logo
ಕನ್ನಡ ಸುದ್ದಿ  /  Lifestyle  /  Relationship Tips: This Common Relationship Mistake Don't Do It While Dating

Relationship tips: ಡೇಟಿಂಗ್‌ ಮಾಡುತ್ತಿದ್ದೀರಾ? ಈ ತಪ್ಪುಗಳಿಗೆ ಅವಕಾಶ ನೀಡದಿರಿ

HT Kannada Desk HT Kannada

Mar 04, 2023 04:20 PM IST

ಪ್ರೇಮಿಗಳು

    • Relationship tips: ಪ್ರೀತಿಯಾಗಲಿ, ಮದುವೆಯಾಗಲಿ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕು. ಆದರೆ ಕೆಲವೊಮ್ಮೆ ನಮ್ಮ ವರ್ತನೆ ಅಥವಾ ಮಾತುಗಳಿಂದ ಸಂಬಂಧ ಹಳಸಬಹುದು. ಡೇಟಿಂಗ್‌ ಸಮಯದಲ್ಲಿನ ಕೆಲವು ತಪ್ಪುಗಳು ಸಂಬಂಧಕ್ಕೆ ಎಳ್ಳು-ನೀರು ಬಿಡುವಂತೆ ಮಾಡಬಹುದು.
ಪ್ರೇಮಿಗಳು
ಪ್ರೇಮಿಗಳು

ಎಲ್ಲರೂ ಪ್ರೀತಿಸುತ್ತಾರೆ, ಆದರೆ ಪ್ರೀತಿಯನ್ನು ಉಳಿಸಿಕೊಳ್ಳುವುದು ಮಾತ್ರ ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಪ್ರೀತಿ, ಮದುವೆ ಯಾವುದೇ ಸಂಬಂಧವಾಗಲಿ, ನಾವು ಆ ಸಂಬಂಧವನ್ನು ಹೇಗೆ ಉಳಿಸಿಕೊಂಡು ಮುಂದುವರಿಯುತ್ತೇವೆ ಎಂಬುದು ಮುಖ್ಯವಾಗುತ್ತದೆ. ಕೆಲವೊಮ್ಮೆ ನಾವಾಡುವ ಮಾತು, ನಮ್ಮ ವರ್ತನೆ ಈ ಕಾರಣದಿಂದ ಪ್ರೀತಿ ಮಾಡಿದವರನ್ನು ಕಳೆದುಕೊಳ್ಳುತ್ತೇವೆ. ನಿಮ್ಮ ಪ್ರೀತಿ ಹೊಸದಾಗಿರಲಿ ಅಥವಾ ಕೆಲವು ತಿಂಗಳು ಅಥವಾ ವರ್ಷಗಳಿಂದ ನಿಮ್ಮ ನಡುವೆ ಪ್ರೀತಿ ಇರಲಿ ಆದರೆ ನಿಮ್ಮ ಕೆಲವೊಂದು ವರ್ತನೆ ಪ್ರೇಮಿಯನ್ನು ನಿಮ್ಮಿಂದ ದೂರವಾಗುವಂತೆ ಮಾಡಬಹುದು. ಡೇಟಿಂಗ್‌ ಸಮಯದಲ್ಲಿ ಅಥವಾ ಮದುವೆಯಾದ ಮೇಲೆ ನೀವು ಮಾಡುವ ಈ ಕೆಲವು ತಪ್ಪು ಅಭ್ಯಾಸಗಳು ಸಂಗಾತಿಯ ಮನಸ್ಸಿಗೆ ಬೇಸರ ಮೂಡಿಸಬಹುದು ಅಥವಾ ನಿಮ್ಮಿಂದ ಅವರನ್ನು ಶಾಶ್ವತವಾಗಿ ದೂರವಾಗಿಸಬಹುದು. ಹಾಗಾದರೆ ಅಂತಹ ತಪ್ಪುಗಳು ಯಾವುವು?

ಟ್ರೆಂಡಿಂಗ್​ ಸುದ್ದಿ

ನೈಸರ್ಗಿಕ ಮೌತ್ ಫ್ರೆಶ್ನರ್ ಲವಂಗ ಪ್ರತಿದಿನ ಸೇವಿಸುವುದರಿಂದ ಆಗುವ ಪ್ರಯೋಜನಗಳಿವು; ಇಲ್ಲಿದೆ ಮಾಹಿತಿ

ಪನೀರ್ ಅಸಲಿಯೋ, ನಕಲಿಯೋ ಬಳಸುವ ಮೊದಲೇ ಹೀಗೆ ಪತ್ತೆ ಮಾಡಿ; ಇಲ್ಲಿದೆ ನೋಡಿ ಸೂಪರ್ ಟಿಪ್ಸ್

Angry AI Girlfriend: ಹೆಂಡತಿ ಜೊತೆ ಜಗಳ ನಿಭಾಯಿಸೋದು ಕಷ್ಟ ಆಗ್ತೀದಿಯಾ; ಪುರುಷರ ನೆರವಿಗೆ ಬರ್ತೀದೆ ಎಐ

ಬೇಸಿಗೆ ರಜೆಯಲ್ಲಿ ಮನೆಯಲ್ಲಿದ್ದು ಏನಾದರೂ ಕೊಡು ಎಂದು ಪೀಡಿಸುವ ಮಕ್ಕಳ ಮನಗೆಲ್ಲಲು ಹಾಲುಬಾಯಿ ಮಾಡಿಕೊಡಿ, ನೀವೂ ಆಸ್ವಾದಿಸಿ

ಮಾಜಿಯ ಪ್ರೇಮಿಯ ಬಗ್ಗೆ ಮಾತನಾಡುವುದು

ಡೇಟಿಂಗ್‌ ಮಾಡಲು ಆರಂಭಿಸಿದಾಗ ಅಥವಾ ಪ್ರೀತಿಯ ಆರಂಭದಲ್ಲಿ ತಮ್ಮ ಕುರಿತ ಎಲ್ಲವನ್ನೂ ಪ್ರೇಮಿಯಲ್ಲಿ ಹೇಳಿಕೊಳ್ಳುವ ತವಕ ಇರುವುದು ನಿಜ. ಹಾಗಂತ ಎಲ್ಲವನ್ನೂ ಹೇಳಿಕೊಳ್ಳುವುದೂ ಸರಿಯಲ್ಲ. ಅದರಲ್ಲೂ ಮಾಜಿಯ ಪ್ರೇಮಿಯ ಬಗ್ಗೆ ಪದೇ ಪದೇ ಮಾತನಾಡುವುದು. ನಿಮ್ಮ ಹಾಲಿ ಪ್ರೇಮಿ ಎಷ್ಟೇ ಮುಂದುವರಿದ ಮನಃಸ್ಥಿತಿ ಹೊಂದಿದ್ದರೂ ಕೂಡ ಅತಿಯಾಗಿ ಮಾಜಿ ಪ್ರೇಮಿಯ ಬಗ್ಗೆ ಮಾತನಾಡುವುದನ್ನು ಅವರು ಸಹಿಸುವುದಿಲ್ಲ. ಅವರ ಮುಖ ಭಾವನೆಯಲ್ಲೇ ಅವರಿಗೆ ನೀವು ಮಾತನಾಡುತ್ತಿರುವ ವಿಷಯ ಇಷ್ಟವಾಗುತ್ತಿಲ್ಲ ಎನ್ನಿಸಿ ಈ ವಿಷಯವನ್ನು ಅಲ್ಲಿಗೆ ನಿಲ್ಲಿಸಬೇಕು. ಹಳೆಯ ಪ್ರೇಮಿಯ ಬಗ್ಗೆ ಹೇಳಲೇಬೇಕು ಎನ್ನಿಸಿದರೆ ಸಮಯ, ಸಂದರ್ಭ ನೋಡಿಕೊಂಡು ಹೇಳಿ.

ಸಂವಹನ ತೊಂದರೆ

ನೀವು ಮೊದಲ ಬಾರಿ ಪ್ರೇಮಿಯ ಜೊತೆ ಡೇಟಿಂಗ್‌ ಹೋಗಿರಬಹುದು ಅಥವಾ ನಿಮ್ಮದು ಹಳೆಯ ಭೇಟಿ ಆಗಿರಬಹುದು, ಇಬ್ಬರ ನಡುವೆ ಸಂವಹನ ಕೌಶಲ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನೀವೊಬ್ಬರೆ ಮಾತನಾಡುತ್ತಾ ಹೋಗುವುದು ಅಥವಾ ಸಂಗಾತಿಯ ಮಾತುಗಳನ್ನು ಕೇಳಿಸಿಕೊಳ್ಳದೆ ಇರುವುದು ಕೂಡ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು.

ನಿಮ್ಮ ತಪ್ಪುಗಳ ಬಗ್ಗೆಯೂ ಅರಿವು ಇರಲಿ

ಪ್ರಬುದ್ಧ ಸಂಬಂಧದಲ್ಲಿ ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿತ್ವವೇ ಹೆಚ್ಚು ಗಣನೆಗೆ ಬರುತ್ತದೆ. ನನ್ನಿಂದ ತಪ್ಪಾಗುವುದಿಲ್ಲ ಅಥವಾ ನನ್ನಿಂದ ತಪ್ಪಾಗಲು ಸಾಧ್ಯವೇ ಇಲ್ಲ ಎನ್ನುವ ಅಹಂಕಾರದ ಭಾವ ಸಂಬಂಧದಲ್ಲಿ ಇರಬಾರದು. ಪ್ರೇಮಿಯಾದವರು ಸಂಗಾತಿಯ ತಪ್ಪನ್ನು ಎತ್ತಿ ತೋರಿಸುವ ಮೊದಲು ತಮ್ಮ ತಪ್ಪಿನ ಬಗ್ಗೆಯೂ ಅರಿತಿರಬೇಕು.

ಸಂಬಂಧದಲ್ಲಿ ಮೋಸ

ಪ್ರೇಮಿಯಾಗಿರಲಿ, ಗಂಡ-ಹೆಂಡತಿಯಾಗಿರಲಿ ಅವರಿಗೆ ಅರಿಯದಂತೆ ಮೋಸ ಮಾಡುವುದು, ಎದುರಿಗೆ ಚೆನ್ನಾಗಿದ್ದು ಹಿಂದಿನಿಂದ ಬೇರೆಯದ್ದೇ ಸಂಬಂಧದಲ್ಲಿ ತೊಡಗುವುದು ಇದನ್ನು ಮಾಡಬಾರದು. ಇದರಿಂದ ಯಾರನ್ನೂ ಮೆಚ್ಚಿಸಲು ಆಗುವುದಿಲ್ಲ, ಒಂದು ವೇಳೆ ಆದರೂ ಒಂದಿಷ್ಟು ದಿನಗಳ ನಂತರ ನಿಮ್ಮ ನಾಟಕಕ್ಕೆ ತೆರೆ ಬೀಳಬಹುದು.

ಯಾವಾಗಲೂ ದೂರುವುದು

ನಿಮ್ಮ ಹಾಗೂ ನಿಮ್ಮ ಪ್ರೇಮಿಯ ಅಭಿಪ್ರಾಯ ಭಿನ್ನವಾಗಿರಬಹುದು. ಹಾಗಂತ ಅದು ತಪ್ಪಲ್ಲ. ಅವರವರ ಅಭಿಪ್ರಾಯ ಅವರದ್ದು, ಆದರೆ ಆ ಅಭಿಪ್ರಾಯವನ್ನು ಪದೇ ಪದೇ ದೂರುವುದು, ಕೆಣಕುವುದು ಸರಿಯಲ್ಲ. ನಿಮ್ಮ ಸಂಗಾತಿಯಿಂದ ನಿಮಗೆ ಏನಾದರೂ ಬೇಕಿದ್ದರೆ ನೇರವಾಗಿ ಕೇಳಿ, ಅದನ್ನು ಹೊರತು ಪಡಿಸಿ ಆರ್ಡರ್‌ ಮಾಡುವ ರೀತಿ ಬೇಡಿಕೆ ಇಡಬೇಡಿ.

ವೈಯಕ್ತಿಕ ಬದುಕಿಗೆ ಆದ್ಯತೆ ನೀಡಿ

ಪ್ರೀತಿ ಮಾಡಿದ ಅಥವಾ ಮದುವೆಯಾದ ಮೇಲೆ ಅವನು ಅಥವಾ ಅವಳು ನನ್ನವಳು, ನನಗೆ ಮಾತ್ರ ಸ್ವಂತ, ಅವರ ಸಮಯವೆಲ್ಲಾ ನಮಗೆ ನೀಡಬೇಕು ಎನ್ನುವ ಹುಂಬತನ ತೋರುವುದು ಸರಿಯಲ್ಲ. ಅವರಿಗೆ ಅವರದ್ದೇ ಆದ ವೈಯಕ್ತಿಕ ಜೀವನ ಹಾಗೂ ಭಾವನೆಗಳಿರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಪ್ರೀತಿಯನ್ನು ಮುಂದೆ ಸಾಗಿಸಿಕೊಂಡು ಹೋಗುವ ಜೊತೆಗೆ ಅವರ ಏಕಾಂತಕ್ಕೂ ಗೌರವ ಕೊಡಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು