logo
ಕನ್ನಡ ಸುದ್ದಿ  /  ಜೀವನಶೈಲಿ  /  Sanitary Pads: ಸ್ಯಾನಿಟರಿ ಪ್ಯಾಡ್ ಮೊದಲು ಕಂಡುಹಿಡಿದಿದ್ದೇ ಪುರುಷರಿಗಾಗಿ; ಆಸಕ್ತಿಕರ ವಿವರ ಇಲ್ಲಿದೆ

Sanitary Pads: ಸ್ಯಾನಿಟರಿ ಪ್ಯಾಡ್ ಮೊದಲು ಕಂಡುಹಿಡಿದಿದ್ದೇ ಪುರುಷರಿಗಾಗಿ; ಆಸಕ್ತಿಕರ ವಿವರ ಇಲ್ಲಿದೆ

Raghavendra M Y HT Kannada

May 06, 2024 01:56 PM IST

ಸ್ಯಾನಿಟರಿ ಪ್ಯಾಡ್‌ಗಳನ್ನು ಮೊದಲು ಪುರುಷರಿಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಅಚ್ಚರಿ ಎನಿಸಿದರೂ ನಿಜ.

    • ಸ್ಯಾನಿಟರಿ ಪ್ಯಾಡ್‌ಗಳನ್ನು ಮೊದಲು ಮಹಿಳೆಯರಿಗಾಗಿ ಅಭಿವೃದ್ಧಿಪಡಿಸಿಲ್ಲ. ಬದಲಾಗಿ ಪುರುಷರಿಗಾಗಿ ತಯಾರಿಸಲಾಗಿದೆ. ಅಚ್ಚರಿ ಎನಿಸಿದರೂ ಸತ್ಯ. ಸ್ಯಾನಿಟರಿ ಪ್ಯಾಡ್ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.
ಸ್ಯಾನಿಟರಿ ಪ್ಯಾಡ್‌ಗಳನ್ನು ಮೊದಲು ಪುರುಷರಿಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಅಚ್ಚರಿ ಎನಿಸಿದರೂ ನಿಜ.
ಸ್ಯಾನಿಟರಿ ಪ್ಯಾಡ್‌ಗಳನ್ನು ಮೊದಲು ಪುರುಷರಿಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಅಚ್ಚರಿ ಎನಿಸಿದರೂ ನಿಜ.

ಬೆಂಗಳೂರು: ಬಹುತೇಕ ಪುರುಷರು ಸ್ಯಾನಿಟರಿ ಪ್ಯಾಡ್ (Sanitary Pads) ಎಂದರೆ ಸಾಕು ಮೂಗು ಮುರಿತ್ತಾರೆ. ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇರುತ್ತಾರೆ. ಸ್ಯಾನಿಟರಿ ಪ್ಯಾಡ್ ಮಹಿಳೆಯರು (Sanitary Pads for Women) ಬಳಸುವ ಉತ್ಪನ್ನ ಅಂತಹೇಳಿ ಅಜ್ಞಾನದಿಂದ ದೂರ ಉಳಿಯುವ ಮಂದಿ ನಮ್ಮ ನಡುವೆಯೇ ಇದ್ದಾರೆ. ಮುಟ್ಟಾದಾಗ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‌ಗೂ ಇತಿಹಾಸವಿದ್ದು (Sanitary Pad History), ವಾಸ್ತವದಲ್ಲಿ ಇದನ್ನು ಮೊದಲು ಪುರುಷರಿಗಾಗಿ ಕಂಡುಹಿಡಿಯಲಾಗಿದೆ. ಅಚ್ಚರಿ ಎನಿಸಿದರೂ ಸತ್ಯ. ಸ್ಯಾನಿಟರಿ ಪ್ಯಾಡ್ ಮೂಲವನ್ನು ಕೆದಕಿದಾಗ ಮೊದಲು ಪುರುಷರಿಗಾಗಿ ಇದನ್ನು ಸಂಶೋಧಿಸಲಾಗಿದೆ ಅನ್ನೋದು ಗೊತ್ತಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಸ್ಯಾನಿಟರಿ ಪ್ಯಾಡ್‌ ಇತಿಹಾಸ ಹೀಗಿದೆ

ಸ್ಯಾನಿಟರಿ ಪ್ಯಾಡ್‌ ಇತಿಹಾಸವನ್ನು ನೋಡಿದಾಗ ಫ್ರಾನ್ಸ್‌ನಲ್ಲಿ ನಡೆದಿದ್ದ ಯುದ್ಧದ ಸಮಯದಲ್ಲಿ ಬಳಸಿ ಬಿಸಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳನ್ನು ದಾದಿಯರು ಮೊದಲ ಬಾರಿಗೆ ಇವುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಯುದ್ಧದಲ್ಲಿ ಗಾಯಗೊಂಡ ಸೈನಿಕರ ರಕ್ತಸ್ರಾವವನ್ನು ತಡೆಯಲು ಮಾರ್ಗವನ್ನು ಹುಡುಕುತ್ತಿದ್ದಾಗ ಸೈನಿಕರನ್ನು ಬಕ್‌ಶಾಟ್ ಗಾಯಗಳಿಂದ ರಕ್ಷಿಸುವ ಬೆನ್ ಫ್ರಾಂಕ್ಲಿನ್ ಆವಿಷ್ಕಾರದಿಂದ ಸ್ಫೂರ್ತಿ ಪಡೆದು ಮೊದಲು ಬಳಸಿ ಬಿಸಾಡುವ ನ್ಯಾಪ್‌ಕಿನ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆ ನಂತರ ಮುಂದುವರಿದ ಭಾಗವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಸುಲಭವಾಗಿ ಪಡೆಯಬಹುದಾದ ವಸ್ತುಗಳಿಂದ ಯುದ್ಧಕಾಲದ ಸಮಯದಲ್ಲಿ ಬಳಸಿ ಬಿಸಾಡುವ ನ್ಯಾಪ್‌ಕಿನ್‌ಗಳನ್ನು ತಯಾರಿಸಲಾಯಿತು. ರಕ್ತವನ್ನು ಹೀರಿಕೊಳ್ಳುವ ಹಾಗೂ ಬಳಕೆಯ ನಂತರ ಇದನ್ನು ಎಸೆಯಲು ಸುಲಭದ ಮಾರ್ಗವಾಗಿತ್ತು. ಫ್ರಾನ್ಸ್‌ನ ಯುದ್ಧದ ಸಮಯದಲ್ಲಿ ಅಮೆರಿಕದ ದಾದಿಯವರು ಬಳಸಲಾರಂಭಿಸಿದ ನಂತರ ಇವುಗಳನ್ನು ಮುಟ್ಟಿನ ಪ್ಯಾಟ್‌ಗಳನ್ನು ಕರೆಯಲಾಯಿತು. ಇದಕ್ಕೂ ಮುನ್ನ ಮಹಿಳೆಯರು ಮುಟ್ಟಾದಾಗ ಯಾವುದೇ ರೀತಿಯ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿರಲಿಲ್ಲ. ಬಳಸಿ ಬಿಸಾಡಬಹುದಾದ ವಸ್ತುಗಳನ್ನೂ ಬಳಕೆ ಮಾಡುತ್ತಿರಲಿಲ್ಲ.

ಇದಾದ ಬಳಿಕ ಅಂದರೆ 1888 ರಲ್ಲಿ ಕೋಟೆಕ್ಸ್ ಬ್ಯಾಂಡೇಜ್‌ಗಳ ಮಾದರಿಯನ್ನು ಆಧಾರಿಸಿ ಮಹಿಳೆಯರಿಗಾಗಿ ಸ್ಯಾನಿಟರಿ ಟಾವೆಲ್‌ಗಳನ್ನು ತಯಾರಿಸಿತು. ಬಳಿಕ ಅದನ್ನು ಜಾಹೀರಾತು ಮೂಲಕ ಮಹಿಳೆಯರಿಗೆ ತಲುಪಿಸುವ ಕೆಲಸವಾಯಿತು. ನಂತರ ಇದೊಂದು ದೊಡ್ಡ ಬ್ಯುಸಿನೆಸ್ ಆಗಿ ಮಾರ್ಪಟ್ಟಿತು. ಆರಂಭದಲ್ಲಿ ಇವುಗಳ ಖರೀದಿಸುವ ಸಾಮರ್ಥ್ಯ ಶ್ರೀಮಂತರಿಗೆ ಮಾತ್ರ ಇತ್ತು. ಕಾರಣ ಸ್ಯಾನಿಟರಿ ಪ್ಯಾಡ್‌ಗಳ ದುಬಾರಿ ಬೆಲೆ. ಹಲವಾರು ವರ್ಷಗಳ ನಂತರ ಸಾಮಾನ್ಯ ಮಹಿಳೆಯರೂ ಇವುಗಳನ್ನು ಖರೀದಿಸುವಂತೆ ಮಾಡಲಾಗಿತು. ಕೈಗೆಟುವ ದರದಲ್ಲಿ ಎಲ್ಲಾ ಮಹಿಳೆಯರಿಗೆ ಲಭ್ಯಇವೆ.

ಹತ್ತಿಯಿಂದ ತಯಾರಿಸಲಾಗುವ ಪ್ಯಾಡ್‌ಗಳಲ್ಲಿ ನಾರು ಇರುತ್ತೆ, ಹೀರಿಕೊಳ್ಳುವ ಲೈನರ್‌ಗಳು ಇರುವ ಕಾರಣ ಬಳಸಿ ಬಿಸಾಡಬಹುದು. ಮುಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಮಹಿಳೆಯರ ಬಳಕೆಯ ವಸ್ತುವಾಗಿದ್ದು, ಕಡಿಮೆ ದರದಲ್ಲಿ ಸಿಗುವಂತೆ ಸರ್ಕಾರಗಳು ಕ್ರಮ ವಹಿಸಿವೆ. ಸ್ಯಾನಿಟರಿ ಪ್ಯಾಡ್ ಜಗತ್ತಿನಲ್ಲೇ ದೊಡ್ಡ ಉದ್ಯಮವಾಗಿ ಬೆಳೆದಿದೆ.

    ಹಂಚಿಕೊಳ್ಳಲು ಲೇಖನಗಳು