Closing Bell: ಷೇರುಪೇಟೆಯಲ್ಲಿ ಗೂಳಿ ನೆಗೆತ, ಸೆನ್ಸೆಕ್ಸ್ 466 ಅಂಕ ಏರಿಕೆ, ನಿಫ್ಟಿ 135 ಅಂಕ ಹೆಚ್ಚಳ, ಇಂದು ಲಾಭಗಳಿಸಿದ ಷೇರುಗಳ ಪಟ್ಟಿ
Jun 16, 2023 04:03 PM IST
Closing Bell: ಷೇರುಪೇಟೆಯಲ್ಲಿ ಗೂಳಿ ನೆಗೆತ, ಸೆನ್ಸೆಕ್ಸ್ 466 ಅಂಕ ಏರಿಕೆ, ನಿಫ್ಟಿ 135 ಅಂಕ ಹೆಚ್ಚಳ, ಇಂದು ಲಾಭಗಳಿಸಿದ ಷೇರುಗಳ ಪಟ್ಟಿ
INDIA-STOCKS: ಮುಂಬಯಿ ಷೇರುಪೇಟೆಯು ಇಂದು 666.95 ಅಂಕ ಏರಿಕೆ ಕಂಡು 63,384.58ಕ್ಕೆ ಸ್ಥಿರಗೊಂಡಿದೆ. ಇದೇ ಸಮಯದಲ್ಲಿ ನಿಫ್ಟಿ ಸೂಚ್ಯಂಕವು 137.90 ಅಂಕ ಏರಿಕೆ ಕಂಡು 18,826ಕ್ಕೆ ವಹಿವಾಟು ಮುಗಿಸಿದೆ.
ಬೆಂಗಳೂರು: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಳದ ವಿಷಯದಲ್ಲಿ ಮಹತ್ವದ ಕ್ರಮ ಕೈಗೊಳ್ಳದೆಂಬ ನಿರೀಕ್ಷೆಯಲ್ಲಿ ಭಾರತೀಯ ಷೇರುಪೇಟೆ ಇಂದು ಉತ್ತಮ ಏರಿಕೆಯೊಂದಿಗೆ ವಹಿವಾಟು ಮುಗಿಸಿದೆ. ಮುಂಬಯಿ ಷೇರುಪೇಟೆಯು ಇಂದು 666.95 ಅಂಕ ಏರಿಕೆ ಕಂಡು 63,384.58ಕ್ಕೆ ಸ್ಥಿರಗೊಂಡಿದೆ. ಇದೇ ಸಮಯದಲ್ಲಿ ನಿಫ್ಟಿ ಸೂಚ್ಯಂಕವು 137.90 ಅಂಕ ಏರಿಕೆ ಕಂಡು 18,826ಕ್ಕೆ ವಹಿವಾಟು ಮುಗಿಸಿದೆ.
ವಹಿವಾಟು ಮುಗಿಸುವ ಹಂತದಲ್ಲಿ ಇವೆರಡೂ ಸೂಚ್ಯಂಕಗಳು ಉತ್ತಮ ವ್ಯವಹಾರ ನಡೆಸಿವೆ. 13 ಪ್ರಮುಖ ವಲಯವಾರು ಸೂಚ್ಯಂಕಗಳಲ್ಲಿ 11 ಸೂಚ್ಯಂಕಗಳು ಏರಿಕೆ ಕಂಡಿವೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಇಂದು ಉತ್ತಮ ವ್ಯವಹಾರ ನಡೆಸಿವೆ.
ಮಿಡ್ ಕ್ಯಾಪ್ ಷೇರು ಸೂಚ್ಯಂಕವು ಇಂದು ದಾಖಲೆ ಮಟ್ಟದ ಎತ್ತರ 35,144.30ಕ್ಕೆ ತಲುಪಿವೆ. ಸ್ಮಾಲ್‌ಕ್ಯಾಪ್ ಸೂಚ್ಯಂಕವೂ ಹೊಸ ಎತ್ತರ ತಲುಪಿದೆ. ಭಾರತದ ಷೇರುಪೇಟೆ ರಾಲಿ ಇದೇ ರೀತಿ ಸ್ಥಿರವಾಗಿ ಮುಂದುವರೆಯಲಿದೆ ಎಂದು ಷೇರು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವೈಯಕ್ತಿಕ ಷೇರುಗಳಲ್ಲಿ ಎಚ್‌ಡಿಎಫ್‌ಸಿ ಲೈಫ್ ಇನ್ಸೂರೆನ್ಸ್, ಎಸ್‌ಬಿ ಲೈಫ್ ಇನ್ಸೂರೆನ್ಸ್ ಷೇರುಗಳು ನಿಫ್ಟಿಯಲ್ಲಿ ಉತ್ತಮವಾಗಿ ಲಾಭ ಗಳಿಸಿವೆ. ಅಶೋಕ ಲೇಲಾಂಡ್ ಶೇಕಡ 4.5ರಷ್ಟು ಏರಿಕೆ ಕಂಡಿದೆ. ಕಂಪನಿಯ ವಿಸ್ತರಣೆ ಯೋಜನೆ ವರದಿಯಿಂದಾಗಿ ಲೇಲಾಂಡ್ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಬಿಎಸ್‌ಇ: ಇಂದು ಲಾಭ ಗಳಿಸಿದ ಷೇರುಗಳು
ಬಜಾಜ್ ಫಿನ್‌ಸರ್ವ್ ಲಿಮಿಟೆಡ್
ಟೈಟಾನ್ ಕಂಪನಿ ಲಿಮಿಟೆಡ್
ಐಟಿಸಿ ಲಿಮಿಟೆಡ್
ಕೋಟಾಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್
ಬಜಾಜ್ ಫೈನಾನ್ಸ್ ಲಿಮಿಟೆಡ್
ಇಂಡಸ್‌ಇಂಡ್ ಬ್ಯಾಂಕ್ ಲಿಮಿಟೆಡ್
ಐಸಿಐಸಿಐ ಬ್ಯಾಂಕ್ ಲಿಮಿಟೆಡ್
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
ಭಾರ್ತಿ ಏರ್‌ಟೆಲ್ ಲಿಮಿಟೆಡ್
ಏಷ್ಯನ್ ಪೇಂಟ್ಸ್ ಲಿಮಿಟೆಡ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
ಟಾಟಾ ಸ್ಟೀಲ್ ಲಿಮಿಟೆಡ್
ಇನ್ಫೋಸಿಸ್ ಲಿಮಿಟೆಡ್
ಟಾಟಾ ಮೋಟಾರ್ಸ್ ಲಿಮಿಟೆಡ್
ಹೆಚ್.ಸಿ.ಎಲ್. ಟೆಕ್ನಾಲಜೀಸ್ ಲಿಮಿಟೆಡ್
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್
ನೆಸ್ಲೆ ಇಂಡಿಯಾ ಲಿಮಿಟೆಡ್
ಲಾರ್ಸೆನ್ & ಟೂಬ್ರೊ ಲಿಮಿಟೆಡ್
ನಿಫ್ಟಿ: ಇಂದು ಲಾಭ ಗಳಿಸಿದ ಷೇರುಗಳು
ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್
ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್
ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್
ಬಜಾಜ್ ಫಿನ್‌ಸರ್ವ್ ಲಿಮಿಟೆಡ್
ಯುಪಿಎಲ್ ಲಿಮಿಟೆಡ್
ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್
ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್
ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್
ನಿನ್ನೆಯ ವಹಿವಾಟು ಹೇಗಿತ್ತು?: ಬ್ಲೂಚಿಪ್ ನಿಫ್ಟಿ ಸೂಚ್ಯಂಕವು ಗುರುವಾರ ಶೇಕಡ 0.36ರಷ್ಟು ಇಳಿಕೆ ಕಂಡು 18,688.10ಕ್ಕೆ ಸ್ಥಿರವಾಯಿತು. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕವು ಶೇಕಡ 0.49ರಷ್ಟು ಇಳಿಕೆ ಕಂಡು 62,917.63ಕ್ಕೆ ತಲುಪಿದೆ. ಇವೆರಡೂ ಸೂಚ್ಯಂಕಗಳು ತಮ್ಮ ಸಾರ್ವಕಾಲಿಕ ಎತ್ತರಕ್ಕಿಂತ ಶೇಕಡ 1ರಷ್ಟು ಕಡಿಮೆ ಮಟ್ಟಕ್ಕೆ ತಲುಪಿವೆ. ನಿನ್ನೆಯ ಲೆಕ್ಕಾಚಾರದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 3,085.51 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 14 ರಂದು 297.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.