Bharat Jodo Yatra 2.0: ಕಾಂಗ್ರೆಸ್‌ನಿಂದ ಭಾರತ್ ಜೋಡೋ ಯಾತ್ರೆ 2.0 ಪ್ಲ್ಯಾನ್?: ಪೂರ್ವದಿಂದ ಪಶ್ವಿಮ ದಿಕ್ಕಿಗೆ ರಾಹುಲ್ ನಡಿಗೆ?
Feb 26, 2023 07:19 PM IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
- ಭಾರತ್ ಜೋಡೋ ಯಾತ್ರೆಯ ಯಶಸ್ಸಿನಿಂದ ಹುಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷ, ಎರಡನೇ ಹಂತದ ಭಾರತ್ ಜೋಡೋ ಯಾತ್ರೆಗೆ ಯೋಜನೆ ಸಿದ್ಧಪಡಿಸುತ್ತಿದ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿ ದಕ್ಷಿಣದಿಂದ ಉತ್ತರಕ್ಕೆ ಚಲಿಸಿದ್ದ ಈ ಯಾತ್ರೆ, ಈ ಬಾರಿ ಪೂರ್ವ ಭಾರತದಿಂದ, ಪಶ್ಚಿಮ ಭಾರತಕ್ಕೆ ಚಲಿಸಲಿದೆ ಎನ್ನಲಾಗಿದೆ. ಈ ಕುರಿತು ಅಂತಿಮ ತೀರ್ಮಾನಗಳು ಹೊರಬರಬೇಕಿದೆ.
ರಾಯ್‌ಪುರ್: ಭಾರತ್ ಜೋಡೋ ಯಾತ್ರೆಯ ಯಶಸ್ಸಿನಿಂದ ಹುಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷ, ಎರಡನೇ ಹಂತದ ಭಾರತ್ ಜೋಡೋ ಯಾತ್ರೆಗೆ ಯೋಜನೆ ಸಿದ್ಧಪಡಿಸುತ್ತಿದ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿ ದಕ್ಷಿಣದಿಂದ ಉತ್ತರಕ್ಕೆ ಚಲಿಸಿದ್ದ ಈ ಯಾತ್ರೆ, ಈ ಬಾರಿ ಪೂರ್ವ ಭಾರತದಿಂದ, ಪಶ್ಚಿಮ ಭಾರತಕ್ಕೆ ಚಲಿಸಲಿದೆ ಎನ್ನಲಾಗಿದೆ.
ಛತ್ತೀಸ್‌ಗಢ ರಾಯ್‌ಪುರದಲ್ಲಿ ಕೊನೆಗೊಂಡ ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನದಲ್ಲಿ, ಎರಡನೇಆ ಹಂತದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
2024ರ ಲೋಕಸಭೆ ಚುನಾವಣೆವರೆಗೆ ಜನರ ಮನಸ್ಸಿನಲ್ಲಿ ಉಳಿಯಲು, ಮತ್ತೊಂದು ಸುತ್ತಿನ ಭಾರತ್ ಜೋಡೋ ಯಾತ್ರೆ ಅವಶ್ಯವಾಗಿದೆ. ಅಲ್ಲದೇ ಕಳೆದ ಬಾರಿ ಯಾತ್ರೆಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಎರಡನೇ ಹಂತದ ಯಾತ್ರೆಯ ಯೋಜನೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಪೂರ್ವದಿಂದ ಪಶ್ಚಿಮಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲವಾದರೂ, ರಾಹುಲ್ ಗಾಂಧಿ ಅವರು ಯಾತ್ರೆಗೆ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಪಕ್ಷ ಬಯಸಿದರೆ, ಮತ್ತೊಂದು ಸುತ್ತಿನ ಭಾರತ್ ಜೋಡೋ ಯಾತ್ರೆ ಮಾಡಲು ತಾವು ಸಿದ್ಧ ಎಂದು ರಾಯ್‌ಪುರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗುತ್ತಿದೆ.
"ನಾಲ್ಕು ತಿಂಗಳ ಕಾಲ ನಾವು ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದೇವೆ. ಹವಾಮಾನ ವೈಪರೀತ್ಯದ ನಡುವೆಯೂ ಲಕ್ಷಾಂತರ ಜನರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅಲ್ಲದೇ ಯಾತ್ರೆಯಿಂದ ಪಕ್ಷಕ್ಕೂ ಸಾಕಷ್ಟು ಕಲಿಕೆಯ ಅವಕಾಶ ದೊರೆತಿದೆ. ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲಿ ಎರಡನೇ ಹಂತದ ಭಾರತ್ ಜೋಡೋ ಯಾತ್ರೆ ಅವಶ್ಯಕ.." ಎಂದು ರಾಹುಲ್ ಹೇಳಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಭಾರತ್ ಜೋಡೋ ಯಾತ್ರೆ ಭಾಗ 2 ಸಕ್ರಿಯ ಪರಿಗಣನೆಯಲ್ಲಿದೆ. ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ವಿವಿಧ ವಿಚಾರಗಳು ಚರ್ಚೆಯಾಗುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ಯಾತ್ರೆಗೆ ಸಜ್ಜಾಗಿದ್ದು, ಈ ಕುರಿತು ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದೂ ಜೈರಾಮ್ ರಮೇಶ್ ಹೇಳಿದ್ದಾರೆ.
2024 ರ ಚುನಾವಣೆಯ ಸಮಯದಲ್ಲಿ ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅಲ್ಲದೇ ಸಂಭಾವ್ಯ ಮಹಾ ಮೈತ್ರಿಕೂಟದ ನೇತೃತ್ವವಹಿಸಿಕೊಳ್ಳಲೂ ಸಿದ್ಧ ಎಂಬ ಸಂದೇಶವನ್ನು ರವಾನಿಸಿದೆ. "ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟನ್ನು ರೂಪಿಸಲು ಮತ್ತು ಬಿಜೆಪಿ ವಿರುದ್ಧ ಹೋರಾಡಲು ಒಟ್ಟಾಗಿ ಕೆಲಸ ಮಾಡಲು ನಾವು ಬಯಸುತ್ತೇವೆ.." ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಹೇಳಿದ್ದಾರೆ.
ಪಕ್ಷವು ರಾಜ್ಯ ಮತ್ತು ಸಾರ್ವತ್ರಿಕ ಚುನಾವಣೆಗಳಿಗೆ ಸಿದ್ಧವಾಗುತ್ತಿದ್ದಂತೇ, ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ತಲುಪಲು ವಿಶೇಷ ಗಮನಹರಿಸುವ ಮೂಲಕ ತನ್ನ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳನ್ನು ಮುಂದುವರಿಸಲು ಯೋಜಿಸಿದೆ.
ಸಂಬಂಧಿತ ಸುದ್ದಿ:
Rahul Gandhi: ಆರ್ಥಿಕತೆ ಚಿಕ್ಕದು ಎಂದು ನಾವು ಬ್ರಿಟಿಷರ ವಿರುದ್ದದ ಹೋರಾಟ ನಿಲ್ಲಿಸಲಿಲ್ಲ: ಜೈಶಂಕರ್‌ಗೆ ರಾಹುಲ್ ತಿರುಗೇಟು!
ಭಾರತವು ಚೀನಾಗಿಂತ ಚಿಕ್ಕ ಆರ್ಥಿಕತೆಯನ್ನು ಹೊಂದಿದೆ ಎಂಬ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿಕೆಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.