logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ನನ್ನ ತಂದೆಗೆ ಡಿಸಿಎಂ ಆಗುವ ಅರ್ಹತೆಯಿದೆ ಎಂದ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ

Vijayapura News: ನನ್ನ ತಂದೆಗೆ ಡಿಸಿಎಂ ಆಗುವ ಅರ್ಹತೆಯಿದೆ ಎಂದ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ

HT Kannada Desk HT Kannada

May 14, 2023 07:02 PM IST

ಸಂಯುಕ್ತಾ ಪಾಟೀಲ

    • ನನ್ಮ ತಂದೆ ಶಿವಾನಂದ ಪಾಟೀಲ(Shivanand patil) ಅವರಿಗೆ ಡಿಸಿಎಂ ಆಗುವ ಅರ್ಹತೆ ಇದೆ, ಅವರೊಬ್ಬ ದಕ್ಷ ರಾಜಕಾರಣಿ ಎಂದು ಕಾಂಗ್ರೆಸ್ ಯುವ ಧುರೀಣೆ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಹೇಳಿದ್ದಾರೆ. 
 ಸಂಯುಕ್ತಾ ಪಾಟೀಲ
ಸಂಯುಕ್ತಾ ಪಾಟೀಲ

ವಿಜಯಪುರ: ನನ್ಮ ತಂದೆ ಶಿವಾನಂದ ಪಾಟೀಲ(Shivanand patil) ಅವರಿಗೆ ಡಿಸಿಎಂ ಆಗುವ ಅರ್ಹತೆ ಇದೆ, ಅವರೊಬ್ಬ ದಕ್ಷ ರಾಜಕಾರಣಿ, ಅವಕಾಶ ಸಿಕ್ಕರೆ ಇನ್ನೂ ಪರಿಣಾಮಕಾರಿಯಾಗಿ ಹಾಗೂ ಗುಣಾತ್ಮಕವಾಗಿ ಅವರು ಜನಸೇವೆ ಮಾಡಲು ಸಾಧ್ಯ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ, ಈ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವುದು ಹೈಕಮಾಂಡ್ ಬಿಟ್ಟಿದ್ದು, ನಾನು ಒಬ್ಬ ಸಾಮಾನ್ಯ ಕಾರ್ಯಕರ್ತೆ ಮಾತ್ರ ಎಂದು ಕಾಂಗ್ರೆಸ್ ಯುವ ಧುರೀಣೆ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಹೇಳಿದ್ದಾರೆ. ಸಂಯುಕ್ತ ಪಾಟೀಲ್‌ ತಂದೆ ಶಿವನಂದ ಪಾಟೀಲರು ಬಸವನಬಾಗೇವಾಡಿ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

ಮಸಬಿನಾಳ ಗ್ರಾಮದಲ್ಲಿ ಇವಿಎಂ ಮಷೀನ್‌ಗಳನ್ನು ಪುಡಿಪುಡಿ ಮಾಡಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ, ಈ ರೀತಿ ಯಾರು ಮಾಡಿದರೂ ಸಹ ಅದು ತಪ್ಪು, ಒಂದು ವೇಳೆ ಅನುಮಾನ ಕಾಡಿದರೆ ಅದಕ್ಕೆ ಕಾನೂನಾತ್ಮಕ ಅಂಶಗಳ ಮೂಲಕ ಅದನ್ನು ಪರಿಹರಿಸಿಕೊಳ್ಳಬೇಕು ಹೊರತು ಅಧಿಕಾರಿಗಳ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದರೆ ಅದು ತಪ್ಪು ಎಂದು ಕಾಂಗ್ರೆಸ್ ಯುವ ಧುರೀಣೆ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸಬಿನಾಳ ಗ್ರಾಮದಲ್ಲಾದ ಘಟನೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಭಾಗಿಯಾಗಿಲ್ಲ, ಈ ಘಟನಾವಳಿ ದೃಶ್ಯ ವೀಕ್ಷಿಸಿದಾಗ ಅವರು ಒಂದು ಪಕ್ಷದ ಅಭ್ಯರ್ಥಿ ಪರವಾಗಿ ಜಯಘೋಷ ಹಾಕುತ್ತಿರುವುದು ಜಗಜ್ಜಾಹೀರಾಗಿದೆ, ಹೀಗಾಗಿ ಈ ರೀತಿ ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳಾ ಪ್ರಾತಿನಿಧ್ಯ ಇನ್ನೂ ಹೆಚ್ಚಾಗಬೇಕಿದೆ, ಮತದಾರರ ಸಂಖ್ಯೆ ವಿಶ್ಲೇಷಿಸಿದಾಗ ಮಹಿಳಾ ಮತದಾರರೇ ಹೆಚ್ಚು, ಮಹಿಳಾ ಜನಸಂಖ್ಯೆ ಆಧರಿಸಿ ಮಹಿಳಾ ಮೀಸಲಾತಿ ಕಲ್ಪಿಸಿದರೆ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸನ ಸಭೆಗಳನ್ನು ಪ್ರವೇಶಿಸಬಹುದು ಎಂಬುದು ನನ್ನ ವೈಯುಕ್ತಿಕ ಅನಿಸಿಕೆ ಎಂದು ಸಂಯುಕ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಚಾರಕ್ಕೆ ಹೋದಾಗ ನನ್ನ ಹಾಗೂ ನನ್ನ ತಾಯಿಯವರ ಮೇಲೆ ಹಲ್ಲೆ ಯತ್ನ ನಡೆಯಿತು, ಆದರೆ ಆ ವಿಷಯವನ್ನು ದೊಡ್ಡದು ಮಾಡಲು ಹೋಗಿಲ್ಲ, ಆದರೆ ಅಲ್ಲಿಂದ ನಾವು ಓಡಿ ಹೋಗಿದ್ದೇವೆ ಎಂದು ಅಪಪ್ರಚಾರ ಮಾಡಿದರು, ಪರಿಣಾಮವಾಗಿ ನಾನು ಪತ್ರಿಕಾಗೋಷ್ಠಿ ಕರೆದು ಭಾವುಕಳಾಗಿದ್ದೆ, ಆಗ ಸಂದರ್ಭ ಹಾಗಿತ್ತು ಭಾವುಕಳಾದೆ, ಮುಂದೆ ಭಾವುಕಳಾಗುವ ಅವಶ್ಯಕತೆ ಇಲ್ಲ, ಮಹಿಳೆಯರು ಪ್ರಚಾರಕ್ಕೆ ಹೋದಾಗ ಸಭ್ಯ ವರ್ತನೆ ಇರಬೇಕು ಎಂದರು.

ಶಿವಾನಂದ ಪಾಟೀಲರ ಧರ್ಮಪತ್ನಿ ಭಾಗ್ಯಶ್ರೀ ಪಾಟೀಲ ಮಾತನಾಡಿ, ಮುಳವಾಡದಲ್ಲಿ ಕಳೆದ ದಿ.7 ರಂದು ಪ್ರಚಾರ ನಡೆಸಲು ಹೋದ ಸಂದರ್ಭದಲ್ಲಿ ಕೆಲವು ಯುವಕರ ಗುಂಪು ಹಲ್ಲೆ ನಡೆಸಲು ಮುಂದಾಗಿದ್ದು ನಿಜ, ಬಿಜೆಪಿ, ಜೆಡಿಎಸ್ ಯಾವ ಕಾರ್ಯಕರ್ತರು ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ, ತಕ್ಷಣವೇ ಗ್ರಾಮದ ಹಿರಿಯರು ಬಂದು ಯುವಕರಿಗೆ ಬುದ್ಧಿವಾದ ಹೇಳಿದರು. ಆದರೆ ಈ ಬಗ್ಗೆ ದೂರು ನೀಡಲು ಹೋಗಲಿಲ್ಲ, ಆದರೆ ನಾವು ಓಡಿ ಹೋಗಿದ್ದೇವೆ ಎಂದು ಅಪಪ್ರಚಾರ ನಡೆಸಿದಾಗ ಪತ್ರಿಕಾಗೋಷ್ಠಿ ಕರೆದು ಈ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದೇವೆ ಎಂದರು.

ವರದಿ: ಸಮಿವುಲ್ಲಾ ಉಸ್ತಾದ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ