logo
ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ಬಿಸಿಲಿನಿಂದ ಚರ್ಮ, ಕೂದಲು ಹಾನಿ ಆಗ್ತಿದ್ಯಾ? ಸುಲಭವಾಗಿ ದೊರೆಯುವ ಈ ಮನೆಮದ್ದು ಬಳಸಿ ಸಮಸ್ಯೆಯಿಂದ ಹೊರಬನ್ನಿ

Summer Tips: ಬಿಸಿಲಿನಿಂದ ಚರ್ಮ, ಕೂದಲು ಹಾನಿ ಆಗ್ತಿದ್ಯಾ? ಸುಲಭವಾಗಿ ದೊರೆಯುವ ಈ ಮನೆಮದ್ದು ಬಳಸಿ ಸಮಸ್ಯೆಯಿಂದ ಹೊರಬನ್ನಿ

Rakshitha Sowmya HT Kannada

Mar 26, 2024 12:47 PM IST

ಬೇಸಿಗೆಯಲ್ಲಿ ಚರ್ಮ, ಕೂದಲಿನ ಆರೈಕೆ

  • Summer Tips: ಬೇಸಿಗೆಯಲ್ಲಿ ಚರ್ಮ ಮತ್ತು ಕೂದಲಿಗೆ ಹಾನಿ ಆಗುತ್ತದೆ ಅನ್ನೋದು ಎಲ್ಲರಿಗೂ ಕಾಡುವ ಭಯ. ಹೊರಗೆ ಹೋದರೆ ಉರಿ ಬಿಸಿಲಿಗೆ ಕೂದಲು, ಚರ್ಮ ಹಾಳಾಗುತ್ತದೆ. ಎಷ್ಟೇ ಕಾಳಜಿ ವಹಿಸಿದರೂ ಚರ್ಮದ ಕಾಂತಿ ಹಾಳಾಗುತ್ತದೆ. ಬಿಸಿಲಿಗೆ ಚರ್ಮ ಟ್ಯಾನ್‌ ಆಗುತ್ತದೆ. ಈ ಸಮಸ್ಯೆಗೆ ಮನೆಯಲ್ಲೇ ಕೆಲವೊಂದು ಔಷಧಗಳನ್ನು ತಯಾರಿಸಿಕೊಳ್ಳಬಹುದು.

ಬೇಸಿಗೆಯಲ್ಲಿ ಚರ್ಮ, ಕೂದಲಿನ ಆರೈಕೆ
ಬೇಸಿಗೆಯಲ್ಲಿ ಚರ್ಮ, ಕೂದಲಿನ ಆರೈಕೆ (PC: Pixabay)

Skin Care in Summer: ಬೇಸಿಗೆ ಖಂಡಿತವಾಗಿಯೂ ಚರ್ಮ ಮತ್ತು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಸ್ವಲ್ಪ ಹೊತ್ತು ಹೊರಗೆ ಹೋದರೂ. ಸೂರ್ಯನು ತನ್ನ ಕೋಪವನ್ನು ನಮ್ಮ ಮೇಲೆ ತೋರಿಸುತ್ತಾನೆ. ಇದರಿಂದ ಚರ್ಮ ಕಪ್ಪಾಗುತ್ತದೆ. ಕೂದಲು ಕೂಡ ಹಾಳಾಗುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಚರ್ಮ ಮತ್ತು ಕೂದಲನ್ನು ಹಾನಿಗೊಳಿಸುತ್ತವೆ. ಸನ್‌ಸ್ಕ್ರೀನ್‌ನಿಂದ ಸೂರ್ಯನ ಹಾನಿಯನ್ನು ಕಡಿಮೆ ಮಾಡಬಹುದು. ಆದರೆ ಸನ್ ಬರ್ನ್ ತಡೆಯಲು ನೀವು ಬಳಸಬಹುದಾದ ನೈಸರ್ಗಿಕ ಪರಿಹಾರಗಳು ಇನ್ನಷ್ಟು ಇದೆ. ನಿಮ್ಮ ಚರ್ಮ ಮತ್ತು ಕೂದಲನ್ನು ಸೂರ್ಯನಿಂದ ಸುರಕ್ಷಿತವಾಗಿರಿಸಲು ಪ್ರಕೃತಿಯು ಸಾಕಷ್ಟು ಮನೆಮದ್ದುಗಳನ್ನು ನಿಮಗೆ ಒದಗಿಸಿದೆ.

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

ಚರ್ಮವನ್ನು ರಕ್ಷಿಸಲು ಮನೆಮದ್ದು

ಅಲೋವೆರಾ: ಚರ್ಮದ ಬಹುತೇಕ ಸಮಸ್ಯೆಗಳಿಗೆ ಅಲೊವೇರಾ ಉತ್ತಮ ಔಷಧ. ಒಂದು ವೇಳೆ ನೀವು ಮನೆಯಲ್ಲೇ ಅಲೊವೆರಾ ಬೆಳೆಸಿದರೆ ಇನ್ನೂ ಉತ್ತಮ. ಹೊರಗಿನಿಂದ ಬಂದ ನಂತರ ತಾಜಾ ಅಲೋವೆರಾ ಜೆಲನ್ನು ಸೂರ್ಯನ ಬೆಳಕಿಗೆ ಒಡ್ಡಿದ ಪ್ರದೇಶಗಳಿಗೆ ಹಚ್ಚಿನ ಮಸಾಜ್‌ ಮಾಡಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಅಲೊವೇರಾದಲ್ಲಿ ಚರ್ಮವನ್ನು ರಿಪೇರಿ ಮಾಡುವ ಅನೇಕ ಗುಣಗಳಿರುತ್ತವೆ. ಇದು ಚರ್ಮಕ್ಕೆ ತಾಜಾ ಅನುಭವ ನೀಡುತ್ತದೆ. ಜೊತೆಗೆ ಊತ ಮತ್ತು ಚರ್ಮ ಕೆಂಪಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ

ಇದಕ್ಕೆ ನೀವು ಒಳ್ಳೆ ಕಂಪನಿಯ ಗ್ರೀನ್‌ ಟೀ ಬಳಸಿ. ಹತ್ತಿ ಪ್ಯಾಡ್ ಬಳಸಿ ನಿಮ್ಮ ಚರ್ಮಕ್ಕೆ ಗ್ರೀನ್‌ ಟೀ ಹಚ್ಚಿ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಿಮ್ಮ ಸೌಂದರ್ಯಕ್ಕೆ ಉಪಯುಕ್ತವಾಗಿದೆ.

ತೆಂಗಿನ ಎಣ್ಣೆ

ತೆಂಗಿನೆಣ್ಣೆಯು ನೈಸರ್ಗಿಕ ಎಸ್‌ಪಿಎಫ್‌ ಗುಣಗಳನ್ನು ಹೊಂದಿದೆ. ಹೊರಗಡೆ ಸೂರ್ಯನ ಬೆಳಕಿಗೆ ಹೋಗುವ ಮುನ್ನ ಒಂದೆರಡು ಹನಿ ತೆಂಗಿನೆಣ್ಣೆಯನ್ನು ನಿಮ್ಮ ಹಸ್ತಗಳಿಗೆ ಉಜ್ಜಿಕೊಂಡು ಮುಖಕ್ಕೆ ಹಚ್ಚಿ ನಂತರ ಟ್ಯಾಪ್‌ ಮಾಡಿ.

ಸೌತೆಕಾಯಿ

ಸೌತೆಕಾಯಿಗೆ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿವೆ. ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮವನ್ನು ರಕ್ಷಿಸಲು ಕೂಡಾ ಇದು ಸಹಕಾರಿ. ಬಿಸಿಲಿನಿಂದ ಹೊರ ಹೋಗಿ ಬಂದ ನಂತರ ಸೌತೆಕಾಯಿ ರಸ ಅಥವಾ ಸ್ಲೈಸ್‌ನಿಂದ ನಿಮ್ಮ ಮುಖವನ್ನು ಮಸಾಜ್‌ ಮಾಡಿ ಸ್ವಲ್ಪ ಸಮಯದ ನಂತರ ಸ್ವಚ್ಛ ಮಾಡಿ.

ಮೊಸರು

ಸೂರ್ಯನಿಂದ ಉಂಟಾದ ಟ್ಯಾನ್‌ ತೆಗೆಯಲು ಮೊಸರನನು ನಿಮ್ಮ ತ್ವಚೆಗೆ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸೂರ್ಯನಿಂದ ಹಾನಿಗೊಳಗಾದ ಚರ್ಮವನ್ನು ಶಮನಗೊಳಿಸಲು ಮತ್ತು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ.

ಕೂದಲನ್ನು ರಕ್ಷಿಸಲು ಸಲಹೆಗಳು

ತೆಂಗಿನ ಎಣ್ಣೆ

ಸೂರ್ಯನ ಬೆಳಕಿಗೆ ಹೋಗುವ ಮೊದಲು ನಿಮ್ಮ ಕೂದಲಿಗೆ ತೆಂಗಿನ ಎಣ್ಣೆಯನ್ನು ಅನ್ವಯಿಸಿ. ಇದು ಸೂರ್ಯನ ಪ್ರಭಾವದಿಂದ ನಿಮ್ಮ ಕೂದಲನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಜೇನುತುಪ್ಪ ಮತ್ತು ಆಲಿವ್ ಎಣ್ಣೆಯ ಮಾಸ್ಕ್‌

ಜೇನುತುಪ್ಪ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ. 30 ನಿಮಿಷಗಳ ಕಾಲ ಹಾಗೇ ಬಿಡಿ. ಸೂರ್ಯನ ಹಾನಿಗೊಳಗಾದ ಕೂದಲಿಗೆ ತೇವಾಂಶ ಮತ್ತು ಪೋಷಣೆಯನ್ನು ಒದಗಿಸಲು ಇದು ಸಹಾಯ ಮಾಡುತ್ತದೆ.

ಆಪಲ್ ಸೈಡರ್ ವಿನೆಗರ್

ಸೂರ್ಯನ ಬೆಳಕಿಗೆ ಒಡ್ಡಿಕೊಂಡ ನಂತರ ಆಪಲ್ ಸೈಡರ್ ವಿನೆಗರ್‌ ಮಿಕ್ಸ್‌ ಮಾಡಿದ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ಇದು ನಿಮ್ಮ ನೆತ್ತಿ ಮತ್ತು ಕೂದಲಿನ ಪಿಹೆಚ್‌ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.

ಎಗ್ ಮಾಸ್ಕ್

ಒಂದು ಚಮಚ ಆಲಿವ್ ಎಣ್ಣೆಯನ್ನು ಮೊಟ್ಟೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. 20-30 ನಿಮಿಷಗಳ ಕಾಲ ಹಾಗೇ ಬಿಡಿ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಸೂರ್ಯನಿಂದ ಹಾನಿಗೊಳಗಾದ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಕನಿಷ್ಠ SPF 30 ಇರುವ ಸನ್‌ಸ್ಕ್ರೀನ್ ಅನ್ನು ಬಳಸಿ. ಹೊರಗೆ ಹೋದಾಗ ಆದಷ್ಟು ನೆರಳಿನಲ್ಲೇ ಇರಲು ಪ್ರಯತ್ನಿಸಿ. ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ. ಸಾಧ್ಯವಾದಷ್ಟು ಕ್ಯಾಪ್‌ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ, ಛತ್ರಿ ಹಿಡಿದು ಹೋಗುವುದನ್ನು ರೂಢಿಸಿಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು