋಲ್ ಪ್ರಕಾರ, ಟ್ರಂಪ್ ಮತ್ತು ಹ್ಯಾರಿಸ್ ನಡುವೆ ಸಮಬಲ ಕಂಡುಬಂದಿವೆ. 2020 ರಲ್ಲಿ ಮಾಡಿದಂತೆ ಯಾವುದೇ ಸೋಲಿನ ವಿರುದ್ಧ ಹೋರಾಡಲು ಪ್ರಯತ್ನಿಸುವುದಾಗಿ ಟ್ರಂಪ್ ಈಗಾಗಲೇ ಸೂಚಿಸಿದ್ದಾರೆ. ಕಮಲಾ ಹ್ಯಾರಿಸ್ ಕೂಡ ಆಶಾವಾದ ವ್ಯಕ್ತಪಡಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನೇರ ಸ್ಪರ್ಧೆ ಇರುವ ಕಾರಣ ಚುನಾವಣೆಯ ಮಹತ್ವ ಹೆಚ್ಚಾಗಿದೆ. ಇದಲ್ಲದೆ, ಮತದಾನಕ್ಕೆ ಅಧಿಕೃತ ದಿನ ನವೆಂಬರ್ 5 ಆದರೂ ಅಧಿಕೃತ ಫಲಿತಾಂಶ ಪ್ರಕಟವಾಗುವುದು ಕೆಲವು ದಿನಗಳ ಬಳಿಕ. ಮತ ಪತ್ರಗಳ ಎಣಿಕೆ ಇಂದು ಮತದಾನ ಮುಗಿಯುತ್ತಿದ್ದಂತೆ ಶುರುವಾಗುತ್ತದೆ. ಆರಂಭಿಕ ಎಣಿಕೆಯ ಫಲಿತಾಂಶದ ಆಧಾರದ ಮೇಲೆ ವಿಜೇತರು ಯಾರು ಎಂಬುದನ್ನು ಅಂದಾಜಿಸಲಾಗುತ್ತದೇ ಹೊರತು ಅದು ನಿಖರ ಅಥವಾ ಅಧಿಕೃತ ಫಲಿತಾಂಶವಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ