logo
ಕನ್ನಡ ಸುದ್ದಿ  /  ಜೀವನಶೈಲಿ  /  Sri Rama Navami 2024: ಈ ಬಾರಿ ಶ್ರೀ ರಾಮನವಮಿ ಆಚರಣೆ ಯಾವಾಗ; ದಿನಾಂಕ, ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

Sri Rama Navami 2024: ಈ ಬಾರಿ ಶ್ರೀ ರಾಮನವಮಿ ಆಚರಣೆ ಯಾವಾಗ; ದಿನಾಂಕ, ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

Rakshitha Sowmya HT Kannada

Apr 16, 2024 06:23 PM IST

2024ರ ಶ್ರೀ ರಾಮನವಮಿ ದಿನಾಂಕ, ಮುಹೂರ್ತ

  • Sri Rama Navami 2024: ಕಳೆದ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದೆ. ದೇಶಾದ್ಯಂತ ಭಕ್ತರು ಅಯೋಧ್ಯೆಗೆ ತೆರಳಿ ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ಈ ಖುಷಿ ಕ್ಷಣಗಳ ನಡುವೆ ಸಂಭ್ರಮವನ್ನು ದುಪ್ಪಟ್ಟು ಮಾಡಲು ಶ್ರೀ ರಾಮನವಮಿ ಬರುತ್ತಿದೆ.

2024ರ ಶ್ರೀ ರಾಮನವಮಿ ದಿನಾಂಕ, ಮುಹೂರ್ತ
2024ರ ಶ್ರೀ ರಾಮನವಮಿ ದಿನಾಂಕ, ಮುಹೂರ್ತ

Sri Ramanavami 2024: ಪ್ರತಿ ವರ್ಷ ಚೈತ್ರ ಶುದ್ಧ ನವಮಿಯಂದು ಶ್ರೀರಾಮನವಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಶ್ರೀರಾಮ ನವಮಿ ಹೆಚ್ಚು ವಿಶೇಷವಾಗಲಿದೆ. ಹಲವು ವರ್ಷಗಳ ಪರಿಶ್ರಮದ ಫಲವಾಗಿ ರಾಮನ ಜನ್ಮಸ್ಥಳವಾದ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಜನನವಾಯಿತು. ಅದಕ್ಕಾಗಿಯೇ ಈ ವರ್ಷ ಶ್ರೀರಾಮ ನವಮಿ ಆಚರಣೆಯನ್ನು ಇನ್ನಷ್ಟು ಅದ್ಧೂರಿಯಾಗಿ ನೆರವೇರಿಸಲು ಸಕಲ ಸಿದ್ದತೆ ನಡೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಶ್ರೀರಾಮ ನವಮಿ ಯಾವಾಗ?

ಹಿಂದೂ ಕ್ಯಾಲೆಂಡರ್ ಪ್ರಕಾರ ಈ ವರ್ಷ ಶ್ರೀರಾಮನವಮಿಯನ್ನು ಚೈತ್ರಮಾಸದ ನವಮಿ ತಿಥಿಯಂದು ಆಚರಿಸಲಾಗುತ್ತದೆ. ಏಪ್ರಿಲ್ 16ರ ಮಂಗಳವಾರ ಮಧ್ಯಾಹ್ನ 1.23ರಿಂದ ತಿಥಿ ಆರಂಭವಾಗಲಿದೆ. ಏಪ್ರಿಲ್ 17ರ ಬುಧವಾರ ಮಧ್ಯಾಹ್ನ 3.14ಕ್ಕೆ ತಿಥಿ ಮುಕ್ತಾಯವಾಗುತ್ತದೆ. ಶ್ರೀರಾಮನವಮಿಯನ್ನು ಏಪ್ರಿಲ್ 17 ರ ಬುಧವಾರದಂದು ಸೂರ್ಯೋದಯ ತಿಥಿಯ ಆಧಾರದ ಮೇಲೆ ಆಚರಿಸಲಾಗುತ್ತದೆ. ಪೂಜೆ ಮಾಡಲು 2 ಗಂಟೆ 35 ನಿಮಿಷಗಳ ಶುಭ ಮುಹೂರ್ತವಿದೆ.

ರವಿ ಯೋಗದಲ್ಲಿ ರಾಮ ನವಮಿ

ಈ ವರ್ಷ ಶ್ರೀರಾಮ ನವಮಿಯಂದು ರವಿಯೋಗ ಉಂಟಾಗುತ್ತದೆ. ಈ ಯೋಗವು ಇಡೀ ದಿನ ಇರುತ್ತದೆ. ಹಾಗೆಯೇ 11:51 ರವರೆಗೆ ಶೂಲ ಯೋಗವಿದ್ದು ನಂತರ ಗಂಡ ಯೋಗ ಇರುತ್ತದೆ. ಆಶ್ಲೇಷಾ ನಕ್ಷತ್ರವು ಮುಂಜಾನೆಯಿಂದ ರಾತ್ರಿಯವರೆಗೆ ಇರುತ್ತದೆ. ರವಿ ಯೋಗದಲ್ಲಿ ಸೂರ್ಯನು ಬಹಳ ಬಲಶಾಲಿಯಾಗಿರುತ್ತಾನೆ. ಈ ಸಮಯದಲ್ಲಿ ಎಲ್ಲಾ ರೀತಿಯ ದೋಷಗಳು ದೂರಾಗಲಿವೆ.

ಶ್ರೀರಾಮನವಮಿಯ ಮಹತ್ವ

ಲೋಕ ರಕ್ಷಣೆಗಾಗಿ ಮಹಾವಿಷ್ಣು ತ್ರೇತಾಯುಗದಲ್ಲಿ ರಾಕ್ಷಸರನ್ನು ಸಂಹರಿಸಲು ಅವತರಿಸಿದನು. ಶ್ರೀರಾಮನು ತ್ರೇತಾಯುಗದಲ್ಲಿ ಮಹಾವಿಷ್ಣುವಿನ 7 ಅವತಾರ. ದಶರಥ ಮಹಾರಾಜ ಕೌಸಲ್ಯಾ ದೇವಿಯ ಮಗನಾಗಿ ನವಮಿ ತಿಥಿಯಂದು ಶ್ರೀರಾಮನು ಜನಿಸಿದನೆಂದು ಪುರಾಣಗಳು ಹೇಳುತ್ತವೆ. ನಂತರ ಅದೇ ದಿನ ಸೀತಾರಾಮರ ಮದುವೆ ನಡೆದಿತ್ತು ಎನ್ನಲಾಗಿದೆ. 14 ವರ್ಷಗಳ ವನವಾಸದ ನಂತರ ಅವರ ಪಟ್ಟಾಭಿಷೇಕದ ದಿನವೇ ನವಮಿ ತಿಥಿ ಎಂದು ಹೇಳಲಾಗುತ್ತದೆ. ಆದ್ದರಿಂದ ಸೀತಾರಾಮರ ಕಲ್ಯಾಣವನ್ನು ಶ್ರೀರಾಮನವಮಿಯಂದು ಆಚರಿಸಲಾಗುತ್ತದೆ. ಶ್ರೀರಾಮನವಮಿಯಂದು ದೇಶಾದ್ಯಂತ ಎಲ್ಲಾ ಊರುಗಳಲ್ಲಿ ಆಚರಿಸಲಾಗುತ್ತದೆ.

ರಾಮನಿಗೆ ಇಷ್ಟವಾದ ನೈವೇದ್ಯ

ಬಾಳೆಹಣ್ಣು ಎಂದರೆ ಶ್ರೀ ರಾಮನಿಗೆ ಅಪಾರ ಪ್ರೀತಿ. ಆದ್ದರಿಂದ ರಾಮನವಮಿಯಂದು ರಸಾಯನವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅದರ ಜೊತೆಗೆ ಕೋಸಂಬರಿ, ಪಾನಕವನ್ನೂ ನೈವೇದ್ಯಕ್ಕೆ ಇಡಲಾಗುತ್ತದೆ. ಶ್ರೀರಾಮನವಮಿಯಂದು ಸೀತಾರಾಮರ ಕಲ್ಯಾಣ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ. ಜೀವನದಲ್ಲಿ ಎಲ್ಲಾ ಅನಿಷ್ಟಗಳು ತೊಲಗಿ ಸಂತೋಷ ನೆಲೆಗೊಳ್ಳುತ್ತದೆ ಎಂದು ನಂಬಲಾಗಿದೆ. ಶ್ರೀರಾಮನನ್ನು ನಾವೆಲ್ಲಾ ದೇವರೆಂದು ಪೂಜಿಸುತ್ತೇವೆ. ಆದರೆ ರಾಮನು ದೇವರ ಸ್ಥಾನದಲ್ಲಿದ್ದರೂ ಮನುಷ್ಯನ ಅವತಾರದಲ್ಲಿ ಮನುಷ್ಯರು ಎದುರಿಸುವ ಎಲ್ಲಾ ಕಷ್ಟಗಳನ್ನು ಅನುಭವಿಸಿದರು. ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಶ್ರೀರಾಮ ತೋರಿಸಿಕೊಟ್ಟಿದ್ದಾನೆ. ರಾವಣನನ್ನು ಕೊಂದು ಧರ್ಮವನ್ನು ಕಾಪಾಡಿದ ಮಹಾಪುರುಷ ಆತ. ಒಬ್ಬ ವ್ಯಕ್ತಿ ಹೇಗೆ ಬದುಕಬೇಕು? ನಿಮ್ಮ ಇತರರಿಗೆ ಮಾತನ್ನು ಉಳಿಸಿಕೊಳ್ಳುವುದು ಹೇಗೆ? ತಂದೆ-ತಾಯಿಯನ್ನು ಗೌರವಿಸುವುದು ಹೇಗೆ ಎಂಬುದನ್ನು ಶ್ರೀರಾಮನನ್ನು ನೋಡಿ ಕಲಿಯಬೇಕು ಎನ್ನುತ್ತಾರೆ ಹಿರಿಯರು. ಅದಕ್ಕಾಗಿಯೇ ಶ್ರೀರಾಮನನ್ನು ಸಕಲ ಗುಣಾಭಿರಾಮ ಎಂದು ಕರೆಯುತ್ತಾರೆ.

ಶ್ರೀ ರಾಮನವಮಿಯಂದು ತೆಲಂಗಾಣದ ಭದ್ರಾಚಲಂನಲ್ಲಿ ಸೀತಾರಾಮರ ವಿವಾಹವನ್ನು ಆಚರಿಸಲಾಗುತ್ತದೆ. ಈ ಸಮಾರಂಭವನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಸೀತಾರಾಮರ ವಿವಾಹ ಸಮಾರಂಭದಲ್ಲಿ ಬಳಸುವ ಅಕ್ಷತೆಯನ್ನು ತಲೆ ಮೇಲೆ ಹಾಕಿಕೊಂಡರೆ ಅವಿವಾಹಿತರಿಗೆ ಮದುವೆ ಆಗುತ್ತದೆ. ದಾಂಪತ್ಯದಲ್ಲಿ ಎಲ್ಲಾ ಅಡೆತಡೆಗಳು ನಿವಾರಣೆ ಆಗುತ್ತದೆ. ಎಂದು ನಂಬಲಾಗಿದೆ.

ಕೋಸಂಬರಿ, ಪಾನಕ ತಯಾರಿಸುವುದು ಏಕೆ?

ಶ್ರೀರಾಮ ನವಮಿ ಎಂದಾಕ್ಷಣ ನೆನಪಿಗೆ ಬರುವುದು ಕೋಸಂಬರಿ, ಪಾನಕ. ಆ ದಿನ ಇವುಗಳನ್ನು ಪ್ರಸಾದವಾಗಿ ನೀಡುವುದರ ಹಿಂದೆ ಒಳ್ಳೆಯ ಕಾರಣವಿದೆ. ಬೇಸಿಗೆಯಲ್ಲಿ ದೇಹದ ಶಾಖದ ಸಮಸ್ಯೆಗಳನ್ನು ತಡೆಗಟ್ಟಲು ಬೆಲ್ಲದಿಂದ ಮಾಡಿದ ಪಾನೀಯವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗೇ ದೇಹವು ಬಿಸಿಲಿನಿಂದ ಸುಡುವುದನ್ನು ತಡೆಯಲು, ಹೆಸರು ಬೇಳೆಯನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಇವೆರಡನ್ನೂ ಸೇವಿಸುವುದರಿಂದ ದೇಹವು ಪರಿಸರದಲ್ಲಿನ ಬದಲಾವಣೆಗಳನ್ನು ತಡೆದುಕೊಳ್ಳುತ್ತದೆ. ಅದಕ್ಕಾಗಿಯೇ ಇವುಗಳನ್ನು ರಾಮನವಮಿಯಂದು ಪ್ರಸಾದವಾಗಿ ತಯಾರಿಸಿ ಭಕ್ತರಿಗೆ ಹಂಚಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು