logo
ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ಬೇಸಿಗೆಯಲ್ಲಿ ಎಣ್ಣೆ ಚರ್ಮದ ನಿರ್ವಹಣೆ ಹೇಗೆ, ತ್ವಚೆಯ ಆರೈಕೆಗೆ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

Summer Tips: ಬೇಸಿಗೆಯಲ್ಲಿ ಎಣ್ಣೆ ಚರ್ಮದ ನಿರ್ವಹಣೆ ಹೇಗೆ, ತ್ವಚೆಯ ಆರೈಕೆಗೆ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

Reshma HT Kannada

May 05, 2024 07:15 AM IST

google News

ಬೇಸಿಗೆಯಲ್ಲಿ ಎಣ್ಣೆ ಚರ್ಮದ ಆರೈಕೆಗೆ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

    • ಬೇಸಿಗೆಯಲ್ಲಿ ಎಣ್ಣೆ ಚರ್ಮದವರು ಇಲ್ಲದ ಸಮಸ್ಯೆಗಳನ್ನು ಎದುರಿಸುತ್ತಾರೆ. ಧೂಳು, ಬೆವರಿನ ಕಾರಣದಿಂದ ಅಲರ್ಜಿ, ಮೊಡವೆ, ತುರಿಕೆಯಂತಹ ಸಮಸ್ಯೆಗಳು ಕಾಡಬಹುದು. ಆ ಕಾರಣಕ್ಕೆ ಬಿಸಿಲಿನ ದಿನಗಳಲ್ಲಿ ತ್ವಚೆಯ ಆರೈಕೆ ಮಾಡುವುದು ಅತ್ಯಗತ್ಯ.
ಬೇಸಿಗೆಯಲ್ಲಿ  ಎಣ್ಣೆ ಚರ್ಮದ ಆರೈಕೆಗೆ ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಬೇಸಿಗೆಯಲ್ಲಿ ಎಣ್ಣೆ ಚರ್ಮದ ಆರೈಕೆಗೆ ಈ ಕ್ರಮಗಳನ್ನು ತಪ್ಪದೇ ಪಾಲಿಸಿ

ತಾಪಮಾನ ಏರಿಕೆ ಹಾಗೂ ತೇವಾಂಶದ ಕಾರಣದಿಂದ ಬೇಸಿಗೆಯಲ್ಲಿ ಎಣ್ಣೆ ಚರ್ಮವನ್ನು ನಿರ್ವಹಿಸುವುದು ಸವಾಲು. ಎಣ್ಣೆ ಚರ್ಮದ ಕಾರಣದಿಂದ ಮುಖದಲ್ಲಿ ಮೊಡವೆ, ಕಲೆಗಳು ಉಂಟಾಗಬಹುದು. ಆದರೆ ನಮ್ಮ ದೈನಂದಿನ ಬದುಕಿನಲ್ಲಿ ಚರ್ಮದ ಆರೈಕೆಗೆ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ತ್ವಚೆಯ ಅಂದ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೆಚ್ಚುವರಿ ಎಣ್ಣೆ, ಕೊಳಕು, ಬೆವರನ್ನು ಸ್ವಚ್ಛ ಮಾಡಲು ಎಣ್ಣೆಮುಕ್ತ ಕ್ಲೆನ್ಸರ್‌ನಿಂದ ಬೆಳಿಗ್ಗೆ ಮತ್ತು ರಾತ್ರಿ ಸ್ವಚ್ಛ ಮಾಡಿ. ಸನ್‌ಸ್ಕ್ರೀನ್‌ ವರ್ಷಪೂರ್ತಿ ಅವಶ್ಯಕವಾಗಿದೆ. ಆದರೆ ಬೇಸಿಗೆಯ ದಿನಗಳಲ್ಲಿ ಯುವಿ ವಿಕರಣವು ಪ್ರಬಲವಾಗಿರುವ ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ಅವಶ್ಯ. ಬೇಸಿಗೆಯಲ್ಲಿ ಈ ಎಲ್ಲಾ ಅಂಶಗಳು ತ್ವಚೆಯ ಅಂದ ಹೆಚ್ಚಲು ನಮಗೆ ನೆರವಾಗಬಹುದು. ಬೇಸಿಗೆಯಲ್ಲಿ ಎಣ್ಣೆ ಚರ್ಮದ ಆರೈಕೆಗೆ ಈ ಸಲಹೆಗಳನ್ನು ಪಾಲಿಸಿ.

ಎಣ್ಣೆ ಚರ್ಮದವರು ಬೇಸಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳಿವು

ಮಣ್ಣಿನ ಮಾಸ್ಕ್‌

ಆವೆ ಮಣ್ಣು ಅಥವಾ ಮುಲ್ತಾನಿ ಮಿಟ್ಟಿಯಂತಹ ವಸ್ತಗಳಿಂದ ಮಾಸ್ಕ್‌ ತಯಾರಿಸಿ. ಮಣ್ಣಿನ ಮಾಸ್ಕ್‌ ಎಣ್ಣೆ ಚರ್ಮದವರಿಗೆ ಬಹಳ ಉಪಯುಕ್ತ. ಇದು ತ್ವಚೆಯಲ್ಲಿನ ಕಲ್ಮಶಗಳನ್ನು ಹೊರತೆಗೆಯಲು, ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಹೆಸರುವಾಸಿಯಾಗಿದೆ. ಚರ್ಮವನ್ನು ಸಮತೋಲನಗೊಳಿಸಲು ಇದು ಉತ್ತಮ. ಬೆಂಟೋನೈಟ್ ಜೇಡಿಮಣ್ಣು ಅಥವಾ ಕಾಯೋಲಿನ್ ಜೇಡಿಮಣ್ಣಿನಂತಹ ಪದಾರ್ಥಗಳನ್ನು ನೋಡಿ ಏಕೆಂದರೆ ಇವುಗಳು ಅತ್ಯುತ್ತಮವಾದ ತೈಲ-ಹೀರಿಕೊಳ್ಳುವ ಗುಣಲಕ್ಷಣಗಳನ್ನು ಹೊಂದಿವೆ. ಮಣ್ಣಿನ ಮಾಸ್ಕ್‌ ಬಳಸುವ ಮುನ್ನ ಚರ್ಮದಲ್ಲಿ ಯಾವುದೇ ಕಲೆಗಳಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಚರ್ಮದಿಂದ ಯಾವುದೇ ಕೊಳಕು, ಎಣ್ಣೆ ಮತ್ತು ಮೇಕ್ಅಪ್ ಅನ್ನು ತೆಗೆದುಹಾಕಲು ಮೃದುವಾದ, ಎಣ್ಣೆ-ಮುಕ್ತ ಕ್ಲೆನ್ಸರ್ನೊಂದಿಗೆ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ಮಣ್ಣಿನಿಂದ ಮೃದುವಾದ ಪೇಸ್ಟ್‌ ತಯಾರಿಸಿ ಬೆರಳು ಅಥವಾ ಬ್ರಷ್‌ನಿಂದ ಮುಖಕ್ಕೆ ಹಚ್ಚಿ. ಕಣ್ಣು ಹಾಗೂ ತುಟಿಗಳಿಂದ ಈ ಪೇಸ್ಟ್‌ ಅನ್ನು ದೂರ ಇರಿಸಿ. ಈ ಮಾಸ್ಕ್‌ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ತೊಳೆಯುವಾಗ ಗಟ್ಟಿಯಾಗಿ ಉಜ್ಜಬೇಡಿ.

ಫೇಸ್‌ವೈಪ್‌ಗಳನ್ನು ಜೊತೆಗೆ ಇರಿಸಿಕೊಂಡಿರಿ

ಬೇಸಿಗೆಯಲ್ಲಿ ಫೇಸ್‌ವೈಪ್‌ಗಳನ್ನು ಜೊತೆಯಲ್ಲೇ ಇಟ್ಟುಕೊಂಡಿರಬೇಕು. ಇದು ಎಣ್ಣೆ ಚರ್ಮದವರಿಗೆ ಬಹಳ ಅವಶ್ಯ. ಇದು ಮುಖದ ಚರ್ಮವನ್ನು ರಿಫ್ರೆಶ್‌ ಮಾಡುತ್ತದೆ. ಹೆಚ್ಚುವರಿ ಧೂಳು ಬೆವರು ಹಾಗೂ ಕೊಳೆಯನ್ನು ತೆಗೆದುಹಾಕಿ, ದಿನವಿಡೀ ಮುಖ ಹೊಳೆಯುವಂತೆ ಮಾಡುತ್ತದೆ. ಬೇಸಿಗೆಯಲ್ಲಿ ಧೂಳು, ಕೊಳೆಗಳಿಂದ ಚರ್ಮದ ರಂಧ್ರಗಳು ಮುಚ್ಚಿ ಹೋಗಬಹುದು. ಇದರಿಂದ ಸಮಸ್ಯೆಗಳು ಹೆಚ್ಚಬಹುದು. ಹಾಗಾಗಿ ಆಗಾಗ ಫೇಸ್‌ವೈಪ್ಸ್‌ಗಳಿಂದ ಚರ್ಮವನ್ನು ಒರೆಸುತ್ತಿರಿ.

ಟೋನರ್‌ ಬಳಸಿ

ಬೇಸಿಗೆಯಲ್ಲಿ ಟೋನರ್‌ ಬಳಸುವುದು ಎಣ್ಣೆ ಚರ್ಮದವರಿಗೆ ಬಹಳ ಉಪಯುಕ್ತ. ಇದು ಚರ್ಮದ ರಂಧ್ರಗಳಲ್ಲಿ ಕೊಳೆ ಸಂಗ್ರಹವಾಗುವುದನ್ನು ತಡೆದು, ಚರ್ಮವನ್ನು ಉಲ್ಲಾಸಗೊಳಿಸುತ್ತದೆ. ಆದರೆ ಒಣಚರ್ಮದವರು ಆಲ್ಕೊಹಾಲ್‌ ಅಂಶ ಇಲ್ಲದ ಟೋನರ್‌ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ವಿಚ್ ಹ್ಯಾಝೆಲ್ ಮತ್ತು ಸ್ಯಾಲಿಸಿಲಿಕ್ ಆಮ್ಲದಂತಹ ಪದಾರ್ಥಗಳನ್ನು ಒಳಗೊಂಡಿರುವ ಟೋನರನ್ನು ಬಳಸುವುದನ್ನು ಪರಿಗಣಿಸಿ, ಇದು ತೈಲ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ, ಹತ್ತಿ ಪ್ಯಾಡ್‌ಗೆ ಟೋನರನ್ನು ಅನ್ವಯಿಸಿ ಮತ್ತು ಅದನ್ನು ನಿಮ್ಮ ಚರ್ಮದ ಮೇಲೆ ನಿಧಾನವಾಗಿ ಸ್ವೈಪ್ ಮಾಡಿ, T-ವಲಯವನ್ನು ಕೇಂದ್ರೀಕರಿಸಿ. ಚರ್ಮದ pH ಮಟ್ಟವನ್ನು ಸಮತೋಲನಗೊಳಿಸುವಾಗ ಉಳಿದಿರುವ ಯಾವುದೇ ಕಲ್ಮಶಗಳು, ಹೆಚ್ಚುವರಿ ಎಣ್ಣೆ ಅಥವಾ ಮೇಕ್ಅಪ್ ಅವಶೇಷಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಟೋನರ್ ಬಳಸಿ.

ಫೇಸ್‌ಮಾಸ್ಕ್‌ ಬಳಸಲು ಮರೆಯಬೇಡಿ

ಬೇಸಿಗೆಯ ದಿನಗಳಲ್ಲಿ ನಿಮ್ಮ ತ್ವಚೆಯ ಆರೈಕೆಗೆ ಫೇಸ್‌ಮಾಸ್ಕ್‌ ಬಳಸುವುದು ಬಹಳ ಮುಖ್ಯ. ಹೆಚ್ಚುವರಿ ರಂಧ್ರಗಳನ್ನು ನಿಯಂತ್ರಿಸಲು ಹಾಗೂ ರಂಧ್ರಗಳನ್ನು ಕಡಿಮೆ ಮಾಡಲು ಫೇಸ್‌ಮಾಸ್ಕ್‌ ಬಳಕೆ ಉತ್ತಮ. ಇದು ಚರ್ಮದ ಬಣ್ಣವನ್ನೂ ಸುಧಾರಿಸುತ್ತದೆ. ನಿಮ್ಮ ಚರ್ಮದ ಅಗತ್ಯಗಳಿಗೆ ಅನುಗುಣವಾಗಿ ವಾರಕ್ಕೆ 1-2 ಬಾರಿ ಫೇಸ್ ಮಾಸ್ಕ್ ಬಳಸಿ. ಫೇಸ್‌ಮಾಸ್ಕ್‌ ಅತಿ ಬಳಕೆಯು ಶುಷ್ಕತೆ ಅಥವಾ ಕಿರಿಕಿರಿಗೆ ಕಾರಣವಾಗಬಹುದು. ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ನೈಸರ್ಗಿಕ ಪದಾರ್ಥಗಳನ್ನು ಬಳಸುವುದು ಉತ್ತಮ. ಅರಿಶಿನ, ಅಲೋವೆರಾ ಜೆಲ್, ಪಪ್ಪಾಯಿ, ಟೊಮ್ಯಾಟೊ, ಆಲೂಗಡ್ಡೆ, ಹಿಟ್ಟು, ತೆಂಗಿನ ನೀರು, ಮಲಾಯಿ ಮತ್ತು ಸೌತೆಕಾಯಿ ಇತ್ಯಾದಿಗಳು ಎಣ್ಣೆಯುಕ್ತ ಚರ್ಮವು ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಪದಾರ್ಥಗಳಾಗಿವೆ.

ಇದರೊಂದಿಗೆ ನಿರ್ಜಲೀಕರಣವು ಚರ್ಮದಲ್ಲಿ ತೇವಾಂಶದ ಕೊರತೆಗೆ ಕಾರಣವಾಗುತ್ತದೆ. ಇದು ಎಣ್ಣೆಚರ್ಮದವರಿಗೆ ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯುವ ಮೂಲಕ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸಲು ಮತ್ತು ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ