logo
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದಲ್ಲಿ ಶೇ 30ರಷ್ಟು ಮಂದಿ ಒಮ್ಮೆಯೂ ಬಿಪಿ ಚೆಕ್‌ ಮಾಡಿಸಿಲ್ಲ ಅನ್ನುತ್ತೆ ಅಧ್ಯಯನ, ನಿಯಮಿತ ತಪಾಸಣೆಯ ಅಗತ್ಯ ತಿಳಿಯಿರಿ

ಭಾರತದಲ್ಲಿ ಶೇ 30ರಷ್ಟು ಮಂದಿ ಒಮ್ಮೆಯೂ ಬಿಪಿ ಚೆಕ್‌ ಮಾಡಿಸಿಲ್ಲ ಅನ್ನುತ್ತೆ ಅಧ್ಯಯನ, ನಿಯಮಿತ ತಪಾಸಣೆಯ ಅಗತ್ಯ ತಿಳಿಯಿರಿ

Reshma HT Kannada

Apr 15, 2024 01:13 PM IST

ನಿಯಮಿತ ಬಿಪಿ ತಪಾಸಣೆಯ ಅಗತ್ಯ ತಿಳಿಯಿರಿ

    • ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಪ್ರಮಾಣ ಏರಿಕೆಯಾಗುತ್ತಿದೆ. ಇವುಗಳಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಕೂಡ ಒಂದು. ಅದರಲ್ಲೂ ಯುವ ಜನರು ಹೆಚ್ಚಾಗಿ  ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಿಯಮಿತವಾಗಿ ತಪಾಸಣೆ ಮಾಡಿಸದೇ ಇರುವುದು, ಭಾರತದಲ್ಲಿ ಶೇ 30 ರಷ್ಟು ಮಂದಿ ಒಮ್ಮೆಯೂ ಕೂಡ ಬಿಪಿ ತಪಾಸಣೆ ಮಾಡಿಸಿಲ್ಲವಂತೆ!
ನಿಯಮಿತ ಬಿಪಿ ತಪಾಸಣೆಯ ಅಗತ್ಯ ತಿಳಿಯಿರಿ
ನಿಯಮಿತ ಬಿಪಿ ತಪಾಸಣೆಯ ಅಗತ್ಯ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಭಾರತದ ಯುವ ಜನರಲ್ಲಿ ಬ್ಲಡ್‌ಪ್ರೆಶರ್‌ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆ ಏರಿಕೆಯಾಗುತ್ತಿದೆ ಎಂಬ ಅಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಈ ವರದಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ ಈ ವರದಿಯನ್ನು ಪ್ರಕಟ ಮಾಡಿತ್ತು. ಆ ವರದಿಯು ಇನ್ನೊಂದು ಅಂಶವನ್ನೂ ತಿಳಿಸಿದೆ. ಅದೇನೆಂದರೆ ಭಾರತದಲ್ಲಿ 18 ರಿಂದ 54 ವರ್ಷ ವಯಸ್ಸಿನ ಶೇ 30 ರಷ್ಟು ಜನರು ಒಮ್ಮೆ ಕೂಡ ತಮ್ಮ ಬ್ಲಡ್‌ ಪ್ರೆಶರ್‌ ಅಂದರೆ ಬಿಪಿ ಚೆಕ್‌ ಮಾಡಿಸಿಲ್ಲವಂತೆ.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಇದರಿಂದ ಈ ಸಮಸ್ಯೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದು ಕಳವಳ ಉಂಟು ಮಾಡಿದೆ. ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೆ ಅದಕ್ಕೆ ನಿಯಮಿತ ತಪಾಸಣೆ ಖಂಡಿತ ಅತ್ಯಗತ್ಯ.

ರಕ್ತದೊತ್ತಡದ ಅರಿವಿನ ವಿಚಾರದಲ್ಲಿ ಭೌಗೋಳಿಕ ವ್ಯತ್ಯಾಸಗಳ ಪ್ರಮಾಣವೂ ಹೆಚ್ಚಿದೆ. ದಕ್ಷಿಣದ ರಾಜ್ಯಗಳಲ್ಲಿ ರಕ್ತದೊತ್ತಡದ ಪ್ರಮಾಣ ಅಧಿಕವಾಗಿದೆ. ಶೇ 76ರಷ್ಟು ಜನರು ಬಿಪಿ ಸಲುವಾಗಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ, ಒಡಿಶಾ, ಜಾರ್ಖಂಡ್‌, ಗುಜರಾತ್‌ ಮತ್ತು ನಾಗಲ್ಯಾಂಡ್‌ ರಾಜ್ಯಗಳಲ್ಲಿ ರಕ್ತದೊತ್ತಡ ಸಮಸ್ಯೆ ಇರುವವರ ಸಂಖ್ಯೆ ಕಡಿಮೆ ಇದೆ.

ಈ ಸಂಶೋಧನೆಗಳು ನಿರ್ದಿಷ್ಟ ಪ್ರದೇಶಗಳಲ್ಲಿನ ಯುವ ಜನರಲ್ಲಿ ನಿಯಮಿತ ರಕ್ತದೊತ್ತಡ ತಪಾಸಣೆಯ ಪ್ರಾಮುಖ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಅದಕ್ಕಾಗಿ ಸಾರ್ವಜನಿಕ ಆರೋಗ್ಯ ಉಪಕ್ರಮಗಳು ನಡೆಯಬೇಕು ಎಂದು ಇದು ಒತ್ತಿ ಹೇಳುತ್ತದೆ.

ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗಳ ಕನ್ಸಲ್ಟೆಂಟ್‌ ಕಾರ್ಡಿಯಾಲಜಿಸ್ಟ್‌ ಡಾ. ವರುಣ್‌ ಬನ್ಸಾಲ್‌ ಅವರು ನಿಯಮಿತ ಬಿಪಿ ತಪಾಸಣೆಯ ಮಹತ್ವವನ್ನು ಒತ್ತಿ ಹೇಳುತ್ತಾರೆ. ಅವರ ಪ್ರಕಾರ ನಾವು ಆರೋಗ್ಯವಂತರಾಗಿದ್ದರೂ ಸಹ, ಅಧಿಕ ರಕ್ತದೊತ್ತಡ ಹಾಗೂ ಇನ್ನಿತರ ಹೃದಯರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಬ್ಲಡ್‌ ಪ್ರೆಶರ್‌ ಅನ್ನು ಮೇಲ್ವಿಚಾರಣೆ ಮಾಡುವುದು ಅವಶ್ಯʼ ಎಂದು ಅವರು ವಿವರಿಸಿ ಹೇಳುತ್ತಾರೆ.

ಡಾ. ಬನ್ಸಾಲ್‌ ಅವರು ಹೇಳುವ ಪ್ರಕಾರ ವರ್ಷಕ್ಕೊಮ್ಮೆ ಆದ್ರೂ ಬಿಪಿ ಚೆಕ್‌ ಮಾಡಿಸಬೇಕು. ಸ್ಥೂಲಕಾಯ ಹಾಗೂ ಹೃದಯ ಸಮಸ್ಯೆಗಳ ಕೌಟುಂಬಿಕ ಇತಿಹಾಸ ಹೊಂದಿರುವ ವ್ಯಕ್ತಿಗಳು ಆಗಾಗ ಮೇಲ್ವಿಚಾರಣೆ ಮಾಡುತ್ತಿರಬೇಕುʼ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಿರಂತರವಾಗಿ ಬಿಪಿ ಮಾನಿಟರ್‌ ಮಾಡುವುದರಿಂದಾಗುವ ಪ್ರಯೋಜನಗಳು

ನಿಯಮಿತ ಬಿಪಿ ತಪಾಸಣೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅಧಿಕ ರಕ್ತದೊತ್ತಡದ ಆರಂಭಿಕ ಪತ್ತೆ ಹೃದಯಾಘಾತ, ಪಾರ್ಶ್ವವಾಯು ಅಥವಾ ಮೂತ್ರಪಿಂಡ ಕಾಯಿಲೆಯಂತಹ ತೊಡಕುಗಳನ್ನು ತಡೆಗಟ್ಟಲು ಹಾಗೂ ತಕ್ಷಣಕ್ಕೆ ಈ ಬಗ್ಗೆ ಎಚ್ಚರ ವಹಿಸಲು ವಾರ್ನಿಂಗ್‌ ನೀಡುತ್ತದೆ.

ಬಿಪಿ ಮಾನಿಟರಿಂಗ್‌ ಮಾಡುವುದರಿಂದ ವೈದ್ಯರಿಗೆ ಹೃದಯರಕ್ತನಾಳದ ಅಪಾಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಅಲ್ಲದೆ ಇದಕ್ಕೆ ಬೇಕಾದ ಚಿಕಿತ್ಸಾ ಕ್ರಮಗಳ ಬಗ್ಗೆಯೂ ತಿಳಿಸುತ್ತದೆ. ಸೂಕ್ತವಾದ ರಕ್ತದೊತ್ತಡ ನಿಯಂತ್ರಣಕ್ಕಾಗಿ ಜೀವನಶೈಲಿಯ ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆʼ ಡಾ. ಬನ್ಸಾಲ್‌ ವಿವರಿಸಿದರು. ಅಂತಿಮವಾಗಿ ನಿಯಮಿತ ತಪಾಸಣೆಗಳು ತಮ್ಮ ಹೃದಯರಕ್ತನಾಳದ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ.

ಮನೆಯಲ್ಲಿ ನಿಮ್ಮ ಬಿಪಿಯನ್ನು ಹೇಗೆ ಪರಿಶೀಲಿಸಬಹುದು?

ಅದೃಷ್ಟವಶಾತ್‌ ಮನೆಯಲ್ಲಿ ಬಿಪಿ ಚೆಕ್‌ ಮಾಡುವುದು ಅನುಕೂಲಕರ. ವೆಚ್ಚ ಪರಿಣಾಮಕಾರಿ ಆಯ್ಕೆಯಾಗಿದೆ. "ಪ್ರತಿಷ್ಠಿತ ಔಷಧಾಲಯದಿಂದ ಡಿಜಿಟಲ್ ಬಿಪಿ ಮಾನಿಟರ್‌ನಲ್ಲಿ ಹೂಡಿಕೆ ಮಾಡಿ" ಎಂದು ಡಾ. ಬನ್ಸಾಲ್‌ ಸಲಹೆ ನೀಡುತ್ತಾರೆ.

ಮನೆಯಲ್ಲಿ ಬಿಪಿ ಚೆಕ್‌ ಮಾಡುವ ಮುನ್ನ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆಯುವುದು ಅತ್ಯಗತ್ಯ. ನೆಲದ ಚಪ್ಪಟೆಯಾದ ಪಾದಗಳೊಂದಿಗೆ ಶಾಂತವಾಗಿ ಕುಳಿತುಕೊಳ್ಳಿ. ಹೃದಯ ಮಟ್ಟಕ್ಕೆ ಬರುವಂತೆ ನಿಮ್ಮ ತೋಳಿನ ಮೇಲೆ ಪಟ್ಟಿಯನ್ನು ಇರಿಸಿ. ಅದರಲ್ಲಿ ನೀಡಿರುವ ಸೂಚನೆಯಂತೆ ಪಂಪ್‌ ಮಾಡಿ. ನಿಖರವಾದ ಮೇಲ್ವಿಚಾರಣೆಗಾಗಿ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರೀಡಿಂಗ್‌ಗಳನ್ನು ರೆಕಾರ್ಡ್ ಮಾಡಿ. ಅತ್ಯಂತ ವಿಶ್ವಾಸಾರ್ಹ ಫಲಿತಾಂಶಗಳಿಗಾಗಿ, ಪ್ರತಿ ದಿನವೂ ಅದೇ ಸಮಯದಲ್ಲಿ ನಿಮ್ಮ ರಕ್ತದೊತ್ತಡವನ್ನು ಅಳೆಯಿರಿ.

ನಿಮ್ಮಿಂದ ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ, ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.

    ಹಂಚಿಕೊಳ್ಳಲು ಲೇಖನಗಳು