logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Himachal Manifesto: ಯುವಕರಿಗೆ ಉದ್ಯೋಗ, ಉಚಿತ ವಿದ್ಯುತ್... ಹಿಮಾಚಲದಿ ಅಧಿಪತ್ಯ ಸ್ಥಾಪಿಸಲು ಭರವಸೆಯ 'ಹಸ್ತ'

Himachal manifesto: ಯುವಕರಿಗೆ ಉದ್ಯೋಗ, ಉಚಿತ ವಿದ್ಯುತ್... ಹಿಮಾಚಲದಿ ಅಧಿಪತ್ಯ ಸ್ಥಾಪಿಸಲು ಭರವಸೆಯ 'ಹಸ್ತ'

HT Kannada Desk HT Kannada

Nov 05, 2022 02:19 PM IST

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ.

  • ಹಿಮಾಚಲ ಪ್ರದೇಶ ಚುನಾವಣೆಯು ನವೆಂಬರ್‌ 12ರಂದು ನಡೆಯಲಿದೆ. ಡಿಸೆಂಬರ್‌ 8 ರಂದು ಫಲಿತಾಂಶ ಘೋಷಣೆಯಾಗಲಿದೆ.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ.
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ.

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಶಿಮ್ಲಾದ ತನ್ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ಬಿಡುಗಡೆ ಮಾಡಿದೆ. ಹಲವಾರು ಭರವಸೆಗಳನ್ನು ನೀಡುವ ಮೂಲಕ ಹಿಮಾಚಲದಲ್ಲಿ ಅಧಿಪತ್ಯ ಸ್ಥಾಪಿಸುವ ನಿರೀಕ್ಷೆಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಯುವಕರಿಗೆ ಉದ್ಯೋಗ, 300 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಮಾಸಿಕ ಪರಿಹಾರ ಸೇರಿದಂತೆ ರಾಜ್ಯದ ಜನತೆಗೆ 10 ಭರವಸೆಗಳನ್ನು ದೇಶದ ಹಳೆಯ ಪಕ್ಷ ನೀಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಧನಿ ರಾಮ್ ಶಾಂಡಿಲ್, ಭಾರತೀಯ ಜನತಾ ಪಕ್ಷವು ಜನರ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಟೀಕಿಸಿದರು.

“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಮಾಚಲದ ಸಾರ್ವಜನಿಕರು ಬಿಜೆಪಿಗೆ ಮತ ಹಾಕಿದ್ದರು. ಇದಾದ ಐದು ವರ್ಷಗಳೊಳಗೆ ತಾವು ಮೋಸ ಹೋಗಿರುವುದು ಸಾರ್ವಜನಿಕರು ಗೊತ್ತಾಗಿದೆ” ಎಂದು ಶಾಂಡಿಲ್ ಹೇಳಿದರು. ಆದರೆ, ಕಾಂಗ್ರೆಸ್ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಿದೆ ಎಂದು ಅವರು ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ನೀಡಿದ ಪ್ರಮುಖ 10 ಚುನಾವಣಾ ಭರವಸೆಗಳು ಹೀಗಿವೆ

- ಹಳೆಯ ಪಿಂಚಣಿ ಯೋಜನೆಯನ್ನು ಪುನಶ್ಚೇತನಗೊಳಿಸಲಾಗುವುದು.

- 5 ಲಕ್ಷ ಯುವಕರಿಗೆ ಉದ್ಯೋಗಾವಕಾಶ.

- ಹಿಮಾಚಲ ಪ್ರದೇಶದ ಮಹಿಳೆಯರಿಗೆ ತಿಂಗಳಿಗೆ 1,500 ರೂಪಾಯಿ ಪರಿಹಾರಧನ(ಪ್ರೋತ್ಸಾಹಧನದ ರೀತಿ) ಪಡೆಯುತ್ತಾರೆ.

- ರಾಜ್ಯದಲ್ಲಿ 300 ಯೂನಿಟ್ ಉಚಿತ ವಿದ್ಯುತ್.

- ಯುವಕರಿಗಾಗಿ 680 ಕೋಟಿ ರೂಪಾಯಿ ಸ್ಟಾರ್ಟಪ್‌ ನಿಧಿ.

- ರಾಜ್ಯದ ಪ್ರತಿ ವಿಧಾನಸಭಾ ಪ್ರದೇಶದಲ್ಲಿ ನಾಲ್ಕು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದು.

- ಸಂಚಾರಿ ಚಿಕಿತ್ಸಾಲಯ(mobile clinics)ಗಳ ಮೂಲಕ ಪ್ರತಿ ಹಳ್ಳಿಗಳಿಗೂ ಉಚಿತ ವೈದ್ಯಕೀಯ ಚಿಕಿತ್ಸೆ.

-ಪ್ರತಿ ಕೆಜಿಗೆ 2 ರೂಪಾಯಿ ದರದಲ್ಲಿ ಹಸುವಿನ ಸಗಣಿ ಖರೀದಿ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧನಿ ರಾಮ್ ಶಾಂಡಿಲ್ ಅವರು, ಇದು ಕೇವಲ ಪ್ರಣಾಳಿಕೆಯಲ್ಲ. ಹಿಮಾಚಲ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯ ಪ್ರಕಾರ ರಚಿಸಲಾದ ದಾಖಲೆಯಾಗಿದೆ ಎಂದು ಹೇಳಿದರು. “ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸುತ್ತದೆ. ನಮಗೆ ಸಾರ್ವಜನಿಕರ ಬೆಂಬಲ ಮತ್ತು ವಿಶ್ವಾಸ ಮಾತ್ರ ಬೇಕು,” ಎಂದು ಅವರು ಹೇಳಿದ್ದಾರೆ.

ಚುನಾವಣೆ ಯಾವಾಗ?

ಹಿಮಾಚಲ ಪ್ರದೇಶ ಚುನಾವಣೆಯು ನವೆಂಬರ್‌ 12ರಂದು ನಡೆಯಲಿದೆ. ಡಿಸೆಂಬರ್‌ 8 ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅಕ್ಟೋಬರ್‌ 17ರಂದು ಹಿಮಾಚಲ ಪ್ರದೇಶ ಚುನಾಚಣೆಯ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗುತ್ತದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್‌ 25 ಕೊನೆಯ ದಿನಾಂಕವಾಗಿದೆ. ಅಕ್ಟೋಬರ್‌ 27ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಇಲ್ಲಿ ಅಧಿಕಾರ ವಿಸ್ತರಿಸಲು ಕಾಂಗ್ರೆಸ್‌ ಎದುರು ನೋಡುತ್ತಿದೆ. ಮತ್ತೊಂದೆಡೆ ಪಕ್ಷದ ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಿಗೆ 55 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 1.86 ಲಕ್ಷ ಚೊಚ್ಚಲ ಮತದಾರರು, 80 ವರ್ಷ ಮೇಲ್ಪಟ್ಟ 1.22 ಲಕ್ಷ ಹಾಗೂ 100 ವರ್ಷ ಮೇಲ್ಪಟ್ಟ 1,184 ಮತದಾರರಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ