logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Akasa Air Services From Bengaluru: ಬೆಂಗಳೂರಿನಿಂದ ಆಕಾಶ್ ವಿಮಾನ ಸೇವೆಗಳು ಇವು

Akasa Air services from Bengaluru: ಬೆಂಗಳೂರಿನಿಂದ ಆಕಾಶ್ ವಿಮಾನ ಸೇವೆಗಳು ಇವು

HT Kannada Desk HT Kannada

Sep 27, 2022 01:02 PM IST

ಇಂದಿನಿಂದ ಆಕಾಶ್ ಏರ್ ಸೇವೆ ಆರಂಭವಾಗಿದೆ (ಫೋಟೋ-AP)

  • ಬೆಂಗಳೂರಿನಿಂದ ಈಶಾನ್ಯ ರಾಜ್ಯಗಳಿಗೆ ವಿಮಾನ ಸೇವೆ ಒದಗಿಸುವುದಾಗಿ ಆಕಾಶ ಏರ್ ಘೋಷಿಸಿತ್ತು. ಇದು ಅಕ್ಟೋಬರ್ 21 ರಿಂದ ಅಗರ್ತಲಾ (ತ್ರಿಪುರ) ಮತ್ತು ಗುವಾಹಟಿ (ಅಸ್ಸೋಂ) ನಗರಗಳಿಗೆ ವಿಮಾನ ಸೇವೆಗಳನ್ನು ಒದಗಿಸುತ್ತದೆ. 

ಇಂದಿನಿಂದ ಆಕಾಶ್ ಏರ್ ಸೇವೆ ಆರಂಭವಾಗಿದೆ (ಫೋಟೋ-AP)
ಇಂದಿನಿಂದ ಆಕಾಶ್ ಏರ್ ಸೇವೆ ಆರಂಭವಾಗಿದೆ (ಫೋಟೋ-AP)

ಬೆಂಗಳೂರು: Akasa Air services from Bengaluru:ಬೆಂಗಳೂರಿನಿಂದ ಈಶಾನ್ಯ ರಾಜ್ಯಗಳಿಗೆ ವಿಮಾನ ಸೇವೆ ಒದಗಿಸುವುದಾಗಿ ಆಕಾಶ ಏರ್ ಘೋಷಿಸಿತ್ತು. ಅದರಂತೆ ಅಕ್ಟೋಬರ್ 21 ರಿಂದ ಅಗರ್ತಲಾ (ತ್ರಿಪುರ) ಮತ್ತು ಗುವಾಹಟಿ (ಅಸ್ಸೋಂ) ನಗರಗಳಿಗೆ ವಿಮಾನ ಸೇವೆಗಳನ್ನು ಒದಗಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಆಕಾಶ ಏರ್ ತನ್ನ ವಿಸ್ತರಣೆಯ ಭಾಗವಾಗಿ ಎರಡು ಈಶಾನ್ಯ ಸ್ಥಳಗಳನ್ನು ತಲುಪಲಿದೆ. ಬೆಂಗಳೂರಿನಿಂದ ಈ ಎರಡು ಮಾರ್ಗಗಳೊಂದಿಗೆ ಒಟ್ಟು 8 ಸ್ಥಳಗಳಿಗೆ ವಿಮಾನ ಸೇವೆಗಳನ್ನು ಒದಗಿಸಲಾಗುತ್ತದೆ. ಅಗರ್ತಲಾಗೆ ಒಂದು-ನಿಲುಗಡೆ ಸಂಪರ್ಕವಿರುತ್ತದೆ ಮತ್ತು ಗುವಾಹಟಿಯಲ್ಲಿ ವಿಮಾನವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಆಕಾಶ ಏರ್ ಹೇಳಿದೆ.

ಆಕಾಶ ಏರ್ ತನ್ನ ವಿಮಾನ ಸೇವೆಯನ್ನು ಆಗಸ್ಟ್ 7 ರಂದು ಪ್ರಾರಂಭಿಸಿತು. ಕ್ರಮೇಣ ತನ್ನ ಸೇವೆಗಳನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸುತ್ತಿದೆ. ಒಟ್ಟು 11 ತಡೆರಹಿತ ಮಾರ್ಗಗಳಲ್ಲಿ, 8 ನಗರಗಳಿಗೆ ವಿಮಾನಯಾನ ಸಂಸ್ಥೆಯು ಸೇವೆ ಸಲ್ಲಿಸುತ್ತದೆ.

ಆಕಾಶ ಏರ್ ಅಹಮದಾಬಾದ್, ಬೆಂಗಳೂರು, ಕೊಚ್ಚಿ, ಚೆನ್ನೈ, ಮುಂಬೈ, ದೆಹಲಿ, ಗುವಾಹಟಿ, ಅಗರ್ತಲಾಗಳಿಗೆ ವಿಮಾನ ಸೇವೆಗಳನ್ನು ಒದಗಿಸುತ್ತದೆ. ಏತನ್ಮಧ್ಯೆ, ಅಕ್ಟೋಬರ್ 21 ರಿಂದ ಬೆಂಗಳೂರು ಮತ್ತು ಚೆನ್ನೈ ನಡುವೆ ಹೆಚ್ಚುವರಿ ದೈನಂದಿನ ವಿಮಾನಗಳನ್ನು ಘೋಷಿಸಿದೆ.

ಅಸ್ಸಾಂ ರಾಜ್ಯದ ಹೆಬ್ಬಾಗಿಲು ಗುವಾಹಟಿ ಮತ್ತು ಅಗರ್ತಲಾ ನಗರಗಳು ಈಶಾನ್ಯ ರಾಜ್ಯಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿವೆ.

ಆಕಾಶ ಏರ್ ಕೋ ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಮಾತನಾಡಿ, ಈ ಪ್ರದೇಶಗಳಿಗೆ ವಿಮಾನ ಸೇವೆಗಳನ್ನು ಒದಗಿಸುವುದರಿಂದ ಕೈಗಾರಿಕಾ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

ಬೆಂಗಳೂರು ಮತ್ತು ಅಗರ್ತಲಾ ನಡುವೆ ಮಾತ್ರವಲ್ಲದೆ ಬೆಂಗಳೂರು-ಚೆನ್ನೈ ಮಾರ್ಗಕ್ಕೂ ತನ್ನ ಐದನೇ ವಿಮಾನ ಸೇವೆಯನ್ನು ಸೇರಿಸಲಾಗಿದೆ ಎಂದು ಅವರು ವಿವರಿಸಿದರು. ಆಕಾಶ್ ಏರ್ ನೆಟ್‌ವರ್ಕ್ ಅಕ್ಟೋಬರ್ ಅಂತ್ಯದ ವೇಳೆಗೆ 300 ಸಾಪ್ತಾಹಿಕ ವಿಮಾನಗಳನ್ನು ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.

ಉದ್ಯಮಿ ಹಾಗೂ ಪ್ರಮುಖ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಅವರ ಕನಸಿನ ಹೊಸ ಏರ್‌ಲೈನ್ ಸೇವೆ ಕೊನೆಗೂ ಆರಂಭವಾಗಿದ್ದು, ಆಗಸ್ಟ್ 7, 2022 ರಂದು ಆಕಾಶ್ ಏರ್ ಮುಂಬೈನಿಂದ ಅಹಮದಾಬಾದ್ ಗೆ ಮೊದಲ ಸೇವೆ ಆರಂಭಿಸಿತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭಾನುವಾರ ಆಕಾಶ ಏರ್ ಸೇವೆಗೆ ಚಾಲನೆ ನೀಡಿದ್ದರು.

ಮುಂಬೈನಿಂದ ಮೊದಲ ವಿಮಾನ ಅಹಮದಾಬಾದ್‌ಗೆ ತೆರಳಿತ್ತು. ಜುಲೈ 7 ರಂದು, ಕಂಪನಿಯು ಸೇವೆಗಳನ್ನು ಪ್ರಾರಂಭಿಸಲು ಅಧಿಕೃತ ಅನುಮತಿಯಾದ 'ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್' ನಿಂದ 'ಆಪರೇಟರ್‌ಗಳ ಪ್ರಮಾಣಪತ್ರ'ವನ್ನು ಸ್ವೀಕರಿಸಿದೆ.

ಆಕಾಶ ಏರ್ ಅನ್ನು ಷೇರು ಮಾರುಕಟ್ಟೆಯ ಪ್ರಮುಖ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ, ವಾಯುಯಾನ ತಜ್ಞರಾದ ಆದಿತ್ಯ ಘೋಷ್ ಮತ್ತು ವಿನಯ್ ದುಬೆ ಸ್ಥಾಪಿಸಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜುಂಜುನ್ವಾಲಾ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ನಾನು ನಿಮಗೆ (ಸಿಂಧಿಯಾ) ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದಲ್ಲಿ ಸರ್ಕಾರದ ಅನುಮೋದನೆಗಳನ್ನು ಪಡೆಯುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ ಎಂಬ ತಪ್ಪು ಕಲ್ಪನೆ ಇದೆ.

ಆದರೆ, ನಾಗರಿಕ ವಿಮಾನಯಾನ ಇಲಾಖೆ ನಮಗೆ ನೀಡಿದ ಬೆಂಬಲ ಅದ್ಭುತವಾಗಿದೆ. ಬಹುಶಃ ಜಗತ್ತಿನ ಯಾವುದೇ ವಿಮಾನಯಾನ ಸಂಸ್ಥೆಯು ಸ್ಥಾಪನೆಯಾದ 12 ತಿಂಗಳೊಳಗೆ ಸೇವೆಯನ್ನು ಆರಂಭಿಸಿಲ್ಲ. ಸರ್ಕಾರದ ಬೆಂಬಲವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಜುಂಜುನ್‌ವಾಲಾ ಹೇಳಿದ್ದರು. ಇತ್ತೀಚೆಗಷ್ಟೇ ರಾಕೇಶ್ ಜುಂಜುನ್ವಾಲಾ ನಿಧನರಾಗಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು