ಕನ್ನಡ ಸುದ್ದಿ  /  ಕರ್ನಾಟಕ  /  Technology News: ಸೈಬರ್ ಕ್ರೈಂ ತಡೆಗಟ್ಟುವುದು ಹೇಗೆ, ಸೈಬರ್ ಮಿತ್ರ ಸತೀಶ್ ವೆಂಕಟಸುಬ್ಬು ಪುಸ್ತಕ ಪರಿಚಯಿಸಿದ ಲೇಖಕ ರಂಗಸ್ವಾಮಿ ಮೂಕನಹಳ್ಳಿ

Technology News: ಸೈಬರ್ ಕ್ರೈಂ ತಡೆಗಟ್ಟುವುದು ಹೇಗೆ, ಸೈಬರ್ ಮಿತ್ರ ಸತೀಶ್ ವೆಂಕಟಸುಬ್ಬು ಪುಸ್ತಕ ಪರಿಚಯಿಸಿದ ಲೇಖಕ ರಂಗಸ್ವಾಮಿ ಮೂಕನಹಳ್ಳಿ

How to stop cyber crime book: ನಿತ್ಯವೂ ಡಿಜಿಟಲ್ ವಂಚನೆ ನಡೆಯುತ್ತಲೇ ಇದೆ. ಜನಜಾಗೃತಿ ಕೆಲಸವೂ ಆಗುತ್ತಿದೆ. ಆದರೂ ಇದರ ಅರಿವು ಇಲ್ಲದವರು ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಸತೀಶ್ ವೆಂಕಟಸುಬ್ಬು ಅವರ ಸೈಬರ್ ಕ್ರೈಮ್‌ ತಡೆಗಟ್ಟುವುದು ಹೇಗೆ ಎಂಬ ಪುಸ್ತಕದ ಕುರಿತು ಲೇಖಕ ರಂಗಸ್ವಾಮಿ ಮೂಕನಹಳ್ಳಿ ಒಂದು ಟಿಪ್ಪಣಿ ಬರೆದು ಗಮನಸೆಳೆದಿದ್ದಾರೆ.

ಲೇಖಕ ರಂಗಸ್ವಾಮಿ ಮೂಕನಹಳ್ಳಿ ಮತ್ತು ಲೇಖಕ ಸತೀಶ್ ವೆಂಕಟಸುಬ್ಬು ಅವರು ಬರೆದ ಸೈಬರ್ ಕ್ರೈಮ್ ತಡೆಗಟ್ಟುವುದು ಹೇಗೆ ಎಂಬ ಪುಸ್ತಕದ ಮುಖಪುಟ.
ಲೇಖಕ ರಂಗಸ್ವಾಮಿ ಮೂಕನಹಳ್ಳಿ ಮತ್ತು ಲೇಖಕ ಸತೀಶ್ ವೆಂಕಟಸುಬ್ಬು ಅವರು ಬರೆದ ಸೈಬರ್ ಕ್ರೈಮ್ ತಡೆಗಟ್ಟುವುದು ಹೇಗೆ ಎಂಬ ಪುಸ್ತಕದ ಮುಖಪುಟ.

ಜನಸಾಮಾನ್ಯರು ಡಿಜಿಟಲ್ ಆಗಿ ಮುಂದುವರಿಯತ್ತಿರುವ ಈ ಕಾಲಘಟ್ಟದಲ್ಲಿ ವಂಚಕರು ಅವರಿಗಿಂತ ವೇಗವಾಗಿ ಅದನ್ನು ಬಳಸಿಕೊಂಡು ವಂಚನೆ ಎಸಗುತ್ತಿರುವ ಟ್ರೆಂಡ್ ಕಳವಳ, ಕಾಳಜಿಗಳನ್ನು ಹೆಚ್ಚಿಸಿದೆ. ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಲೇ ಇದೆ.

ಟ್ರೆಂಡಿಂಗ್​ ಸುದ್ದಿ

ಪತ್ರಿಕೆ, ಟೆಲಿವಿಷನ್, ಡಿಜಿಟಲ್ ಮಾಧ್ಯಮಗಳಲ್ಲೂ ಇದಕ್ಕೆ ಸಂಬಂಧಿಸಿದ ಲೇಖನ, ವಿಡಿಯೋ ಮಾಹಿತಿ ಎಲ್ಲವೂ ಪ್ರಸಾರವಾಗುತ್ತಲೇ ಇವೆ. ಸತೀಶ್ ವೆಂಕಟಸುಬ್ಬು ಅವರ ಸೈಬರ್ ಕ್ರೈಮ್‌ ತಡೆಗಟ್ಟುವುದು ಹೇಗೆ ಎಂಬ ಪುಸ್ತಕದ ಕುರಿತು ಲೇಖಕ ರಂಗಸ್ವಾಮಿ ಮೂಕನಹಳ್ಳಿ ಒಂದು ಟಿಪ್ಪಣಿ ಬರೆದು ಗಮನಸೆಳೆದಿದ್ದಾರೆ.

ಸೈಬರ್ ಕ್ರೈಂ ತಡೆಗಟ್ಟುವುದು ಹೇಗೆ?- ಸತೀಶ್ ವೆಂಕಟಸುಬ್ಬು ಅವರ ಕೃತಿ

ಸತೀಶ್ ವೆಂಕಟಸುಬ್ಬು ಅವರು ಮೂಲತಃ ಟೆಕ್ಕಿ . ಎರಡು ದಶಕಗಳ ಕಾಲ ಜಗತ್ತಿನ ವಿವಿಧ ದೇಶಗಳಲ್ಲಿ ಸಾಫ್ಟ್ವೇರ್ ಸಂಸ್ಥೆಗಳಲ್ಲಿ ದುಡಿದ ಅನುಭವ ಅವರಿಗೆ. ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು ಎನ್ನುವಂತೆ ಮೈಸೂರಿಗೆ ಮರಳಿದವರು. ಆದರೆ ಸುಮ್ಮನೆ ಕೂರುವ ಜಾಯಮಾನ ಅವರದ್ದಲ್ಲ , ಹೀಗಾಗಿ ಕಾಲೇಜಿಗೆ ಹೋಗಿ ಕಾನೂನು ಅಭ್ಯಾಸ ಮಾಡುತ್ತಾರೆ.

ಇಂದಿಗೆ ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಅಡ್ವೋಕೇಟ್ ಆಗಿ ತೊಡಗಿಸಿಕೊಂಡಿದ್ದಾರೆ. ಮೈಸೂರಿನ ಪ್ರಾದೇಶಿಕ ಪತ್ರಿಕೆ ' ಪ್ರತಿನಿಧಿ ' ಯಲ್ಲಿ ಸೈಬರ್ ಮಿತ್ರ ಹೆಸರಿನಲ್ಲಿ ಅಂಕಣಕಾರರಾಗಿ ಕೂಡ ಜನಪ್ರಿಯರು. ಸೈಬರ್ ಮಿತ್ರ ಹೆಸರಿನಲ್ಲಿ ವೆಬ್‌ಸೈಟ್ ಕೂಡ ಹೊಂದಿದ್ದಾರೆ.

ಸೈಬರ್ ಕ್ರೈಂ ಇಂದಿನ ದಿನದ ಅತಿ ದೊಡ್ಡ ಸಮಸ್ಯೆ. ಹಿಂದೆ ಮನೆಗೆ ನುಗ್ಗಿ ಕಳ್ಳತನ ಮಾಡಬೇಕಿತ್ತು. ಆದರೆ ಇಂದು ಕಳ್ಳತನದ ವ್ಯಖ್ಯಾನ ಬದಲಾಗಿದೆ. ಕೆಲವೊಮ್ಮೆ ನಮ್ಮ ಅನುಮತಿ ಪಡೆದು, ಕೆಲವೊಮ್ಮೆ ನಮ್ಮ ಅನುಮತಿಯಿಲ್ಲದೆ, ಬಹಳಷ್ಟು ಬಾರಿ ನಮ್ಮ ಅಜಾಗರೂಕತೆ ಕಾರಣ ಸೈಬರ್ ಕ್ರೈಂ ಘಟಿಸುತ್ತದೆ. ನಮ್ಮ ವರ್ಷಗಳ ಸಂಪಾದನೆ , ಉಳಿಕೆ ಸದ್ದಿಲ್ಲದೇ ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತದೆ.

ಆಗ ಏನು ಮಾಡಬೇಕು? ಯಾರನ್ನು ಕೇಳಬೇಕು? ತಕ್ಷಣ ಕಾರ್ಯಪ್ರವೃತ್ತರಾದರೆ ಹಣವನ್ನು ಮರಳಿ ಪಡೆದುಕೊಳ್ಳಬಹುದೇ? ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಅದೆಷ್ಟು ವಿಧದಲ್ಲಿ ನಮ್ಮನ್ನು ಲೂಟಿ ಮಾಡಲು ಈ ಖದೀಮರು ನಿಂತಿದ್ದಾರೆ ಎನ್ನುವುದನ್ನು ಎಳೆ ಎಳೆಯಾಗಿ ಸರಳವಾಗಿ ಬಿಡಿಸಿ ಹೇಳುವ ಪ್ರಯತ್ನದಲ್ಲಿ ಸತೀಶ್ ಗೆದ್ದಿದ್ದಾರೆ. ಈ ಆಘಾತಕ್ಕೆ ತುತ್ತಾದಾಗ ತಕ್ಷಣ ಏನು ಮಾಡಬೇಕು? ಸಮಸ್ಯೆ - ಸಮಾಧಾನ ಎರಡನ್ನೂ ಇಲ್ಲಿ ಸತೀಶ್ ನೀಡಿದ್ದಾರೆ.

ಹೆಚ್ಚುತ್ತಿರುವ ಸೈಬರ್ ಕ್ರೈಂ ಅಪರಾಧಗಳನ್ನು ತಡೆಗಟ್ಟುವುದು ಸರಕಾರದ ಕೆಲಸ ಎಂದು ಸುಮ್ಮನೆ ಕೂರುವಂತಿಲ್ಲ. ಅದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಂಡು ಜಾಗ್ರತರಾಗಿರಬೇಕಾದದ್ದು ನಾಗರಿಕರ ಕರ್ತವ್ಯ. ಆ ನಿಟ್ಟಿನಲ್ಲಿ ಸತೀಶ್ ವೆಂಕಟಸುಬ್ಬು ಅವರ ಸೈಬರ್ ಕ್ರೈಂ ತಡೆಗಟ್ಟುವುದು ಹೇಗೆ? ಸಹಾಯ ಮಾಡಲಿದೆ.

  • ರಂಗಸ್ವಾಮಿ ಮೂಕನಹಳ್ಳಿ

ಓದುಗರ ಪ್ರತಿಕ್ರಿಯೆಗಳು ಹೀಗಿವೆ…

“ಅಭಿನಂದನೆಗಳು... ಸತೀಶ್ ವೆಂಕಟಸುಬ್ಬು. ಇಂದಿನ ದಿನಗಳಲ್ಲಿ ನಡೆಯುತ್ತಿರುವ ವಿಸ್ಮಯ ಮಾಯಾಲೋಕದ ಕಳ್ಳತನದ ವಿಷಯದ ಬಗ್ಗೆ ವಿವರವಾದ ಮಾಹಿತಿ ಖಂಡಿತವಾಗಿಯೂ ಇಂದಿನ ಯುವಜನಾಂಗಕ್ಕೆ ಬೇಕಿದೆ, ನಿಮ್ಮ ಪುಸ್ತಕ ಹೆಚ್ಚು ಹೆಚ್ಚು ಯುವಕರ ಕೈಸೇರಲಿ ..... ಒಳ್ಳೆಯದಾಗಲಿ” ಎಂದು ಶ್ಯಾಮಪ್ರಕಾಶ್ ಮಾನಂ ಪ್ರತಿಕ್ರಿಯಿಸಿದ್ದಾರೆ.

ರಂಗಸ್ವಾಮಿಯವರ ಬರೆಹಕ್ಕೆ ಸತೀಶ್ ವೆಂಕಟಸುಬ್ಬು ಕೂಡ ಪ್ರತಿಕ್ರಿಯೆ ನೀಡಿದ್ದು, “ನನ್ನ ಮುಂಬರುವ ಸೈಬರ್ ಕ್ರೈಂ ಪುಸ್ತಕದ ಬಗ್ಗೆ ಇಷ್ಟು ಚೆನ್ನಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು. ಈ ಪುಸ್ತಕದಲ್ಲಿ ನಾನು 24 ಕ್ಕೂ ಹೆಚ್ಚು ವಿವಿಧ ಸೈಬರ್ ಅಪರಾಧಗಳಲ್ಲಿ - ಸೈಬರ್ ಕ್ರೈಂ ಹೇಗೆ ನಡೆಯುತ್ತೆ, ತಡೆಗಟ್ಟಲು ಮುನ್ನೆಚರಿಕ ಕ್ರಮಗಳೇನು ಮತ್ತು ಸೈಬರ್ ಅಪರಾಧದ ಸಂತ್ರಸ್ಥರಿಗೆ ಲಭ್ಯವಿರುವ ಕಾನೂನಾತ್ಮಕವಾಗಿ ಹಾಗೂ ಇತರ ಮಾರ್ಗಗಳ ಬಗ್ಗೆ ವಿವರಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಇದು ಹೆಚ್ಚಿನ ಜನರಿಗೆ ತಲುಪಿ ಸೈಬರ್ ಅಪರಾಧದಿಂದ ಜನ ಬಚಾವಾದರೆ ಅದೇ ನನ್ನ ಎಲ್ಲಾ ಪರಿಶ್ರಮಕ್ಕೆ ಸಿಗುವ ದೊಡ್ಡ ಬಹುಮಾನ” ಎಂದು ಹೇಳಿದ್ದಾರೆ.

IPL_Entry_Point