ಸರ್ಕಾರಿ ರಜಾದಿನಗಳು 2025; ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ ಸರ್ಕಾರ, ಯಾವಾಗೆಲ್ಲ ರಜೆ ಇದೆ, ಇಲ್ಲಿದೆ ಪೂರ್ಣ ವಿವರ
Nov 10, 2024 03:47 PM IST
ಸರ್ಕಾರಿ ರಜಾದಿನಗಳು 2025; ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ ಸರ್ಕಾರ. (ಸಾಂಕೇತಿಕ ಚಿತ್ರ)
ಕೇಂದ್ರ ಸರ್ಕಾರ 2025ನೇ ಸಾಲಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಡ್ಡಾಯ ರಜಾದಿನಗಳು ಮತ್ತು ಐಚ್ಛಿಕ ರಜಾದಿನಗಳ ವಿವರ ಇದೆ. ಮುಂಚಿತವಾಗಿ ರಜಾದಿನಗಳ ಕಾರ್ಯಕ್ರಮಗಳನ್ನು ಯೋಜಿಸುವವರಿಗೆ ಇದು ಅನುಕೂಲಕರವಾಗಿದ್ದು ಪೂರ್ಣ ವಿವರ ಇಲ್ಲಿದೆ.
ನವದೆಹಲಿ: ಕೇಂದ್ರ ಸರ್ಕಾರ ಈಗಾಗಲೇ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಂತೆ, ಎರಡು ವಿಧದ ರಜಾದಿನಗಳ ವಿವರ ಅಧಿಸೂಚನೆಯಲ್ಲಿದೆ. ಮೊದಲನೇಯದು ಕಡ್ಡಾಯ ಅಥವಾ ಗಜೆಟೆಡ್ ರಜೆಯಾದರೆ, ಇನ್ನೊಂದು ನಿರ್ಬಂಧಿತ ರಜೆ. ಈ ರಜೆಗಳ ಪಟ್ಟಿಯಲ್ಲಿ ಧಾರ್ಮಿಕ ಹಬ್ಬ, ರಾಷ್ಟ್ರೀಯ ಹಬ್ಬಗಳ ದಿನಗಳೂ ಸೇರಿಕೊಂಡಿವೆ. ದೆಹಲಿ/ನವದೆಹಲಿಯ ಹೊರಗೆ ಇರುವ ಕೇಂದ್ರ ಸರ್ಕಾರದ ಆಡಳಿತ ಕಚೇರಿಗಳು 12 ಐಚ್ಛಿಕ ರಜಾದಿನಗಳಲ್ಲಿ ಮೂರು ರಜಾದಿನಗಳನ್ನು ಆಯ್ಕೆ ಮಾಡುವುದರ ಜೊತೆಗೆ ಕಡ್ಡಾಯ ರಜಾದಿನಗಳನ್ನು ಹೊಂದಿರಲಿವೆ.
ಗಜೆಟ್ ರಜಾದಿನಗಳು 2025
1. ಗಣರಾಜ್ಯೋತ್ಸವ, 2. ಸ್ವಾತಂತ್ರ್ಯ ದಿನ, 3. ಗಾಂಧಿ ಜಯಂತಿ, 4. ಬುದ್ಧ ಪೂರ್ಣಿಮೆ, 5. ಕ್ರಿಸ್‌ಮಸ್, 6. ದಸರಾ (ವಿಜಯ ದಶಮಿ) 7. ದೀಪಾವಳಿ (ದೀಪಾವಳಿ) 8. ಶುಭ ಶುಕ್ರವಾರ 9. ಗುರುನಾನಕರ ಜನ್ಮದಿನ 10. ಇದುಲ್ ಫಿತ್ರ್ 11. ಇದುಲ್ ಜುಹಾ 12. ಮಹಾವೀರ ಜಯಂತಿ 13. ಮೊಹಮ್ಮದ್ 14. ಪ್ರವಾದಿ ಮೊಹಮ್ಮದ್ ಅವರ (ಐಡಿ-ಇ-ಮಿಲಾದ್)
ಐಚ್ಛಿಕ ರಜಾದಿನಗಳು 2025
1. ದಸರಾಕ್ಕೆ ಹೆಚ್ಚುವರಿ ದಿನ 2. ಹೋಳಿ 3. ಜನ್ಮಾಷ್ಟಮಿ (ವೈಷ್ಣವಿ) 4. ರಾಮ ನವಮಿ 5. ಮಹಾ ಶಿವರಾತ್ರಿ 6. ಗಣೇಶ ಚತುರ್ಥಿ / ವಿನಾಯಕ ಚತುರ್ಥಿ 7. ಮಕರ ಸಂಕ್ರಾಂತಿ 8. ರಥಯಾತ್ರೆ 9. ಓಣಂ 10 ಪೊಂಗಲ್ 11. ಶ್ರೀ ಪಂಚಮಿ / ಬಸಂತ್ ಪಂಚಮಿ 12. ವಿಷು / ಬೈಶಾಖಿ / ವೈಶಾಖಾದಿ / ಭಾಗ್ ಬಿಹು / ಮಾಶಾದಿ ಉಗಾದಿ / ಚೈತ್ರ ಶುಕ್ಲಾಡಿ / ಚೇಟಿ ಚಂದ್ / ಗುಡಿ ಪದವ / 1 ನೇ ನವರಾತ್ರ ಐನ ರೋಜ್/ಛತ್‌ಪೂಜಾ, ಕರ್ವಾ ಚೌತ್ ಇವೆ. ಪ್ರಾದೇಶಿಕ ಹಬ್ಬಗಳಿಗೂ ಸರ್ಕಾರ ಐಚ್ಛಿಕ ರಜೆ ಘೋಷಿಸಿದೆ.