logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Amalaki Ekadashi 2023: ಅಮಲಕಿ ಏಕಾದಶಿಯ ಪೌರಾಣಿಕ ಹಿನ್ನೆಲೆ, ಶುಭ ಮುಹೂರ್ತದ ಮಾಹಿತಿ ಇಲ್ಲಿದೆ

Amalaki Ekadashi 2023: ಅಮಲಕಿ ಏಕಾದಶಿಯ ಪೌರಾಣಿಕ ಹಿನ್ನೆಲೆ, ಶುಭ ಮುಹೂರ್ತದ ಮಾಹಿತಿ ಇಲ್ಲಿದೆ

HT Kannada Desk HT Kannada

Mar 03, 2023 04:31 AM IST

ಅಮಲಕಿ ಏಕಾದಶಿಯ ಪೌರಾಣಿಕ ಹಿನ್ನೆಲೆ, ಶುಭ ಮುಹೂರ್ತದ ಮಾಹಿತಿ ಇಲ್ಲಿದೆ

    • ಇಂದು ಅಮಲಕಿ ಏಕಾದಶಿ. ಈ ಏಕಾದಶಿಯ ಹಿನ್ನೆಲೆ ಮತ್ತು ಆಚರಣೆಯ ಶುಭ ಮುಹೂರ್ತದ ಮಾಹಿತಿ ಇಲ್ಲಿದೆ.
ಅಮಲಕಿ ಏಕಾದಶಿಯ ಪೌರಾಣಿಕ ಹಿನ್ನೆಲೆ, ಶುಭ ಮುಹೂರ್ತದ ಮಾಹಿತಿ ಇಲ್ಲಿದೆ
ಅಮಲಕಿ ಏಕಾದಶಿಯ ಪೌರಾಣಿಕ ಹಿನ್ನೆಲೆ, ಶುಭ ಮುಹೂರ್ತದ ಮಾಹಿತಿ ಇಲ್ಲಿದೆ

Amalaki Ekadashi 2023: ಹಿಂದೂ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಫಾಲ್ಗುಣ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಅಮಲಕಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿಯಂದು ಉಪವಾಸವನ್ನು ಅಮಲಕಿ ಏಕಾದಶಿ ಮತ್ತು ರಂಗವರಿ ಏಕಾದಶಿ ಎಂದೂ ಕರೆಯಲಾಗುತ್ತದೆ.

ತಾಜಾ ಫೋಟೊಗಳು

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

May 06, 2024 09:00 AM

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಪೌರಾಣಿಕ ನಂಬಿಕೆಗಳ ಪ್ರಕಾರ, ಅಮಲಕಿ ಏಕಾದಶಿಯಂದು ಭಗವಾನ್ ವಿಷ್ಣು ಮತ್ತು ಅಮಲಕಿ ಮರವನ್ನು ಪೂಜಿಸಲಾಗುತ್ತದೆ. ಅಮಲಕಿ ಮರದ ಪ್ರತಿಯೊಂದು ಸ್ಥಳವನ್ನು ದೇವರ ಸ್ಥಳವೆಂದು ಪರಿಗಣಿಸಲಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಅಮಲಕಿ ಏಕಾದಶಿಯಂದು ಭಗವಾನ್ ವಿಷ್ಣುವಿಗೆ ಅಮಲಕ್ಕಿಯನ್ನು ಅರ್ಪಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದೂ ಹೇಳಲಾಗುತ್ತದೆ.

ಅಮಲಕಿ ಏಕಾದಶಿ ಯಾವಾಗ?

ಫಾಲ್ಗುಣ ಅಮಲಕಿ ಏಕಾದಶಿ ಉಪವಾಸವನ್ನು ಶುಕ್ರವಾರ 3ನೇ ಮಾರ್ಚ್ 2023 ರಂದು ಆಚರಿಸಲಾಗುತ್ತದೆ. ಈ ಏಕಾದಶಿ ಉಪವಾಸದಂದು ಶ್ರೀ ಹರಿವಿಷ್ಣುವಿನ ಜೊತೆಗೆ ಶಿವ ಮತ್ತು ಪಾರ್ವತಿಯನ್ನು ಪೂಜಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ಅಮಲಕಿ ಏಕಾದಶಿ ತಿಥಿಯು ಮಾರ್ಚ್ 2, 2023 ರಂದು ಬೆಳಿಗ್ಗೆ 6.39 ರಿಂದ ಪ್ರಾರಂಭವಾಗಿ ಮಾರ್ಚ್ 3, 2023 ರಂದು ಬೆಳಿಗ್ಗೆ 9.12 ಕ್ಕೆ ಕೊನೆಗೊಳ್ಳುತ್ತದೆ. ಅಮಲಕಿ ಏಕಾದಶಿ ಉಪವಾಸವನ್ನು ಮಾರ್ಚ್ 3ರಂದು ಉದಯ ತಿಥಿಯಂದು ಆಚರಿಸಲಾಗುತ್ತದೆ.

ಅಮಲಕಿ ಏಕಾದಶಿ ಆಚರಣೆಯ ಮುಹೂರ್ತ

ಏಕಾದಶಿ ಶುಭ ದಿನ: ಮಾರ್ಚ್‌ 3ರ ಶುಕ್ರವಾರ

ಏಕಾದಶಿ ಆರಂಭ: ಮಾರ್ಚ್ 2ರ ಬುಧವಾರ ಮುಂಜಾನೆ 6:39 ರಿಂದ ಆರಂಭ

ಏಕಾದಶಿ ಮುಕ್ತಾಯ: ಮಾರ್ಚ್‌ 3ರ ಶುಕ್ರವಾರ ಬೆಳಗ್ಗೆ 9:11ಕ್ಕೆ ಮುಕ್ತಾಯ

ಏಕಾದಶಿ ಪಾರಣ ಮುಹೂರ್ತ: ಮಾರ್ಚ್‌ 4 ಶನಿವಾರ ಬೆಳಗ್ಗೆ 6:44 ರಿಂದ 9:30 ರವರೆಗೆ.

ಅಮಲಕಿ ಏಕಾದಶಿಯ ಪೌರಾಣಿಕ ಮಹತ್ವ

ಸನಾತನ ಧರ್ಮದ ನಂಬಿಕೆಯ ಪ್ರಕಾರ, ವಿಷ್ಣುವು ಬ್ರಹ್ಮಾಂಡವನ್ನು ಸೃಷ್ಟಿಸಲು ಬ್ರಹ್ಮನಿಗೆ ಜನ್ಮ ನೀಡಿದಾಗ, ಅವನು ಮೊದಲ ಅಮಲಕಿ ಮರಕ್ಕೆ ಜನ್ಮ ನೀಡಿದನು. ಅಮಲಕಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಅನೇಕ ಜನ್ಮಗಳ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಅಮಲಕಿ ಏಕಾದಶಿ ಉಪವಾಸದಂದು ಅಮಲಕಿ ಮರವನ್ನು ನೆಡುವುದು ಕೂಡ ಶುಭ ಫಲ ನೀಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು