logo
ಕನ್ನಡ ಸುದ್ದಿ  /  Lifestyle  /  Skin Scrubbing Tips While Bathing

Skin Scrubbing Tips: ಸ್ನಾನ ಮಾಡುವಾಗ ಈ ಅಭ್ಯಾಸಗಳನ್ನು ತಪ್ಪಿಸಿ...ಇಲ್ಲವಾದರೆ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚು

HT Kannada Desk HT Kannada

Nov 14, 2022 11:24 PM IST

ಚರ್ಮದ ರಕ್ಷಣೆ

    • ಚರ್ಮವು ಬಹಳ ಸೂಷ್ಮವಾಗಿದ್ದು ಚರ್ಮವನ್ನು ಬಹಳ ಸ್ಕ್ರಬ್‌ ಮಾಡಿದರೆ ದದ್ದು, ಸನ್ ಬರ್ನ್ , ಇನ್‌ಫೆಕ್ಷನ್‌ನಂತಹ ಸಮಸ್ಯೆಗಳು ಬರುತ್ತವೆ. ಹೀಗೆ ಮಾಡುವುದರಿಂದ ಹೈಪರ್‌ ಪಿಗ್ಮೆಂಟೇಷನ್‌ಗೆ ಕೂಡಾ ಕಾರಣವಾಗಬಹುದು.
ಚರ್ಮದ ರಕ್ಷಣೆ
ಚರ್ಮದ ರಕ್ಷಣೆ (PC: Pixaby)

ಸ್ನಾನ ಮಾಡುವಾಗ ಕೆಲವರು ಕಲ್ಲಿನಿಂದ ಬಹಳ ಬಲವಾಗಿ ಚರ್ಮವನ್ನು ಉಜ್ಜುತ್ತಾರೆ, ಕೆಲವರು ಚರ್ಮವನ್ನು ಉಜ್ಜಲು ಬ್ರಷ್‌ ಬಳಸುತ್ತಾರೆ. ಒಂದು ವೇಳೆ ಬೇಗ ಸ್ನಾನ ಮುಗಿಸಿ ಬಂದರೆ, ಸರಿಯಾಗಿ ಸ್ನಾನ ಮಾಡಿದ್ದೀಯೋ ಇಲ್ಲವೋ ಎಂದು ಕೇಳುವವರನ್ನೂ ನಾವು ನೋಡಿದ್ದೇವೆ. ಆದರೆ ಗಂಟೆ ಗಟ್ಟಲೆ ಕುಳಿತು, ರಭಸವಾಗಿ ಚರ್ಮವನ್ನು ಉಜ್ಜುವುದರಿಂದ ಸಮಸ್ಯೆ ಹೆಚ್ಚುವುದೇ ಹೊರತು, ಕಡಿಮೆಯಾಗುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ಭಾರಿ ಬಿಸಿಲೆಂದು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳುತ್ತಿದ್ದೀರಾ? ತೂಕ ಏರಿಕೆ ಸಮಸ್ಯೆಗೆ ಇದೂ ಒಂದು ಕಾರಣ

Mango Lassi: ಬೇಸಿಗೆಯ ದಾಹ ನೀಗಿಸುವ ಮ್ಯಾಂಗೊ ಲಸ್ಸಿ ಪರ್ಫೆಕ್ಟ್ ರುಚಿ ಬರಲು ಈ ರೀತಿ ತಯಾರಿಸಿ

ಕೆಲವೊಂದು ವ್ಯಕ್ತಿಗಳತ್ತ ಬೇಗ ಆಕರ್ಷಿತರಾಗುವುದೇಕೆ? ಸಂಬಂಧ ಬೆಸೆಯುವ ಮುನ್ನ ಗಮನದಲ್ಲಿರಲಿ ಈ ವಿಚಾರ

Summer Tips: ಬೇಸಿಗೆಯಲ್ಲಿ ಅಡುಗೆಮನೆಯನ್ನು ಕೂಲ್ ಆಗಿ ಇಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ 6 ಸಿಂಪಲ್‌ ಟಿಪ್ಸ್

ಚರ್ಮವನ್ನು ಗಟ್ಟಿಯಾಗಿ ಉಜ್ಜಿದರೆ, ಅಥವಾ ಒರೆಸುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಕೆಲವರು ಚರ್ಮವನ್ನು ಸ್ಕ್ರಬ್ ಮಾಡಲು ಲೂಫಾ ಮತ್ತು ಸ್ನಾನದ ಸ್ಕ್ರಬ್ ಬಳಸುತ್ತಾರೆ. ಈ ಅಭ್ಯಾಸ ನಮ್ಮ ಚರ್ಮಕ್ಕೆ ಒಳ್ಳೆಯದಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ದೇಹದಲ್ಲಿ ಟ್ಯಾನ್‌ ಆಗಿರುವ ಪ್ರದೇಶವನ್ನು ನಾವು ಹೆಚ್ಚಾಗಿ ಉಜ್ಜುತ್ತೇವೆ. ಹೀಗೆ ಮಾಡುವುದರಿಂದ ಟ್ಯಾನ್‌ ಹೋಗುವುದರ ಬದಲಿಗೆ ಚರ್ಮ ಮತ್ತಷ್ಟು ಹಾಳಾಗುತ್ತದೆ. ನಿಮ್ಮ ಕುತ್ತಿಗೆ, ಮೊಣಕೈಗಳು ಮತ್ತು ಮೊಣಕಾಲುಗಳನ್ನು ಸ್ಕ್ರಬ್ ಮಾಡಿದರೆ ಅಲ್ಲಿ ರಾಶಸ್‌ ಉಂಟಾಗಿ ಚರ್ಮ ಮತ್ತಷ್ಟು ಅಸಹ್ಯವಾಗಿ ಕಾಣುತ್ತದೆ.

ಸ್ಕ್ರಬ್ಬಿಂಗ್ ಮಾಡುವುದರಿಂದ ಚರ್ಮದ ಪದರ ಹಾನಿಯಾಗುತ್ತದೆ. ಚರ್ಮವು ಬಹಳ ಸೂಷ್ಮವಾಗಿದ್ದು ಚರ್ಮವನ್ನು ಬಹಳ ಸ್ಕ್ರಬ್‌ ಮಾಡಿದರೆ ದದ್ದು, ಸನ್ ಬರ್ನ್ , ಇನ್‌ಫೆಕ್ಷನ್‌ನಂತಹ ಸಮಸ್ಯೆಗಳು ಬರುತ್ತವೆ. ಹೀಗೆ ಮಾಡುವುದರಿಂದ ಹೈಪರ್‌ ಪಿಗ್ಮೆಂಟೇಷನ್‌ಗೆ ಕೂಡಾ ಕಾರಣವಾಗಬಹುದು. ಇದರಲ್ಲಿ ಅಮಿಲಾಯ್ಡ್ ಎಂಬ ಪ್ರೊಟೀನ್ ಪಿಗ್ಮೆಂಟ್ ಕ್ಷೀಣಿಸಲು ಪ್ರಾರಂಭಿಸುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಅತಿಯಾದ ಎಫ್ಫೋಲಿಯೇಶನ್, ಲೂಫಾ ಮತ್ತು ಸ್ಕ್ರಬ್ಬಿಂಗ್ ತಪ್ಪಿಸುವುದು ಉತ್ತಮ. ಒಂದು ವೇಳೆ ಮಾಡಲೇಬೇಕಾಗಿ ಬಂದರೆ ವಾರಕ್ಕೆ ಅಥವಾ ಹತ್ತು ದಿನಗಳಿಗೆ ಒಮ್ಮೆ ಸ್ಕ್ರಬಿಂಗ್‌ ಮಾಡಿ. ಆಗಲೂ ಕೂಡಾ ಬಹಳ ನಿಧಾನವಾಗಿ ಸ್ಕ್ರಬ್‌ ಮಾಡಬೇಕು.

ಮೊಣ ಕಾಲು, ಮೊಣಕೈ ಕಪ್ಪನ್ನು ಕಡಿಮೆ ಮಾಡಲು ಪರಿಹಾರವಿದೆ. ಪ್ರತಿದಿನ ಬೆಳಗ್ಗೆ SPF 50 ಸನ್‌ಸ್ಕ್ರೀನ್ ಹಚ್ಚಿ. ಟ್ಯಾನ್‌ ಉಂಟಾಗಬಾರದು ಎಂದಾದರೆ ಮೊಣ ಕಾಲುಗಳು ಮತ್ತು ಮೊಣಕೈಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಡಿ. ಮೊಣಕೈ ಮತ್ತು ಮೊಣಕಾಲುಗಳಿಗೆ ಆಗ್ಗಾಗ್ಗೆ ಮಸಾಜ್ ಮಾಡಿ. ನಿಮ್ಮ ಆಹಾರದಲ್ಲಿ ವಿಟಮಿನ್-ಎ ಮತ್ತು ವಿಟಮಿನ್-ಇ ಜೊತೆಗೆ ಹೆಚ್ಚು ಪೋಷಕಾಂಶವಿರುವ ಆಹಾರ ಸೇವಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು