ಡೈಪರ್ ಹಾಕುವುದರಿಂದ ಹಿಡಿದು ಲಾಲಿ ಹಾಡುವವರೆಗೆ; ಪುರುಷರಿಗಾಗಿ ಆರಂಭವಾಗಿದೆ ಅಪ್ಪಂದಿರ ಶಾಲೆ, ಮಗು ಬೇಕೆಂಬ ಆಸೆಯಿದ್ದವರು ಓದಲೇಬೇಕಾದ ಸುದ್ದಿ
May 05, 2024 02:24 PM IST
ಮಕ್ಕಳ ಕಾಳಜಿ ವಹಿಸುವುದುಹೇಗೆ ಎಂಬ ತರಬೇತಿಯಲ್ಲಿ ಭಾಗವಹಿಸಿರುವ ವ್ಯಕ್ತಿಗಳಿಗೆ ಗೊಂಬೆಗಳಿಗೆ ಡೈಪರ್ ಹಾಗುವುದು, ತಲೆ ಬಾಚುವುದು, ಸ್ನಾನ ಸೇರಿ ಮಕ್ಕಳ ಪೋಷಣೆ ಬಗ್ಗೆ ಕಲಿಯುತ್ತಿದ್ದಾರೆ.
- ಮಕ್ಕಳ ಪಾಲನೆಯಲ್ಲಿ ತಾಯಿಯಷ್ಟೇ ತಂದೆಯದ್ದೂ ಸಮಾನ ಪಾಲಿರಬೇಕೆಂದು ಕೊಲಂಬಿಯಾ ನಂಬಿದೆ. ಹೀಗಾಗಿಯೇ ಅಲ್ಲಿನ ಪುರುಷರು ಮಕ್ಕಳ ಆರೈಕೆ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಏನೆಲ್ಲಾ ಕಲಿಯುತ್ತಿದ್ದಾರೆ ಅನ್ನೋದರ ವಿವರ ಇಲ್ಲಿದೆ.
ಕೊಲಂಬಿಯಾ: ಮಹಿಳೆಯರ ಜೀವನ ಅತ್ಯಂತ ಖುಷಿಯ ಹಾಗೂ ಪ್ರಮುಖ ಘಟ್ಟವಾಗಿರುವ ಗರ್ಭಿಣಿ ಹಂತದಿಂದ ಹಿಡಿದು ಮಕ್ಕಳನ್ನು ಹೆತ್ತು ಅವರನ್ನು ಒಂದು ಹಂತದವರೆಗೆ ಪೋಷಣೆ ಮಾಡುವ ಕೆಲಸ ತಾಯಿಯದ್ದೇ ಆಗಿರುತ್ತದೆ. ಹೆಚ್ಚೆಂದರೆ ಪುರುಷರು ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುವುದನ್ನು ಹೊರತುಪಡಿಸಿದರೆ ಬಹುತೇಕ ಪುಟ್ಟ ಮಕ್ಕಳ ಪೋಷಣೆ ತಾಯಿಯ ಜವಾಬ್ದಾರಿ ಮತ್ತು ಹಕ್ಕು ಎನ್ನುವಂತಾಗಿದೆ. ಆದರೆ ಇಂತಹ ಪದ್ಧತಿಗೆ ಕೊಲಂಬಿಯಾ (Colombia) ಬ್ರೇಕ್ ಹಾಕಲು ಹೊರಟಿದೆ. ಇದು ಅಚ್ಚರಿ ಎನಿಸಿದರೂ ನಿಜ. ಡೈಪರ್ ಹಾಕುವುದರಿಂದ ಹಿಡಿದು ಮಕ್ಕಳನ್ನು ನಿದ್ರೆ ಮಾಡಿಸುವವರೆಗೆ ಹೇಗೆ ಮಕ್ಕಳ ಬಗ್ಗೆ ಕಾಳಜಿ (Children Care) ವಹಿಸಲಾಗುತ್ತದೆ ಎಂಬುದರ ಬಗ್ಗೆ ಪುರುಷರಿಗೆ ತರಬೇತಿ ನೀಡುವ (Training School For Men to Car For Children) ಸೆಷನ್ ಆರಂಭವಾಗಿದೆ.
ಕೊಲಂಬೊದ ಬೊಗೋಟಾಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಪುರುಷರೇ ಸಂಪೂರ್ಣವಾಗಿ ಮಕ್ಕಳ ಕಾಳಜಿಯ ಜವಾಬಾದಿರಿಯನ್ನು ವಹಿಸಿದ್ದಾರಂತೆ. 2021ರಲ್ಲಿ ಶೇ 9.5 ರಷ್ಟು ಪುರುಷರು ಮಾತ್ರ ಮಕ್ಕಳ ಕಾಳಜಿ ವಹಿಸುತ್ತಿದ್ದರು. ಆದರೆ 2023ರ ವೇಳೆಗೆ ಶೇಕಡಾ 20.1 ರಷ್ಟು ಪುರುಷರು ಮಕ್ಕಳ ಸಂಪೂರ್ಣ ಕಾಳಜಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ವರದಿ ಹೇಳಿದೆ.
ಪ್ರಸ್ತುತ ಆರಂಭವಾಗಿರುವ ಮಕ್ಕಳ ಕಾಳಜಿ ತರಬೇತಿಯಲ್ಲಿ 20ಕ್ಕೂ ಅಧಿಕ ಮಂದಿ ಭಾವಹಿಸಿದ್ದಾರೆ. ಇದರಲ್ಲಿ ಯುವಕರು, ಮಧ್ಯ ವಯಸ್ಸಿನ ವ್ಯಕ್ತಿಗಳು ಹಾಗೂ ವೃದ್ಧರೂ ಸೇರಿದ್ದಾರೆ. ತರಬೇತಿಯಲ್ಲಿ ಭಾಗವಹಿಸಿರುವವರಿಗೆ ಪುಟ್ಟ ಮಕ್ಕಳ ರೀತಿಯಲ್ಲಿರುವ ಗೊಂಬೆಗಳನ್ನು ನೀಡಲಾಗಿದೆ. ಪುಟ್ಟ ಮಕ್ಕಳಿಗೆ ಡೈಪರ್ ಹಾಕುವುದು, ಸ್ನಾನ ಮಾಡಿಸುವುದು, ಬಟ್ಟೆ ಬದಲಾಯಿಸುವುದು, ತಲೆ ಬಾಚುವುದು ಸೇರಿದಂತೆ ಎಲ್ಲಾ ಕೆಲಸಗಳ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ. ಇನ್ನೂ ಕೆಲವರು ತರಬೇತಿ ಹಂತದಲ್ಲಿದ್ದಾರೆ ಎಂದು ತರಬೇತಿ ನೀಡುತ್ತಿರುವ ಮನಃಶಾಸ್ತ್ರ ಒಮರ್ ಜಿಮೆನೆಜ್ ಅವರು ಹೇಳಿದ್ದಾರೆ.
ಕೊಂಬಿಯಾದ ದಕ್ಷಿಣ ಬೊಗೋಟಾದಲ್ಲಿ ಆಯೋಜಿಸಿರುವ ಮಕ್ಕಳ ಕಾಳಜಿ ಕುರಿತ ಸೆಷನ್‌ನಲ್ಲಿ 26 ವರ್ಷ ಯುವಕನು ಕೂಡ ಭಾವಹಿಸಿ ಮಕ್ಕಳ ಕೇರಿಂಗ್ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಯಾವ ಯಾವ ಕೆಲಸವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಪ್ರಯೋಗಿಕವಾಗಿ ಕಲಿಸಿಕೊಡಲಾಗುತ್ತಿದೆ. ಮಕ್ಕಳ ಪೋಷಣೆ ಬಗ್ಗೆ ಕಲಿಯಲು ಮೂಲಭೂತ ಅಂಶಗಳ ಬಗ್ಗೆ ಕೇವಲ 30 ನಿಮಿಷಗಳ ಟೆಸ್ಟರ್ ಸ್ಲಾಟ್‌ಗಳನ್ನು ಮಾಡಲಾಗಿದೆ.
ಬೊಗೋಟಾದಲ್ಲಿ 2021 ರಿಂದ ಆಮೂಲಾಗ್ರ ಬದಲಾವಣೆಗಳನ್ನು ಕಾಣಲಾಗುತ್ತಿದೆ. ಪುರುಷರೇ ಮಕ್ಕಳನ್ನು ಸಿದ್ಧಗೊಳಿಸುವುದು, ಶಾಲೆಗೆ ಬಿಡುವುದು, ನಂತರ ಶಾಲೆಯಿಂದ ಮನೆಗೆ ಕರೆತರುವುದು, ಸೇರಿದಂತೆ ಮಕ್ಕಳ ಕಾಳಜಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಶೇಕಡಾ 20.1 ರಷ್ಟು ಪುರುಷರು ಹೀಗೆ ಮಕ್ಕಳ ಕೇರಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಮಾಣ ಹೆಚ್ಚಾಗುತ್ತಿದೆ.
ಪುರುಷರಿಗಾಗಿ ಮಕ್ಕಳ ಕೇರ್ ತರಬೇತಿ ಶಾಲೆಯನ್ನು ನಡೆಸುತ್ತಿರುವ ಶಿಕ್ಷಕ ಒಮರ್ ಜಿಮೆನೆಜ್ ಮಾತನಾಡಿ, ಪುರುಷಕರು ಮಕ್ಕಳ ಆರೈಕೆ ಹಾಗೂ ಮನೆ ಕೆಲಸದಲ್ಲಿ ನ್ಯಾಯಯುತ ಪಾಲವನ್ನು ಹೊಂದಬೇಕು. ಲಿಂಗ ಅಸಮಾನತೆಯನ್ನು ತೊಡೆದು ಹಾಕಲು ಈ ದೇಶದ ಮೂಲಭೂತವಾಗಿದೆ ಎಂದು ಹೇಳಿದ್ದಾರೆ. ಸದ್ಯ ಕೊಲಂಬೊದಲ್ಲಿ ಪುರುಷರು ಮಕ್ಕಳ ಪಾಲನೆ ಮಾಡುವುದು ಸಾಮಾನ್ಯವಾಗುತ್ತಿದೆ. ಇಲ್ಲಿಂದು ಪ್ರೇರಣೆ ಪಡೆದು ಬೇರೆ ದೇಶಗಳಿಗೂ ಇದು ವಿಸ್ತರಣೆಯಾಗಬೇಕು ಅನ್ನೋದು ಮಹಿಳೆಯರ ವಾದವಾಗಿದೆ.