logo
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರದ ಸಬಲಾ ಸಂಸ್ಥೆಯಿಂದ ಮಹಿಳೆಯರಿಗೆ ರಾಜ್ಯ ಮಟ್ಟದ ಸಬಲಾ ಪ್ರಶಸ್ತಿ: ಅರ್ಜಿ ಸಲ್ಲಿಕೆಗೆ ಅಕ್ಟೋಬರ್‌ 15 ಕಡೆ ದಿನ

ವಿಜಯಪುರದ ಸಬಲಾ ಸಂಸ್ಥೆಯಿಂದ ಮಹಿಳೆಯರಿಗೆ ರಾಜ್ಯ ಮಟ್ಟದ ಸಬಲಾ ಪ್ರಶಸ್ತಿ: ಅರ್ಜಿ ಸಲ್ಲಿಕೆಗೆ ಅಕ್ಟೋಬರ್‌ 15 ಕಡೆ ದಿನ

Umesha Bhatta P H HT Kannada

Sep 27, 2024 12:30 PM IST

google News

ವಿಜಯಪುರದ ಸಬಲ ಸಂಸ್ಥೆಯು ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ,

    • ವಿಜಯಪುರದ ಸಬಲ ಸಂಸ್ಥೆಯು ಮಹಿಳಾ ಸಬಲೀಕರದ ಹೋರಾಟ ಹಾಗೂ ಗ್ರಾಮೀಣ ಉದ್ಯೋಗಕ್ಕಾಗಿ ಕೆಲಸ ಮಾಡಿದ ಮಹಿಳೆಯರಿಗೆ ಅರ್ಜಿ ಆಹ್ವಾನಿಸಲಾಗಿದೆ. 
ವಿಜಯಪುರದ ಸಬಲ ಸಂಸ್ಥೆಯು ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ,
ವಿಜಯಪುರದ ಸಬಲ ಸಂಸ್ಥೆಯು ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ,

ವಿಜಯಪುರ: ವಿಜಯಪುರದ ಸಬಲಾ ಸಂಸ್ಥೆಯು ರಾಜ್ಯ ಮಟ್ಟದಲ್ಲಿ ಮಹಿಳಅ ಸಬಲೀಕರಣ ಹಾಗೂ ಗ್ರಾಮೀಣ ಉದ್ಯಮ ವಲಯದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಮಹಿಳೆಯರಿಗೆ ಮೊದಲ ಬಾರಿಗೆ ಸಬಲಾ ಪುರಸ್ಕಾರ 2024 ಘೋಷಣೆ ಮಾಡಿದೆ. ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನವೂ ಇರಲಿದೆ. ಕರ್ನಾಟಕದ ನಾನಾ ಭಾಗಗಳಲ್ಲಿ ಮಹಿಳೆಯರು ತಮ್ಮೊಂದಿಗೆ ಇರುವ ಸಮುದಾಯದ ಭಾಗಿಯಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವವರ ಸಂಖ್ಯೆ ಅಧಿಕ. ಇದರೊಟ್ಟಿಗೆ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿಯೂ ಮಹಿಳೆಯರು ದುಡಿಯುತ್ತಿದ್ದಾರೆ. ಹೀಗೆ ಹೋರಾಟ ಹಾಗೂ ಗ್ರಾಮೀಣ ಉದ್ಯೋಗದಲ್ಲಿ ನಿರತರಾಗಿರುವ ಮಹಿಳೆಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ

ವಿಜಯಪುರದ ಸಬಲಾ ಸಂಸ್ಥೆಯು ಸುಮಾರು 35 ವರ್ಷಗಳಿಂದ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತ ಬಂದಿದೆ. ಈಗ ಮಹಿಳೆಯರ ಸಬಲೀಕರಣಕ್ಕಾಗಿ ಹಾಗು ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹಿಸಲು ಸಬಲಾ ಪುರಸ್ಕಾರ 2024 ಘೋಷಣೆ ಮಾಡುತ್ತಿದ್ದೇವೆ. ಈ ಅವಾರ್ಡನ್ನು ಪ್ರತಿ ವರ್ಷ ನೀಡಲಾಗುವದು ಮಹಿಳಾ ಹೋರಾಟಗಾರರಿಗೆ ರೂ 25000 ಹಾಗು ಮಹಿಳಾ ಗ್ರಾಮೀಣ ಉದ್ಯಮಿಗೆ 25000 ಒಳಗೊಂಡಿದ್ದು ಅರ್ಹರಿಂದ ಅರ್ಜಿ ಆವ್ಹಾನಿಸಲಾಗಿದೆ ಎಂದು ಸಬಲ ಸಂಸ್ಥೆಯ ಡಾ.ಮಲ್ಲಮ್ಮ ಯಾಳವಾರ ತಿಳಿಸಿದ್ಧಾರೆ.

ಆಯ್ಕೆ ನಿಯಮಗಳು

1) ಕರ್ನಾಟಕದ ಮಹಿಳೆಯಾಗಿರಬೇಕು

2) ಕನಿಷ್ಠ 10 ವರ್ಷದ ಅನುಭವ ಇರಬೇಕು

3) ವಯಸ್ಸು ಕನಿಷ್ಠ 50 ಆಗಿರಬೇಕು

4) ಮಹಿಳೆ ಕೆಲಸ ಮಾಡುತ್ತಿರುವ ಕ್ಷೇತ್ರ ಮತ್ತು ಸಾಧನೆಯನ್ನು ಎರಡು ಪುಟ ಮೀರದಂತೆ ವಿವರಣೆ ನೀಡಬೇಕು.

5) ವಿಳಾಸ ಮತ್ತು ಫೋನ್ ನಂಬರ್‌ ಕಡ್ಡಾಯ

ಅರ್ಜಿ ಕೊನೆ ದಿನಾಂಕ 2024ರ ಅಕ್ಟೋಬರ್‌ 15.

ಹೆಚ್ಚಿನ ವಿವರಗಳಿಗೆ ಮಲ್ಲಮ್ಮ ಯಾಳವಾರ ಸಬಲಾ ಕ್ಯಾಂಪಸ್ NH-50 ಬೆಂಗಳೂರ್ ಸೋಲಾಪುರ್ ಹೈವೆ ಟಯೋಟಾ ಶೋರೂಮ್ ಹತ್ತಿರ ವಿಜಯಪುರ 586101 ಸಂಪರ್ಕಿಸಿ ಇದೇ ವಿವರಗಳಿಗೆ ಅರ್ಜಿ ಸಲ್ಲಿಸಬಹುದು.ಸಂಪರ್ಕ ಸಂಖ್ಯೆ: 94481 18204

ಸಬಲ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣದ ಭಾಗವಾಗಿ ಕೆಲಸ ಮಾಡುತ್ತಿದೆ. ಮಹಿಳೆಯರು ತಯಾರಿಸಿ ಕರಕುಶಲ ಉತ್ಪನ್ನಗಳಿಗೆ ದೇಶ, ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸುವುದು ಸಬಲದ ಉದ್ದೇಶ. ಅಂತಹ ಪ್ರಯತ್ನಗಳು ನಾಲ್ಕು ದಶಕದಿಂದ ನಡೆದಿವೆ.

ಸಬಲ ಸಂಸ್ಥೆಯು ಮಹಿಳೆಯರ ಉನ್ನತಿಗಾಗಿ ಶ್ರಮಿಸುತ್ತಿದೆ. ಅಲೆದಾಡುವ ಮಹಿಳೆಯರಿಗೆ ಜೀವನೋಪಾಯದೊಂದಿಗೆ ಆಸರೆಯಾಗಿ ಬದುಕುತ್ತಿರುವ ಸಂಸ್ಥೆ ಇದು. ಸಬಲ ಆರಂಭದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ಬಂಜಾರ ಮಹಿಳೆಯರಿಗೆ ಸಹಾಯ ಮಾಡುವ ಕಾಳಜಿಯೊಂದಿಗೆ ಪ್ರಾರಂಭವಾಯಿತು.ಸಬಲ ಎಂಬ ಪದವು ಶಕ್ತಿಶಾಲಿ ಎಂಬ ಅರ್ಥವನ್ನು ನೀಡುತ್ತದೆ, ಅಲ್ಲಿ ಸಬಲವು ವಿಜಯಪುರ ಪ್ರದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಬಿಜಾಪುರದಲ್ಲಿ ಭಾರತದ ಕರ್ನಾಟಕ ಪ್ರದೇಶ ಸಬಲ ಸಾಮಾನ್ಯವಾಗಿ ನೆಲೆಗೊಂಡಿದೆ ಮತ್ತು ಇದು ಈ ಪ್ರದೇಶಗಳ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕಾಗಿ ರಚಿಸಲಾದ ಸ್ವಯಂಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿಶೇಷವಾಗಿ ವಿಧವೆಯರು, ಲಭ್ಯವಿರುವ ಕೌಶಲ್ಯಗಳೊಂದಿಗೆ ಉದ್ಯೋಗಗಳನ್ನು ನಿರ್ವಹಿಸುವ ಮೂಲಕ ಜೀವನಕ್ಕಾಗಿ ಹುಡುಕುತ್ತಿರುವ ಮಹಿಳೆಯರು, ನಿರ್ಗತಿಕರು, ಬುಡಕಟ್ಟು ಮತ್ತು ಆರ್ಥಿಕವಾಗಿ ಹಿಂದುಳಿದ ಜನರೊಂದಿಗೆ ವ್ಯವಹರಿಸುತ್ತದೆ. ಇದು ಸಾಮಾನ್ಯವಾಗಿ ಹದಿಹರೆಯದ ಹುಡುಗಿಯರು ಸಬಲರಾಗಲು ಮತ್ತು ಸ್ವಯಂ-ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತಿದೆ. ಅವರ ಉತ್ಪನ್ನಗಳಿಗೆ ವಿದೇಶಗಳಲ್ಲೂ ಬೇಡಿಕೆಯಿದೆ. ಅದನ್ನು ಸಬಲ ಸಂಸ್ಥೆ ಆಗು ಮಾಡಿದೆ. ಮಹಿಳೆಯರಿಗೆ ಮಾರ್ಗದರ್ಶನ, ತರಬೇತಿಯನ್ನು ನಿಯಮಿತವಾಗಿ ಸಬಲ ನಿಯಮಿತವಾಗಿ ನಡೆಸಿಕೊಂಡು ಬರುತ್ತಿದೆ. ಮಲ್ಲಮ್ಮ ಯಾಳವಾರ ಅವರೇ ಇದರ ಹಿಂದಿರುವ ರೂವಾರಿ.

ವಿಜಯಪುರದವರೇ ಆದ ಮಲ್ಲಮ್ಮ ಯಾಳವಾರ ಅವರು ಮುಂದೆ ಬಂದು ಬಂಜಾರ/ ಲಂಬಾಣಿ ಸಮುದಾಯದ ಸಾಂಸ್ಕೃತಿಕ ಪರಂಪರೆಯ ಉನ್ನತಿಗೆ ಬೆಂಬಲವಾಗಿ ನಿಂತರು. ಇದು ಬಂಜಾರ/ ಲಂಬಾಣಿ ಕಸೂತಿ, ಬಂಜಾರ/ ಲಂಬಾಣಿ ಆಭರಣ ತಯಾರಿಕೆ, ಕೀ ಚೈನ್ ತಯಾರಿಕೆ, ಪರ್ಸ್‌ ಸೆಣಬಿನ ಚೀಲ ತಯಾರಿಕೆ ಮುಂತಾದ ಕರಕುಶಲಗಳನ್ನು ವರ್ಧಿಸಿ ಹಲವು ರೂಪದಲ್ಲಿ ಮಾರುಕಟ್ಟೆ ಕಲ್ಪಿಸಿದೆ. ಲಂಬಾಣಿ ಮಹಿಳೆಯರ ಬದುಕಿಗೂ ಆಸರೆಯಾಗಿದೆ ಸಬಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ