logo
ಕನ್ನಡ ಸುದ್ದಿ  /  ಜೀವನಶೈಲಿ  /  Dussehra Puja Time 2022: ವಿಜಯದಶಮಿಯ ಪೂಜಾ ಮುಹೂರ್ತ, ಶ್ರಾವಣ ನಕ್ಷತ್ರದ ಮಹತ್ವ ಮತ್ತು ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..

Dussehra Puja Time 2022: ವಿಜಯದಶಮಿಯ ಪೂಜಾ ಮುಹೂರ್ತ, ಶ್ರಾವಣ ನಕ್ಷತ್ರದ ಮಹತ್ವ ಮತ್ತು ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..

HT Kannada Desk HT Kannada

Oct 04, 2022 11:47 AM IST

ವಿಜಯದಶಮಿಯ ಪೂಜಾ ಮುಹೂರ್ತ, ಶ್ರಾವಣ ನಕ್ಷತ್ರದ ಮಹತ್ವ ಮತ್ತು ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..

    • ದಸರಾ ದಿನದಂದು ಸುಕರ್ಮ, ಧೃತಿ, ರವಿ, ಹಂಸ, ಶಶ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುವುದರಿಂದ ಈ ದಿನದ ಮಹತ್ವ ಹೆಚ್ಚುತ್ತಿದೆ. ಜ್ಯೋತಿಷಿಗಳ ಪ್ರಕಾರ, ದಸರಾದ ಸಂಪೂರ್ಣ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ವಿಜಯದಶಮಿಯ ಪೂಜಾ ಮುಹೂರ್ತ, ಶ್ರಾವಣ ನಕ್ಷತ್ರದ ಮಹತ್ವ ಮತ್ತು ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..
ವಿಜಯದಶಮಿಯ ಪೂಜಾ ಮುಹೂರ್ತ, ಶ್ರಾವಣ ನಕ್ಷತ್ರದ ಮಹತ್ವ ಮತ್ತು ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..

ದಸರಾ ಅಥವಾ ವಿಜಯದಶಮಿ ಹಬ್ಬವನ್ನು ಅಶ್ವಿನಿ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ದಸರಾ ಅಕ್ಟೋಬರ್ 5ರ ಬುಧವಾರ ಬಂದಿದೆ. ದಸರಾ ದಿನದಂದು ಸುಕರ್ಮ, ಧೃತಿ, ರವಿ, ಹಂಸ, ಶಶ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುವುದರಿಂದ ಈ ದಿನದ ಮಹತ್ವ ಹೆಚ್ಚುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ, ಪೋಷಕರಿಗೆ ಸಲಹೆ

ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ

Beauty Tips: ರಾತ್ರಿ ಮಲಗುವಾಗ ಮುಖಕ್ಕೆ ಎರಡೇ ಎರಡು ಹನಿ ಈ ಕ್ರೀಮ್‌ ಹಚ್ಚಿ ನೋಡಿ, ಮುಂಜಾನೆ ತ್ವಚೆಯ ಕಾಂತಿ ದುಪ್ಪಟ್ಟು ಅರಳುತ್ತೆ

ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

ಜ್ಯೋತಿಷಿಗಳ ಪ್ರಕಾರ, ದಸರಾದ ಸಂಪೂರ್ಣ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದಸರಾ ದಿನವನ್ನು ಮೂರೂವರೆ ಅಬುಜ ಮುಹೂರ್ತದಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಆದ್ದರಿಂದ ಇಡೀ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು.

ದಸರಾದಲ್ಲಿ ಶ್ರಾವಣ ನಕ್ಷತ್ರದ ಮಹತ್ವ

ಅಕ್ಟೋಬರ್ 5ರ ಬುಧವಾರ ದಸರಾ. ಈ ದಿನ ದಶಮಿ ತಿಥಿ ಮಧ್ಯಾಹ್ನ 12 ಗಂಟೆಯವರೆಗೆ ಇರುತ್ತದೆ. ಇದಾದ ನಂತರ ಏಕಾದಶಿ ಆರಂಭವಾಗಲಿದೆ. ಶಾಸ್ತ್ರಗಳ ಪ್ರಕಾರ ದಶಮಿ ತಿಥಿ ಮಧ್ಯಾಹ್ನವಾಗಲಿ, ಇಲ್ಲದಿರಲಿ ಶ್ರಾವಣ ನಕ್ಷತ್ರ ಇರುವ ದಿನದಂದು ವಿಜಯದಶಮಿ ಮಾನ್ಯ.

ದಶಮಿ ತಿಥಿ ಮುಹೂರ್ತ

ದಶಮಿ ತಿಥಿ ಅಕ್ಟೋಬರ್ 4ರ ಮಧ್ಯಾಹ್ನ 02.20 ರಿಂದ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 5ರ ಮಧ್ಯಾಹ್ನ 12 ರವರೆಗೆ ಮುಂದುವರಿಯುತ್ತದೆ.

ಶ್ರಾವಣ ನಕ್ಷತ್ರದ ಮುಹೂರ್ತ

ಅಕ್ಟೋಬರ್ 4ರ ರಾತ್ರಿ 10:51ಕ್ಕೆ ಶ್ರಾವಣ ನಕ್ಷತ್ರ ಪ್ರಾರಂಭವಾಗುತ್ತದೆ. ಅಕ್ಟೋಬರ್ 5ರ ರಾತ್ರಿ 09:15ಕ್ಕೆ ಕೊನೆಗೊಳ್ಳಲಿದೆ.

ಮಹಾನವಮಿ ದಿನಾಂಕ, ಪೂಜಾ ಸಮಯ, ಆಚರಣೆ ಹೇಗೆ? ಮತ್ತು ನವಮಿಯ ಮಹತ್ವ

ನವರಾತ್ರಿ ಹಬ್ಬದ ಕೊನೆಯ ದಿನ ಮಹಾ ನವಮಿ ಆಚರಿಸಲಾಗುತ್ತದೆ. ಇದು ಅಶ್ವಿನಿ ತಿಂಗಳ ಶುಕ್ಲ ಪಕ್ಷದ ಒಂಬತ್ತನೇ ದಿನ ಬರುತ್ತದೆ. ಈ ದಿನವನ್ನೂ ನವರಾತ್ರಿ ಉಪವಾಸದ ಪಾರಣ ದಿನವೆಂದೂ ಕರೆಯಲಾಗುತ್ತದೆ. ಕನ್ಯಾ ಪೂಜಾನ್‌ ಅಥವಾ ಕುಮಾರಿ ಪೂಜೆಯನ್ನು ಮನೆಯಲ್ಲಿ ಕೈಗೊಂಡು, ದುರ್ಗಾ ಮಾತೆ ಸಿದ್ಧಿದಾತ್ರಿಯ ಒಂಬತ್ತನೇ ಅವತಾರವನ್ನು ಪೂಜಿಸಿ ಭಕ್ತರು ಉಪವಾಸ ಕೊನೆಗೊಳಿಸುತ್ತಾರೆ.

ಹಲ್ವಾ, ಪೂರಿ ಮತ್ತು ಕಡಲೆ ಇತ್ಯಾದಿ ರುಚಿಕರ ಪ್ರಸಾದವನ್ನು ಅಂದು ಸಿದ್ಧಪಡಿಸಲಾಗುತ್ತದೆ. ಇದನ್ನು ದೇವಿಗೆ ನೈವೇದ್ಯವಾಗಿ ನೀಡಲಾಗುತ್ತದೆ. ಕನ್ಯಾ ಪೂಜಾ ಸಮಯದಲ್ಲಿ ಮನೆಯ ಪುಟ್ಟ ಹೆಣ್ಣು ಮಕ್ಕಳಿಗೆ ಈ ಪ್ರಸಾದವನ್ನು ನೀಡಲಾಗುತ್ತದೆ. ನವಮಿಯಂದು ದೇವಿಯನ್ನು ಮಹಿಷಾಮರ್ಧಿನಿಯಾಗಿಯೂ ಪೂಜಿಸಲಾಗುತ್ತದೆ. ಮಹಿಷಾಸುರನನ್ನು ಮರ್ದಿಸಿದ ಹಿಂದಿನ ದಿನವಾಗಿದೆ. ಕರ್ನಾಕದಲ್ಲಿ ಆಯುಧ ಪೂಜೆಗೆ ಮಂಡಕ್ಕಿ, ಸಿಹಿತಿಂಡಿಗಳು ಸೇರಿದಂತೆ ಹಲವು ತಿಂಡಿತಿನಿಸುಗಳು ಇರುತ್ತವೆ.

ನವರಾತ್ರಿ ಮಹಾನವಮಿ ದಿನಾಂಕ

ಈ ವರ್ಷ ನವರಾತ್ರಿ ಹಬ್ಬವು ಸೆಪ್ಟೆಂಬರ್‌ 26ರಂದು ಆರಂಭವಾಗಿ, ಅಕ್ಟೋಬರ್‌ 5ರಂದು ದಸರಾ ಹಬ್ಬದೊಂದಿಗೆ ಪೂರ್ಣಗೊಳ್ಳಲಿದೆ. ಹೀಗಾಗಿ, ಅಕ್ಟೋಬರ್‌ 4ರಂದು ಮಹಾನವಮಿ ಇರುತ್ತದೆ. ನಾಳೆ, ಕರ್ನಾಟಕದ ಬಹುತೇಕ ಕಡೆ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ತಿಥಿ: ಮಹಾ ನವಮಿ ತಿಥಿಯು ಅಕ್ಟೋಬರ್‌ 3ರ ಸಂಜೆ 4:37 ಗಂಟೆಗೆ ಆರಂಭವಾಗಿ, ಅಕ್ಟೋಬರ್‌ 4ರ ಅಪರಾಹ್ನ 2.20ಕ್ಕೆ ಕೊನೆಗೊಳ್ಳುತ್ತದೆ.

ಪೂಜಾ ಸಮಯ: ನವಮಿಯ ಪೂಜೆ ಸಮಯವು ಅಕ್ಟೋಬರ್‌ 3ರಂದು ಸಂಜೆ 3:07 ಗಂಟೆಯಿಂದ ಅಕ್ಟೋಬರ್‌ 4ರ ಮಧ್ಯಾಹ್ನ 12:50 ಗಂಟೆಯವರೆಗೆ ಇರುತ್ತದೆ.

    ಹಂಚಿಕೊಳ್ಳಲು ಲೇಖನಗಳು