logo
ಕನ್ನಡ ಸುದ್ದಿ  /  ಕರ್ನಾಟಕ  /  Yadagiri News: ಉಗ್ರನೊಂದಿಗೆ ನಂಟು ಹೊಂದಿದ ಯಾದಗಿರಿ ಮೂಲದ ವ್ಯಕ್ತಿಯ ಮನೆ ಮೇಲೆ ಎನ್‌ಐಎ ತಂಡ ದಾಳಿ

Yadagiri News: ಉಗ್ರನೊಂದಿಗೆ ನಂಟು ಹೊಂದಿದ ಯಾದಗಿರಿ ಮೂಲದ ವ್ಯಕ್ತಿಯ ಮನೆ ಮೇಲೆ ಎನ್‌ಐಎ ತಂಡ ದಾಳಿ

HT Kannada Desk HT Kannada

Sep 14, 2023 04:59 PM IST

google News

ಗ್ರನೊಂದಿಗೆ ನಂಟು ಹೊಂದಿದ ಯಾದಗಿರಿ ಮೂಲದ ವ್ಯಕ್ತಿಯ ಮನೆ ಮೇಲೆ ಎನ್‌ಐಎ ತಂಡ ದಾಳಿ

    • ಜಾರ್ಖಂಡ್‌ನ ರಾಂಚಿಯಲ್ಲಿ ಐಸಿಸ್ (ISIS) ಉಗ್ರನನ್ನು ಎನ್ಐಎ (NIA) ಬಂಧಿಸಿ ವಿಚಾರಣೆ ಕೈಗೊಂಡಿತ್ತು. ಈ ವೇಳೆ ಕರ್ನಾಟಕದ ಯಾದಗಿರಿ ಜಿಲ್ಲೆಯ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಮಾಹಿತಿ ತಿಳಿದುಬಂದಿತ್ತು. ಜಿಲ್ಲೆಗೆ ಆಗಮಿಸಿದ್ದ ಎನ್ಐಎ ತಂಡ, ಇದೀಗ ಎರಡನೇ ಬಾರಿ ಆಗಮಿಸಿ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಗ್ರನೊಂದಿಗೆ ನಂಟು ಹೊಂದಿದ ಯಾದಗಿರಿ ಮೂಲದ ವ್ಯಕ್ತಿಯ ಮನೆ ಮೇಲೆ ಎನ್‌ಐಎ ತಂಡ ದಾಳಿ
ಗ್ರನೊಂದಿಗೆ ನಂಟು ಹೊಂದಿದ ಯಾದಗಿರಿ ಮೂಲದ ವ್ಯಕ್ತಿಯ ಮನೆ ಮೇಲೆ ಎನ್‌ಐಎ ತಂಡ ದಾಳಿ

ಯಾದಗಿರಿ: ಜಾರ್ಖಂಡ್‌ನ ರಾಂಚಿಯಲ್ಲಿ ಬಂಧನಕ್ಕೊಳಗಾದ ಆರೋಪಿ ಫೈಯಾಜ್ ಜೊತೆ ಸಂಪರ್ಕ ಹೊಂದಿರುವ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ನಿವಾಸಿ ಖಾಲೀದ್ ಅಹ್ಮದ್‌(Khalid Ahmed) ನಿವಾಸದ ಮೇಲೆ ಎನ್‌ಐಎ ದಾಳಿ ಮಾಡಿದೆ. ನಸುಕಿನ ಜಾವ ಶಹಾಪುರದ ಖಾಲೀದ್ ಅಹ್ಮದ್ ನಿವಾಸದ ಮೇಲೆ ದಾಳಿ ಮಾಡಿ, ಎನ್ಐಎ(NIA) ತಂಡ ವಿಚಾರಣೆ ನಡೆಸಿದೆ. ರಾಂಚಿ ಮೂಲದ ಎನ್ಐಎ ತಂಡ ಇಲ್ಲಿಗೆ ಬಂದಿದೆ. ಖಾಲೀದ್ ಅಹ್ಮದ್ ನ ತೀವ್ರ ವಿಚಾರಣೆ ನಡೆಸಿ, ಇದೇ 20 ರಂದು ಮತ್ತೆ ರಾಂಚಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಎನ್ಐಎ ತಂಡ ಖಾಲೀದ್ ಅಹ್ಮದ್‌ನ ಎರಡು ಮೊಬೈಲ್ ಜಪ್ತಿ ಮಾಡಿದೆ. ಆಧಾರ್‌ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಜೇರಾಕ್ಸ್ ಪ್ರತಿ ದಾಖಲೆಗಳನ್ನು ತೆಗೆದುಕೊಂಡು ಹೋಗಿದೆ. ಸದ್ಯ ಎನ್ಐಎ ತಂಡದಿಂದ ಖಾಲಿದ್ ವಿಚಾರಣೆ ಮುಕ್ತಾಯವಾಗಿದೆ.

ಜಾರ್ಖಂಡ್‌ನ ರಾಂಚಿಯಲ್ಲಿ ಐಸಿಸ್ (ISIS) ಉಗ್ರನನ್ನು ಎನ್ಐಎ (NIA) ಬಂಧಿಸಿ ವಿಚಾರಣೆ ಕೈಗೊಂಡಿತ್ತು. ಈ ವೇಳೆ ಕರ್ನಾಟಕದ ಯಾದಗಿರಿ ಜಿಲ್ಲೆಯ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಮಾಹಿತಿ ತಿಳಿದುಬಂದಿತ್ತು. ಅದರಂತೆ, ಜಿಲ್ಲೆಗೆ ಆಗಮಿಸಿದ್ದ ಎನ್ಐಎ ತಂಡ, ಇದೀಗ ಎರಡನೇ ಬಾರಿ ಆಗಮಿಸಿ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಬಂಧಿತ ಐಸಿಸ್ ಉಗ್ರನ ಜೊತೆ ಇನ್ಸ್ಟಾಗ್ರಾಮ್ನಲ್ಲಿ ಸಂಪರ್ಕ ಹೊಂದಿದ್ದ ಖಾಲಿದ್ ಅಹ್ಮದ್ ಮನೆಗೆ ಭೇಟಿ ನೀಡಿದ ಸಚ್ಚಿದಾನಂದ ಶರ್ಮಾ ನೇತೃತ್ವದ ಎನ್ಐಎ ತಂಡ, ಖಾಲಿದ್ನನ್ನು ತೀವ್ರ ವಿಚಾರಣೆ ನಡೆಸಿತು. ಅಲ್ಲದೆ, ಸೆಪ್ಟೆಂಬರ್ 20 ರಂದು ರಾಂಚಿಯಲ್ಲಿರುವ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ವಿಚಾರಣೆ ವೇಳೆ ಖಾಲಿದ್ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾಗಿ ತಿಳಿದುಬಂದಿದೆ.

ಆಂಧ್ರ ಪ್ರದೇಶದ ಪಾಸಿಂಗ್ ಇರುವ ವಾಹನದಲ್ಲಿ ಎನ್ಐಎ ತಂಡ ಆಗಮಿಸಿದೆ. ಇಂದು ಎರಡನೇ ಬಾರಿ ಖಾಲಿದ್ ಮನೆಗೆ ಭೇಟಿ ನೀಡಿದ ತಂಡ, ಸತತ ನಾಲ್ಕು ಗಂಟೆ ವಿಚಾರಣೆ ನಡೆಸಿದೆ. ಈ ಹಿಂದೆಯೂ ಮನೆಗೆ ಭೇಟಿ ನೀಡಿ ಖಾಲಿದ್ನನ್ನು ವಿಚಾರಣೆ ನಡೆಸಿತ್ತು. ಜುಲೈ ತಿಂಗಳಲ್ಲಿ ರಾಂಚಿಯಲ್ಲಿ ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರಿದ ಓರ್ವ ಉಗ್ರನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಈತನ್ನು ವಿಚಾರಣೆ ನಡೆಸಿದಾಗ ಇನ್ಸ್ಟಾಗ್ರಾಮ್ನಲ್ಲಿ ಖಾಲಿದ್ ಸಂರ್ಪದಲ್ಲಿರುವುದು ತಿಳಿದುಬಂದಿತ್ತು. ಹೀಗಾಗಿ ಎನ್ಐಎ ಅಧಿಕಾರಿಗಳಳು ಖಾಲಿದ್ನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ