logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting: ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು; ಈ ಮಾತುಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ

Parenting: ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು; ಈ ಮಾತುಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ

Reshma HT Kannada

Apr 28, 2024 05:51 PM IST

google News

ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು

    • ಮಕ್ಕಳಿಗೆ ಪೋಷಕರು ತಮ್ಮ ಪರವಾಗಿ ಇದ್ದರೆ ಅದರಿಂದ ಆಗುವ ಖುಷಿಯೇ ಬೇರೆ. ಕೆಲವೊಮ್ಮೆ ಮಕ್ಕಳು ಪೋಷಕರಿಂದ ಒಂದೇ ವಿಚಾರವನ್ನು ಪದೇ ಪದೇ ಕೇಳಲು ಬಯಸುತ್ತಾರೆ. ಇದರಿಂದ ಅವರು ಖುಷಿಗೊಳ್ಳುವುದು ಮಾತ್ರವಲ್ಲ, ಅವರ ವೈಯಕ್ತಿಕ ಜೀವನವೂ ವೃದ್ಧಿಯಾಗುತ್ತದೆ. ಅಂತಹ ಕೆಲವು ವಿಚಾರಗಳು ಇಲ್ಲಿವೆ. 
ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು
ನಿಮ್ಮ ಮಕ್ಕಳು ನಿಮ್ಮಿಂದ ಪದೇಪದೆ ಕೇಳಲು ಇಷ್ಟಪಡುವ ವಿಷಯಗಳಿವು

ವಿಪೇರೆಂಟಿಂಗ್‌ ಒಂದು ಸುಂದರ ಪಯಣ ಎನ್ನುವುದು ಎಷ್ಟು ನಿಜವೂ ಎಷ್ಟೇ ಕಲಿಕೆ ಹಾಗೂ ಬೆಳವಣಿಗೆಯಿಂದ ತುಂಬಿದ ಸಾಹಸಮಯ ಪ್ರಯಾಣವಾಗಿದೆ. ಇದು ಪೋಷಕರು ಹಾಗೂ ಮಕ್ಕಳು ಇಬ್ಬರಿಗೂ ಸವಾಲಿನ ಸಮಯ. ಪೋಷಕರು ಮಕ್ಕಳ ಪ್ರತಿ ವಿಷಯದ ಮೇಲೂ ಗಮನ ಹರಿಸಬೇಕು. ಮಕ್ಕಳಿಗೆ ಹೇಳುವ ವಿಚಾರದಲ್ಲಿ ಅವರಿಂದ ಕೇಳಿಸಕೊಳ್ಳುವ ವಿಚಾರದ ಮೇಲೂ ಪೋಷಕರು ನಿಗಾ ವಹಿಸಬೇಕು. ಆತ್ಮವಿಶ್ವಾಸ, ತಿಳುವಳಿಕೆ ಹಾಗೂ ಪ್ರೀತಿ ಬೆಳೆಸಲು ಮಕ್ಕಳು ಹೆಚ್ಚಾಗಿ ಕೇಳಲು ಬಯಸುವ 6 ವಿಚಾರಗಳು ಇಲ್ಲಿವೆ.

ಮಕ್ಕಳು ತಾವು ಹೇಗಿದ್ದಾರೋ ಅದೇ ರೀತಿಯಲ್ಲಿ ಪೋಷಕರು ತಮ್ಮನ್ನು ಒಪ್ಪಿಕೊಳ್ಳಬೇಕು ಹಾಗೂ ಪ್ರೀತಿಸಬೇಕು ಎಂದು ಬಯಸುತ್ತಾರೆ. ನಿಮಗೆ ಅವರು ಅನನ್ಯ ಮತ್ತು ವಿಶೇಷ ಎಂದು ಅವರಿಗೆ ಭರವಸೆ ನೀಡಿ. ಅವರು ನಿಮಗೆ ಹೊಂದಿಕೊಳ್ಳುವ ಸಲುವಾಗಿ ಬೇರೊಬ್ಬರಂತೆ ನಟಿಸಬೇಕಾಗಿಲ್ಲ ಎಂದು ಅವರಿಗೆ ತಿಳಿಸಿ. ಅವರ ವೈಯಕ್ತಿಕ ಬದುಕಿಗೆ ಆದ್ಯತೆ ನೀಡಿ. ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಚಮತ್ಕಾರಗಳಿಗೆ ಪ್ರೋತ್ಸಾಹ ನೀಡಿ. ಪೋಷಕರು ಈ ರೀತಿಯ ವರ್ತನೆ ಹಾಗೂ ಅವರ ಮಾತುಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡುವುದು ಸುಳ್ಳಲ್ಲ.

ತಪ್ಪು ಮಾಡಿದಾಗ ಇಟ್ಸ್‌ ಒಕೆ ಅನ್ನಿ

ತಪ್ಪು ಎನ್ನುವುದು ಕಲಿಕೆ ಹಾಗೂ ಬೆಳವಣಿಗೆಯ ಭಾಗವಾಗಿದೆ. ಮಕ್ಕಳು ತಪ್ಪು ಮಾಡಿದಾಗ ತೊಂದರೆ ಇಲ್ಲ ಮುಂದೆ ತಿದ್ದಕೋ ಎಂದು ಬುದ್ಧಿವಾದ ಹೇಳಿ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ, ತಪ್ಪುಗಳಿಂದ ಕಲಿಯಬೇಕು ಎಂಬುದನ್ನು ತಿಳಿಸಿಹೇಳಿ. ಅವರ ತಪ್ಪುಗಳಿಂದ ಅವರು ಕಲಿಯುವಂತೆ ಪ್ರೋತ್ಸಾಹ ನೀಡಿ. ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಸುತ್ತಲಿನ ಪ್ರಪಂಚ ಹೇಗಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸಿ.

ನಿನ್ನ ಅಭಿಪ್ರಾಯಕ್ಕೂ ಮಹತ್ವವಿದೆ

ಮಕ್ಕಳು ಮನೆಯಲ್ಲಿ ತಮಗೂ ಗೌರವ ಸಿಗಬೇಕು, ತಮ್ಮನ್ನು ಮಾತು ಕೇಳಬೇಕು ಎಂದು ಬಯಸುವುದು ಸಹಜ. ಅವರ ಅಭಿಪ್ರಾಯಗಳು ಮತ್ತು ಆಲೋಚನೆಗಳು ಮುಖ್ಯವೆಂದು ಅವರಿಗೆ ತಿಳಿಸಿ. ಅವರು ನಿಮ್ಮ ಆಲೋಚನೆಗಳಿಂದ ಭಿನ್ನವಾಗಿದ್ದರೂ ಸಹ ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ. ಮಕ್ಕಳ ಅಭಿಪ್ರಾಯಗಳನ್ನು ಕೇಳುವ ಮೂಲಕ ನೀವು ಅವರಿಗೆ ಆತ್ಮವಿಶ್ವಾಸ, ವಿಮರ್ಶಾತ್ಮಕ ಚಿಂತನೆ ಕೌಶಲ ಬೆಳೆಯುವಂತೆ ಮಾಡಿ.

ನಿನ್ನ ಮೇಲೆ ಸಿಟ್ಟು ಮಾಡಿಕೊಳ್ಳುತ್ತೇವೆ ಎಂದರೆ ನೀನು ಕೆಟ್ಟವನು/ವಳು ಅಂತಲ್ಲ

ಕೋಪಗೊಳ್ಳುವುದು ಸಹಜ ಹಾಗೂ ಇದು ಮಾನವನ ಜೀವನದ ಭಾಗ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಿಬೇಕು. ಯಾರೇ ಕೋಪ ಮಾಡಿಕೊಂಡರು ತಪ್ಪಲ್ಲ, ಆದರೆ ಕೋಪವನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸುವುದು ಮುಖ್ಯ ಎಂಬುದನ್ನು ಅವರಿಗೆ ತಿಳಿಸಿ. ಕೋಪವನ್ನು ನಿರ್ವಹಿಸಲು ರಚನಾತ್ಮಕ ಮಾರ್ಗಗಳನ್ನು ಅವರಿಗೆ ಕಲಿಸಿ. ಅವರ ಭಾವನೆಗಳನ್ನು ಒಪ್ಪಿಕೊಳ್ಳುವ ಮೂಲಕ, ಮಕ್ಕಳು ಅವುಗಳನ್ನು ಧನಾತ್ಮಕವಾಗಿ ನಿರ್ವಹಿಸಲು ಕಲಿಯಲು ಸಹಾಯ ಮಾಡಿ.

ಬೇರೆಯವರಿಗಿಂತ ನೀವು ಭಿನ್ನವಾಗಿದ್ದರೆ ತೊಂದರೆಯಿಲ್ಲ

ಪ್ರತಿ ಮಗುವೂ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರಿಗೂ ಅವರದೇ ಆದ ಭಾವನೆಗಳು, ಯೋಚನೆಗಳಿರುತ್ತವೆ. ನಿಮ್ಮ ಮಕ್ಕಳಿಗೆ ಅವರ ಯೋಚನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿ. ಅವರ ಅಭಿಪ್ರಾಯಗಳು ಬೇರೆಯವರಿಗಿಂತ ಭಿನ್ನವಾಗಿದ್ದರೂ ಅದನ್ನು ವ್ಯಕ್ತಪಡಿಸಲು ಅವಕಾಶ ನೀಡಿ. ಆಗ ಮಕ್ಕಳು ಖುಷಿ ಪಡುತ್ತಾರೆ.

ನಿನ್ನೊಳಗಿನ ಮಾತುಗಳನ್ನು ನಿರ್ಲಕ್ಷ್ಯ ಮಾಡಬೇಡ

ನಿಮ್ಮ ಮಕ್ಕಳಿಗೆ ಅವರ ಆಂತರಿಕ ಧ್ವನಿಯನ್ನು ಕೇಳಲು ಕಲಿಸಿ. ಯಾವುದೇ ವಿಚಾರ ಸರಿಯಿಲ್ಲ ಎಂದರೂ ಅವರಿಗೆ ಕೇಳಲು ತಿಳಿಸಿ. ಅಂತಃಪ್ರಜ್ಞೆಯನ್ನು ಅನುಸರಿಸಲು ಪ್ರೋತ್ಸಾಹಿಸಿ. ಅವರ ಪ್ರವೃತ್ತಿಯನ್ನು ನಂಬುವ ಮೂಲಕ ಮಕ್ಕಳು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಯುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ