logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗ್ರಾಹಕರೇ ಗಮನಿಸಿ; ಜುಲೈ 13 ರಂದು 14 ಗಂಟೆಗಳ ಕಾಲ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಸೇವೆಗಳು ಸ್ಥಗಿತ

ಗ್ರಾಹಕರೇ ಗಮನಿಸಿ; ಜುಲೈ 13 ರಂದು 14 ಗಂಟೆಗಳ ಕಾಲ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಸೇವೆಗಳು ಸ್ಥಗಿತ

Raghavendra M Y HT Kannada

Jul 13, 2024 11:12 AM IST

google News

ಗ್ರಾಹಕರೇ ಗಮನಿಸಿ; ಜುಲೈ 13 ರಂದು 14 ಗಂಟೆಗಳ ಕಾಲ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಸೇವೆಗಳು ಸ್ಥಗಿತ

  • ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸಂಬಂಧಿಸಿದ ನಗದು ಠೇವಣಿ, ಹಣ ವರ್ಗಾವಣೆ, ಮಿನಿ ಸ್ಟೇಟ್‌ಮೆಂಟ್, ವಿಚಾರಣೆ / ಬಿಲ್‌ಪೇ ಸೇವೆಗಳು ಹಾಗೂ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆಯಂತಹ ವಹಿವಾಟುಗಳನ್ನು ಜುಲೈ 13 ರಂದು 14 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಗ್ರಾಹಕರೇ ಗಮನಿಸಿ; ಜುಲೈ 13 ರಂದು 14 ಗಂಟೆಗಳ ಕಾಲ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಸೇವೆಗಳು ಸ್ಥಗಿತ
ಗ್ರಾಹಕರೇ ಗಮನಿಸಿ; ಜುಲೈ 13 ರಂದು 14 ಗಂಟೆಗಳ ಕಾಲ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಸೇವೆಗಳು ಸ್ಥಗಿತ

ಕಾರ್ಯಕ್ಷಮತೆಯ ವೇಗವನ್ನು ಸುಧಾರಿಸುವ ಮೂಲಕ ಗ್ರಾಹಕರ ಬ್ಯಾಂಕಿಂಗ್ ಅನುಭವವನ್ನು ಹೆಚ್ಚಿಸುವ ಉದ್ದೇಶದಿಂದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank Down Time) ಇಂದು (ಜುಲೈ 13, ಶನಿವಾರ) ರಂದು ಸಿಸ್ಟಮ್ ನವೀಕರಣವನ್ನು ನಡೆಸುತ್ತಿದೆ. ಈ ನಿಗದಿತ ಕೆಲಸ ಜುಲೈ 13ರ ಮುಂಜಾನೆ 3:00 ಗಂಟೆಯಿಂದ ಪ್ರಾರಂಭವಾಗಿ ಸಂಜೆ 4:30 ಕ್ಕೆ ಕೊನೆಗೊಳ್ಳುತ್ತದೆ. ಅಂದರೆ ಬರೋಬ್ಬರಿ 14 ಗಂಟೆಗಳ ಕಾಲ ಎಚ್‌ಡಿಎಫ್‌ಸಿ ಬ್ಯಾಂಕ್ ಸೇವೆಗಳಲ್ಲಿ (HDFC Bank Services) ವ್ಯತ್ಯಯವಾಗಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರಿಗೆ "ಅಡಚಣೆಯನ್ನು ಕಡಿಮೆ ಮಾಡಲು, ಗ್ರಾಹಕರು ಹಿಂದಿನ ದಿನವೇ ಶುಕ್ರವಾರ (ಜುಲೈ 12) ಸಂಜೆ 7:30 ರೊಳಗೆ ಸಾಕಷ್ಟು ಹಣವನ್ನು ಹಿಂಪಡೆಯಲು ಮತ್ತು ಎಲ್ಲಾ ನಿಧಿ ವರ್ಗಾವಣೆಗಳನ್ನು ಮುಂಚಿತವಾಗಿ ಯೋಜಿಸಲು ಸಲಹೆ ನೀಡಲಾಗಿತ್ತು.

ಅನಾನುಕೂಲತೆಯನ್ನು ಕಡಿಮೆ ಮಾಡಲು ಬ್ಯಾಂಕ್ ರಜಾದಿನಗಳಲ್ಲಿ 2024 ರ ಜುಲೈ 13 ರಂದು ಬೆಳಿಗ್ಗೆ 3:00 ರಿಂದ ಸಂಜೆ 4:30 ರವರೆಗೆ ನವೀಕರಣವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳು ಮತ್ತು ನವೀಕರಣ ಕುರಿತ ಹೆಚ್ಚಿನ ಮಾಹಿತಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸಿ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಗದಿತ ಕೆಲಸದ ಸಮಯದಲ್ಲಿ ಯಾವ ಸೇವೆಗಳು ಲಭ್ಯವಿರುವುದಿಲ್ಲ?

ನಗದು ಠೇವಣಿ, ಹಣ ವರ್ಗಾವಣೆ, ಮಿನಿ ಸ್ಟೇಟ್‌ಮೆಂಟ್, ವಿಚಾರಣೆ / ಬಿಲ್‌ಪೇ ಸೇವೆಗಳು ಹಾಗೂ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆಯಂತಹ ವಹಿವಾಟುಗಳು ಲಭ್ಯ ಇರುವುದಿಲ್ಲ. ಐಎಂಪಿಎಸ್, ಎನ್ಇಎಫ್‌ಟಿ, ಆರ್‌ಟಿಜಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಖಾತೆಗೆ ಆನ್‌ಲೈನ್ ವರ್ಗಾವಣೆಗಳು ಮತ್ತು ಶಾಖೆ ವರ್ಗಾವಣೆಗಳು ಸೇರಿದಂತೆ ಎಲ್ಲಾ ನಿಧಿ ವರ್ಗಾವಣೆ ವಿಧಾನಗಳು ನವೀಕರಣದ ಅವಧಿಯಲ್ಲಿ ಲಭ್ಯವಿರುವುದಿಲ್ಲ. ಆದರೆ ಈ ಸಿಸ್ಟಮ್ ಅಪ್ಡೇಟ್ ಸಮಯದಲ್ಲಿ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ