logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Covid News Update: ಒಂದೇ ದಿನದಲ್ಲಿ 10,158 ಕೋವಿಡ್‌ ಹೊಸ ಪ್ರಕರಣಗಳು ದಾಖಲು!; ಅರ್ಧ ಶತಕದತ್ತ ಸಕ್ರಿಯ ಪ್ರಕರಣ

Covid News Update: ಒಂದೇ ದಿನದಲ್ಲಿ 10,158 ಕೋವಿಡ್‌ ಹೊಸ ಪ್ರಕರಣಗಳು ದಾಖಲು!; ಅರ್ಧ ಶತಕದತ್ತ ಸಕ್ರಿಯ ಪ್ರಕರಣ

Reshma HT Kannada

Apr 13, 2023 12:22 PM IST

ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ

    • Covid News Update: ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 10,158 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ ವಾರ 5,555 ಪ್ರಕರಣಗಳಿದ್ದು, ಅದಕ್ಕೂ ಹಿಂದಿನ ವಾರ 3,108 ಪ್ರಕರಣಗಳು ದಾಖಲಾಗಿದ್ದವು.
ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ
ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ (Getty Images)

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 10,158 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಕಳೆದ ಎಂಟು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್‌ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಸದ್ಯ ಭಾರತದಲ್ಲಿ 44,998 ಸಕ್ರಿಯ ಪ್ರಕರಣಗಳಿವೆ. ಕಳೆದ ವಾರ ಸರಾಸರಿ 5,555 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದರೆ, ಅದಕ್ಕೂ ಹಿಂದಿನ ವಾರ 3,108 ಪ್ರಕರಣಗಳು ದಾಖಲಾಗಿದ್ದವು. ನಿನ್ನೆ ಅಂದರೆ ಬುಧವಾರ (ಏಪ್ರಿಲ್‌ 12) 7,830 ಪ್ರಕರಣಗಳು ದಾಖಲಾಗಿದ್ದವು.

ಪ್ರತಿದಿನ ಶೇ 4.42ರಷ್ಟು ಪಾಸಿಟಿವ್‌ ಪ್ರಕರಣಗಳಿದ್ದರೆ, ವಾರದಲ್ಲಿ 4.02 ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು ಸೋಂಕಿಗೆ ತುತ್ತಾದವರಲ್ಲಿ 0.10ರಷ್ಟು ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಸಚಿವಾಲಯದ ವೈಬ್‌ಸೈಟ್‌ನ ಪ್ರಕಾರ ರಾಷ್ಟ್ರವ್ಯಾಪಿ ಕೋವಿಡ್‌-19 ಪ್ರಕರಣಗಳ ಚೇತರಿಕೆಯ ದರವು ಶೇ 98.71ರಷ್ಟಿದೆ. ಈ ಪ್ರಕರಣಗಳಲ್ಲಿ ಸಾವಿನ ಪ್ರಮಾಣವು ಶೇ 1.19ರಷ್ಟಿದೆ. ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 4,42,10,127ರಷ್ಟಿದೆ.

ಸಚಿವಾಲಯದ ವೆಬ್‌ಸೈಟ್ ಪ್ರಕಾರ, ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲ್ಲಾ ಅವರು ಕೋವಿಶೀಲ್ಡ್ ಲಸಿಕೆ ತಯಾರಿಕೆಯನ್ನು ಪುನರಾರಂಭಿಸಿರುವುದಾಗಿ ಹೇಳಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಕಂಪನಿಯು ಈಗಾಗಲೇ ಆರು ಮಿಲಿಯನ್ ಬೂಸ್ಟರ್ ಡೋಸ್ ಕೋವೊವಾಕ್ಸ್ ಲಸಿಕೆಯನ್ನು ಹೊಂದಿದೆ ಮತ್ತು ವಯಸ್ಕರು ಬೂಸ್ಟರ್ ಡೋಸ್‌ ಪಡೆಯಬೇಕು ಆದರ್ ಪೂನವಾಲ್ಲಾ ಹೇಳಿದ್ದಾರೆ ಎಂಬ ಅಂಶವೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯಲ್ಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು