logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  List Of Discontinuing Cars In India 2023: ಕಣ್ಮರೆಯಾಗಲಿವೆ ಆಲ್ಟೊ 800 ಸೇರಿ 17 ಕಾರುಗಳು!; ಯಾಕೆ? ಏನು ಕಾರಣ- ಇಲ್ಲಿದೆ ವಿವರ

List of discontinuing cars in India 2023: ಕಣ್ಮರೆಯಾಗಲಿವೆ ಆಲ್ಟೊ 800 ಸೇರಿ 17 ಕಾರುಗಳು!; ಯಾಕೆ? ಏನು ಕಾರಣ- ಇಲ್ಲಿದೆ ವಿವರ

HT Kannada Desk HT Kannada

Dec 19, 2022 09:31 PM IST

google News

ಹೊಸ ವರ್ಷ ಶುರುವಾಗುತ್ತಿರುವಂತೆಯೇ ವಿವಿಧ ಮಾಡೆಲ್‌ಗಳ ಕಾರುಗಳ ದರ ಏರಿಕೆಯನ್ನು ವಿವಿಧ ಕಂಪನಿಗಳು ಘೋಷಿಸಿವೆ. ಈಗ ಏಪ್ರಿಲ್‌ ಒಳಗೆ ಆಲ್ಟೋ 800 ಸೇರಿ 17 ಮಾಡೆಲ್‌ ಕಾರುಗಳು ಕಣ್ಮರೆಯಾಗಲಿವೆ.

  • Cars to be discontinued by april 2023: ಮುಂದಿನ ವರ್ಷ ಏಪ್ರಿಲ್‌ನಿಂದ ಆಲ್ಟೋ 800, ಕ್ವಿಡ್‌ 800 ಸೇರಿ 17 ಕಾರುಗಳು ಕಣ್ಮರೆಯಾಗಲಿವೆ. ಹೊಸದಾಗಿ ಅನ್ವಯವಾಗುವ ರಿಯಲ್‌ ಡ್ರೈವಿಂಗ್‌ ಎಮಿಷನ್‌ ನಿಯಮಗಳ ಕಾರಣ ಈ ಕಾರುಗಳ ಉತ್ಪಾದನೆಯನ್ನು ಕಂಪನಿಗಳು ನಿಲ್ಲಿಸುತ್ತಿವೆ. ಯಾವ್ಯಾವ ಕಾರುಗಳು ಇಲ್ಲಿದೆ ವಿವರ.

ಹೊಸ ವರ್ಷ ಶುರುವಾಗುತ್ತಿರುವಂತೆಯೇ ವಿವಿಧ ಮಾಡೆಲ್‌ಗಳ ಕಾರುಗಳ ದರ ಏರಿಕೆಯನ್ನು ವಿವಿಧ ಕಂಪನಿಗಳು ಘೋಷಿಸಿವೆ. ಈಗ ಏಪ್ರಿಲ್‌ ಒಳಗೆ ಆಲ್ಟೋ 800 ಸೇರಿ 17 ಮಾಡೆಲ್‌ ಕಾರುಗಳು ಕಣ್ಮರೆಯಾಗಲಿವೆ.
ಹೊಸ ವರ್ಷ ಶುರುವಾಗುತ್ತಿರುವಂತೆಯೇ ವಿವಿಧ ಮಾಡೆಲ್‌ಗಳ ಕಾರುಗಳ ದರ ಏರಿಕೆಯನ್ನು ವಿವಿಧ ಕಂಪನಿಗಳು ಘೋಷಿಸಿವೆ. ಈಗ ಏಪ್ರಿಲ್‌ ಒಳಗೆ ಆಲ್ಟೋ 800 ಸೇರಿ 17 ಮಾಡೆಲ್‌ ಕಾರುಗಳು ಕಣ್ಮರೆಯಾಗಲಿವೆ.

ಹೊಸ ವರ್ಷ ಶುರುವಾಗುತ್ತಿರುವಂತೆಯೇ ವಿವಿಧ ಮಾಡೆಲ್‌ಗಳ ಕಾರುಗಳ ದರ ಏರಿಕೆಯನ್ನು ವಿವಿಧ ಕಂಪನಿಗಳು ಘೋಷಿಸಿವೆ. ಈಗ ಏಪ್ರಿಲ್‌ ಒಳಗೆ ಆಲ್ಟೋ 800 ಸೇರಿ 17 ಮಾಡೆಲ್‌ ಕಾರುಗಳು ಕಣ್ಮರೆಯಾಗಲಿವೆ.

ವರದಿಗಳ ಪ್ರಕಾರ, ವಿವಿಧ ವಾಹನ ಉತ್ಪಾದಕರು ಏಪ್ರಿಲ್‌ 2023ರಿಂದ 17 ಮಾಡೆಲ್‌ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿವೆ. ಯಾಕೆ? ಎನ್ನುವ ಪ್ರಶ್ನೆಗೆ ಹೊಸ ರಿಯಲ್‌ ಡ್ರೈವಿಂಗ್‌ ಎಮಿಷನ್‌ (ಆರ್‌ಡಿಇ) ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂಬ ಉತ್ತರ ಸಿಕ್ಕಿದೆ. ಈ ನಿಯಮಗಳ ಮಾನದಂಡಕ್ಕೆ 17 ಮಾಡೆಲ್‌ಗಳು ಹೊಂದಿಕೆ ಆಗದ ಕಾರಣ ಅದರ ಉತ್ಪಾದನೆಯನ್ನು ನಿಲ್ಲಿಸಲು ಕಂಪನಿಗಳು ಮುಂದಾಗಿವೆ.

ರಿಯಲ್‌ ಡ್ರೈವಿಂಗ್‌ ಎಮಿಷನ್‌ ನಿಯಮಗಳೇನು? (What are Real Driving Emission (RDE) norms?)

ರಿಯಲ್‌ ಡ್ರೈವಿಂಗ್‌ ಎಮಿಷನ್‌ ನಿಯಮ ಪ್ರಕಾರ, ನೈಜ-ಸಮಯದ ಡ್ರೈವಿಂಗ್ ಎಮಿಷನ್ ಮಟ್ಟದ ಮೇಲ್ವಿಚಾರಣೆ ಮಾಡಲು ವಾಹನಗಳು ಆನ್‌ಬೋರ್ಡ್ ಸೆಲ್ಫ್‌ ಡಯಾಗ್ನಾಸ್ಟಿಕ್‌ ಡಿವೈಸ್‌ ಹೊಂದಿರಬೇಕು. ಈ ಉಪಕರಣವು ನಿರಂತರವಾಗಿ ಎಮಿಷನ್‌ ಮಾನದಂಡಗಳ ಪ್ರಮುಖ ಅಂಶಗಳ ಮೇಲೆ ಅಂದರೆ ಹೊರಸೂಸುವಿಕೆಯ ಮೇಲೆ ನಿಕಟ ನಿಗಾ ಇರಿಸಲು ವೇಗವರ್ಧಕ ಪರಿವರ್ತಕ ಮತ್ತು ಆಮ್ಲಜನಕ ಸಂವೇದಕಗಳನ್ನು ಹೊಂದಿದೆ. ಆರ್‌ಡಿಇಯನ್ನು BS-VI ಹೊರಸೂಸುವಿಕೆಯ ಮಾನದಂಡದ ಎರಡನೇ ಹಂತ ಎಂದು ಹೇಳಲಾಗುತ್ತಿದೆ. ಇದರ ಮೊದಲ ಹಂತವು 2020 ರಲ್ಲಿ ಪ್ರಾರಂಭವಾಯಿತು. ಆರ್‌ಡಿಇ ಪರೀಕ್ಷೆಯು RDE ಪರೀಕ್ಷೆಯು ವಾಹನಗಳು ಹೊರಸೂಸುವ NOx ನಂತಹ ಮಾಲಿನ್ಯಕಾರಕಗಳನ್ನು ಕೇವಲ ಪ್ರಯೋಗಾಲಯದ ಬದಲಿಗೆ ನೈಜ-ಜೀವನದ ಪರಿಸರದಲ್ಲಿ ಅಳೆಯುತ್ತದೆ. ಇದು ಉತ್ತಮ ಅನುಸರಣೆಗೆ ಅನುಕೂಲ ಮಾಡಿಕೊಡುತ್ತದೆ.

ಥ್ರೊಟಲ್, ಕ್ರ್ಯಾಂಕ್‌ಶಾಫ್ಟ್ ಸ್ಥಾನಗಳು, ಏರ್‌ ಇನ್‌ಟೇಕ್ ಪ್ರೆಷರ್‌, ಎಂಜಿನ್‌ನ ತಾಪಮಾನ ಮತ್ತು ನಿಷ್ಕಾಸದಿಂದ ಹೊರಸೂಸುವ ಪರ್ಟಿಕ್ಯುಲೇಟ್ ಮ್ಯಾಟರ್, ನೈಟ್ರೋಜನ್ ಆಕ್ಸೈಡ್, ಇಂಗಾಲದಾಮ್ಲ ಇತ್ಯಾದಿ ಮೇಲ್ವಿಚಾರಣೆ ಮಾಡಲು ವಾಹನವು ಬಳಸುವ ಅರೆವಾಹಕಗಳನ್ನು ಸಹ ನವೀಕರಿಸಬೇಕಾಗುತ್ತದೆ. ಇದಲ್ಲದೆ, ಇಂಧನವನ್ನು ಸುಡುವ ಮಟ್ಟವನ್ನು ನಿಯಂತ್ರಿಸಲು ವಾಹನಗಳು ಪ್ರೋಗ್ರಾಮ್ ಮಾಡಲಾದ ಇಂಧನ ಇಂಜೆಕ್ಟರ್‌ಗಳನ್ನು ಸಹ ಹೊಂದಿರುತ್ತವೆ.

ಇದರಂತೆ ಕಾರು ತಯಾರಕರು ತಮ್ಮ ಕಾರ್ ಇಂಜಿನ್‌ಗಳನ್ನು ನವೀಕರಿಸುವ ಅಗತ್ಯವಿರುತ್ತದೆ. ಅದು ಅಸ್ತಿತ್ವದಲ್ಲಿರುವ ಎಂಜಿನ್‌ಗಳಿಗಿಂತ ಹೆಚ್ಚು ದುಬಾರಿ. ಡೀಸೆಲ್ ಕಾರುಗಳ ಮೇಲೆ ಈ ಹೊಸ ಎಮಿಷನ್ ಮಾನದಂಡಗಳು ಹೆಚ್ಚು ಪರಿಣಾಮ ಬೀರುವುದು. ವರದಿಗಳ ಪ್ರಕಾರ, ಕಂಪನಿಗಳು ಹೊಸ ನಿಯಮಗಳನ್ನು ಪಾಲಿಸುವುದಕ್ಕಾಗಿ ಕೆಲವು ಮಾಡೆಲ್‌ಗಳ ಉತ್ಪಾದನೆಯನ್ನು ಕೈಬಿಡಲಿವೆ. ಅವು ಯಾವುವು ಎಂಬ ಕುತೂಹಲ ತಣಿಸುವ ಮಾಹಿತಿ ಇಲ್ಲಿದೆ.

ಏಪ್ರಿಲ್‌ 2023ರಿಂದ ಕಣ್ಮರೆಯಾಗಲಿರುವ ಕಾರುಗಳ ಮಾಡೆಲ್‌ಗಳಿವು (Here’s a list of cars that may not run on roads from April 2023)

  • ಟಾಟಾ ಅಲ್ಟ್ರೋಝ್‌ ಡೀಸೆಲ್‌ (Tata Altroz ​​Diesel)
  • ಮಹಿಂದ್ರಾ ಮರಝ್ಝೋ ( Mahindra Marazzo)
  • ಮಹಿಂದ್ರಾ ಅಲ್ಟುರಸ್‌ ಜಿ4 ( Mahindra Alturas G4 )
  • ಮಹಿಂದ್ರಾ ಕೆಯುವಿ 100 (Mahindra KUV100)
  • ಸ್ಕೋಡಾ ಒಕ್ಟಾವಿಯಾ (Skoda Octavia)
  • ಸ್ಕೋಡಾ ಸುಪರ್ಬ್‌ (Skoda Superb)
  • ರೆನಾಲ್ಟ್‌ ಕ್ವಿಡ್‌ 800 (Renault Kwid 800)
  • ನಿಸಾನ್‌ ಕಿಕ್ಸ್‌ ( Nissan Kicks)
  • ಮಾರುತಿ ಸುಜುಕಿ ಆಲ್ಟೋ 800 (Maruti Suzuki Alto 800)
  • ಟೊಯೊಟಾ ಇನ್ನೋವಾ ಕ್ರಿಸ್ಟಲ್‌ ಪೆಟ್ರೋಲ್‌ ( Toyota Innova Crysta Petrol)
  • ಹ್ಯುಂಡೈ i20 ಡೀಸೆಲ್‌ ( Hyundai i20 Diesel)
  • ಹ್ಯುಂಡೈ ವರ್ನಾ ಡೀಸೆಲ್‌ (Hyundai Verna Diesel)
  • ಹೊಂಡಾ ಸಿಟಿ 4th ಜೆನ್‌ (Honda City 4th Gen )
  • ಹೊಂಡಾ ಸಿಟಿ 5th ಜೆನ್‌ ಡೀಸೆಲ್‌ ( Honda City 5th Gen Diesel)
  • ಹೊಂಡಾ ಅಮೇಜ್‌ ಡೀಸೆಲ್‌ (Honda Amaze Diesel)
  • ಹೊಂಡಾ ಜಝ್‌ (Honda Jazz)
  • ಹೊಂಡಾ ಡಬ್ಲ್ಯುಆರ್‌-ವಿ ( Honda WR-V)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ