logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಚಾಲೆಂಜ್‌, ಈ ಗಣಿತ ಸೂತ್ರಕ್ಕೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ

Brain Teaser: ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಚಾಲೆಂಜ್‌, ಈ ಗಣಿತ ಸೂತ್ರಕ್ಕೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ

Reshma HT Kannada

Nov 18, 2024 11:02 AM IST

google News

ಬ್ರೈನ್ ಟೀಸರ್

    • ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಗಣಿತದ ಸೂತ್ರವಿರುವ ಬ್ರೈನ್ ಟೀಸರ್‌ವೊಂದನ್ನು ಪೋಸ್ಟ್ ಮಾಡಲಾಗಿದೆ. ಈ ಸೂತ್ರಕ್ಕೆ 10 ಸೆಕೆಂಡ್‌ನಲ್ಲಿ ಸರಿಯಾದ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು. ಗಣಿತದಲ್ಲಿ ನೀವು ಪಂಟರಾದ್ರೆ ಈ ಬ್ರೈನ್ ಟೀಸರ್‌ಗೆ ಸರಿಯಾದ ಹೇಳಿ, ನಿಮ್ಮ ಜಾಣತನ ಸಾಬೀತುಪಡಿಸಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ನಮ್ಮಲ್ಲಿ ಹಲವರಿಗೆ ಗಣಿತ ಕಬ್ಬಿಣದ ಕಡಲೆ. ಗಣಿತದ ಫಾರ್ಮುಲಾ, ಸೂತ್ರಗಳು ಮೆದುಳಿಗೆ ಹುಳ ಬಿಟ್ಟಂತೆ ಅನ್ನಿಸೋದು ಸುಳ್ಳಲ್ಲ. ಲಾಜಿಕಲ್ ಥಿಕಿಂಗ್ ಜೊತೆಗೆ ಬೌದ್ಧಿಕವಾಗಿಯೂ ನೀವು ಸಾಕಷ್ಟು ಯೋಚನೆ ಮಾಡಿ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗುತ್ತದೆ. ಹಾಗಂತ ಮೇಲ್ನೋಟಕ್ಕೆ ಕಂಡಷ್ಟು ಸುಲಭವಾಗಿ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಲು ಸಾಧ್ಯವಿಲ್ಲ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಕೂಡಿಸಿ, ಗುಣಿಸಿ, ಭಾಗಿಸಿ, ಕಳೆಯುವ ಲೆಕ್ಕಾಚಾರವಿದೆ. Maths with Zia ಎನ್ನುವ ಎಕ್ಸ್ ಪುಟ ನಿರ್ವಹಣೆ ಮಾಡುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದೊಂದು ಸರಳ ಸೂತ್ರವಾದರೂ ಸರಿಯಾದ ಉತ್ತರ ಕಂಡುಹಿಡಿಯುವ ಸಲುವಾಗಿ ನೆಟ್ಟಿಗರು ಮೆದುಳಿಗೆ ಹುಳ ಬಿಟ್ಟುಕೊಳ್ಳುವಂತೆ ಮಾಡಿದ್ದಾರೆ. 2*3/3*2=? ಎಂಬುದು ಪ್ರಶ್ನೆಯಾಗಿದೆ.

ಮೊದಲ ನೋಟಕ್ಕೆ ಇದು ಪ್ರೈಮರಿ ಶಾಲಾ ಹಂತದ ಗಣಿತ ಅನ್ನಿಸುವುದು ಸುಳ್ಳಲ್ಲ. ಆದರೆ ಸರಿಯಾದ ಉತ್ತರ ಹುಡುಕಲು ನಾವು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಅದರಲ್ಲೂ 10 ಸೆಕೆಂಡ್‌ನಲ್ಲಿ ಸರಿಯಾದ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ. ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ಸ್ನೇಹಿತರು, ಆತ್ಮೀಯರಿಗೆ ಇದನ್ನು ಕಳುಹಿಸಿ ಅವರಿಂದ ಏನು ಉತ್ತರ ಬರುತ್ತದೆ, ಅವರೆಷ್ಟು ಬುದ್ಧಿವಂತರು ಪರೀಕ್ಷೆ ಮಾಡಿ.

ಇಂತಹ ಗಣಿತದ ಪಜಲ್‌ಗಳಿಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ, ಸಮಸ್ಯೆ ಪರಿಹರಿಸುವ ಗುಣ ವೃದ್ಧಿಯಾಗುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹಲವರು ಬ್ರೈನ್ ಟೀಸರ್‌ ಫ್ಯಾನ್ಸ್‌ಗಳಾಗಿದ್ದಾರೆ. 

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ನೀವು ನಿಜಕ್ಕೂ ಬುದ್ಧಿವಂತರಾದ್ರೆ ಯಾವ ಗ್ಲಾಸ್ ಮೊದಲು ತುಂಬುತ್ತೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

ವಾರಪೂರ್ತಿ ವರ್ಕ್ ಫ್ರೆಶರ್ ಇದ್ದು ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರುವ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ನೀವು 15 ಸೆಕೆಂಡ್ ಒಳಗೆ ಹೇಳಬೇಕು. ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್‌, ಸರಿಯಾದ ಉತ್ತರ ಹೇಳಲು ಪ್ರಯತ್ನ ಮಾಡಿ.

Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ನಿಮಗೊಂದು ಚಾಲೆಂಜ್, ಚಿತ್ರದಲ್ಲಿ ಬೆಕ್ಕು ಎಲ್ಲಿದೆ ಹುಡುಕಿ

ಗಾರ್ಡನ್‌ನ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ ನಿಮ್ಮ ಕಣ್ಣಿಗೊಂದು ಸವಾಲಿದೆ. ನೀಲಿ ಹೂ ಬಿಡುವ ಗಿಡದ ಮಧ್ಯೆ ಬೆಕ್ಕೊಂದು ಅಡಗಿ ಕೂತಿದೆ. ಆ ಬೆಕ್ಕು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಶಾರ್ಪ್ ಆಗಿದ್ದರೆ ಮಾತ್ರ ಬೆಕ್ಕನ್ನು ಹುಡುಕಲು ಸಾಧ್ಯ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ