logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಡಿಜಿಟಲ್ ಪೇಮೆಂಟ್‌ಗೆ ಹೊಸ ದೃಢೀಕರಣ ವಿಧಾನ ಪ್ರಸ್ತಾಪಿಸಿದ ಆರ್‌ಬಿಐ; ಎಸ್‌ಎಂಎಸ್ ಆಧಾರಿತ ಒಟಿಪಿಗೆ ಪರ್ಯಾಯ ಯಾವುದು

ಡಿಜಿಟಲ್ ಪೇಮೆಂಟ್‌ಗೆ ಹೊಸ ದೃಢೀಕರಣ ವಿಧಾನ ಪ್ರಸ್ತಾಪಿಸಿದ ಆರ್‌ಬಿಐ; ಎಸ್‌ಎಂಎಸ್ ಆಧಾರಿತ ಒಟಿಪಿಗೆ ಪರ್ಯಾಯ ಯಾವುದು

Raghavendra M Y HT Kannada

Feb 09, 2024 03:05 PM IST

ಆರ್‌ಬಿಐ ಡಿಜಿಟಲ್ ಪೇಮೆಂಟ್‌ಗಳಿಗೆ ಹೊಸ ದೃಢೀಕರಣ ವಿಧಾನ ಪ್ರಸ್ತಾಪಿಸಿದೆ.

  • RBI New Proposes for Digital payment: ಡಿಜಿಟಲ್ ಪೇಮೆಂಟ್‌ಗಳ ದೃಢೀಕರಣಕ್ಕೆ ಎಸ್‌ಎಂಎಸ್ ಆಧಾರಿತ ಒಟಿಪಿ ಬಳಸಲಾಗುತ್ತಿದೆ. ಆದರೆ ಆರ್‌ಬಿಐ ಹೊಸ ದೃಢೀಕರಣ ವಿಧಾನವನ್ನು ಪ್ರಸ್ತಾಪಿಸಿದೆ. 

ಆರ್‌ಬಿಐ ಡಿಜಿಟಲ್ ಪೇಮೆಂಟ್‌ಗಳಿಗೆ ಹೊಸ ದೃಢೀಕರಣ ವಿಧಾನ ಪ್ರಸ್ತಾಪಿಸಿದೆ.
ಆರ್‌ಬಿಐ ಡಿಜಿಟಲ್ ಪೇಮೆಂಟ್‌ಗಳಿಗೆ ಹೊಸ ದೃಢೀಕರಣ ವಿಧಾನ ಪ್ರಸ್ತಾಪಿಸಿದೆ. (HT)

RBI New Proposes for Digital payment Authentication: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಆರ್‌ಬಿಐ ಡಿಜಿಟಲ್ ಪೇಮೆಂಟ್‌ಗ (Digital payment) ದೃಢೀಕರಣಕ್ಕೆ ಎಸ್‌ಎಂಎಸ್ ಆಧಾರಿತ ಒಟಿಪಿಗೆ ಬದಲಾಗಿ ಹೊಸ ವಿಧಾನವನ್ನು ಘೋಷಣೆ ಮಾಡಿದೆ. ಒಟಿಪಿಗೆ ಪರ್ಯಾಯವಾಗಿ ತತ್ವ-ಆಧಾರಿತ ದೃಢೀಕರಣ ವಿಧಾನವನ್ನು ಪರಿಚಯಿಸಲು ಮುಂದಾಗಿದೆ. ಉತ್ತಮ ಭದ್ರತೆಯ ಅಗತ್ಯದಿಂದಾಗಿ ಈ ಬದಲಾವಣೆಯನ್ನು ತರಲಾಗುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿರುವುದಾಗಿ ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಫೆಬ್ರವರಿ 8 ರಂದು ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಘೋಷಣೆ ಮಾಡಿದ್ದ ವೇಳೆ ಡಿಜಿಟಲ್ ಪೇಮೆಂಟ್ ದೃಢೀಕರಣಕ್ಕೆ ಮತ್ತಷ್ಟು ಭದ್ರತೆಯ ಅಗತ್ಯಗಳನ್ನು ದಾಸ್ ಅವರು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್ ಪೇಮೆಂಟ್‌ಗಳನ್ನು ಸುರಕ್ಷಿತಗೊಳಿಸಲು ಹೆಚ್ಚುವರಿ ಅಂಶದ ದೃಢೀಕರಣ (ಎನ್‌ಎಫ್‌ಎ) ನಂತಹ ವಿವಿದ ಕಾರ್ಯವಿಧಾನಗಳನ್ನು ಪರಿಚಯಿಸಪು ಆರ್‌ಬಿಐ ಪೂರ್ವಭಾವಿಯಾಗಿ ಅನುಕೂಲ ಮಾಡಿಕೊಟ್ಟಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಶ್ ಹೇಳಿದ್ದಾರೆ.

ಈ ಪಾವತಿಗಳಿಗೆ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯ ನಿರ್ದಿಷ್ಟ ಕಾರ್ಯವಿಧಾನಗಳನ್ನು ನಿಗದಿಪಡಿಸದಿದ್ದರೂ ಪ್ರಸ್ತುತ ಎಸ್ಎಂಎಸ್ ಆಧಾರಿತ ಒಟಿಪಿಗಳನ್ನೇ ಬಳಸಲಾಗುತ್ತಿದ್ದು, ಈವರೆಗೆ ಈ ವಿಧಾನವೇ ಜನಪ್ರಿಯ ಆಯ್ಕೆಯಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನ ಪರಿಣಾಮ ಈ ಇಂಥ ವಹಿವಾಟಿನ ಮಾದರಿಗಳಿಗೆ ಹೊಸ ಹೊಸ ದೃಢೀಕರಣದ ಕಾರ್ಯವಿಧಾನಗಳು ಹೊರಹೊಮ್ಮುತ್ತಿವೆ. ಪ್ರಮುಖವಾಗಿ ಡಿಜಿಟಲ್ ಪಾವತಿಗಳ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸದ್ಯಕ್ಕೆ ಆರ್‌ಬಿಐ ತತ್ವ-ಆಧಾರಿತ ಚೌಕಟ್ಟಿಗೆ ಕುರಿತು ಪ್ರಸ್ತಾಪವನ್ನು ಮಾಡಿದೆ. ಈ ಬಗ್ಗೆ ವಿವರವಾದ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಎಸ್‌ಎಂಎಸ್‌ ಮೂಲಕ ಒಟಿಪಿ ಆಧಾರಿತ ವ್ಯವಸ್ಥೆ ಎಂದರೇನು?

ಆನ್‌ಲೈನ್ ವಹಿವಾಟಿನಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆಯಬೇಕಾದರೆ ಇಲ್ಲವೇ ಬೇರೊಂದು ಖಾತೆಗೆ ವರ್ಗಾಯಿಸಬೇಕಾದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್)ಯನ್ನು ಕಳುಹಿಸಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಎಸ್ಎಂಎಸ್‌ ಆಧಾರಿತ ಈ ದೃಢೀಕರಣದ ವ್ಯವಸ್ಥೆಯನ್ನು ಹಣಕಾಸು ಸಂಸ್ಥೆಗಳು ಬಳಸುತ್ತಾ ಬಂದಿವೆ.

ಒಟಿಪಿ ವ್ಯವಸ್ಥೆಯನ್ನು ಬದಲಾಯಿಸಲು ಕಾರಣವೇನು?

ಕಳೆದ ಹಲವು ವರ್ಷಗಳಿಂದ ಆನ್‌ಲೈನ್ ಹಣಕಾಸು ವಹಿವಾಟುಗಳಿಗೆ ಎಸ್‌ಎಂಎಸ್ ಆಧಾರಿತ ಒಟಿಪಿ ವಿಧಾನವನ್ನು ಬಳಸಲಾಗುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಪರ್ಯಾಯ ಮಾರ್ಗಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪ ಮಾಡುತ್ತಿದೆ. 2022 ಮತ್ತು 2023ರ ನಡುವೆ ಬರೋಬ್ಬರಿ 95,000 ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಆರ್‌ಬಿಐ ಮಾಹಿತಿ ನೀಡಿತ್ತು.

ಹೀಗಾಗಿ ಇಂಥ ವಂಚನೆಗಳಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿಗಳ ಮಾದರಿಗೆ ಮತ್ತಷ್ಟು ಸುರಕ್ಷತೆಯನ್ನು ಒದಿಸಲು ಮುಂದಾಗಿದೆ. ಬಯೋಮೆಟ್ರಿಕ್ ದೃಢೀಕರಣದಂತಹ ಇತರೆ ವಿಧಾನಗಳನ್ನು ಆರ್‌ಬಿಐ ಬೆಂಬಲಿಸುವ ಸಾಧ್ಯತೆ ಇದೆ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ