logo
ಕನ್ನಡ ಸುದ್ದಿ  /  Lifestyle  /  Cyber Security Tips For Students: Internet Safety Rules And What Not To Do Online

Cyber Security Tips for Students: ಆನ್‌ಲೈನ್‌ ಸುರಕ್ಷತೆ ವಿಷಯದಲ್ಲಿ ವಿದ್ಯಾರ್ಥಿಗಳು ತಿಳಿದಿರಲೇಬೇಕಾದ 5 ವಿಷಯಗಳು

HT Kannada Desk HT Kannada

Nov 05, 2022 05:13 PM IST

ಆನ್‌ಲೈನ್‌ ಸುರಕ್ಷತೆ ವಿಷಯದಲ್ಲಿ ವಿದ್ಯಾರ್ಥಿಗಳು ತಿಳಿದಿರಲೇಬೇಕಾದ 5 ವಿಷಯಗಳು

    • ನಾವು ನಿಶ್ಚಿಂತೆಯಿಂದ ಸುರಕ್ಷಿತವಾಗಿ ಇರುವುದು ಜೀವನಕ್ಕೊಂದು ಭದ್ರತೆ ಕಲ್ಪಿಸುತ್ತದೆ. ಆರ್ಥಿಕ ಭದ್ರತೆಯ ಜೊತೆಗೆ ಸೈಬರ್‌ ಭದ್ರತೆಯ ಬಗ್ಗೆ ಕೂಡ ಯೋಚಿಸುವುದು ನಮ್ಮ ಕರ್ತವ್ಯವಾಗಿದೆ. ಹೌದು, ನಿಮ್ಮ ಕರ್ತವ್ಯದ ಬಗ್ಗೆ ಒಂದು ಕ್ಷಣ ಮೈಮರೆತರೆ ನಿಮ್ಮ ಬ್ಯಾಂಕ್‌ ಖಾತೆಯ ಹಣ ಮಾಯವಾದೀತು ಜೋಕೆ!
ಆನ್‌ಲೈನ್‌ ಸುರಕ್ಷತೆ ವಿಷಯದಲ್ಲಿ ವಿದ್ಯಾರ್ಥಿಗಳು ತಿಳಿದಿರಲೇಬೇಕಾದ 5 ವಿಷಯಗಳು
ಆನ್‌ಲೈನ್‌ ಸುರಕ್ಷತೆ ವಿಷಯದಲ್ಲಿ ವಿದ್ಯಾರ್ಥಿಗಳು ತಿಳಿದಿರಲೇಬೇಕಾದ 5 ವಿಷಯಗಳು

- ಅಪರ್ಣಾ ಶರ್ಮಾ

ಟ್ರೆಂಡಿಂಗ್​ ಸುದ್ದಿ

Parenting: ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು; ಈ ಮಾತುಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ

Breast Milk: ತಾಯಿಹಾಲಿನ ಕೊರತೆಯಿಂದ ಮಗುವಿನ ಬೆಳವಣಿಗೆಗೆ ತೊಂದರೆ ಆಗಿದ್ಯಾ, ಎದೆಹಾಲು ಹೆಚ್ಚಲು ಇಲ್ಲಿದೆ 5 ಮನೆಮದ್ದು

ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಲೇ ಬೇಡಿ

Water Birth: ನೀರಿನಲ್ಲಿ ಹೆರಿಗೆ, ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇದು

ಹ್ಯಾಕರ್‌ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹೀಗಿರುವಾಗ ಸೈಬರ್ ಭದ್ರತೆಯ ಬಗ್ಗೆ ಜಾಗೃತಿ ಸಂದೇಶವನ್ನುಎಲ್ಲೆಡೆ ಪಸರಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯವಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಸೈಬರ್ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಪಾಲಿಸಬೇಕಾದ ಕ್ರಮಗಳ ಬಗ್ಗೆ ತಿಳಿಯೋಣ. ನಮ್ಮ ಅಮೂಲ್ಯವಾದ ಸಂಪನ್ಮೂಲಗಳನ್ನು ಸೈಬರ್ ದಾಳಿಕೋರರಿಂದ ರಕ್ಷಿಸಿಕೊಳ್ಳಲು ಇರುವ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ಅರಿತುಕೊಳ್ಳೋಣ.

ಫಿಶಿಂಗ್ ಸ್ಕ್ಯಾಮ್‌ಗಳ ಬಗ್ಗೆ ಎಚ್ಚರ

ನಿಮ್ಮ ಮೇಲ್ಬಾಕ್ಸ್ ತುಂಬಿದೆ ಎಂದು mail ಬಂದರೆ ದಯವಿಟ್ಟು ಜಾಗರೂಕರಾಗಿರಿ. ಏಕೆಂದರೆ ಇದು ನಿಮ್ಮ device ಅನ್ನು ಹ್ಯಾಕ್ ಮಾಡುವ ಪ್ರಯತ್ನವಾಗಿರಬಹುದು. ಇನ್ನೊಬ್ಬರ deviceನಿಂದ ಬೇಕಾಗಿರುವ ಮಾಹಿತಿಯನ್ನು ಕದಿಯಲು ಮಾಲ್ವೇರ್ ಹರಡುವ ವಿಧಾನವನ್ನು ಹ್ಯಾಕರ್ ಗಳು ಬಳಸುತ್ತಾರೆ.

ಉದಾ: ವಿದೇಶಗಳಲ್ಲಿ ಅಧ್ಯಯನ ಮಾಡಲು ಉಚಿತ ವೇತನ, ಸಾಲ ಸೌಲಭ್ಯ ಹೀಗೆ ವಿಭಿನ್ನ ಶೀರ್ಷಿಕೆ ಹಾಕಿ, ನೀವು ವಿದ್ಯಾರ್ಥಿಯಾಗಿದ್ದರೆ ಈ ಲಿಂಕ್ ತೆರೆದು ನೋಡಿ.

ಈ ರೀತಿಯ ಮೈಲ್ ಗಳು ಬಂದರೆ sender's address ಸೂಕ್ಷವಾಗಿ ಗಮನಿಸಿದರೆ ಇದು spam ಎಂದು ತಿಳಿಯುತ್ತದೆ. ವಿದ್ಯಾರ್ಥಿಗಳು ಕೂಡ ತಮ್ಮ ಸಂಸ್ಥೆಗಳಿಗೆಈ ರೀತಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು.

ಓಎಸ್‌ ಮತ್ತು ಆಪ್‌ಗಳು ಅಪ್‌ಡೇಟ್‌ ಆಗುತ್ತಿರಲಿ

ದೀರ್ಘಾವಧಿಯಲ್ಲಿ ಇದು ನಿಮಗೆ ಸಹಾಯ ಮಾಡುತ್ತದೆ. ಬಳಕೆದಾರರ ಅನುಭವವನ್ನು ಸುರಕ್ಷಿತವಾಗಿರಿಸಲು ಅಪ್ಲಿಕೇಶನ್‌ನ ಡೆವಲಪರ್‌ಗಳು ಬದಲಾವಣೆಗಳನ್ನು ಮಾಡುತ್ತಲೇ ಇರುತ್ತಾರೆ. ಆದ್ದರಿಂದ updateಗಳ notifications ಸ್ವೀಕರಿಸಿದಾಗ ಅವುಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ನಿಮ್ಮ ಫೋನ್ ಅಪ್ಲಿಕೇಶನ್‌ಗಳು, ಕಂಪ್ಯೂಟರ್‌ಗಳ ಅಪ್ಲಿಕೇಶನ್‌ಗಳು ಅಥವಾ ಟ್ಯಾಬ್ಲೆಟ್ ಅಪ್ಲಿಕೇಶನ್‌ಗಳನ್ನು ಯಾವಾಗಲೂ update ಮಾಡುತ್ತಿರಿ. ನಿಮ್ಮ ಮಾಹಿತಿಯನ್ನು ಕದಿಯಲು ಯತ್ನಿಸುವ ಹ್ಯಾಕರ್ ಗಳ ಬಲೆಗೆ ಏನೂ ಬೀಳದಂತೆ ತಡೆಯಲು ಈ updateಗಳು ಸಹಾಯ ಮಾಡುತ್ತದೆ.

ಸಾರ್ವಜನಿಕ ನೆಟ್‌ವರ್ಕ್‌ಗಳ ಕುರಿತು ಎಚ್ಚರವಿರಲಿ

ಅಂತರ್ಜಾಲದಲ್ಲಿ ನೀವು ಅನೇಕ ಅಸುರಕ್ಷಿತ ಸಂಪನ್ಮೂಲಗಳನ್ನು ಕಾಣಬಹುದು. ಸಾರ್ವಜನಿಕ ನೆಟ್‌ವರ್ಕ್‌ಗಳು ಅಸುರಕ್ಷಿತ, ಜೊತೆಹೆ ಅಪರಾಧಿಗಳ ಹೆಬ್ಬಾಗಿಲು ಕೂಡ. ಹೀಗಾಗಿ ಅವುಗಳನ್ನು ಬಳಸುವುದನ್ನು ನಿಷೇಧಿಸಿ. ದೃಢೀಕೃತ ನೆಟ್‌ವರ್ಕ್ ಬಳಸಿದರೆ ಅದು ನಿಮಗೆ ರಕ್ಷಣೆಯ ಜೊತೆಗೆ ಓದುವ ಸಮಯದಲ್ಲಿ ನಿಮ್ಮನ್ನು ವಿಚಲಿತಗೊಳಿಸುವುದಿಲ್ಲ ಯಾವಾಗಲೂ VPN ಅನ್ನು ಬಳಸಿ. ಆನ್‌ಲೈನ್‌ನಲ್ಲಿರುವಾಗ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಖಾಸಗಿ ನೆಟ್ವರ್ಕ್ ಬಳಸಿ. ಎನ್‌ಕ್ರಿಪ್ಟ್ ಮಾಡಿದ ಡೇಟಾ ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು ಮತ್ತು ಪರಿಕರಗಳನ್ನು ಮಾತ್ರ ಬಳಸಿಕೊಳ್ಳಿ. ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಮತ್ತು ಪರಿಕರಗಳನ್ನು ಬಳಸುವ ಮೂಲಕ ಹ್ಯಾಕರ್‌ಗಳಿಂದ ದೂರವಿರಬೇಕು. Browsing ಮಾಡುವಾಗ ಪ್ಯಾಡ್‌ಲಾಕ್ ಮತ್ತು 'HTTP' ವೆಬ್‌ಸೈಟ್‌ಗಳನ್ನು ಬಳಸಿದರೆ ನಮ್ಮ ಸುರಕ್ಷತೆಯನ್ನು ಖಾತರಿಪಡಿಸುತ್ತವೆ.

ಆಂಟಿವೈರಸ್‌ ಇರಲಿ

ಪರವಾನಗಿ ಪಡೆದ ಆಂಟಿವೈರಸ್‌ನ ಬಳಸುವುದರಿಂದ ಹಲವು ಪ್ರಯೋಜನಗಳಿವೆ. ನಿಮ್ಮ ಸಾಧನಗಳಲ್ಲಿ ಬಲವಾದ ಆಂಟಿವೈರಸ್ ಬಳಸಿದರೆ, ಅವುಗಳು ಪರಿಪೂರ್ಣ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಬಲವಾದ ಆಂಟಿವೈರಸ್ ಇದ್ದರೆ ಯಾವುದೇ ಮಾಲ್ವೇರ್ ನಿಮ್ಮ ಸಾಧನಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ ಹಾಗೂ ಯಾವುದೇ ಅಪರಾಧಿಗಳು ಯಾವುದೇ ಮಾಹಿತಿಯನ್ನು ಕದಿಯಲು ಸಾಧ್ಯವಿಲ್ಲ. ಆದ್ದರಿಂದ ಯಾವಾಗಲೂ ಪರವಾನಗಿ ಪಡೆದ ಆಂಟಿವೈರಸ್ ಅನ್ನು ಬಳಸಿ.

ವೆಬ್ ಪೋರ್ಟಲ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ. ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬಳಸಲು ಇರುವ ಪ್ರಮುಖ ಹಂತಗಳಲ್ಲಿ ಇದು ಒಂದಾಗಿದೆ. ಬಳಕೆದಾರರೊಂದಿಗೆ ದೃಢೀಕರಣವನ್ನು ಖಾತ್ರಿಪಡಿಸಿಕೊಳ್ಳದೆ ಇಂಟರ್ನೆಟ್‌ನಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಅನೇಕ ಹ್ಯಾಕರ್ಸ್ ಗಳು

ಯಾವಾಗಲೂ ಗಮನಿಸುತ್ತಿರುತ್ತಾರೆ. ಆದ್ದರಿಂದ, ಸಂಪೂರ್ಣವಾಗಿ ತಿಳಿಯದೆ ಯಾರೊಂದಿಗೂ ಏನನ್ನೂ ಹಂಚಿಕೊಳ್ಳಬೇಡಿ.

ಪಾಸ್‌ವರ್ಡ್‌ ಸುರಕ್ಷತೆ

ಕೊನೆಯದಾಗಿ, ಬಲವಾದ ಪಾಸ್‌ವರ್ಡ್‌ನೊಂದಿಗೆ ಎಲ್ಲವನ್ನೂ ರಕ್ಷಿಸಿ. ಬಲವಾದ ಪಾಸ್‌ವರ್ಡ್‌ನೊಂದಿಗೆ, ನಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ರಕ್ಷಿಸಬೇಕು ಎಂದು ತಿಳಿದುಕೊಳ್ಳಬೇಕು. ನಮ್ಮ ಪಾಸ್‌ವರ್ಡ್‌ಗಳು ದುರ್ಬಲವಾಗಿದ್ದರೆ ನಮ್ಮ ಮಾಹಿತಿಯನ್ನು ಸುಲಭವಾಗಿ ದೋಚಿ ಡಾರ್ಕ್ ವೆಬ್‌ನಲ್ಲಿ ಅದನ್ನು ಮಾರಾಟವಾಗುವ ಸಾಧ್ಯತೆಗಳಿವೆ. ನಿಮ್ಮ ಹೆಸರನ್ನೋ, ಮೊಬೈಲ್ ನಂಬರ್ ಅನ್ನು ಪಾಸ್ವರ್ಡ್ ಆಗಿ ಬಳಸಿದರೆ ಹ್ಯಾಕರ್ ಗಳಿಗೆ ಹ್ಯಾಕ್ ಮಾಡಲು ಸುಲಭ.

ಆದ್ದರಿಂದ, ವಿಶೇಷ ಅಕ್ಷರಗಳು, 8 ಅಕ್ಷರಗಳ ಸಂಖ್ಯೆಗಳ ಮಿಶ್ರಣದೊಂದಿಗೆ ಪಾಸ್ವರ್ಡ್ ಅನ್ನು ನಿರ್ವಹಿಸಿ. ನಿಮ್ಮ ಪ್ರಮುಖ ಫೈಲ್‌ಗಳನ್ನು ಯಾವಾಗಲೂ ಬ್ಯಾಕಪ್ ಮಾಡಿ ಮತ್ತು ಬಲವಾದ ಪಾಸ್‌ವರ್ಡ್‌ಗಳೊಂದಿಗೆ ಅವುಗಳನ್ನು ಸುರಕ್ಷಿತಗೊಳಿಸಿ. ಹ್ಯಾಕರ್‌ಗಳು ಅವುಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದಾಗಲೆಲ್ಲಾ ನಮ್ಮ ಫೈಲ್‌ಗಳನ್ನು ತೆರೆಯಲಾಗುವುದಿಲ್ಲ. ಆದ್ದರಿಂದ, ನಮ್ಮ ಎಲ್ಲಾ ಫೈಲ್‌ಗಳನ್ನು ಕ್ಲೌಡ್ ಸ್ಟೋರೇಜ್‌ನಲ್ಲಿ ಅಥವಾ ಬಾಹ್ಯ ಹಾರ್ಡ್‌ವೇರ್‌ನಲ್ಲಿ ಉಳಿಸುವ ಮೂಲಕ ಬ್ಯಾಕ್‌ಅಪ್ ಮಾಡುವುದು ನಮಗೆ ಬಹಳ ಅವಶ್ಯಕವಾಗಿದೆ. ಹೀಗೆ ಮಾಡಿದರೆ ನಾವು ಅವುಗಳನ್ನು ಸುಲಭವಾಗಿ retrieve ಮಾಡಬಹುದು. ನಿಮ್ಮ ಪ್ರಮುಖ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸುರಕ್ಷಿತವಾಗಿರಿ.

(ಲೇಖಕರು: -ಅಪರ್ಣಾ ಶರ್ಮಾ, ಪ್ರಾಂಶುಪಾಲೆ, ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆ, ಯಲಹಂಕ ಶಾಖೆ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು