logo
ಕನ್ನಡ ಸುದ್ದಿ  /  ಜೀವನಶೈಲಿ  /  Mental Health: ಪುನರಾವರ್ತಿತ ಕನಸುಗಳು ಬೀಳಲು 5 ಕಾರಣಗಳಿವು; ಮಾನಸಿಕ ಆರೋಗ್ಯದ ಬಗ್ಗೆ ತಜ್ಞರ ಈ ಅಂಶಗಳನ್ನ ತಿಳಿಯಿರಿ

Mental Health: ಪುನರಾವರ್ತಿತ ಕನಸುಗಳು ಬೀಳಲು 5 ಕಾರಣಗಳಿವು; ಮಾನಸಿಕ ಆರೋಗ್ಯದ ಬಗ್ಗೆ ತಜ್ಞರ ಈ ಅಂಶಗಳನ್ನ ತಿಳಿಯಿರಿ

Raghavendra M Y HT Kannada

Apr 25, 2024 11:54 AM IST

ಪುನರಾವರ್ತಿಕ ಕನಸುಗಳು ಬೀಳಲು ಕಾರಣವೇನು, ಮಾನಸಿಕ ಆರೋಗ್ಯದ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನ ತಿಳಿಯಿರಿ.

    • ಬೆನ್ನಟ್ಟುವುದು, ಎತ್ತರದಿಂದ ಬೀಳುವುದು ಸೇರಿದಂತೆ ಕೆಲವು ಸಾಮಾನ್ಯ ಪುನರಾವರ್ತಿತ ಕನಸುಗಳು ಬೀಳುತ್ತವೆ. ಇಂತಹ ಕನಸುಗಳು ಬೀಳಲು ಕಾರಣವೇನು, ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಅನ್ನೋದನ್ನ ತಿಳಿಯೋಣ.
ಪುನರಾವರ್ತಿಕ ಕನಸುಗಳು ಬೀಳಲು ಕಾರಣವೇನು, ಮಾನಸಿಕ ಆರೋಗ್ಯದ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನ ತಿಳಿಯಿರಿ.
ಪುನರಾವರ್ತಿಕ ಕನಸುಗಳು ಬೀಳಲು ಕಾರಣವೇನು, ಮಾನಸಿಕ ಆರೋಗ್ಯದ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನ ತಿಳಿಯಿರಿ. (Freepik)

ಬೆಂಗಳೂರು: ರೆಕ್ಕೆ ಕಟ್ಟಿಕೊಂಡು ಆಕಾಶದಲ್ಲಿ ಹಾರಾಡುವುದು, ಹೊಸ ಲೋಕದಲ್ಲಿ ನಡೆದಾಡುವುದು, ಮೇಲೆಯಿಂದ ಕೆಳಗೆ ಬೀಳುವುದು ಹೀಗೆ ಹತ್ತಾರು ಬಗೆಯ ಕನಸುಗಳು ಬೀಳುತ್ತವೆ ಎಂದು ಸಾಕಷ್ಟು ಮಂದಿ ಹೇಳುವುದನ್ನು ನೋಡಿದ್ದೇವೆ. ನಿಜ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಜನರಿಗೆ ಇಂಥ ಪುನರಾವರ್ತಿತ ಕನಸುಗಳು (Recurring Dreams) ಬೀಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಕೆಲವು ವಿಷಯಗಳಲ್ಲಿ ಮನುಷ್ಯ ಸಕಾರಾತ್ಮಕವಾಗಿದ್ದರೂ, ಪುನರಾವರ್ತಿತ ದುಃಸ್ವಪ್ನಗಳು ಗೊಂದಲವನ್ನುಂಟುಮಾಡಬಹುದು. ಪುನರಾವರ್ತಿತ ಕನಸುಗಳು ನಿರ್ದಿಷ್ಟ ವಿಷಯಗಳು, ಜನರು ಮತ್ತು ಸಂದರ್ಭಗಳ ಸುತ್ತಲೂ ಸುತ್ತುತ್ತವೆ. ಇಂತಹ ಕನಸುಗಳಿಗೆ ಏನು ಕಾರಣ ಅಂತ ತಜ್ಞರು ವಿವರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ದೈನಂದಿನ ಜೀವನದಲ್ಲಿ ಒತ್ತಡ ಮತ್ತು ಆತಂಕವು ಕೆಲವೊಂದು ವಿಷಯಗಳಲ್ಲಿ ಕನಸುಗಳನ್ನು ಪ್ರಚೋದಿಸಬಹುದು. ಪಿಟಿಎಸ್‌ಡಿ (ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಹೊಂದಿರುವ ಜನರಿಗೆ ಪುನರಾವರ್ತಿತ ಕನಸುಗಳ ಮತ್ತಷ್ಟು ಆತಂಕವನ್ನು ಹೆಚ್ಚಿಸುತ್ತವೆ. ನೀವೂ ಸಹ ಅದೇ ವಿಷಯಗಳ ಸುತ್ತ ಗೊಂದಲದ ಕನಸುಗಳನ್ನು ಅನುಭವಿಸುತ್ತಿದ್ದರೆ, ನಿಮ್ಮ ಗುಪ್ತ ಭಯಗಳು, ಆತಂಕಗಳು ಅಥವಾ ಆಘಾತಕಾರಿ ಘಟನೆಗಳನ್ನು ಪರಿಹರಿಸಿಕೊಳ್ಳುವುದು ಹೇಗೆ ಅನ್ನೋದನ್ನ ಮನಃಶಾಸ್ತ್ರಜ್ಞ ಮೀತಿ ವೈದ್ಯ ಹೆಚ್‌ಟಿ ಡಿಜಿಟಲ್‌ ಜೊತೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.

ಪುನರಾವರ್ತಿತ ಕನಸುಗಳ ಹಿಂದಿನ 5 ಕಾರಣಗಳು ಇಲ್ಲಿವೆ

1. ಬಗೆಹರಿಯದ ಸಮಸ್ಯೆಗಳು

ಪುನರಾವರ್ತಿತ ಕನಸುಗಳು ನಮ್ಮ ಜೀವನದಲ್ಲಿ ಬಗೆಹರಿಯದ ಸಮಸ್ಯೆಗಳಿಗೆ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ. ಈ ಸಮಸ್ಯೆಗಳು ಪ್ರೀತಿಪಾತ್ರರೊಂದಿಗಿನ ಸಂಘರ್ಷಗಳಿಂದ ಹಿಡಿದು ಪರಿಹರಿಸಲಾಗದ ಅಪರಾಧ ಅಥವಾ ವಿಷಾದದವರೆಗೆ ಇರಬಹುದು. ಉದಾಹರಣೆಗೆ, ದೊಡ್ಡ ಎತ್ತರದಿಂದ ಬೀಳುವ ಬಗ್ಗೆ ನಿರಂತರವಾಗಿ ಕನಸು ಕಾಣುವ ವ್ಯಕ್ತಿಯು ವೈಫಲ್ಯದ ಭಯ ಅಥವಾ ಪರಿಹರಿಸಲಾಗದ ಸಮಸ್ಯೆಯೊಂದಿಗೆ ಹೋರಾಡುತ್ತಿರಬಹುದು ಎಂಬುದನ್ನು ಸೂಚಿಸುತ್ತದೆ.

2. ಒತ್ತಡ ಮತ್ತು ಆತಂಕ

ಪುನರಾವರ್ತಿತ ದುಃಸ್ವಪ್ನಗಳು ಹೆಚ್ಚಿನ ಒತ್ತಡದ ಮಟ್ಟ ಮತ್ತು ಆತಂಕದ ಸಂಕೇತವೂ ಆಗಿರುತ್ತವೆ. ನಮ್ಮ ಜೀವನದ ವಿವಿಧ ಅಂಶಗಳ ಬಗ್ಗೆ ನಾವು ನಿರಂತರವಾಗಿ ಚಿಂತೆ ಅಥವಾ ಆತಂಕದಲ್ಲಿರುವಾಗ, ಅದು ನಮ್ಮ ಕನಸುಗಳಲ್ಲಿ ನುಸುಳಬಹುದು. ಬೆನ್ನಟ್ಟುವುದು, ಬೀಳುವುದು ಅಥವಾ ನಿಯಂತ್ರಣವನ್ನು ಕಳೆದುಕೊಳ್ಳುವುದು ಮುಂತಾದ ಸನ್ನಿವೇಶಗಳನ್ನು ಒಳಗೊಂಡಿರುವ ದುಃಸ್ವಪ್ನಗಳು ಹೆಚ್ಚಾಗಿ ಒತ್ತಡಕ್ಕೆ ಸಂಬಂಧಿಸಿವೆ. ಇವು ನಿದ್ರೆಯ ಗುಣಮಟ್ಟಕ್ಕೆ ಅಡ್ಡಿಪಡಿಸಬಹುದು. ಆತಂಕವನ್ನು ಮತ್ತಷ್ಟು ಹೆಚ್ಚಿಸಬಹುದು.

3. ಆಘಾತ ಮತ್ತು ಪಿಟಿಎಸ್‌ಡಿ

ಆಘಾತ-ಪ್ರೇರಿತ ಪುನರಾವರ್ತಿತ ಕನಸುಗಳನ್ನ ನಿಭಾಯಿಸುವುದು ವಿಶೇಷವಾಗಿ ಸವಾಲಾಗಿದೆ. ಅಪಘಾತಗಳು, ನಿಂದನೆ ಅಥವಾ ಯುದ್ಧದಂತಹ ಆಘಾತಕಾರಿ ಘಟನೆಗಳನ್ನು ಅನುಭವಿಸಿದ ವ್ಯಕ್ತಿಗಳು ತಮ್ಮ ಕನಸುಗಳಲ್ಲಿ ಈ ಅನುಭವಗಳನ್ನು ಕಾಣಬಹುದು. ದುಃಸ್ವಪ್ನಗಳು ಸ್ಪಷ್ಟ ಮತ್ತು ಭಾವನಾತ್ಮಕವಾಗಿ ತೀವ್ರವಾಗಿರಬಹುದು. ಹೆಚ್ಚಾಗಿ ಯೋಚನೆ ಮಾಡಲು ಇವು ಕಾರಣವಾಗುವ ಸಾಧ್ಯತೆ ಇರುತ್ತದೆ.

4. ಪುನರಾವರ್ತಿತ ಆಲೋಚನಾ ಮಾದರಿಗಳು

ಪುನರಾವರ್ತಿತ ಕನಸುಗಳಲ್ಲಿ ಪುನರಾವರ್ತಿತ ಆಲೋಚನಾ ಮಾದರಿಗಳು ಹೆಚ್ಚಾಗಿ ದೈನಂದಿನ ಅಭ್ಯಾಸಗಳು ಅಥವಾ ಪರೀಕ್ಷೆಯ ಅಗತ್ಯವಿರುವ ನಡವಳಿಕೆಗಳಿಂದ ಹುಟ್ಟುತ್ತವೆ. ಉದಾಹರಣೆಗೆ, ರೈಲು ಅಥವಾ ಬಸ್ ಪ್ರಯಾಣವನ್ನು ತಪ್ಪಿಸಿಕೊಳ್ಳುವ ಕನಸು ಬೀಳುವುದು ಸರಿಯಾದ ಜೀವನ ಮಾರ್ಗವನ್ನು ಕಳೆದುಕೊಳ್ಳುವ ಅಥವಾ ಇಲ್ಲದಿರುವ ಭಯವನ್ನು ಸೂಚಿಸಬಹುದು. ಈ ಕನಸುಗಳು ಆತ್ಮಾವಲೋಕನಕ್ಕೆ ಕಾರಣವಾಗುತ್ತವೆ.

5. ಈಡೇರದ ಆಸೆಗಳು

ಈಡೇರದ ಆಸೆಗಳು ಅಥವಾ ಈಡೇರದ ಆಕಾಂಕ್ಷೆಗಳ ಮೇಲೆ ಕೇಂದ್ರೀಕೃತವಾದ ಪುನರಾವರ್ತಿತ ಕನಸುಗಳು ನಮ್ಮ ಬಯಕೆಗಳ ಬಗ್ಗೆ ಮಾರ್ಮಿಕ ಒಳನೋಟವಾಗಬಹುದು. ಉದಾಹರಣೆಗೆ, ನಿರಂತರವಾಗಿ ಹಾರಾಟದ ಬಗ್ಗೆ ಕನಸು ಕಾಣುವ ವ್ಯಕ್ತಿಯು ತಮ್ಮ ಎಚ್ಚರದ ಜೀವನದಲ್ಲಿ ಸ್ವಾತಂತ್ರ್ಯ ಅಥವಾ ವಿಮೋಚನೆಯ ಪ್ರಜ್ಞೆಗಾಗಿ ಹಂಬಲಿಸುತ್ತಿರಬಹುದು. ಆಗ ವ್ಯಕ್ತಿ ಎಚ್ಚೆತ್ತುಕೊಂಡು ಆಸೆಗಳ ಈಡೇರಿಕೆ ಅಥವಾ ಆಸೆಗಳಿಗೆ ಮಿತಿ ಹಾಕಿಕೊಂಡಾಗ ಸಮಸ್ಯೆ ಬಗೆಹರಿಯಬಹುದು ಎಂದು ತಜ್ಞರು ಹೇಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು