logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯೋಗ ದಿನಚರಿಯ ಆರಂಭಕ್ಕೆ ಇಲ್ಲಿವೆ ಕೆಲವು ಟಿಪ್ಸ್‌

ಯೋಗ ದಿನಚರಿಯ ಆರಂಭಕ್ಕೆ ಇಲ್ಲಿವೆ ಕೆಲವು ಟಿಪ್ಸ್‌

Mar 12, 2023 10:20 PM IST

ಯೋಗಾಭ್ಯಾಸದಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಆ ಕಾರಣದಿಂದ ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಯೋಗ ದಿನಚರಿ ಆರಂಭಿಸುವ ಮೊದಲು ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು.

  • ಯೋಗಾಭ್ಯಾಸದಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಆ ಕಾರಣದಿಂದ ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಯೋಗ ದಿನಚರಿ ಆರಂಭಿಸುವ ಮೊದಲು ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು.
ಯೋಗವು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಮ್ಮ ದಿನಚರಿಯಲ್ಲಿ ಯೋಗವನ್ನು ರೂಢಿಸಿಕೊಳ್ಳಲು, ಕೆಲವು ಸರಳ ಹಾಗೂ ಸುಲಭ ಉಪಾಯಗಳು ಇಲ್ಲಿವೆ.  
(1 / 6)
ಯೋಗವು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಮ್ಮ ದಿನಚರಿಯಲ್ಲಿ ಯೋಗವನ್ನು ರೂಢಿಸಿಕೊಳ್ಳಲು, ಕೆಲವು ಸರಳ ಹಾಗೂ ಸುಲಭ ಉಪಾಯಗಳು ಇಲ್ಲಿವೆ.  (Unsplash)
ಸ್ಥಿರ ಸಮಯ ಮತ್ತು ಸ್ಥಳವನ್ನು ಹೊಂದಿಸಿ: ಯೋಗಾಭ್ಯಾಸಕ್ಕೂ ಮುನ್ನು ನಿರ್ದಿಷ್ಟ ಸಮಯ ಹಾಗೂ ಮನೆಯಲ್ಲಿ ಒಂದು ನಿರ್ದಿಷ್ಟ ಜಾಗವನ್ನು ಗೊತ್ತು ಮಾಡಿಕೊಳ್ಳುವುದು ಅಗತ್ಯ. ಈ ರೀತಿ ಮಾಡುವುದರಿಂದ ನಿಮ್ಮ ದಿನಚರಿಯನ್ನು ಹೀಗೆಯೇ ರೂಢಿಸಿಕೊಳ್ಳಬಹುದು. ಅಲ್ಲದೆ ಇದನ್ನು ಅಭ್ಯಾಸವಾಗಿ ಮುಂದುವರಿಸಿಕೊಂಡು ಹೋಗಲು ಸಹಾಯವಾಗುತ್ತದೆ.   
(2 / 6)

ಆನ್‌ಲೈನ್ ಸಂಪನ್ಮೂಲಗಳನ್ನು ಬಳಸಿ: ಯೋಗಕ್ಕಾಗಿ ವಿಡಿಯೊಗಳು, ಟ್ಯುಟೋರಿಯಲ್‌ಗಳು ಮತ್ತು ಅಪ್ಲಿಕೇಶನ್‌ಗಳು ಸೇರಿದಂತೆ ಹಲವು ಆನ್‌ಲೈನ್ ಸಂಪನ್ಮೂಲಗಳು ಲಭ್ಯವಿದೆ. ನಿಮಗೆ ಸಹಾಯವಾಗುವ ಆನ್‌ಲೈನ್‌ ಸಂಪನ್ಮೂಲವನ್ನು ಹುಡುಕಿ, ಆ ಮೂಲಕ ನಿಮ್ಮ ಅಭ್ಯಾಸಕ್ಕೆ ಅದರಿಂದ ಮಾರ್ಗದರ್ಶನ ಪಡೆಯಿರಿ. 
(3 / 6)

ಸರಳ ಭಂಗಿಗಳೊಂದಿಗೆ ಪ್ರಾರಂಭಿಸಿ: ನೀವು ಹೊಸದಾಗಿ ಯೋಗಾಭ್ಯಾಸ ಮಾಡುತ್ತಿದ್ದರೆ, ಮಗುವಿನ ಭಂಗಿ, ಪರ್ವತ ಭಂಗಿಗಳಂತಹ ಸರಳ ಭಂಗಿಗಳೊಂದಿಗೆ ಆರಂಭಿಸಿ. ಇವು ನಿಮಗೆ ಆರಾಮದಾಯಕ ಎನ್ನಿಸುತ್ತವೆ. ದೇಹಕ್ಕೆ ಶಕ್ತಿ ಹಾಗೂ ನಮ್ಯತೆಯನ್ನು ಒದಗಿಸುತ್ತದೆ. 
(4 / 6)

ಯೋಗ ಸ್ನೇಹಿತರನ್ನು ಹುಡುಕಿ: ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಯೋಗವನ್ನು ಅಭ್ಯಾಸ ಮಾಡುವುದು ನಿಮ್ಮನ್ನು ಪ್ರೇರಿಪಿಸಲು ಕಾರಣವಾಗುತ್ತದೆ. ಇದು ಜವಾಬ್ದಾರಿಯಿಂದ ತಪ್ಪದೇ ಯೋಗ ಮಾಡಲು ನೆನಪಿಸಲು ಸಹಕಾರಿ. ಒಬ್ಬರೇ ಮಾಡುವುದಕ್ಕಿಂತ ಎಲ್ಲರೊಂದಿಗೆ ಬೆರೆತು ಯೋಗ ಮಾಡುವುದರಿಂದ ಹೆಚ್ಚು ಖುಷಿ ಸಿಗುತ್ತದೆ. 
(5 / 6)

ಬಹಳ ಶ್ರಮ ಹಾಕಬೇಡಿ: ಯೋಗ ಎಂಬುದು ಒಂದು ಅಭ್ಯಾಸ ಎಂಬುದು ನೆನಪಿರಲಿ. ಇದಕ್ಕೆ ಒಂದೇ ಬಾರಿಗೆ ಶ್ರಮ ಹಾಕುವುದು ಸರಿಯಲ್ಲ. ಯೋಗ ಭಂಗಿಯನ್ನು ಸಂಪೂರ್ಣವಾಗಿ ಒಮ್ಮೆಲೆ ಮಾಡಲು ಸಾಧ್ಯವಾಗದಿದ್ದರೆ ನಿರಾಶರಾಗಬೇಡಿ, ಒಂದು ದಿನ ಅಭ್ಯಾಸ ತಪ್ಪಿದರೆನಿರುತ್ಸಾಹಗೊಳ್ಳಬೇಡಿ. ನಿಮ್ಮ ಕೈಲಾದಷ್ಟು ಮಾಡುತ್ತಿರಿ. ನಿಧಾನಕ್ಕೆ ಅಭ್ಯಾಸವಾಗುತ್ತದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು