ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Digital Rupee:ಅಕ್ಟೋಬರಲ್ಲಿ ಬ್ಯಾಂಕುಗಳ ನಡುವೆ ಡಿಜಿಟಲ್ ರೂಪಾಯಿ ವಹಿವಾಟಿಗೆ ಆರ್‌ಬಿಐ ರೆಡಿ

Digital Rupee:ಅಕ್ಟೋಬರಲ್ಲಿ ಬ್ಯಾಂಕುಗಳ ನಡುವೆ ಡಿಜಿಟಲ್ ರೂಪಾಯಿ ವಹಿವಾಟಿಗೆ ಆರ್‌ಬಿಐ ರೆಡಿ

HT Kannada Desk HT Kannada

Sep 10, 2023 04:52 PM IST

ಬ್ಯಾಂಕುಗಳ ನಡುವಿನ ವಹಿವಾಟಿಗೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಚಯಿಸಲು ಭಾರತೀಯ ರಿಸರ್ವ್ಬ ಬ್ಯಾಂಕ್ ಸಿದ್ಧತೆ ನಡೆಸಿದೆ. (ಸಾಂಕೇತಿಕ ಚಿತ್ರ)

  • ಬ್ಯಾಂಕುಗಳ ನಡುವಿನ ವಹಿವಾಟಿಗೆ ಡಿಜಿಟಲ್ ರೂಪಾಯಿ ಬಳಕೆಯ ಪೈಲಟ್ ಯೋಜನೆ ಮುಂದಿನ ತಿಂಗಳು ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಜ್ಜಾಗಿದೆ. 

ಬ್ಯಾಂಕುಗಳ ನಡುವಿನ ವಹಿವಾಟಿಗೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಚಯಿಸಲು ಭಾರತೀಯ ರಿಸರ್ವ್ಬ ಬ್ಯಾಂಕ್ ಸಿದ್ಧತೆ ನಡೆಸಿದೆ. (ಸಾಂಕೇತಿಕ ಚಿತ್ರ)
ಬ್ಯಾಂಕುಗಳ ನಡುವಿನ ವಹಿವಾಟಿಗೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪರಿಚಯಿಸಲು ಭಾರತೀಯ ರಿಸರ್ವ್ಬ ಬ್ಯಾಂಕ್ ಸಿದ್ಧತೆ ನಡೆಸಿದೆ. (ಸಾಂಕೇತಿಕ ಚಿತ್ರ) (Live Mint)

ಬ್ಯಾಂಕುಗಳ ನಡುವಿನ ವಹಿವಾಟಿಗೆ ಮುಂದಿನ ತಿಂಗಳಿಂದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅಥವಾ ಡಿಜಿಟಲ್ ರೂಪಾಯಿ ಬಳಕೆ ಆರಂಭಿಸುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ದತೆ ನಡೆಸಿದೆ ಎಂದು ಆರ್‌ಬಿಐನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಜಯ್ ಕುಮಾರ್ ಚೌಧರಿ ಭಾನುವಾರ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಜಿ20 ಶೃಂಗದ ಹೊರಗೆ ಈ ಕುರಿತು ಮಾತನಾಡಿರುವ ಅಜಯ್ ಕುಮಾರ್‌, ಇಂಟರ್‌ ಬ್ಯಾಂಕ್ ಸಾಲ ಅಥವಾ ಮನಿ ಮಾರ್ಕೆಟ್‌ ವಹಿವಾಟಿಗೆ ಡಿಜಿಟಲ್ ಕರೆನ್ಸಿ ಬಳಕೆಯಾಗಲಿದೆ. ಆರ್‌ಬಿಐ ಇದನ್ನು ಕಾಲ್ ಮಾರ್ಕೆಟ್‌ನಲ್ಲಿ ಈ ತಿಂಗಳು ಅಥವ ಮುಂದಿನ ತಿಂಗಳು ಶುರುಮಾಡಲಿದೆ ಎಂದು ತಿಳಿಸಿರುವುದಾಗಿ HT ಕನ್ನಡದ ಸೋದರ ತಾಣ ಲೈವ್ ಮಿಂಟ್ ವರದಿ ಮಾಡಿದೆ.

ಇದನ್ನೂ ಓದಿ| ಜಿ20 ನಾಯಕರ ಒಮ್ಮತದ ನವದೆಹಲಿ ಘೋಷಣೆ ಅಂಗೀಕಾರ ಎಂದು ಘೋಷಿಸಿದ ಪ್ರಧಾನಿ ಮೋದಿ, ಭಾರತದ ಅಧ್ಯಕ್ಷತೆಗೆ ಮಹತ್ವದ ಜಯ

ಕಳೆದ ವರ್ಷ ನವೆಂಬರ್‌ನಲ್ಲಿ ಸಿಬಿಡಿಸಿಯನ್ನು ಸಗಟು ವಹಿವಾಟಿನ ಬಳಸಲು ಆರಂಭಿಸಿತ್ತು. ಇದನ್ನು ಡಿಜಿಟಲ್ ರೂಪಾಯಿ - ಹೋಲ್‌ಸೇಲ್ (ಇ-ಡಬ್ಲ್ಯು) ಎಂದು ಗುರುತಿಸಲಾಗಿದೆ. ಇದನ್ನು ಸೆಕೆಂಡರಿ ಮಾರ್ಕೆಟ್ ವಹಿವಾಟಿಗೆ ವಿಶೇಷವಾಗಿ ಗವರ್ನಮೆಂಟ್ ಸೆಕ್ಯುರಿಟೀಸ್‌ ವಹಿವಾಟು ಪೂರ್ಣಗೊಳಿಸುವುದಕ್ಕೆ ಬಳಸಲಾಗುತ್ತಿದೆ ಎಂದು ಪಿಟಿಐ ವರದಿ ಹೇಳಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವಾಗ ಸಿಬಿಡಿಸಿಯನ್ನು ಪರಿಚಯಿಸುವುದಾಗಿ ಘೋಷಿಸಿದ್ದರು. ಇದಕ್ಕೆ ಆರ್‌ಬಿಐ ಕಾಯ್ದೆ 1934ಕ್ಕೆ ತಿದ್ದುಪಡಿ ತಂದು ಹಣಕಾಸು ಮಸೂದೆ 2022ರ ಜತೆಗೂಡಿ ಸಂಸತ್ತಿನಲ್ಲಿ ಅಂಗೀಕಾರವನ್ನು ಸರ್ಕಾರ ಪಡೆದುಕೊಂಡಿದೆ.

ಒಂಬತ್ತು ಬ್ಯಾಂಕುಗಳಲ್ಲಿ ಡಿಜಿಟಲ್‌ ರೂಪಾಯಿ ಸಗಟುವಹಿವಾಟು

ಸಗಟು ವಹಿವಾಟಿನಲ್ಲಿ ಸಿಬಿಡಿಸಿ ಬಳಕೆ ಮಾಡುವುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ 9 ಬ್ಯಾಂಕುಗಳನ್ನು ಆಯ್ಕೆ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌, ಕೊಟಾಕ್ ಮಹಿಂದ್ರಾ ಬ್ಯಾಂಕ್‌, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌, ಎಚ್‌ಎಸ್‌fಬಿಸಿ ಬ್ಯಾಂಕ್‌ಗಳು ಈ ಪಟ್ಟಿಯಲ್ಲಿದ್ದವು ಎಂದು ಪಿಟಿಐ ವರದಿ ಮಾಡಿದೆ.

ಇದಕ್ಕೆ ಹೊರತಾಗಿ ಚಿಲ್ಲರೆ ವಹಿವಾಟಿನ ಸಿಬಿಡಿಸಿ (ಇ-ಆರ್‌) ಯನ್ನು 2022ರ ಡಿಸೆಂಬರ್ 1ರಂದು ಪ್ರಾಯೋಗಿಕವಾಗಿ ಬಳಸಲಾರಂಭಿಸಿತು. ಇದನ್ನು ಡಿಜಿಟಲ್ ಟೋಕನ್ ಆಗಿ ಬಳಕೆಗೆ ತಂದಿದೆ.

ಇದನ್ನೂ ಓದಿ| ಜಿ20 ಶೃಂಗ ಸಂಪನ್ನ, ಇನ್ನು ಬ್ರೆಜಿಲ್ ಅಧ್ಯಕ್ಷತೆ, ಭಾರತ ಮಂಟಪದಲ್ಲಿ ಸೆಲ್ಫಿಯಿಂದ ಹಿಡಿದು ನಾಯಕರ ಸ್ನೇಹ ಸೌಹಾರ್ದದ ನೆನಪು

ಇದನ್ನು ಕಾಗದದ ಕರೆನ್ಸಿ ಮತ್ತು ನಾಣ್ಯಗಳಂತೆಯೇ ಅದೇ ಪಂಗಡಗಳಲ್ಲಿ ನೀಡಲಾಗುತ್ತಿದೆ. ಬ್ಯಾಂಕ್‌ಗಳಂತಹ ಆರ್ಥಿಕ ಮಧ್ಯವರ್ತಿಗಳ ಮೂಲಕ ವಿತರಿಸಲಾಗುತ್ತಿದೆ. 'ಈ ಯೋಜನೆಯಲ್ಲಿ ಭಾಗವಹಿಸುವ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಇ-ಆರ್‌ನೊಂದಿಗೆ ವಹಿವಾಟು ನಡೆಸಬಹುದು ಎಂದು ಪಿಟಿಐ ವರದಿ ಮಾಡಿದೆ.

ಜಿ20 ಶೃಂಗಸಭೆಯ ಪ್ರದರ್ಶನ ಮಂಟಪದಲ್ಲಿ ಆರ್‌ಬಿಐ ಹಣಕಾಸು ವಲಯದ ವಿವಿಧ ಡಿಜಿಟಲ್ ಉಪಕ್ರಮಗಳನ್ನು ಪ್ರದರ್ಶಿಸಿತ್ತು. ಇವುಗಳಲ್ಲಿ ಫ್ರಿಕ್ಷನ್ ಇಲ್ಲದ ಸಾಲಕ್ಕಾಗಿ ಪಬ್ಲಿಕ್ ಟೆಕ್ ಪ್ಲಾಟ್‌ಫಾರ್ಮ್ (ಪಿಟಿಪಿ), ಸಿಬಿಡಿಸಿ, ಯುಪಿಐ ಒನ್ ವರ್ಲ್ಡ್, ರುಪೇ ಆನ್-ದಿ-ಗೋ ಮತ್ತು ಭಾರತ್ ಬಿಲ್ ಪಾವತಿ ವ್ಯವಸ್ಥೆಗಳು ಸೇರಿಕೊಂಡಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ