logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಡಲೆ ಬೇಳೆಯ ಪರಾಠ ಸವಿದಿದ್ದೀರಾ? ಪ್ರೋಟೀನ್‌ಯುಕ್ತ ಈ ತಿಂಡಿ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ

ಕಡಲೆ ಬೇಳೆಯ ಪರಾಠ ಸವಿದಿದ್ದೀರಾ? ಪ್ರೋಟೀನ್‌ಯುಕ್ತ ಈ ತಿಂಡಿ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ

Jayaraj HT Kannada

Apr 30, 2024 09:15 PM IST

ಕಡಲೆ ಬೇಳೆಯ ಪರಾಠ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ

    • Chana Dal Paratha: ಆಲೂ ಪರಾಠ, ಮೆಂತೆ ಪರಾಠ, ಗೋಬಿ ಪರಾಠಗಳಂತಹ ತರಕಾರಿ ಪರೋಠಾಗಳನ್ನು ತಯಾರಿಸಿ ಬೇಜಾರಾಗಿದ್ದರೆ, ಬೇಳೆ ಕಾಳುಗಳಿಂದಲೂ ಪರಾಠ ತಯಾರಿಸಬಹುದು. ಕಡಲೆ ಬೇಳೆಯಿಂದ ತಯಾರಿಸುವ ಪರಾಠ ನಿಮ್ಮ ಬಾಯಿ ಚಪಲ ತೀರಿಸುವುದಂತು ಖಂಡಿತ. ಅತ್ಯಂತ ಸುಲಭದ ಕಡಲೆ ಬೇಳೆ ಪರಾಠ ನೀವೂ ಟ್ರೈ ಮಾಡಿ.
ಕಡಲೆ ಬೇಳೆಯ ಪರಾಠ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ
ಕಡಲೆ ಬೇಳೆಯ ಪರಾಠ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ (Pixel)

ನಾವು ಸೇವಿಸುವ ಆಹಾರ ಮನಸ್ಸಿಗೆ ಇಷ್ಟವಾದರೆ, ಅದು ದೇಹಕ್ಕೂ ಇಷ್ಟವಾಗುತ್ತದೆ ಎಂಬುದು ಹಿರಿಯರ ಮಾತು. ಒಂದೇ ರೀತಿಯ ಊಟ ಯಾರಿಗೂ ರುಚಿಸುವುದಿಲ್ಲ. ಪೋಷಕಾಂಶಗಳಿಂದ ಕೂಡಿದ ವೈವಿಧ್ಯಮಯ ಅಡುಗೆಗಳು ಊಟದಲ್ಲಿದ್ದರೆ ಆಗ ಊಟದ ಗಮ್ಮತ್ತೇ ಬೇರೆ. ವಿವಿಧ ರೀತಿಯ ಸಾಂಬಾರು, ಚಟ್ನಿ, ಪಲ್ಯಗಳಿರುವಂತೆ ಪರಾಠಗಳಲ್ಲಿಯೂ ಇದೆ. ತರಕಾರಿಗಳಿಂದ ಪರಾಠವನ್ನು ತಯಾರಿಸುವುದು ಎಲ್ಲರಿಗೂ ತಿಳಿದಿದೆ. ಆದರೆ ಕಡಲೆ ಬೇಳೆಯಿಂದಲೂ ಪರಾಠ ತಯಾರಿಸಲಾಗುತ್ತದೆ. ಕಡಲೆ ಬೇಳೆಯಿಂದ ಬರೀ ಸಿಹಿ ಅಡುಗೆ, ಹೋಳಿಗೆ, ಕೋಸಂಬರಿ ಮಾತ್ರ ತಯಾರಿಸಬಹುದು ಎಂದು ನೀವಂದುಕೊಂಡಿದ್ದರೆ ಮಸಾಲೆಗಳನ್ನು ಸೇರಿಸಿ ರುಚಿಯಾದ ಕಡಲೆ ಬೇಳೆ ಪರಾಠ ಕೂಡಾ ತಯಾರಿಸಬಹುದು. ಮೃದುವಾದ ಮತ್ತು ಗರಿಗರಿಯಾದ ಪರಾಠವನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಗೋಧಿ ಹಿಟ್ಟು ಮತ್ತು ಬೇಳೆಯಿಂದ ತಯಾರಿಸುವುದರಿಂದ ಆರೋಗ್ಯಕರ ಊಟದ ಆಯ್ಕೆಯಾಗಿದೆ. ಇದನ್ನು ದಿನದ ಯಾವುದೇ ಸಮಯದಲ್ಲೂ ಸವಿಯಬಹುದು.

ಟ್ರೆಂಡಿಂಗ್​ ಸುದ್ದಿ

Mango Pakoda: ಮಾವಿನಕಾಯಿಯಿಂದ ತಯಾರಿಸಬಹುದು ಡಿಫ್ರೆಂಟ್‌ ರುಚಿಯ ಬಿಸಿ ಬಿಸಿ ಪಕೋಡಾ; ಸೀಸನ್‌ ಮುಗಿಯವ ಮೊದಲು ಮಾಡಿ ತಿನ್ನಿ

Chia Seeds: ತೂಕ ಇಳಿಕೆ ಮಾತ್ರವಲ್ಲ, ತ್ವಚೆಯ ಅಂದ ಹೆಚ್ಚುವುದರಿಂದ ಹೃದಯದ ಆರೋಗ್ಯದವರೆಗೆ ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

ಕಡಲೆ ಬೇಳೆ ಪರಾಠವು ರುಚಿಯಾದ ಪೌಷ್ಟಿಕ ಆಹಾರವಾಗಿದೆ. ಗೋಧಿ ಹಿಟ್ಟು, ಕಡಲೆ ಬೇಳೆ ಮತ್ತು ಮಸಾಲೆಗಳನ್ನು ಬಳಸಿ ತಯಾರಿಸುವುದರಿಂದ ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಕಡಲೆ ಬೇಳೆಯು ದೇಹಕ್ಕೆ ಅವಶ್ಯಕವಾದ ಪ್ರೊಟೀನ್‌ನಿಂದ ತುಂಬಿದೆ. ಇದನ್ನು ಊಟದಲ್ಲಿ ಸೇರಿಸಿಕೊಳ್ಳುವುದರಿಂದ ಆಹಾರ ತೃಪ್ತಿಕರವಾಗುತ್ತದೆ. ಕಡಲೆಯಲ್ಲಿ ನಾರಿನಾಂಶವು ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಆರೋಗ್ಯಕ್ಕೆ ಉತ್ತಮವಾದ ಕಡಲೆ ಬೇಳೆ ಪರಾಠವನ್ನು ಹೀಗೆ ತಯಾರಿಸಿ.

ಕಡಲೆ ಬೇಳೆ ಪರಾಠ ತಯಾರಿಸುವುದು ಹೇಗೆ?

  • ಮೊದಲಿಗೆ ನೆನಸಿದ ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ನೀರನ್ನು ಬಸಿದುಕೊಳ್ಳಿ. ಮಿಕ್ಸರ್‌ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
  • ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಕೊತ್ತಂಬರಿ ಪುಡಿ, ಗರಂ ಮಸಾಲಾ ಪುಡಿ, ಅಚ್ಚ ಖಾರದ ಪುಡಿ, ಆಮ್‌ಚೂರ್ ಪುಡಿ, ಚಿಕ್ಕದಾಗಿ ಕತ್ತರಿಸಿದ ಕೊತ್ತೊಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ. ಅದಕ್ಕೆ ರುಬ್ಬಿಟ್ಟುಕೊಂಡ ಕಡಲೆ ಬೇಳೆಯನ್ನು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ.

ಇದನ್ನೂ ಓದಿ | ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್; ದೇಹಕ್ಕೆ ಯಾವುದು ಉತ್ತಮ, ಇವೆರಡರ ಪ್ರಯೋಜನಗಳೇನು?

  • ಗೋಧಿ ಹಿಟ್ಟಿಗೆ ಚಿಟಿಕೆ ಉಪ್ಪು, ನೀರು ಸೇರಿಸಿ ಚಪಾತಿ ಹಿಟ್ಟಿನಂತೆ ಹಿಟ್ಟು ಕಲಸಿಕೊಳ್ಳಿ. ಮೇಲಿನಿಂದ ಎಣ್ಣೆ ಸವರಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ಒದ್ದೆ ಬಟ್ಟೆ ಮುಚ್ಚಿಟ್ಟರೆ ಇನ್ನೂ ಉತ್ತಮ.
  • ನಂತರ ಪರಾಠ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಒಂದು ಚಿಕ್ಕ ಉಂಡೆ ತೆಗೆದುಕೊಂಡು ಅದನ್ನು ಅಂಗೈ ಅಗಲಕ್ಕೆ ವೃತ್ತಾಕಾರವಾಗಿ ಲಟ್ಟಿಸಿಕೊಳ್ಳಿ. ಅದರ ಮೇಲೆ ಒಂದು ಚಮಚ ಕಡಲೆ ಬೇಳೆಯ ಹೂರಣವನ್ನು ಹಾಕಿ.
  • ಆಲೂ ಪರಾಠದಂತೆ ಅಂಚುಗಳನ್ನು ಒಟ್ಟುಗೂಡಿಸಿ, ಸೀಲ್‌ ಮಾಡಿ. ಉಂಡೆಯಂತಿರಲಿ. ಅದನ್ನು ನಿಧಾನವಾಗಿ ಲಟ್ಟಿಸಿಕೊಳ್ಳಿ. ತೀರಾ ತೆಳುವಾಗಿ ಲಟ್ಟಿಸಿ ಕೊಳ್ಳಬೇಡಿ.
  • ಮಧ್ಯಮ ಉರಿಯಲ್ಲಿ ಎಣ್ಣೆ ಅಥವಾ ತುಪ್ಪ ಸವರಿ ಎರಡೂ ಕಡೆ ಚೆನ್ನಾಗಿ ಬೇಯಿಸಿ.
  • ಮೊಸರು, ಉಪ್ಪಿನಕಾಯಿ ಅಥವಾ ಚಟ್ನಿಯೊಂದಿಗೆ ಬಿಸಿ ಬಿಸಿ ಕಡಲೆ ಬೇಳೆ ಪರಾಠ ಸವಿಯಿರಿ.

ಪೌಷ್ಟಿಕಾಂಶಗಳಿಂದ ಕೂಡಿರುವ ಕಡಲೆ ಬೇಳೆ ಪರಾಠವು ಮಕ್ಕಳಿಗೂ ಉತ್ತಮ. ಮಕ್ಕಳ ಲಂಚ್‌ ಬಾಕ್ಸ್‌ಗೆ ತುಂಬಿಸಿ ಕಳುಹಿಸುವುದರಿಂದ ಸಂಪೂರ್ಣ ಆಹಾರ ಅವರಿಗೆ ಸಿಕ್ಕಂತಾಗುತ್ತದೆ. ಸುಲಭದ ಕಡಲೆ ಬೇಳೆ ಪರಾಠ ನೀವೂ ಪ್ರಯತ್ನಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು