logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಗ್ರೇ ಮಾರ್ಕೆಟ್‌ ಮೌಲ್ಯ ಶೇ 50 ಕುಸಿತ; ಐಪಿಒ ಸಬ್‌ಸ್ಕ್ರಿಪ್ಶನ್‌ 17ಕ್ಕೆ ಕೊನೆ, 22ಕ್ಕೆ ಲಿಸ್ಟಿಂಗ್‌

ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಗ್ರೇ ಮಾರ್ಕೆಟ್‌ ಮೌಲ್ಯ ಶೇ 50 ಕುಸಿತ; ಐಪಿಒ ಸಬ್‌ಸ್ಕ್ರಿಪ್ಶನ್‌ 17ಕ್ಕೆ ಕೊನೆ, 22ಕ್ಕೆ ಲಿಸ್ಟಿಂಗ್‌

Umesh Kumar S HT Kannada

Oct 12, 2024 11:07 AM IST

google News

ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಗ್ರೇ ಮಾರ್ಕೆಟ್‌ ಮೌಲ್ಯ ಶೇ 50ಕ್ಕಿಂತ ಹೆಚ್ಚು ಕುಸಿತವಾಗಿದೆ.

  • ಐಪಿಒ ಮಾರುಕಟ್ಟೆಯ ಬಹುನಿರೀಕ್ಷಿತ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒದ ಗ್ರೇ ಮಾರ್ಕೆಟ್ ಮೌಲ್ಯ ಶೇಕಡ 50ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಮಂಗಳವಾರ ಐಪಿಒ ಓಪನ್ ಆಗಲಿದ್ದು, 17ಕ್ಕೆ ಕೊನೆ. 22ಕ್ಕೆ ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗಲಿದೆ. 

ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಗ್ರೇ ಮಾರ್ಕೆಟ್‌ ಮೌಲ್ಯ ಶೇ 50ಕ್ಕಿಂತ ಹೆಚ್ಚು ಕುಸಿತವಾಗಿದೆ.
ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಗ್ರೇ ಮಾರ್ಕೆಟ್‌ ಮೌಲ್ಯ ಶೇ 50ಕ್ಕಿಂತ ಹೆಚ್ಚು ಕುಸಿತವಾಗಿದೆ. (LH)

ಮುಂಬಯಿ: ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ಚಂದಾದಾರಿಕೆ ಮಂಗಳವಾರ (ಅಕ್ಟೋಬರ್ 15) ಶುರುವಾಗುತ್ತದೆ. ಈ ಐಪಿಒ ದೇಶದ ಅತಿದೊಡ್ಡ ಐಪಿಒ ಆಗಲಿದೆ. ಇದುವರೆಗೆ ಎಲ್‌ಐಸಿ ಹೆಸರಲ್ಲಿದ್ದ ದಾಖಲೆ ಇನ್ನು ಹ್ಯುಂಡೈ ಮೋಟಾರ್ ಇಂಡಿಯಾ ಹೆಸರಲ್ಲಿ ಇರಲಿದೆ. 10 ರೂಪಾಯಿ ಮುಖಬೆಲೆಯ ಷೇರಿನ ಐಪಿಒಗೆ 1865 ರೂಪಾಯಿಯಿಂದ 1960 ರೂಪಾಯಿ ಬೆಲೆ ಮಟ್ಟವನ್ನು ನಿಗದಿ ಮಾಡಲಾಗಿದೆ. ಈ ಐಪಿಒ ಮೂಲಕ ಕಂಪನಿಯು ಒಟ್ಟು 27,856 ಕೋಟಿ ರೂಪಾಯಿ ಸಂಗ್ರಹಿಸಲು ಮುಂದಾಗಿದೆ. ಈಗ ಐಪಿಒ ಓಪನ್ ಆಗುವ ಮೊದಲು ಕಳೆದ ಒಂದು ವಾರದ ಅವಧಿಯಲ್ಲಿ ಕಂಪನಿಯ ಷೇರುಗಳ ಗ್ರೇ ಮಾರ್ಕೆಟ್‌ ಪ್ರೀಮಿಯಂನಲ್ಲಿ ಶೇಕಡ 50ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದೆ ಎಂದು ಸಿಎನ್‌ಬಿಸಿ ಟಿವಿ 18 ವರದಿ ವಿವರಿಸಿದೆ.

ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ಜಿಎಂಪಿ 370 ರೂಪಾಯಿಯಿಂದ 170 ರೂಪಾಯಿಗೆ ಇಳಿಕೆ

ಗ್ರೇ ಮಾರ್ಕೆಟ್ ಪ್ರೀಮಿಯಂ (ಜಿಎಂಪಿ) ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಪ್ಲಾಟ್‌ಫಾರ್ಮ್‌ಗಳ ಡೇಟಾವು ಗ್ರೇ ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಪ್ರೀಮಿಯಂ ಅಕ್ಟೋಬರ್ 11 ರಂದು 170 ರೂಪಾಯಿಗೆ ಇಳಿದಿದೆ ಎಂದು ತೋರಿಸುತ್ತದೆ. ಅಕ್ಟೋಬರ್ 4 ರಂದು ಗ್ರೇ ಮಾರ್ಕೆಟ್‌ನಲ್ಲಿ ಹುಂಡೈ ಮೋಟಾರ್ ಇಂಡಿಯಾದ ಷೇರುಗಳು 370 ರೂಪಾಯಿ ಇತ್ತು. ಕಂಪನಿಯ ಷೇರುಗಳ ಮೌಲ್ಯ ಗ್ರೇ ಮಾರ್ಕೆಟ್‌ ಪ್ರೀಮಿಯಂನಲ್ಲಿ 54% ನಷ್ಟು ಕುಸಿತ ಕಂಡಿದೆ. ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ಸಂಪೂರ್ಣ ಆಫರ್ ಫಾರ್ ಸೇಲ್‌ (OFS) ಆಗಿದ್ದು, ಇದರಲ್ಲಿ ಅದರ ಪೇರೆಂಟ್‌ ಕಂಪನಿಯು 142 ಮಿಲಿಯನ್ ಷೇರುಗಳನ್ನು ಅಥವಾ ಒಟ್ಟು ಇಕ್ವಿಟಿಯ 17.5% ಅನ್ನು ಮಾರಾಟ ಮಾಡುತ್ತದೆ.

ಅಕ್ಟೋಬರ್ 15 ರಿಂದ 17 ರ ತನಕ ಚಂದಾದಾರಿಕೆಗೆ ಅವಕಾಶ

ಹುಂಡೈ ಮೋಟಾರ್ ಇಂಡಿಯಾದ ಐಪಿಒ ಚಂದಾದಾರಿಕೆ ಮಂಗಳವಾರ (ಅಕ್ಟೋಬರ್ 15) ಶುರುವಾಗಿ ಶುಕ್ರವಾರ (ಅಕ್ಟೋಬರ್ 17) ಕೊನೆಗೊಳ್ಳುತ್ತದೆ. ಕಂಪನಿಯ ಷೇರುಗಳನ್ನು ಅಕ್ಟೋಬರ್ 22 ರಂದು ಲಿಸ್ಟ್‌ ಮಾಡಲಾಗುತ್ತದೆ. ಹುಂಡೈ ಮೋಟಾರ್ ಇಂಡಿಯಾದ ಷೇರುಗಳನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪಟ್ಟಿ ಮಾಡಲಾಗುವುದು. ಚಿಲ್ಲರೆ ಹೂಡಿಕೆದಾರರು ಆಟೋಮೊಬೈಲ್ ಕಂಪನಿಯ ಐಪಿಒನಲ್ಲಿ ಕನಿಷ್ಠ 1 ಲಾಟ್ ಮತ್ತು ಗರಿಷ್ಠ 14 ಲಾಟ್‌ಗಳಿಗೆ ಬಿಡ್‌ ಸಲ್ಲಿಸಲು ಅವಕಾಶ ಇದೆ. ಐಪಿಒ ಒಂದು ಲಾಟ್‌ನಲ್ಲಿ 7 ಷೇರುಗಳಿರುತ್ತವೆ. ಅಂದರೆ ಚಿಲ್ಲರೆ ಹೂಡಿಕೆದಾರರು 13,720 ರೂಪಾಯಿ ಪಾವತಿಸಿ ಒಂದು ಲಾಟ್‌ಗೆ ಬಿಡ್ ಸಲ್ಲಿಸಬಹುದು. ಅಕ್ಟೋಬರ್ 14 ರಂದು ಬಿಡ್‌ ಸಲ್ಲಿಸಬೇಕು. ಅಕ್ಟೋಬರ್ 18 ರಂದು ಷೇರುಗಳ ಅಲಾಟ್‌ಮೆಂಟ್ ಆಗುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ