logo
ಕನ್ನಡ ಸುದ್ದಿ  /  ಜೀವನಶೈಲಿ  /  Reason For Frequent Urination: ಹೆಚ್ಚು ದ್ರವ ಸೇವಿಸದಿದ್ರೂ ಆಗ್ಗಾಗ್ಗೆ ಮೂತ್ರ ವಿಸರ್ಜಿಸಬೇಕು ಅನ್ನಿಸುತ್ತಾ? ನಿಮಗೆ ಈ ತೊಂದರೆ ಇರಬಹುದು!

Reason for Frequent Urination: ಹೆಚ್ಚು ದ್ರವ ಸೇವಿಸದಿದ್ರೂ ಆಗ್ಗಾಗ್ಗೆ ಮೂತ್ರ ವಿಸರ್ಜಿಸಬೇಕು ಅನ್ನಿಸುತ್ತಾ? ನಿಮಗೆ ಈ ತೊಂದರೆ ಇರಬಹುದು!

HT Kannada Desk HT Kannada

Jan 30, 2023 10:35 PM IST

ಪದೇ ಪದೆ ಮೂತ್ರ ವಿಸರ್ಜಿಸಲು ಕಾರಣಗಳು

    • ಮೂತ್ರದಲ್ಲಿರುವ ಮಿನರಲ್ಸ್‌ ಮತ್ತು ಪ್ರೋಟೀನ್‌ಗಳು ಹರಳುಗಳಂತಾಗಿ ಕಲ್ಲುಗಳನ್ನು ರೂಪಿಸುತ್ತವೆ. ಮೂತ್ರಕೋಶದ ಬಳಿ ಕಲ್ಲುಗಳು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತವೆ.
ಪದೇ ಪದೆ ಮೂತ್ರ ವಿಸರ್ಜಿಸಲು ಕಾರಣಗಳು
ಪದೇ ಪದೆ ಮೂತ್ರ ವಿಸರ್ಜಿಸಲು ಕಾರಣಗಳು (PC: pixaby)

ಕಾಲ ಕಾಲಕ್ಕೆ ತಕ್ಕಂತೆ ಗಾಳಿ, ಅನ್ನ, ಆಹಾರ, ನೀರು ಸೇವನೆ ಎಷ್ಟು ಮುಖ್ಯವೋ ಪ್ರತಿದಿನ ನಿತ್ಯಕರ್ಮಗಳು ಕೂಡಾ ಅಷ್ಟೇ ಮುಖ್ಯ. ಇಲ್ಲವಾದರೆ ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನು ಬಹಳಷ್ಟು ಜನರು ಪ್ರತಿದಿನ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಹೆಚ್ಚು ನೀರು ಕುಡಿದರೂ ಅಥವಾ ವಾತಾವರಣ ತಂಪಾಗಿದ್ದರೂ ಹೀಗೆ ಹೆಚ್ಚು ಮೂತ್ರ ವಿಸರ್ಜನೆ ಆಗುತ್ತದೆ.

ಟ್ರೆಂಡಿಂಗ್​ ಸುದ್ದಿ

Sanitary Pads: ಸ್ಯಾನಿಟರಿ ಪ್ಯಾಡ್ ಮೊದಲು ಕಂಡುಹಿಡಿದಿದ್ದೇ ಪುರುಷರಿಗಾಗಿ; ಆಸಕ್ತಿಕರ ವಿವರ ಇಲ್ಲಿದೆ

Heat headaches: ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು, ಇದರಿಂದ ಪಾರಾಗುವುದು ಹೇಗೆ?

ಭಾರತದಲ್ಲಿ ಹೆಚ್ಚುತ್ತಿದೆ ಸ್ತನ ಗಾತ್ರ ಕುಗ್ಗಿಸುವ ಶಸ್ತ್ರಚಿಕಿತ್ಸೆ; ಆ ನಿರ್ಧಾರಕ್ಕೆ ಬರುವ ಮುನ್ನ ಈ ಅಂಶಗಳು ಗಮನದಲ್ಲಿರಲಿ

Summer Tips: ಬೇಸಿಗೆಯಲ್ಲಿ ಸನ್‌ಗ್ಲಾಸ್‌ ಧರಿಸುವುದು ಕಣ್ಣಿಗೆ ಅಪಾಯವೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

ಆದರೆ ಇದನ್ನು ಹೊರತುಪಡಿಸಿ ಬೇರೆ ಕಾರಣಗಳಿಂದಲೂ ಈ ರೀತಿ ಪದೇ ಪದೆ ಮೂತ್ರ ವಿಸರ್ಜನೆ ಮಾಡಬಹುದು. ಈ ಸಮಸ್ಯೆ ದೀರ್ಘಕಾಲದವರೆಗೆ ಇದ್ದರೆ, ಇದು ಗಂಭೀರ ಕಾಯಿಲೆಗಳ ಸಂಕೇತ ಎಂದು ಅರ್ಥ.

ಮಧುಮೇಹ: ಆಗಾಗ್ಗೆ ಮೂತ್ರ ವಿಸರ್ಜನೆಯು ಟೈಪ್-1 ಮತ್ತು ಟೈಪ್-2 ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ಮಧುಮೇಹವು ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಉಂಟುಮಾಡುತ್ತದೆ. ಅವರು ಹೆಚ್ಚು ಗ್ಲೂಕೋಸ್ ಫಿಲ್ಟರ್ ಮಾಡಲು ಮೂತ್ರಪಿಂಡದ ಮೇಲೆ ಒತ್ತಡವನ್ನು ಹಾಕುತ್ತದೆ. ಇದರಿಂದ ನೀವು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ, ಮೂತ್ರಪಿಂಡಗಳ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಅಪಾಯವಿದೆ. ನೀವು ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಅತಿ ಕ್ರಿಯಾಶೀಲ ಮೂತ್ರಕೋಶ: ಅತಿಯಾದ ಸಕ್ರಿಯ ಮೂತ್ರಕೋಶ (OAB) ಕಾರಣದಿಂದಾಗಿ ಕೂಡಾ ಆಗ್ಗಾಗ್ಗೆ ಮೂತ್ರ ವಿಸರ್ಜಿಸಲು ಪ್ರಚೋದನೆಯಾಗುತ್ತದೆ. ಈ ಸಮಯದಲ್ಲಿ ಮೂತ್ರವನ್ನು ನಿಯಂತ್ರಿಸಲು ಕಷ್ಟವಾಗಬಹುದು. ಆಗಾಗ್ಗೆ ಮೂತ್ರ ವಿಸರ್ಜನೆಯು ಈ ಸ್ಥಿತಿಯ ಸಾಮಾನ್ಯ ಲಕ್ಷಣವಾಗಿದೆ.

ಮೂತ್ರನಾಳದ ಸೋಂಕು: ಮೂತ್ರನಾಳದ ಸೋಂಕು ಇದ್ದರೆ ಕೂಡಾ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ ಈ ಸಮಸ್ಯೆ ಇರುವ ಕೆಲವರಿಗೆ ಮೂತ್ರದಲ್ಲಿ ಉರಿ ಮತ್ತು ರಕ್ತಸ್ರಾವವಾಗುತ್ತದೆ. ಹೊಟ್ಟೆ ನೋವು ಕೂಡಾ ಕಾಡುವ ಸಾಧ್ಯತೆ ಇದೆ. ನೀವು ಈ ರೋಗ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕಿಡ್ನಿಯಲ್ಲಿ ಕಲ್ಲುಗಳು: ಕಿಡ್ನಿಯಲ್ಲಿ ಕಲ್ಲುಗಳಿದ್ದರೂ ಆಗ್ಗಾಗ್ಗೆ ಮೂತ್ರ ಮಾಡುವಂತೆ ಆಗುತ್ತದೆ. ಮೂತ್ರದಲ್ಲಿರುವ ಮಿನರಲ್ಸ್‌ ಮತ್ತು ಪ್ರೋಟೀನ್‌ಗಳು ಹರಳುಗಳಂತಾಗಿ ಕಲ್ಲುಗಳನ್ನು ರೂಪಿಸುತ್ತವೆ. ಮೂತ್ರಕೋಶದ ಬಳಿ ಕಲ್ಲುಗಳು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತವೆ.

ಪುರುಷರಲ್ಲಿ ಸಮಸ್ಯೆ: ಪುರುಷರಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯು ಪ್ರಾಸ್ಟೇಟ್ ಸಮಸ್ಯೆಗಳ ಸಂಕೇತವಾಗಿದೆ. ಪ್ರಾಸ್ಟೇಟ್ ಹಿಗ್ಗುವಿಕೆ ಸೋಂಕಿನಿಂದಾಗಿ ಪ್ರಾಸ್ಟೇಟ್ ಉರಿಯೂತ (ಪ್ರೊಸ್ಟಟೈಟಿಸ್) ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದಾಗಿ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವಂತಾಗುತ್ತದೆ.

ಮಹಿಳೆಯರಲ್ಲಿ ಸಮಸ್ಯೆ: ಮಹಿಳೆಯರಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯು ಯುಟಿಐ, ಒಎಬಿ, ಮೂತ್ರಕೋಶದ ಸೋಂಕಿನಿಂದ ಉಂಟಾಗಬಹುದು. ಗರ್ಭಾವಸ್ಥೆ, ಫೈಬ್ರಾಯ್ಡ್‌ಗಳು, ಋತುಬಂಧ, ಅಂಡಾಶಯದ ಕ್ಯಾನ್ಸರ್, ಈಸ್ಟ್ರೊಜೆನ್ ಕಡಿಮೆ ಬಿಡುಗಡೆ ಕೂಡಾ ಇದಕ್ಕೆ ಕಾರಣವಾಗಬಹದು. ಆದ್ದರಿಂದ ಇಂತಹ ಸಮಸ್ಯೆಗಳು ಇದ್ದಲ್ಲಿ ಸ್ವಲ್ಪವೂ ನಿರ್ಲಕ್ಷಿಸದೆ ತಜ್ಞ ವೈದ್ಯರನ್ನು ಸಂಪರ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು