logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Challenges Before Kejriwal: ಸಿಸೋಡಿಯಾ ಬಂಧನದ ಕೇಜ್ರಿವಾಲ್‌ಗೆ ಎದುರಾಗಿರುವ ಸವಾಲುಗಳೇನು?

Challenges before Kejriwal: ಸಿಸೋಡಿಯಾ ಬಂಧನದ ಕೇಜ್ರಿವಾಲ್‌ಗೆ ಎದುರಾಗಿರುವ ಸವಾಲುಗಳೇನು?

HT Kannada Desk HT Kannada

Feb 27, 2023 10:47 AM IST

ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

  • Challenges before Kejriwal: ಮನೀಷ್ ಸಿಸೋಡಿಯಾ ಅವರ ಬಂಧನದ ವಿದ್ಯಮಾನವು, ಎಎಪಿಗೆ ತನ್ನ ಪ್ರಮುಖ ಕಾರ್ಯಕ್ರಮಗಳನ್ನು ಪ್ರಚಾರ ಮಾಡಿ ರಾಷ್ಟ್ರವ್ಯಾಪಿ ರಾಜಕೀಯ ಹೆಜ್ಜೆಗುರುತನ್ನು ಛಾಪಿಸುವ ಯೋಜನೆಗಳಿಗೆ ಹೊಡೆತ ನೀಡಬಹುದು.

ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (PTI file)

ಕಳೆದ ವರ್ಷ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿತ್ತು. ಈಗ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಹೀಗೆ ಬಂಧಿಸಲ್ಪಟ್ಟ ಆಮ್ ಆದ್ಮಿ ಪಕ್ಷದ (ಎಎಪಿ) ಎರಡನೇ ನಾಯಕ ಸಿಸೋಡಿಯಾ ಆಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ವಿಶ್ವಾಸಾರ್ಹ ನಾಯಕ ಸಿಸೋಡಿಯಾ ಒಟ್ಟು 33 ಇಲಾಖೆಗಳಲ್ಲಿ 18 ಖಾತೆಗಳನ್ನು ಹೊಂದಿದ್ದಾರೆ. ಅವರ ಬಂಧನವು ಪಕ್ಷವನ್ನು ಸಂಘಟನೆ ವಿಸ್ತರಿಸುವ ದೆಹಲಿ ಮುಖ್ಯಮಂತ್ರಿಯ ಯೋಜನೆಗೆ ಭಾರಿ ಹಿನ್ನಡೆಯಾಗಬಹುದು.

ಟ್ರೆಂಡಿಂಗ್​ ಸುದ್ದಿ

Gold Rate Today: ತುಸು ಇಳಿಕೆಯಾದ್ರೂ ಗ್ರಾಹಕರಿಗೆ ಸಂತಸ ನೀಡದ ಚಿನ್ನದ ಬೆಲೆ; ಇಂದು ಕೂಡ ಬೆಳ್ಳಿ ದರ ಹೆಚ್ಚಳ

ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ; ದುರದೃಷ್ಟಕರ ಎನ್ನುತ್ತ ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಏನಂದ್ರು

ದೆಹಲಿಯ ಶಿಕ್ಷಣ ಮಾದರಿಯ ಮುಖವಾದ ಸಿಸೋಡಿಯಾ ಅವರ ಬಂಧನವು ಪಕ್ಷದ ಪ್ರಮುಖ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಮೂಲಕ ರಾಷ್ಟ್ರವ್ಯಾಪಿ ರಾಜಕೀಯ ಹೆಜ್ಜೆಗುರುತನ್ನು ಛಾಪಿಸುವ ಪಕ್ಷದ ಯೋಜನೆಗಳಿಗೆ ಹೊಡೆತ ನೀಡಬಹುದು.

ಇನ್ನು ಯಾರು ಆ 18 ಇಲಾಖೆಗಳ ಕೆಲಸ ನಿರ್ವಹಿಸುತ್ತಾರೆ?

ಕಳೆದ ವರ್ಷ ಮೇನಲ್ಲಿ ಸತ್ಯೇಂದ್ರ ಜೈನ್ ಬಂಧನದ ನಂತರ ಸಿಸೋಡಿಯಾ ಅವರ ಜವಾಬ್ದಾರಿಯೂ ಹೆಚ್ಚಿತ್ತು. ಪ್ರಸ್ತುತ, ಅವರು ದೆಹಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇರಿ 18 ಖಾತೆಗಳನ್ನು ನಿರ್ವಹಿಸುತ್ತಿದ್ದರು.

ಆದರೆ, ಇವೆಲ್ಲಕ್ಕಿಂತ ದೊಡ್ಡ ಹಿನ್ನಡೆ ಶಿಕ್ಷಣ ಇಲಾಖೆಯಲ್ಲಿ ಕಂಡುಬರುತ್ತಿದೆ. ಎಎಪಿ ಅವರನ್ನು "ಭಾರತದ ಅತ್ಯುತ್ತಮ ಶಿಕ್ಷಣ ಮಂತ್ರಿ" ಎಂದು ಬಿಂಬಿಸಿದೆ.

ದೆಹಲಿ ಸರ್ಕಾರದ ಬಜೆಟ್ ಅನ್ನು ನಿಗದಿಯಂತೆ ಮಂಡಿಸುವುದು ಮತ್ತು ಸಿಸೋಡಿಯಾ ಅವರ ಸ್ಥಾನ ತುಂಬಬಲ್ಲವರನ್ನು ಕಂಡುಹಿಡಿಯುವುದು ಕೇಜ್ರಿವಾಲ್‌ಗೆ ತತ್‌ಕ್ಷಣದ ಸವಾಲಾಗಿದೆ. ಕಂದಾಯ ಸಚಿವ ಕೈಲಾಶ್ ಗಹ್ಲೋಟ್ ಅವರು ಮುಂದಿನ ಹಣಕಾಸು ವರ್ಷಕ್ಕೆ ದೆಹಲಿ ಸರ್ಕಾರದ ಬಜೆಟ್ ಅನ್ನು ಮಂಡಿಸಬಹುದು.

ಮಾರ್ಚ್ ಮೊದಲ ವಾರದಲ್ಲಿ ಅಧಿವೇಶನ ನಡೆಯಬಹುದು. 2014ರಲ್ಲಿ ದೆಹಲಿಯಲ್ಲಿ ಸರ್ಕಾರ ರಚನೆಯಾದಾಗಿನಿಂದ ಸಿಸೋಡಿಯಾ ಬಜೆಟ್‌ ಮಂಡಿಸುತ್ತ ಬಂದಿದ್ದಾರೆ.

ದೆಹಲಿ ಸರ್ಕಾರದ 18 ಇಲಾಖೆಗಳ ಹೊಣೆಗಾರಿಕೆ ಹೊತ್ತಿದ್ದ ಸಿಸೋಡಿಯಾ

ದೆಹಲಿ ಸರ್ಕಾರದ ವೆಬ್‌ಸೈಟ್‌ಗಳ ಪ್ರಕಾರ, ಸರ್ಕಾರದಲ್ಲಿ ಒಟ್ಟು 33 ಇಲಾಖೆಗಳಿವೆ. ಇವರಲ್ಲಿ ಆರೋಗ್ಯ, ಶಿಕ್ಷಣ, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ), ಸೇವೆಗಳು, ಹಣಕಾಸು, ವಿದ್ಯುತ್, ಗೃಹ ಮತ್ತು ನಗರಾಭಿವೃದ್ಧಿ ಸೇರಿ 18 ಮಂದಿಯನ್ನು ಸಿಸೋಡಿಯಾ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಸಚಿವರಿಗೆ ನಿರ್ದಿಷ್ಟವಾಗಿ ಹಂಚಿಕೆಯಾಗದ ಇತರ ಎಲ್ಲ ಇಲಾಖೆಗಳ ಉಸ್ತುವಾರಿಯನ್ನೂ ಅವರು ಹೊಂದಿದ್ದಾರೆ.

ಇತರೆ ಖಾತೆಗಳನ್ನು ಯಾರು ನೋಡಿಕೊಳ್ಳುತ್ತಿದ್ದಾರೆ?

ಕೇಜ್ರಿವಾಲ್ ಹೊರತುಪಡಿಸಿ, ದೆಹಲಿ ಸರ್ಕಾರವು ಆರು ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಿದೆ. ಜೈಲು ಸೇರಿದ ಸತ್ಯೇಂದ್ರ ಜೈನ್ ಇನ್ನೂ ಖಾತೆಯಿಲ್ಲದೆ ಸಚಿವರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೈನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಪರಿಸರ ಸಚಿವ ಗೋಪಾಲ್ ರೈ ಅವರು ಕೇವಲ ಮೂರು ಇಲಾಖೆಗಳನ್ನು ಹೊಂದಿದ್ದರೆ, ಇಮ್ರಾನ್ ಹುಸೇನ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಚುನಾವಣೆಯ ಎರಡು ಇಲಾಖೆಗಳನ್ನು ಮಾತ್ರ ನಿರ್ವಹಿಸುತ್ತಿದ್ದಾರೆ.

ಗೆಹ್ಲೋಟ್ ಅವರು ಕಂದಾಯ ಮತ್ತು ಸಾರಿಗೆ ಸೇರಿ ಆರು ಇಲಾಖೆಗಳ ಉಸ್ತುವಾರಿಯನ್ನು ಹೊಂದಿದ್ದರೆ, ರಾಜ್ ಕುಮಾರ್ ಆನಂದ್ ನಾಲ್ಕು ಖಾತೆಗಳನ್ನು ಹೊಂದಿದ್ದಾರೆ.

ಪಕ್ಷ ಸಂಘಟನೆ ವಿಸ್ತರಣೆ ಹೇಗೆ ಸಾಧ್ಯ?

ದೆಹಲಿ ಆಗಿ ಪಂಜಾಬ್‌ನಲ್ಲಿ ಸರ್ಕಾರ ರಚಿಸಿದ ನಂತರ, ಈಗ ಕೇಜ್ರಿವಾಲ್ ಇತರ ರಾಜ್ಯಗಳಲ್ಲಿ ಎಎಪಿಯ ಹೆಜ್ಜೆಗುರುತುಗಳನ್ನು ವಿಸ್ತರಿಸಲು ನೋಡುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಐದು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕೇಜ್ರಿವಾಲ್ ಅವರು ಮುಂದಿನ ತಿಂಗಳು ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದಾರೆ ಎಂಬ ವರದಿಗಳಿವೆ. ಬದಲಾದ ವಿದ್ಯಮಾನಗಳ ಕಾರಣ ಈ ಕೆಲಸಗಳನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ.

ಸುಮಾರು ಎಂಟು ಗಂಟೆಗಳ ವಿಚಾರಣೆಯ ನಂತರ 2021-22 ರ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಕೇಜ್ರಿವಾಲ್‌ ಅತ್ಯಾಪ್ತ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಸಂಜೆ ಬಂಧಿಸಿದೆ.

ಕಳೆದ ವರ್ಷ ಆಗಸ್ಟ್ 17 ರಂದು ಸಂಸ್ಥೆ ಪ್ರಕರಣ ದಾಖಲಿಸಿದ ನಂತರ ಸಿಸೋಡಿಯಾ ಅವರನ್ನು ಎರಡನೇ ಸುತ್ತಿನ ವಿಚಾರಣೆ ನಡೆಸಲಾಯಿತು. ಕಳೆದ ವರ್ಷ ಅಕ್ಟೋಬರ್ 17 ರಂದು ಅವರನ್ನು ಪ್ರಶ್ನಿಸಲಾಯಿತು. ಕೇಜ್ರಿವಾಲ್ ಬಂಧನವನ್ನು "ಕೊಳಕು ರಾಜಕೀಯ" ಎಂದು ಕರೆದರು ಮತ್ತು ಸಿಸೋಡಿಯಾ ನಿರಪರಾಧಿ ಎಂದು ಪ್ರತಿಪಾದಿಸಿದರು.

    ಹಂಚಿಕೊಳ್ಳಲು ಲೇಖನಗಳು