ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್; ದೇಹಕ್ಕೆ ಯಾವುದು ಉತ್ತಮ, ಇವೆರಡರ ಪ್ರಯೋಜನಗಳೇನು?-health news which is better in animal protein vs plant protein fish chicken milk egg vegetables benefits for body jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಾಣಿ ಆಧಾರಿತ ಪ್ರೊಟೀನ್ Vs ಸಸ್ಯ ಆಧಾರಿತ ಪ್ರೊಟೀನ್; ದೇಹಕ್ಕೆ ಯಾವುದು ಉತ್ತಮ, ಇವೆರಡರ ಪ್ರಯೋಜನಗಳೇನು?

ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್; ದೇಹಕ್ಕೆ ಯಾವುದು ಉತ್ತಮ, ಇವೆರಡರ ಪ್ರಯೋಜನಗಳೇನು?

ದೇಹಕ್ಕೆ ಪ್ರೊಟೀನ್‌ ಅತ್ಯಗತ್ಯ. ನಾವು ಸೇವಿಸುವ ಆಹಾರದಿಂದ ದೇಹವು ಪ್ರೊಟೀನ್‌ ಹೀರಿಕೊಳ್ಳುತ್ತದೆ. ವಿವಿಧ ಆಹಾರಗಳಲ್ಲಿ ಬಗೆಬಗೆಯ ಪೋಷಕಾಂಶಗಳಿರುತ್ತವೆ. ಪ್ರಾಣಿ ಮೂಲಗಳಿಂದ ಬರುವ ಆಹಾರದಿಂದ ಸಿಗುವ ಪ್ರೊಟೀನ್‌ಗೂ, ಸಸ್ಯ ಮೂಲದಿಂದ ಸಿಗುವ ಪ್ರೊಟೀನ್‌ಗೂ ವ್ಯತ್ಯಾಸಗಳಿವೆ. ಇವೆರಡರ ಪ್ರಯೋಜನಗಳನ್ನು ತಿಳಿಯೋಣ.

ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್
ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್

ಆರೋಗ್ಯಕರ ದೇಹಕ್ಕೆ ಪ್ರೊಟೀನ್ ಅವಶ್ಯಕ. ಸಾಮಾನ್ಯವಾಗಿ ದೇಹಕ್ಕೆ ಹೆಚ್ಚು ಪೋಷಕಾಂಶ ಬೇಕು ಎಂದಾಗ ಥಟ್ಟನೆ ನೆನಪಿಗೆ ಬರುವ ಆಹಾರವೆಂದರೆ ಮೊಟ್ಟೆ. ಎಲ್ಲರಿಗೂ ತಿಳಿದಿರುವಂತೆ ಮೊಟ್ಟೆಯಲ್ಲಿ ಹೆಚ್ಚು ಪೋಷಕಾಂಶಗಳಿವೆ. ಇದರ ಹೊರತಾಗಿ ಹಲವು ಸಸ್ಯಾಹಾರ ಹಾಗೂ ಮಾಂಸಾಹಾರಗಳಲ್ಲೂ ಹೇರಳವಾದ ಪ್ರೊಟೀನ್‌ಗಳಿವೆ. ಪ್ರಾಣಿ ಆಧಾರಿತ ಪ್ರೊಟೀನ್ ಹಾಗೂ ಸಸ್ಯಾಧಾರಿತ ಪ್ರೊಟೀನ್ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ದೇಹಕ್ಕೆ ಯಾವುದು ಹೆಚ್ಚು ಉತ್ತಮ ಎಂಬ ವಾದಗಳು ಇನ್ನೂ ಚಾಲ್ತಿಯಲ್ಲಿದೆ. ಹಾಗಿದ್ದರೆ ಪ್ರಾಣಿ ಆಧಾರಿತ ಮತ್ತು ಸಸ್ಯ ಆಧಾರಿತ ಪ್ರೊಟೀನ್‌ಗಳಲ್ಲಿರುವ ವ್ಯತ್ಯಾಸಗಳೇನು ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ಪ್ರಾಣಿ ಆಧಾರಿತ ಅಥವಾ ಹೆಚ್ಚಿನ ಮಾಂಸಾಹಾರದಿಂದ ಸಿಗುವ ಪ್ರೊಟೀನ್‌ಗಳನ್ನು ಪೂರ್ಣಪ್ರಮಾಣದ ಪ್ರೊಟೀನ್‌ಗಳೆಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಎಲ್ಲಾ ಅಗತ್ಯ ಅಮೈನೋ ಆಮ್ಲಗಳಿರುತ್ತದೆ. ಇದೇ ವೇಳೆ ಕೆಲವೊಂದು ಪ್ರೊಟೀನ್‌ ವಿಷಯಕ್ಕೆ ಬಂದಾಗ ಕೆಲವು ಸಸ್ಯ ಆಧಾರಿತ ಆಹಾರಗಳು ಅಪೂರ್ಣವೆಂದು ಪರಿಗಣಿಸಲಾಗಿದೆ. ಆದರೂ, ಪೂರ್ಣಪ್ರಮಾಣದ ಪೋಷಕಾಂಶಗಳು ದೇಹಕ್ಕೆ ಬೇಕೆಂದರೆ ಸಸ್ಯಾಧಾರಿತ ಪ್ರೊಟೀನ್‌ ಕೂಡಾ ದೇಹಕ್ಕೆ ಬೇಕು.

ದೇಹಕ್ಕೆ ಪ್ರೊಟೀನ್ ಏಕೆ ಬೇಕು?

ದೇಹಕ್ಕೆ ಸಾಕಷ್ಟು ಪ್ರೊಟೀನ್ ಸಿಗದಿದ್ದರೆ ಸ್ನಾಯು ದೌರ್ಬಲ್ಯ, ಆಯಾಸ ಹೆಚ್ಚಾಗುತ್ತದೆ. ಇದರೊಂದಿಗೆ ಪ್ರತಿರಕ್ಷಣಾ ಕಾರ್ಯ ದುರ್ಬಲಗೊಳ್ಳುತ್ತದೆ. ಜೊತೆಗೆ ದೇಹಕ್ಕೆ ಗಾಯಗಳಾದರೆ ಅದು ವಿಳಂಬವಾಗಿ ಗುಣವಾಗಬಹುದು. ಅಂಗಾಂಶಗಳು, ಸ್ನಾಯುಗಳು, ಅಂಗಗಳು, ಕಿಣ್ವಗಳು, ಹಾರ್ಮೋನುಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಲು ದೇಹವು ಸರಿಯಾಗಿ ಕೆಲಸ ಮಾಡಬೇಕು. ಅಂಥಾ ದೈಹಿಕ ಕಾರ್ಯಗಳಿಗೆ ಶಕ್ತಿ ಬೇಕಾದರೆ ಪ್ರೊಟೀನ್ ನಿರ್ಣಾಯಕವಾಗಿದೆ.

ಪ್ರಾಣಿ ಆಧಾರಿತ ಪ್ರೊಟೀನ್‌ ಪ್ರಯೋಜನಗಳೇನು?

ಸಸ್ಯ ಆಧಾರಿತ ಪ್ರೊಟೀನ್ ಮೂಲಗಳಿಗೆ ಹೋಲಿಸಿದರೆ; ಮಾಂಸ, ಮೀನು, ಮೊಟ್ಟೆ ಹಾಗೂ ಡೈರಿ ಉತ್ಪನ್ನಗಳು ಸಂಪೂರ್ಣ ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ ಎಂಬುದು ವೈದ್ಯರ ಅಭಿಪ್ರಾಯ. ಅವು ಅಗತ್ಯ ಅಮೈನೋ ಆಮ್ಲಗಳಿಂದ ಕೂಡಿರುತ್ತವೆ. ಇದು ಅಂಗಾಂಶಗಳನ್ನು ನಿರ್ಮಿಸಲು ನಿರ್ಣಾಯಕವಾಗಿದೆ. ಅಲ್ಲದೆ ಪ್ರತಿರಕ್ಷಣಾ ಕಾರ್ಯ ಸುಧಾರಿಸುವುದರ ಜೊತೆಗೆ ಹಾರ್ಮೋನ್ ಉತ್ಪಾದನೆಗೆ ನೆರವಾಗುತ್ತವೆ.

ಇದನ್ನೂ ಓದಿ | Summer Tips: ಬೇಸಿಗೆಯಲ್ಲಿ ಈ 10 ಹಣ್ಣುಗಳ ಅತಿಯಾದ ಸೇವನೆ ಆರೋಗ್ಯ ಸಮಸ್ಯೆಯನ್ನ ಹೆಚ್ಚಿಸುತ್ತೆ

ಪ್ರಾಣಿ ಆಧಾರಿತ ಪ್ರೊಟೀನ್‌ಗಳಲ್ಲಿ ವಿಟಮಿನ್ ಬಿ 12, ಕಬ್ಬಿಣ, ಸತು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂಥ ಪ್ರಮುಖ ಪೋಷಕಾಂಶಗಳಿವೆ. ಇದು ಮೆದುಳಿನ ಆರೋಗ್ಯ, ಕೆಂಪು ರಕ್ತ ಕಣಗಳ ಉತ್ಪಾದನೆ, ಪ್ರತಿರಕ್ಷಣಾ ಕಾರ್ಯ ದೇಹದಲ್ಲಿ ಚೈತನ್ಯ ತುಂಬಲು ಸಹಕಾರಿಯಾಗಿದೆ. ಇಷ್ಟೇ ಅಲ್ಲದೆ ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಪ್ರಾಣಿ ಪ್ರೊಟೀನ್‌ ಇರುವ ಆಹಾರದ ಮಿತವಾದ ಸೇವನೆಯಿಂದ ದೈಹಿಕ ಕ್ಷಮತೆ ಹೆಚ್ಚುತ್ತದೆ.

ಸಸ್ಯ ಆಧಾರಿತ ಪ್ರೊಟೀನ್‌ನ ಪ್ರಯೋಜನಗಳು ಯಾವುವು?

ಹಣ್ಣು, ತರಕಾರಿ, ಧಾನ್ಯಗಳು, ಬೀಜಗಳಲ್ಲಿ ಸಿಗುವುದೇ ಸಸ್ಯ ಆಧಾರಿತ ಪ್ರೊಟೀನ್‌ಗಳು. ಇವುಗಳಲ್ಲಿ ಫೈಬರ್‌ ಅಂಶ ಹೇರಳವಾಗಿವೆ. ಜೀರ್ಣಕ್ರಿಯೆ ಸುಧಾರಿಸಲು ಇವು ಸಹಕಾರಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಸ್ಯ ಆಧಾರಿತ ಪ್ರೊಟೀನ್‌ ಸಹಾಯ ಮಾಡುತ್ತದೆ. ಪ್ರಾಣಿ ಪ್ರೊಟೀನ್ ಮೂಲಗಳಿಗೆ ಹೋಲಿಸಿದರೆ, ಇವುಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ಇದು ಉತ್ತಮ ಆಯ್ಕೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕೂಡಾ ಕಡಿಮೆ ಮಾಡುತ್ತದೆ. ವಿಟಮಿನ್‌ಗಳು ಹಾಗೂ ಖನಿಜಗಳನ್ನು ಒಳಗೊಂಡಂತೆ ಅಗತ್ಯ ಪೋಷಕಾಂಶಗಳಿರುವುದರಿಂದ ದೇಹದ ಒಟ್ಟಾರೆ ಆರೋಗ್ಯಕ್ಕೆ ಸಸ್ಯಾಧಾರಿತ ಪ್ರೊಟೀನ್ ಸಹಕಾರಿ.

mysore-dasara_Entry_Point