logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇಂದ್ರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆಯೂ ಸುದ್ದಿಯಾಗುತ್ತೆ, ಈ ಹಿಂದೆ ಅವರು ಉಟ್ಟಿದ್ದ ಸೀರೆಗಳಿವು

ಕೇಂದ್ರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆಯೂ ಸುದ್ದಿಯಾಗುತ್ತೆ, ಈ ಹಿಂದೆ ಅವರು ಉಟ್ಟಿದ್ದ ಸೀರೆಗಳಿವು

Jan 30, 2024 11:48 AM IST

ಫೆಬ್ರುವರಿ 1ರಂದು ಕೇಂದ್ರ ಮಧ್ಯಂತರ ಬಜೆಟ್‌ ಇದ್ದು, ಈ ಬಾರಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಲಿದ್ದಾರೆ. ಸತತ ಆರನೇ ಬಾರಿಗೆ ಬಜೆಟ್‌ ಮಂಡಿಸಲಿರುವ ನಿರ್ಮಲಾ ಅವರು ಪ್ರತಿ ಬಾರಿ ಬಜೆಟ್‌ ಮಂಡಿಸುವಾಗ ಉಟ್ಟಿದ ಸೀರೆಗಳ ಸಚಿತ್ರ ನೋಟ ನಿಮಗಾಗಿ.

  • ಫೆಬ್ರುವರಿ 1ರಂದು ಕೇಂದ್ರ ಮಧ್ಯಂತರ ಬಜೆಟ್‌ ಇದ್ದು, ಈ ಬಾರಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಲಿದ್ದಾರೆ. ಸತತ ಆರನೇ ಬಾರಿಗೆ ಬಜೆಟ್‌ ಮಂಡಿಸಲಿರುವ ನಿರ್ಮಲಾ ಅವರು ಪ್ರತಿ ಬಾರಿ ಬಜೆಟ್‌ ಮಂಡಿಸುವಾಗ ಉಟ್ಟಿದ ಸೀರೆಗಳ ಸಚಿತ್ರ ನೋಟ ನಿಮಗಾಗಿ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 2019ರಿಂದ ಬಜೆಟ್‌ ಮಂಡಿಸುತ್ತಿದ್ದಾರೆ. ಈ ಬಾರಿ ಅಂದರೆ ಫೆಬ್ರುವರಿ 1 ರಂದು ನಡೆಯುವ ಮಧ್ಯಂತರ ಬಜೆಟ್‌ ಅನ್ನು ಕೂಡ ಇವರೇ ಮಂಡಿಸುತ್ತಿದ್ದು, ಇದು ಇವರ 6ನೇ ಬಜೆಟ್‌ ಆಗಿದೆ. ಪ್ರತಿ ಬಾರಿಯೂ ನಿರ್ಮಲಾ ಅವರು ಮಂಡಿಸುವ ಬಜೆಟ್‌ ಜೊತೆಗೆ ಅವರು ಉಟ್ಟಿದ್ದ ಸೀರೆ ಕೂಡ ಸುದ್ದಿಯಾಗುತ್ತದೆ. 2019ರಲ್ಲಿ ಬಜೆಟ್‌ ಮಂಡಿಸುವಾಗ ನಿರ್ಮಲಾ ಅವರು ಉಟ್ಟಿದ್ದ ಸೀರೆ ಇದು.
(1 / 6)

2020ರಲ್ಲಿ ಹಳದಿ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್‌: 2020ರಲ್ಲಿ ನಿರ್ಮಲಾ ಸೀತಾರಾಮನ್‌ ಎರಡನೇ ಬಾರಿಗೆ ಬಜೆಟ್‌ ಮಂಡಿಸಿದ್ದರು. ಆಗ ಅವರು ಹಳದಿ ಬಣ್ಣದ ಸೀರೆ ಉಟ್ಟಿದ್ದರು. 
(2 / 6)

2021ರ ಸೀರೆ: 2021ರಲ್ಲಿ ಬಜೆಟ್‌ ಮಂಡಿಸುವ ದಿನ ನಿರ್ಮಲಾ ಸೀತಾರಾಮನ್‌ ಬಿಳಿ ಬಣ್ಣದ ಕೆಂಪು ಅಂಚಿನ ಸೀರೆ ಧರಿಸಿದ್ದರು. 2021ರಲ್ಲಿ ಮೂರನೇ ಬಾರಿಗೆ ಬಜೆಟ್‌ ಮಂಡಿಸಿದ್ದರು ನಿರ್ಮಲಾ. 
(3 / 6)

2022ರ ನೋಟ: 2022ರಲ್ಲಿ ಭಾರತದ ಹಣಕಾಸು ಸಚಿವೆಯಾಗಿ ಸಂಸತ್ತಿನ ಮುಂದೆ ಬಜೆಟ್‌ ಮಂಡಿಸಿದ್ದರು ನಿರ್ಮಲಾ. ಇದು ಅವರು ಮಂಡಿಸಿದ್ದ ನಾಲ್ಕನೇ ಬಜೆಟ್‌ ಆಗಿತ್ತು. 
(4 / 6)

2023ರ ಬಜೆಟ್‌: 2023ರಲ್ಲೂ ಬಜೆಟ್‌ ಮಂಡಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೆಂಪು ಬಣ್ಣದ ಉಟ್ಟಿದ್ದರು. 
(5 / 6)

ಈ ಬಾರಿ ನಿರ್ಮಲಾ ಸೀತಾರಾಮನ್‌ 6ನೇ ಬಾರಿ ಬಜೆಟ್‌ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ ಪೇಪರ್‌ಲೆಸ್‌ ಬಜೆಟ್‌ ಆಗಿರಲಿದೆ. ಬಜೆಟ್‌ ದಾಖಲೆಯನ್ನು ಸಂಸತ್ತಿನಲ್ಲಿ ಮಂಡಿಸುವ 6 ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ. ಸದನದಲ್ಲಿ ಬಜೆಟ್ ಮಂಡನೆಗೂ ಮುನ್ನ ‘ಹಲ್ವಾ’ ಸಮಾರಂಭ ನಡೆಯುತ್ತದೆ. ಬಜೆಟ್‌ ಮಂಡನೆಗೆ ಒಂದು ದಿನ ಮುಂಚಿತವಾಗಿ, ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತದೆ ಮತ್ತು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಜಂಟಿ ಭಾಷಣದಲ್ಲಿ ಉಭಯ ಸದನಗಳಲ್ಲಿ ಮಾತನಾಡುತ್ತಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು