logo
ಕನ್ನಡ ಸುದ್ದಿ  /  ಕರ್ನಾಟಕ  /  Yadagiri News: ನ.18 ರಿಂದ 20ರವರೆಗೆ ರಾಜ್ಯ ಉಪಲೋಕಾಯುಕ್ತರಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ, ವಿಚಾರಣೆ

Yadagiri News: ನ.18 ರಿಂದ 20ರವರೆಗೆ ರಾಜ್ಯ ಉಪಲೋಕಾಯುಕ್ತರಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ, ವಿಚಾರಣೆ

HT Kannada Desk HT Kannada

Nov 17, 2023 11:34 AM IST

google News

ನ.18 ರಿಂದ 20ರವರೆಗೆ ರಾಜ್ಯ ಉಪಲೋಕಾಯುಕ್ತರಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ, ವಿಚಾರಣೆ

    • ನವೆಂಬರ್ 18 ರಿಂದ ನವೆಂಬರ್ 20ರವರೆಗೆ ಯಾದಗಿರಿ ಜಿಲ್ಲೆಗೆ ಕರ್ನಾಟಕ ರಾಜ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಹಾಗೂ ತಂಡವು ಭೇಟಿ ನೀಡಲಿದೆ.
ನ.18 ರಿಂದ 20ರವರೆಗೆ ರಾಜ್ಯ ಉಪಲೋಕಾಯುಕ್ತರಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ, ವಿಚಾರಣೆ
ನ.18 ರಿಂದ 20ರವರೆಗೆ ರಾಜ್ಯ ಉಪಲೋಕಾಯುಕ್ತರಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ, ವಿಚಾರಣೆ

ಯಾದಗಿರಿ: ಕರ್ನಾಟಕ ರಾಜ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಹಾಗೂ ತಂಡವು ಇದೇ ನವೆಂಬರ್ 18 ರಿಂದ ನವೆಂಬರ್ 20ರವರೆಗೆ ಯಾದಗಿರಿ ಜಿಲ್ಲೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು, ದೂರುಗಳು ಹಾಗೂ ಮನವಿಗಳನ್ನು ಸ್ವೀಕರಿಸುವ ಜೊತೆಗೆ ಈ ವಿವಿಧೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀಮತಿ ಸುಶೀಲ.ಬಿ ಹಾಗೂ ಕರ್ನಾಟಕ ಲೋಕಾಯುಕ್ತ ರೆಜಿಸ್ಟ್ರಾರ್ ಉಷಾರಾಣಿ ಅವರು ತಿಳಿಸಿದ್ದಾರೆ.

ಉಪಲೋಕಾಯುಕ್ತರ ಜೊತೆಯಲ್ಲಿ ಹೆಚ್ಚುವರಿ ರೆಜಿಸ್ಟಾರ್‌ ವಿಚಾರಣೆ-20 ಶಶಿಕಾಂತ.ಬಿ ಭಾವಿಕಟ್ಟಿ, ಉಪರೆಜಿಸ್ಟಾರ್ ವಿಚಾರಣೆ ಎಮ್.ವಿ.ಚನ್ನಕೇಶವ ರೆಡ್ಡಿ, ಉಪಲೋಕಾಯುಕ್ತರ ಖಾಸಗಿ ಆಪ್ತ ಕಾರ್ಯದರ್ಶಿ ಕಿರಣ ಪ್ರಲ್ಹಾದರಾವ್ ಮುತಾಲಿಕ್ ಪಾಟೀಲ್ ಜಿಲ್ಲೆಗೆ ಆಗಮಿಸಲಿದ್ದು, ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು, ದೂರುಗಳು ಹಾಗೂ ಮನವಿಗಳನ್ನು ಸ್ವೀಕರಿಸುವ ಜೊತೆಗೆ ಜಿಲ್ಲೆಗೆ ಸಂಬಂಧಿಸಿದಂತೆ ವಿಚಾರಣೆ ಮತ್ತು ಬಾಕಿ ಇರುವ ದೂರುಗಳನ್ನು ವಿಲೇವಾರಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಉಪಲೋಕಾಯುಕ್ತರಾದ ಕೆ.ಎನ್ ಫಣೀಂದ್ರ ಅವರು ನವೆಂಬರ್ 17 ರಂದು ರಾತ್ರಿ 8.40 ಗಂಟೆಗೆ ಬೆಂಗಳೂರಿನಿಂಸದ ಹೊರಟು ನವೆಂಬರ್ 18 ರಂದು ಬೆಳಿಗ್ಗೆ 5.53 ಗಂಟೆಗೆ ಯಾದಗಿರಿಗೆ ಆಗಮಿಸಿ ನೂತನ ಸರ್ಕ್ಯೂಟ್ ಹೌಸ್‌ಗೆ ಆಗಮಿಸಲಿದ್ದಾರೆ. ನಂತರ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ, ಆಡಿಟೋರಿಯಂ ಹಾಲ್‌ನಲ್ಲಿ ಸಾರ್ವಜನಿಕರ ಕುಂದು ಕೊರತೆ ಅಹವಾಲು ಆಲಿಸುವರು (ವಿಚಾರಿಸುವರು). ಅದರಂತೆ ಸಾರ್ವಜನಿಕ ದೂರುಗಳು ಸ್ವೀಕರಿಸುವ ಜೊತೆಗೆ ಮನವಿಗಳನ್ನು ಸಹ ಸ್ವೀಕರಿಸಲಿದ್ದಾರೆ.

ಅಂದು ಸಂಜೆ 5.30 ಗಂಟೆಗೆ ಜಿಲ್ಲಾಡಳಿತ ಭವನ, ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ರೇಷ್ಮೆ, ತೋಟಗಾರಿಕೆ, ತಾಲೂಕು ಮಟ್ಟದ ಉಪನೊಂದಣಿ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಸಹಾಯಕ ಶಿಕ್ಷಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ನ್ಯಾಯಾಲಯ ಸಿಬ್ಬಂದಿಗಳೊಂದಿಗೆ ಏರ್ಪಡಿಸಲಾದ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ”ದಲ್ಲಿ ಭಾಗವಹಿಸಲಿದ್ದಾರೆ. ನಂತರ ಯಾದಗಿರಿ ನೂತನ ಸರ್ಕ್ಯೂಟ್ ಹೌಸ್‌ದಲ್ಲಿ ವಾಸ್ತವ್ಯ ಮಾಡುವರು.

ಬೀದರ್: ನ. 18 ರಂದು ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ

ಬೀದರ್:‌ ಜೆಸ್ಕಾಂ ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಹುಮನಾಬಾದ ಉಪ ವಿಭಾಗದ ಘಾಟಬೋರಾಳ ಶಾಖೆ ಕಚೇರಿ, ವiನ್ನಾಏಖೇಳ್ಳಿ ಉಪ ವಿಭಾಗದ ನಿರ್ಣಾ ಶಾಖೆ ಕಚೇರಿ ಹಾಗೂ ಬಸವಕಲ್ಯಾಣ, ಉಪ-ವಿಭಾಗದ ಪಟ್ಟಣ-1 ಶಾಖೆ ಕಚೇರಿಗಳಲ್ಲಿ ನವೆಂಬರ್ 18 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಹಕರ ಕುಂದು-ಕೊರತೆ ನಿವಾರಣಾ ಸಭೆಯನ್ನು ಕಾರ್ಯನಿರ್ವಾಹಕ ಇಂಜಿನಿಯರರು (ವಿ), ಗು.ವಿ.ಸ.ಕಂ.ನಿ ಹುಮನಾಬಾದ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ಆದಕಾರಣ ಸಾರ್ವಜನಿಕರು ಹಾಗೂ ಗು.ವಿ.ಸ.ಕಂ.ನಿ, ಗ್ರಾಹಕರು ಸದರಿ ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ್: ಜೆಸ್ಕಾಂ ಜನ ಸಂಪರ್ಕ ಸಭೆ

ಬೀದರ್‌ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಅಡಿಯಲ್ಲಿ ಬರುವ ಔರಾದ (ಬಿ) ಉಪ ವಿಭಾಗ ಕಚೇರಿ ಹಾಗೂ ಬೀದರ್ ಉಪ ವಿಭಾಗ ಕಚೇರಿಯಲ್ಲಿ ನವೆಂಬರ್ 18 ರಂದು ಬೆಳಗ್ಗೆ 11 ಗಂಟೆಗೆ ಅದೇ ರೀತಿ ಭಾಲ್ಕಿ ಉಪ ವಿಭಾಗ ಕಚೇರಿ, ಹಾಗೂ ಕಮಠಾಣ ಉಪ ವಿಭಾಗ ಕಛೇರಿಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಜನ ಸಂಪರ್ಕಸಭೆ ಹಾಗೂ ಕೆಇಆರ್‌ಸಿಯ(ಎಸ್.ಒ.ಪಿ) ಮನಾದಂಡಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಇಂಜಿನಿಯರರು (ವಿ) ಸಹ ಕಾರ್ಯನಿರ್ವಾಹಕ ಇಂಜೀನಿಯರರು (ವಿ) ಗುವಿಸಕಂನಿರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆದಕಾರಣ ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಸದರಿ ಸಭೆಯಲ್ಲಿ ಉಪಸ್ಥಿತರಿದ್ದು ಕುಂದುಕೊತೆಯ ಅರ್ಜಿಗಳನ್ನು ಸಲ್ಲಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ