logo
ಕನ್ನಡ ಸುದ್ದಿ  /  ಜೀವನಶೈಲಿ  /  Google Photos Magic Eraser: ಏನಿದು ಗೂಗಲ್ ಫೋಟೊಸ್‌ ಮ್ಯಾಜಿಕ್ ಎರೇಸರ್; ಇದನ್ನ ಬಳಸುವ ವಿಧಾನ ತಿಳಿಯಿರಿ

Google Photos Magic Eraser: ಏನಿದು ಗೂಗಲ್ ಫೋಟೊಸ್‌ ಮ್ಯಾಜಿಕ್ ಎರೇಸರ್; ಇದನ್ನ ಬಳಸುವ ವಿಧಾನ ತಿಳಿಯಿರಿ

Raghavendra M Y HT Kannada

Feb 26, 2024 11:50 AM IST

ಗೂಗಲ್ ಫೋಟೊಸ್‌ನಲ್ಲಿ ಮ್ಯಾಜಿಕ್ ಎರೇಸರ್‌ನಿಂದ ಏನೆಲ್ಲಾ ಮಾಡಬಹುದು. ಬೇಡವಾದದ್ದನ್ನು ಫೋಟೂಸ್ ನಲ್ಲಿ ತೆಗೆಯುವುದು ಹೇಗೆ ಅನ್ನೋದನ್ನ ತಿಳಿಯಿರಿ.

    • Google Photos Magic Eraser: ಗೂಗಲ್ ಫೋಟೊಸ್‌ನಲ್ಲಿ ಮ್ಯಾಜಿಕ್ ಎರೇಸರ್‌ ಅನ್ನು ಹೇಗೆ ಬಳಸುವುದು ಎಂಬುದರ ವಿಧಾನವನ್ನು ತಿಳಿಯಿರಿ. 
ಗೂಗಲ್ ಫೋಟೊಸ್‌ನಲ್ಲಿ ಮ್ಯಾಜಿಕ್ ಎರೇಸರ್‌ನಿಂದ ಏನೆಲ್ಲಾ ಮಾಡಬಹುದು. ಬೇಡವಾದದ್ದನ್ನು ಫೋಟೂಸ್ ನಲ್ಲಿ ತೆಗೆಯುವುದು ಹೇಗೆ ಅನ್ನೋದನ್ನ ತಿಳಿಯಿರಿ.
ಗೂಗಲ್ ಫೋಟೊಸ್‌ನಲ್ಲಿ ಮ್ಯಾಜಿಕ್ ಎರೇಸರ್‌ನಿಂದ ಏನೆಲ್ಲಾ ಮಾಡಬಹುದು. ಬೇಡವಾದದ್ದನ್ನು ಫೋಟೂಸ್ ನಲ್ಲಿ ತೆಗೆಯುವುದು ಹೇಗೆ ಅನ್ನೋದನ್ನ ತಿಳಿಯಿರಿ.

Google Photos Magic Eraser: ನೀವೇನಾದರೂ ನಿಮ್ಮ ಫೋಟೊಗಳಲ್ಲಿ ಬೇಡವಾದದ್ದನ್ನ ತೆಗೆಯಲು ಸಾಕಷ್ಟು ಪ್ರಯತ್ನ ಮಾಡಿರುತ್ತೀರಿ. ಆದರೆ ಅದು ಸಾಧ್ಯವಾಗಿರುವುದಿಲ್ಲ. ಇದೀಗ ಗೂಗಲ್ ಇಂತಹ ಅನಪೇಕ್ಷಿತವಾದದನ್ನು ಅತಿ ಸುಲಭವಾಗಿ ತೆಗೆದುಹಾಕಲು ಮ್ಯಾಜಿಕ್ ಎರೇಸರ್‌ ಅನ್ನು ಪರಿಚಯಿಸಿದೆ. ಈ ಮೊದಲು ಗೂಗಲ್ ಪಿಕ್ಸಲ್‌ನಿಂದ ಮಾತ್ರ ಇದು ಸಾಧ್ಯವಾಗಿತ್ತು. ಮ್ಯಾಜಿಕ್ ಎರೇಸರ್ ಸ್ಮಾರ್ಟ್‌ಫೋನ್‌ನಲ್ಲಿ ಬರುವ ವೈಶಿಷ್ಟ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಆಂಡ್ರಾಯ್ಡ್, ಐಫೋನ್ ಹಾಗೂ ಇತರೆ ಸ್ಮಾರ್ಟ್‌ಫೋನ್ ಬಳಕೆದಾರರು ನಿರ್ದಿಷ್ಟ ಮೊತ್ತವನ್ನು ನೀಡಿ ಗೂಗಲ್ ಫೋಟೊಸ್ ಮ್ಯಾಜಿಕ್ ಎರೇಸರ್ ಅನ್ನು ಪಡೆಯಬಹುದಾಗಿದೆ. 2021ರಲ್ಲೇ ಇದನ್ನು ಬಿಡುಗಡೆ ಮಾಡಲಾಗಿತ್ತು. ಫೋಟೊದಲ್ಲಿ ನಿಮಗೆ ಬೇಡವಾದ ವಸ್ತುಗಳು, ವ್ಯಕ್ತಿಗಳು ಹಾಗೂ ಇತರೆ ಯಾವುದೇ ಅನಪೇಕ್ಷಿತವಾದದ್ದನ್ನು ಪತ್ತೆ ಮಾಡಿ, ನಿಮಗದು ಬೇಡವಾದರೆ ತೆಗೆದು ಹಾಕುತ್ತದೆ. ಒಂದು ವೇಳೆ ಬೇಡವಾದದ್ದನ್ನು ತೆಗೆದು ಹಾಕುವಾದ ಅಲ್ಪಸ್ವಲ್ಪ ಉಳಿದುಕೊಂಡರೂ ಅದನ್ನು ಪತ್ತೆ ಹಚ್ಚುತ್ತದೆ. ಮ್ಯಾಜಿಕ್ ಎರೇಸರ್ ಬಳಸಿಕೊಂಡು ಫೋಟೊವನ್ನು ಸುಂದರವಾಗಿ ಹಾಗೂ ನಿಮಗೆ ಹೇಗೆ ಬೇಕೋ ಹಾಗೆ ಎಡಿಟ್ ಮಾಡಿಕೊಳ್ಳಬಹುದು.

ಗೂಗಲ್ ಫೋಟೊಸ್‌ನಲ್ಲಿ ಮ್ಯಾಜಿಕ್ ಎರೇಸರ್ ಬಳಸುವ ವಿಧಾನ

ಹಂತ 1: ಗೂಗಲ್ ಫೋಟೊಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಹಂತ 2: ಎಡಿಟ್ ಮಾಡಬೇಕಾದ ಫೋಟೊವನ್ನು ಆಯ್ಕೆ ಮಾಡಿಕೊಳ್ಳಿ, ಯಾವು ವಿಷಯಕ್ಕಾಗಿ ಎಂಬುದನ್ನ ಸ್ಪಷ್ಟಪಿಸಿ

ಹಂತ 3: ಪರದೆಯ ಕೆಳಭಾಗದಲ್ಲಿ ಎಡಿಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಟೂಲ್ಸ್ ವಿಭಾಗದಲ್ಲಿ ಮ್ಯಾಜಿಕ್ ಎರೇಸರ್ ಆಯ್ಕೆ ಮಾಡಿ

ಹಂತ 4: ಫೋಟೊವನ್ನು ಸ್ಕ್ಯಾನ್ ಮಾಡಿ ಅದರಲ್ಲಿ ಬೇಡವಾದನ್ನ ಅಳಿಸಬೇಕಿರುವುದನ್ನು ಸೂಚಿಸಿ. ತೆಗೆದುಹಾಕಬೇಕಿರುವುದನ್ನ ಹೈಲೈಟ್ ಮಾಡಿ

ಹಂತ 5: ಅಳಿಸುವ ಬದಲು ಮರೆಮಾಚುವಿಕೆಯನ್ನು ಆಯ್ಕೆ ಮಾಡಿ. ಬ್ಯಾಗ್ರೌಂಡ್‌ಗೆ ಹೊಂದಾಣಿಕೆಯಾಗುವಂತೆ ಬಣ್ಣವನ್ನು ಬದಲಾಯಿಸಿ

ಹಂತ 6: ಗೂಗಲ್ ಒನ್‌ಗೆ ಚಂದಾದಾರರಾಗುವ ಮೂಲಕ ಗೂಗಲ್ ಪಿಕ್ಚರ್ಸ್‌ನಲ್ಲಿರುವ ಈ ವೈಶಿಷ್ಟ್ಯವನ್ನು ನೀವು ಕೂಡ ಪಡೆಯಬಹುದು.

ಗೂಗಲ್ ಫೋಟೊಸ್ ಮ್ಯಾಜಿಕ್ ಎರೇಸರ್ ಸೌಲಭ್ಯ ಪಡೆಯಲು ಇಂತಿಷ್ಟು ಹಣ ಪಾವತಿಸಬೇಕಾಗಿದೆ. ಮಾರ್ಚ್‌ನಲ್ಲಿ ಗೂಗಲ್ ಒನ್‌ನಲ್ಲಿ ಉಚಿತವಾಗಿ ಪ್ರಯೋಗಕ್ಕೆ ಅವಕಾಶ ಮಾಡಿಕೊಡಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು