logo
ಕನ್ನಡ ಸುದ್ದಿ  /  ಜೀವನಶೈಲಿ  /  Juices Which Help Hair Growth:ಎಣ್ಣೆ ಹಚ್ಚೋದು ಮಾತ್ರವಲ್ಲ ಕೂದಲು ದಟ್ಟವಾಗಿ ಬೆಳೆಯಲು ಈ ಜ್ಯೂಸ್‌ಗಳನ್ನು ಕೂಡಾ ಸೇವಿಸಿ..!

Juices which Help Hair Growth:ಎಣ್ಣೆ ಹಚ್ಚೋದು ಮಾತ್ರವಲ್ಲ ಕೂದಲು ದಟ್ಟವಾಗಿ ಬೆಳೆಯಲು ಈ ಜ್ಯೂಸ್‌ಗಳನ್ನು ಕೂಡಾ ಸೇವಿಸಿ..!

HT Kannada Desk HT Kannada

Sep 15, 2022 09:55 PM IST

ಕೂದಲಿನ ಬೆಳವಣಿಗೆ ಹೆಚ್ಚಿಸುವ ಜ್ಯೂಸ್‌ಗಳು

    • ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು, ಜೀವನಶೈಲಿ, ಆನುವಂಶಿಕ ಅಂಶಗಳು ಇತ್ಯಾದಿಗಳು ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳಾಗಿವೆ. ಅದರಲ್ಲೂ ಹವಾಮಾನ ಬದಲಾದಾಗ ಈ ಕೂದಲು ಉದುರುವ ಸಮಸ್ಯೆ ಕೂಡಾ ಹೆಚ್ಚುತ್ತದೆ.
ಕೂದಲಿನ ಬೆಳವಣಿಗೆ ಹೆಚ್ಚಿಸುವ ಜ್ಯೂಸ್‌ಗಳು
ಕೂದಲಿನ ಬೆಳವಣಿಗೆ ಹೆಚ್ಚಿಸುವ ಜ್ಯೂಸ್‌ಗಳು (PC: Freepik.com)

ಪ್ರತಿದಿನ ರಾಶಿಗಟ್ಟಲೆ ಕೂದಲು ಉದುರಿದರೆ ಯಾರಿಗಾದರೂ ಅದು ದೊಡ್ಡ ಸಮಸ್ಯೆಯೇ ಸರಿ. ಎಲ್ಲರೂ ದಟ್ಟವಾದ, ಕಪ್ಪಾದ ಸುಂದರ ಕೂದಲನ್ನು ಪಡೆಯಲು ಬಯಸುತ್ತಾರೆ. ಆದರೆ ಕೂದಲಿನ ನಾನಾ ಸಮಸ್ಯೆಗಳು ಹಲವರನ್ನು ಚಿಂತೆಗೆ ದೂಡುತ್ತದೆ. ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಕೂದಲ ರಕ್ಷಣೆಗೆ ಏನೂ ಮಾಡಿದರೂ ತಲೆಗೆ ದುಬಾರಿ ಎಣ್ಣೆ ಹಚ್ಚಿಕೊಂಡರೂ ಕೂದಲಿನ ಸಮಸ್ಯೆ ಕಡಿಮೆಯಾಗದಿದ್ದಲ್ಲಿ ಬಹಳ ಬೇಸರವಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Brain Stroke: ಬಿರು ಬಿಸಿಲಿನ ನಡುವೆ ಹೆಚ್ಚುತ್ತಿದೆ ಮೆದುಳಿನ ಸ್ಟ್ರೋಕ್ ಪ್ರಕರಣ; ಇದಕ್ಕೆ ಕಾರಣವೇನು, ಇದರಿಂದ ಪಾರಾಗೋದು ಹೇಗೆ?

Brain Teaser: 3 ಪೈನಾಪಲ್‌ ಸೇರಿ 12 ಆದ್ರೆ, 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಹೇಳಿ

Sanitary Pads: ಸ್ಯಾನಿಟರಿ ಪ್ಯಾಡ್ ಮೊದಲು ಕಂಡುಹಿಡಿದಿದ್ದೇ ಪುರುಷರಿಗಾಗಿ; ಆಸಕ್ತಿಕರ ವಿವರ ಇಲ್ಲಿದೆ

Heat headaches: ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು, ಇದರಿಂದ ಪಾರಾಗುವುದು ಹೇಗೆ?

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು, ಜೀವನಶೈಲಿ, ಆನುವಂಶಿಕ ಅಂಶಗಳು ಇತ್ಯಾದಿಗಳು ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳಾಗಿವೆ. ಅದರಲ್ಲೂ ಹವಾಮಾನ ಬದಲಾದಾಗ ಈ ಕೂದಲು ಉದುರುವ ಸಮಸ್ಯೆ ಕೂಡಾ ಹೆಚ್ಚುತ್ತದೆ. ಅಂತಹ ಸಂದರ್ಭಗಳಲ್ಲಿ, ಕೂದಲು ಉದುರುವಿಕೆಯನ್ನು ತಡೆಯಲು ದುಬಾರಿ ಉತ್ಪನ್ನಗಳು ಸಹಾಯಕ್ಕೆ ಬರುವುದಿಲ್ಲ. ಎಷ್ಟೇ ದುಬಾರಿ ರಾಸಾಯನಿಕ ಉತ್ಪನ್ನಗಳಿದ್ದರೂ ಅವು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ ಆದರೆ ಏನೂ ಪ್ರಯೋಜನವಾಗುವುದಿಲ್ಲ.

ಕೂದಲಿನ ಆರೈಕೆಗಾಗಿ ನೈಸರ್ಗಿಕ ಗುಣಲಕ್ಷಣಗಳನ್ನು ಹೊಂದಿರುವ ಶಾಂಪೂ, ಕಂಡೀಷನರ್, ಎಣ್ಣೆ, ಹೇರ್ ಪ್ಯಾಕ್‌ಗಳನ್ನು ಬಳಸಬೇಕು. ಮುಖ್ಯವಾಗಿ ಒಳಗಿನ ಪೋಷಣೆಗೆ ತಾಜಾ ಹಣ್ಣು ಮತ್ತು ತರಕಾರಿ ರಸವನ್ನು ಸೇವಿಸಬೇಕು. ಜ್ಯೂಸ್ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮ ಮತ್ತು ಕೂದಲಿಗೆ ಕೂಡಾ ಒಳ್ಳೆಯದು. ಕೂದಲು ಬೆಳವಣಿಗೆಯನ್ನು ಉತ್ತೇಜಿಸುವ ಜ್ಯೂಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕ್ಯಾರೆಟ್ ರಸ

ಕ್ಯಾರೆಟ್, ವಿಟಮಿನ್ ಎ ಮತ್ತು ಇ ಗಳ ಉತ್ತಮ ಮೂಲವಾಗಿದೆ. ಇದು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಅಕಾಲಿಕ ನೆರೆ ಕೂದಲು ಬರುವುದನ್ನು ಕೂಡಾ ತಡೆಯುತ್ತದೆ. ನೀವು ದಟ್ಟನೆಯ ಉದ್ದ ಕೂದಲನ್ನು ಪಡೆಯಲು ಬಯಸಿದರೆ. ಆಹಾರದೊಂದಿಗೆ ಪ್ರತಿದಿನ ಒಂದು ಲೋಟ ಕ್ಯಾರೆಟ್ ರಸವನ್ನು ಕುಡಿಯಿರಿ.

ಕಿವಿ ಫ್ರೂಟ್‌ ಜ್ಯೂಸ್‌

ಕಿವಿ ಫ್ರೂಟ್‌ ರಸದಲ್ಲಿ ವಿಟಮಿನ್ ಇ ಹೇರಳವಾಗಿದೆ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ನಿಯಮಿತವಾಗಿ ಈ ಜ್ಯೂಸ್ ಕುಡಿಯುವುದರಿಂದ ಕೂದಲು ಉದುರುವುದನ್ನು ತಡೆಯುತ್ತದೆ. ಕಿವಿ ಹಣ್ಣಿನ ತಿರುಳನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚುವುದರಿಂದ ನಿಮ್ಮ ಕೂದಲಿನ ಗುಣಮಟ್ಟವೂ ಸುಧಾರಿಸುತ್ತದೆ.

ಅಲೋವೆರಾ ರಸ

ಅಲೋವೆರಾ ಜ್ಯೂಸ್, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಹೇರಳವಾಗಿರುವ ವಿವಿಧ ವಿಟಮಿನ್‌ಗಳು ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ. ಈ ಜ್ಯೂಸನ್ನು ಆಗಾಗ್ಗೆ ಕುಡಿಯುವುದರಿಂದ ಕೂದಲು ಒಡೆಯುವ ಸಾಧ್ಯತೆಯೂ ಕಡಿಮೆ. ಅಲೊವೆರಾ ರಸದಲ್ಲಿರುವ ಕಿಣ್ವಗಳು ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಪೋಷಿಸುತ್ತದೆ. ಅಲೊವೆರಾ ಜ್ಯೂಸ್ ಕುಡಿಯುವುದರ ಜೊತೆಗೆ ಇದನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ತುರಿಕೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ, ಕೂದಲನ್ನು ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ.

ಆಮ್ಲಾ ರಸ

ಆಮ್ಲಾ ಜ್ಯೂಸ್ ಕೂದಲು ಮತ್ತು ನೆತ್ತಿಗೆ ತುಂಬಾ ಒಳ್ಳೆಯದು ಏಕೆಂದರೆ ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಫ್ರೀ ರಾಡಿಕಲ್ ವಿರುದ್ಧ ಹೋರಾಡುತ್ತದೆ. ಈ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಹೊಸ ಕೋಶಗಳ ರಚನೆಯನ್ನು ಉತ್ತೇಜಿಸುತ್ತದೆ. ನೀವು ಆರೋಗ್ಯಕರ ಕೂದಲು ಬಯಸಿದರೆ, ಆಮ್ಲಾ ಜ್ಯೂಸ್ ಕುಡಿಯಿರಿ.

ಸೀಬೆಹಣ್ಣಿನ ರಸ

ಸೀಬೆಹಣ್ಣಿನ ರಸದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳ ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ, ಫೋಲಿಕ್ ಆಮ್ಲದಂತಹ ಪೋಷಕಾಂಶಗಳು ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತವೆ. ಸೀಬೆಹಣ್ಣಿನ ರಸವನ್ನು ಕುಡಿಯುವುದರ ಜೊತೆಗೆ ಸೀಬೆಹಣ್ಣಿನ ಎಲೆಗಳನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ತೀವ್ರ ಒತ್ತಡ ಮತ್ತು ಆತಂಕ ಕೂಡಾ ಕೂದಲು ಉದುರುವಿಕೆಗೆ ಕಾರಣವಾಗಿದೆ. ಅನಗತ್ಯ ಆಲೋಚನೆಗಳಿಲ್ಲದೆ ಶಾಂತವಾಗಿರಲು ಪ್ರಯತ್ನಿಸಿ. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು