ಕನ್ನಡ ಸುದ್ದಿ  /  ಜೀವನಶೈಲಿ  /  ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಲೇ ಬೇಡಿ

ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಲೇ ಬೇಡಿ

Jayaraj HT Kannada

Apr 28, 2024 04:12 PM IST

ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಬೇಡಿ

    • ಮಕ್ಕಳನ್ನು ಪಡೆಯುವ ನಿರ್ಧಾರಕ್ಕೆ ಬರುವುದಕ್ಕೂ ಮೊದಲು ಸರಿಯಾದ ಉದ್ದೇಶದಿಂದ ಕುಟುಂಬ ಯೋಜನೆ ಮಾಡುವುದು ಸರಿಯಾದ ಕ್ರಮ. ಕೆಲವು ದಂಪತಿಗಳು ತಮ್ಮಗೆ ಮಕ್ಕಳು ಬೇಡದಿದ್ದರು, ಸ್ವಾರ್ಥಕ್ಕಾಗಿ ಅಥವಾ ತಪ್ಪಾದ ಉದ್ದೇಶಗಳೊಂದಿಗೆ ಮಗುವಿಗೆ ಜನ್ಮ ನೀಡಲು ಮುಂದಾಗುತ್ತಾರೆ.
ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಬೇಡಿ
ಈ 5 ತಪ್ಪು ಉದ್ದೇಶಗಳಿಂದ ಮಗುವಿಗೆ ಜನ್ಮ ನೀಡುವ ನಿರ್ಧಾರಕ್ಕೆ ಬರಬೇಡಿ (Pixabay)

ಈ ಕಾಲದಲ್ಲಿ ಮನೆತುಂಬಾ ಮಕ್ಕಳಿರುವ ಅವಿಭಕ್ತ ಕುಟುಂಬಗಳು ಕಾಣಸಿಗುವುದೇ ಅಪರೂಪ. ನಮಗೆ ಒಂದು ಮಗು ಸಾಕು ಎನ್ನುವ ತಂದೆ-ತಾಯಿಯರೇ ಹೆಚ್ಚು. ಮಕ್ಕಳಿಗೆ ಜನ್ಮ ನೀಡಿ, ಅವರಿಗೆ ಸುಸಂಸ್ಕೃತಿ ಕಲಿಸಿ ಉತ್ತಮ ಪ್ರಜೆಯಾಗಿಸಬೇಕೆಂಬ ಆಸೆ ಹಾಗೂ ಕನಸಿನೊಂದಿಗೆ ಮಗುವನ್ನು ಬಯಸುವ ಜನರಿದ್ದಾರೆ. ಮನೆಯಲ್ಲಿ ಮಕ್ಕಳಿದ್ದರೆ ಅಲ್ಲಿ ನೆಮ್ಮದಿಯ ಛಾಯೆ ಇದ್ದೇ ಇರಲಿದೆ. ಹೀಗಾಗಿ ಬೇರೆ ಬೇರೆ ಕಾರಣಗಳಿಂದ ಮಗು ಬೇಕೇ ಬೇಕು ಎನ್ನುವವರಿದ್ದಾರೆ. ಹಾಗಂತ ಮಕ್ಕಳನ್ನು ಪಡೆಯುವುದು ಸುಲಭದ ಕೆಲಸವಲ್ಲ. ಅವರನ್ನು ಬೆಳೆಸುವುದು ಕೂಡಾ ಹೇಳಿದಷ್ಟು ಸರಳ ಅಲ್ಲ.

ಟ್ರೆಂಡಿಂಗ್​ ಸುದ್ದಿ

Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ

ಬಿಸಿ ಹಾಲಿಗೆ 1 ಚಮಚ ತುಪ್ಪ ಸೇರಿಸಿ ಪ್ರತಿದಿನ ಕುಡಿದು ನೋಡಿ; ದೇಹದಲ್ಲಾಗುವ ಬದಲಾವಣೆಗೆ ನೀವೇ ಅಚ್ಚರಿ ಪಡ್ತೀರಿ

ನಾಯಿ, ಬೆಕ್ಕು ಅಂದ್ರೆ ಕೆಲವರಿಗೆ ಏಕೆ ಅಲರ್ಜಿ; ಸಾಕುಪ್ರಾಣಿಗಳ ಅಲರ್ಜಿ ಕುರಿತು ತಿಳಿಯಬೇಕಾದ ಮಾಹಿತಿ ಇದು

ಪ್ರತಿದಿನ ಎಳನೀರು ಕುಡಿದು ಬೇಸರವಾಗಿದ್ಯಾ? ಆರೋಗ್ಯ ವೃದ್ಧಿಸಿಕೊಳ್ಳಲು ಎಳನೀರನ್ನು ಹೀಗೂ ಬಳಸಬಹುದು

ನೀವು ಕೂಡಾ ಮಕ್ಕಳಾಗಬೇಕೆಂಬ ತಯಾರಿಯಲ್ಲಿರಬಹುದು. ಮಕ್ಕಳನ್ನು ಪಡೆಯುವುದಕ್ಕೂ ಮೊದಲು, ನೀವು ಮಗುವಿಗೆ ಜನ್ಮ ನೀಡಲು ಬಯಸುವ ಉದ್ದೇಶವೇನು ಎಂಬುದರ ಕುರಿತು ತುಂಬಾ ಸ್ಪಷ್ಟವಿರಬೇಕು. ಅಪ್ಪ-ಅಮ್ಮನಾಗುವುದಕ್ಕೂ ಮೊದಲು, ಆ ಮಕ್ಕಳನ್ನು ಬೆಳೆಸಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಇದು ಮೊದಲ ಅಗತ್ಯ. ಗರ್ಭಧಾರಣೆಗೆ ಪ್ರಯತ್ನಿಸುವ ಮೊದಲು ಮಕ್ಕಳನ್ನು ಪಡೆಯುವ ನಿಮ್ಮ ಉದ್ದೇಶವನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸುವುದು ತುಂಬಾ ಮುಖ್ಯ.

ಸೂಕ್ತ ನಿರ್ಧಾರ ಹಾಗೂ ಸರಿಯಾದ ಉದ್ದೇಶದಿಂದ ಮಕ್ಕಳನ್ನು ಪಡೆಯುವ ನಿರ್ಧಾರಕ್ಕೆ ಬನ್ನಿ. ಕೆಲವು ದಂಪತಿಗಳು ತಪ್ಪಾದ ಉದ್ದೇಶಗಳೊಂದಿಗೆ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ನೀವು ಕೂಡಾ ಆ ತಪ್ಪಾದ ಉದ್ದೇಶಗಳಿಂದ ಮಗು‌ವಿಗೆ ಜನ್ಮಕೊಡಲು ಮುಂದಾಗಿದ್ದರೆ, ಅದನ್ನು ಆದಷ್ಟು ತಪ್ಪಿಸಿ.

ಇದನ್ನೂ ಓದಿ | ಪ್ರವಾಸದ ವೇಳೆ ನಿಮ್ಮಲ್ಲಿರಬೇಕಾದ 5 ಅಗತ್ಯ ಗ್ಯಾಜೆಟ್‌ಗಳು; ಕ್ಯಾಮರಾ, ಪವರ್‌ಬ್ಯಾಂಕ್ ಯಾವುದೆಂಬ ಗೊಂದಲ ಬೇಡ

ನಮ್ಮ ಅಪ್ಪ-ಅಮ್ಮನಿಗೆ ಮೊಮ್ಮಕ್ಕಳನ್ನು ನೋಡಬೇಕು

ಮೊಮ್ಮಕ್ಕಳನ್ನು ನೋಡಬೇಕೆಂದು ಪೋಷಕರು ಅಥವಾ ಅತ್ತೆ-ಮಾವಂದಿರ ಒತ್ತಡಕ್ಕೆ ಒಳಗಾಗಿ, ಮಗು ಪಡೆಯುವ ನಿರ್ಧಾರಕ್ಕೆ ನೀವು ಬರಬಹುದು. ಅಂತಿಮವಾಗಿ ಆ ಮಗುವಿಗೆ ಪೋಷಕರಾಗುವವರು ನೀವು. ಹೀಗಾಗಿ ನೀವು ಬಯಸಿದಾಗ ಮಕ್ಕಳನ್ನು ಪಡೆಯುವುದು ಮುಖ್ಯ. ಬದಲಾಗಿ ನಿಮ್ಮ ಅಪ್ಪ ಅಮ್ಮಂದಿರಿಗೆ ಮೊಮ್ಮಕ್ಕಳನ್ನು ಕರುಣಿಸುವುದರ ಸಲುವಾಗಿ ಆ ಯೋಚನೆ ಮಾಡುವುದು ಸರಿಯಲ್ಲ.

ತಾನು ಗಂಡು ಅಥವಾ ಹೆಣ್ಣು ಎಂದು ಸಾಬೀತುಪಡಿಸಲು

ಮದುವೆಯಾದ ಮೇಲೆ ಮಕ್ಕಳಾಗಬೇಕು ಎಂಬ ಮಾತು ಸಮಾಜದಲ್ಲಿ ರೂಢಿಯಲ್ಲಿದೆ. ಒಂದು ವೇಳೆ ಇದಕ್ಕೆ ವಿರುದ್ಧವಾಗಿ ಕುಟುಂಬ ಯೋಜನೆ ಮಾಡಿಕೊಂಡರೆ, ಸಮಾಜದ ಜನರು ಬೇರೆಯೇ ಗಾಳಿಸುದ್ದಿ ಹಬ್ಬಿಸುತ್ತಾರೆ ಎಂಬ ಭೀತಿ ಹಲವರಿಗೆ. ಆಕೆಗೆ ಮಗುವನ್ನು ಹೆರಲು ಆಗುವುದಿಲ್ಲ ಅಥವಾ ಅವನಿಗೆ ಮಗು ಮಾಡುವ ಸಾಮರ್ಥ್ಯ ಇಲ್ಲ ಎಂಬ ವದಂತಿಗಳನ್ನು ಕೇಳಲು ಯಾರೂ ಸಿದ್ಧರಿರುವುದಿಲ್ಲ. ಇಂಥಾ ಮಾತು ಬರಬಾರದು ಎಂದುಕೊಂಡು, ಇಷ್ಟವಿಲ್ಲದಿದ್ದರೂ ಮದುವೆಯ ಬೆನ್ನಲ್ಲೇ ಮಕ್ಕಳನ್ನು ಪಡೆಯಲು ದಂಪತಿಗಳು ಒತ್ತಾಯಕ್ಕೆ ಬೀಳಬಹುದು.

ಇದು ಸಂಬಂಧವನ್ನು ಗಟ್ಟಿಗೊಳಿಸಿ ದಂಪತಿಯನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ ಎಂಬ ಉದ್ದೇಶ

ವಿವಾಹಿತ ದಂಪತಿ ಸದಾ ಗಲಾಟೆ-ಮನಸ್ಥಾಪಗಳಲ್ಲಿರುವಾಗ, ಮಗುವನ್ನು ಪಡೆಯಲು ಅನೇಕ ಜನರು ಸಲಹೆ ನೀಡಬಹುದು. ಹುಟ್ಟುವ ಮಗುವು ನಿಮ್ಮ ಚಿಂತೆಗಳನ್ನು ದೂರ ಮಾಡಿ ಸಂಗಾತಿಯೊಂದಿಗೆ ಮಧುರ ಬಾಂಧವ್ಯವನ್ನು ಹೆಚ್ಚಿಸಬಹುದು ಎಂದು ಹಲವರು ವಾದಿಸುತ್ತಾರೆ. ಇದು ಸಂಭಾವ್ಯ ಕಾರಣ ಇರಬಹುದು. ಒಂದು ವೇಳೆ ಆಗದಿದ್ದಲ್ಲಿ, ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬುದು ಸತ್ಯವಾಗಲಿದೆ.

ಇತರ ಕುಟುಂಬಗಳಿಗಿಂತ ಭಿನ್ನವಾಗಿರಲು ಬಯಸುವುದಿಲ್ಲ

ಬಹಳಷ್ಟು ವಿವಾಹಿತ ದಂಪತಿಗಳು ಸಾಮಾಜಿಕ ಒತ್ತಡದಿಂದ ಮಕ್ಕಳನ್ನು ಪಡೆಯುವ ನಿರ್ಧಾರಕ್ಕೆ ಬರುತ್ತಾರೆ. ಮದುವೆಯ ಬೆನ್ನಲ್ಲೇ, ಸಮಾಜದ ಜನರು ‘ಗುಡ್‌ ನ್ಯೂಸ್‌ ಇಲ್ವಾ’ ಎಂಬ ಬಗ್ಗೆ ಕೇಳುತ್ತಲೇ ಇರುತ್ತಾರೆ. ಹೀಗಾಗಿ ಎಲ್ಲರಿಗೂ ಮಗುವಿದೆ ಎಂಬ ಕಾರಣಕ್ಕಾಗಿ ನೀವು ಕೂಡಾ ಮಕ್ಕಳನ್ನು ಹೆರುವ ನಿರ್ಧಾರಕ್ಕೆ ಬರಬಾರದು. ಮಕ್ಕಳನ್ನು ಪಡೆಯಲು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಮುಖ್ಯವಾಗಿ ಭಾವನಾತ್ಮಕವಾಗಿ ಸಿದ್ಧರಾದ ಮೇಲೆಯೇ ಆ ನಿರ್ಧಾರಕ್ಕೆ ಬರಬೇಕು.

ಜೀವನದಲ್ಲಿ ತಮ್ಮಿಂದ ಸಾಧಿಸಲಾಗದ್ದನ್ನು ಮಗು ಸಾಧಿಸಬೇಕು ಎಂಬ ಉದ್ದೇಶ

ಎಲ್ಲರಿಗೂ ಆಸೆ-ಕನಸುಗಳಿರುತ್ತವೆ. ಎಲ್ಲವನ್ನೂ ಈಡೇರಿಸಲು ಆಗುವುದಿಲ್ಲ. ಹಾಗಂತಾ, ನಿಮ್ಮಿಂದ ಸಾಧ್ಯವಾಗದಿದ್ದನ್ನು ಸಾಧಿಸುವ ಸಲುವಾಗಿ ಮಗು ಪಡೆಯುವುದು ಸರಿಯಲ್ಲ. ಮಕ್ಕಳು ಬೆಳೆದಂತೆಯೇ ಅವರದ್ದೇ ಆದ ವೈಯಕ್ತಿಕ ಗುರುತನ್ನು ಹೊಂದಿರುತ್ತಾರೆ. ಅವರ ಆಸೆ, ಕನಸು ಹಾಗೂ ಗುರಿಗಳು ಬೇರೆಯೇ ಆಗಿರಬಹುದು. ಅದಕ್ಕೂ ನಿಮ್ಮ ಕನಸಿಗೂ ಹೊಂದಿಕೆಯಾಗದೆ ಇರಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು