logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Dawood Ibrahim Has Second Wife: ಭೂಗತ ಪಾತಕಿ ದಾವೂದ್‌ಗೆ ಎರಡನೇ ಪತ್ನಿ ಇದ್ದಾಳೆ!; ಎನ್‌ಐಎಗೆ ಮಾಹಿತಿ ನೀಡಿದ ದಾವೂದ್‌ ಸೋದರಳಿಯ!

Dawood Ibrahim has second wife: ಭೂಗತ ಪಾತಕಿ ದಾವೂದ್‌ಗೆ ಎರಡನೇ ಪತ್ನಿ ಇದ್ದಾಳೆ!; ಎನ್‌ಐಎಗೆ ಮಾಹಿತಿ ನೀಡಿದ ದಾವೂದ್‌ ಸೋದರಳಿಯ!

HT Kannada Desk HT Kannada

Jan 17, 2023 04:25 PM IST

google News

ದಾವೂದ್‌ ಇಬ್ರಾಹಿಂ

  • Dawood Ibrahim has second wife: ಭಾರತದಲ್ಲಿ ಗ್ಲೋಬಲ್‌ ಟೆರರಿಸ್ಟ್‌ ನೆಟ್‌ವರ್ಕ್‌ ಮತ್ತು ಕ್ರಿಮಿನಲ್‌ ಸಿಂಡಿಕೇಟ್‌ ಭಾರತದಲ್ಲಿ ಯಾವ ರೀತಿ ಉಗ್ರಚಟುವಟಿಕೆ ಮತ್ತು ಇತರೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದೆ ಎಂಬುದನ್ನು ತಿಳಿಯಲು ಬಂಧಿತರ ವಿಚಾರಣೆ ನಡೆಸುತ್ತಿದ್ದ ವೇಳೆ ದಾವೂದ್‌ ಇಬ್ರಾಹಿಂನ ಸೋದರಳಿಯ ಈ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ.

ದಾವೂದ್‌ ಇಬ್ರಾಹಿಂ
ದಾವೂದ್‌ ಇಬ್ರಾಹಿಂ (HT_PRINT)

ಮುಂಬಯಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಎರಡನೇ ಪತ್ನಿ ಇದ್ದಾಳೆ. ಆಕೆ ಪಾಕಿಸ್ತಾನಿ. ಆತ ಮೊದಲ ಪತ್ನಿಗೆ ಡೈವೋರ್ಸ್‌ ನೀಡಿದ್ದಾಗಿ ಸುಳ್ಳು ಹೇಳಿದ್ದಾನೆ ಎಂಬಿತ್ಯಾದಿ ಅಂಶಗಳು ಈಗ ಬೆಳಕಿಗೆ ಬಂದಿವೆ.

ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ (ಎನ್‌ಐಎ) ಅಧಿಕಾರಿಗಳ ವಿಚಾರಣೆ ವೇಳೆ ದಾವೂದ್‌ ಇಬ್ರಾಹಿಂನ ಸೋದರಳಿಯ ಈ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಗ್ಲೋಬಲ್‌ ಟೆರರಿಸ್ಟ್‌ ನೆಟ್‌ವರ್ಕ್‌ ಮತ್ತು ಕ್ರಿಮಿನಲ್‌ ಸಿಂಡಿಕೇಟ್‌ ಭಾರತದಲ್ಲಿ ಯಾವ ರೀತಿ ಉಗ್ರಚಟುವಟಿಕೆ ಮತ್ತು ಇತರೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದೆ ಎಂಬುದನ್ನು ತಿಳಿಯಲು ಬಂಧಿತರ ವಿಚಾರಣೆ ನಡೆಸುತ್ತಿದ್ದ ವೇಳೆ ದಾವೂದ್‌ ಇಬ್ರಾಹಿಂನ ಸೋದರಳಿಯ ಈ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ.

ದಾವೂದ್‌ ಇಬ್ರಾಹಿಂನ ಸೋದರಳಿ ಅಂದರೆ, ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ನ ಪುತ್ರ ಅಲಿಶಾ ಪಾರ್ಕರ್‌ ಈ ಎಲ್ಲ ವಿಚಾರ ಬಹಿರಂಗಪಡಿಸಿರುವಂಥದ್ದು. ಕಳೆದ ವರ್ಷ ನವೆಂಬರ್‌ನಲ್ಲಿ ಅಲಿಶಾ ಪಾರ್ಕರ್‌ ವಿರುದ್ಧ ಎನ್‌ಐಎ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲೂ ಇದು ಉಲ್ಲೇಖವಾಗಿದೆ.

ಈ ಪ್ರಕರಣವು ಜಾಗತಿಕ ಭಯೋತ್ಪಾದಕ ಜಾಲಕ್ಕೆ ಸಂಬಂಧಿಸಿದ್ದು ಮತ್ತು ಭಾರತದಲ್ಲಿನ ವಿವಿಧ ಭಯೋತ್ಪಾದಕ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆಪಾದನೆ ಎದುರಿಸುತ್ತಿರುವ 'ಡಿ-ಕಂಪನಿ' ಎಂಬ ಅಂತಾರಾಷ್ಟ್ರೀಯ ಸಂಘಟಿತ ಕ್ರಿಮಿನಲ್‌ ಸಿಂಡಿಕೇಟ್‌ಗೆ ಸಂಬಂಧಿಸಿದ್ದಾಗಿದೆ.

ಅಲಿಶಾ ಪಾರ್ಕರ್‌ ನೀಡಿದ ಮಾಹಿತಿ ಇತ್ತೀಚೆಗೆ ಮಾಧ್ಯಮಗಳಿಗೆ ಲಭ್ಯವಾಗಿದೆ. ಅದರ ಪ್ರಕಾರ, ದಾವೂದ್‌ ಇಬ್ರಾಹಿಂ ಕಸ್ಕರ್‌ನ ಪತ್ನಿಯ ಹೆಸರು ಮೈಜಾಬಿನ್‌. ಈಕೆಯ ಜತೆಗಿನ ದಾಂಪತ್ಯದಲ್ಲಿ ಮೂವರು ಮಕ್ಕಳು. ಮರುಖ್‌ ( ಪಾಕಿಸ್ತಾನಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಪುತ್ರ ಜುನೈದ್‌ನ ಪತ್ನಿ), ಮೆಹ್ರಿನ್‌ (ಮದುವೆ ಆಗಿದೆ), ಮಜಿಯಾ (ಅವಿವಾಹಿತೆ) ಮತ್ತು ಒಬ್ಬ ಪುತ್ರ ಮೊಹಿನ್‌ ನವಾಜ್‌ (ವಿವಾಹಿತ).

ದಾವೂದ್‌ ಇಬ್ರಾಹಿಂಗೆ ಎರಡನೇ ಹೆಂಡತಿಯೂ ಇದ್ದಾಳೆ. ಆಕೆ ಪಾಕಿಸ್ತಾನಿ ಪಠಾನ್‌ ಸಮುದಾಯದವಳು. ಹೊರ ಜಗತ್ತಿಗೆ ಮೊದಲ ಪತ್ನಿಗೆ ಡಿವೋರ್ಸ್‌ ನೀಡಿರುವುದಾಗಿ ದಾವೂದ್‌ ಬಿಂಬಿಸುತ್ತಿದ್ದಾನೆ. ಆದರೆ ಇದು ನಿಜವಾಗಿಯೂ ಸುಳ್ಳು. ಕರಾಚಿಯಾ ಅಬ್ದುಲ್ಲಾ ಗಾಝಿ ಬಾಬಾ ದರ್ಗಾದ ಹಿಂಬದಿಯ ರಕ್ಷಣಾ ಪ್ರದೇಶದಲ್ಲಿ ದಾವೂದ್‌ ಇಬ್ರಾಹಿಂ ತನ್ನ ಕುಟುಂಬದ ಜತೆಗೆ ವಾಸವಿದ್ದಾನೆ.

ಭಾರತದಲ್ಲಿ 'ಡಿ-ಕಂಪನಿ'ಯ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಹವಾಲಾ ಮಾರ್ಗಗಳ ಮೂಲಕ ಇಬ್ರಾಹಿಂ "ದೊಡ್ಡ ಮೊತ್ತದ ಹಣವನ್ನು" ಕಳುಹಿಸಿದ್ದಾನೆ. ಈ ಚಟುವಟಿಕೆಗಳು ಜನರಲ್ಲಿ ಭಯವನ್ನುಂಟುಮಾಡಲು ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದಕ್ಕೆ ಸಂಬಂಧಿಸಿವೆ ಎಂದು ಎನ್ಐಎ ತನ್ನ ಚಾರ್ಜ್ ಶೀಟ್‌ನಲ್ಲಿ ಆರೋಪಿಸಿದೆ.

ಭಾರತದಲ್ಲಿ ಪ್ರಸಿದ್ಧರನ್ನು ಟಾರ್ಗೆಟ್‌ ಮಾಡಿ ಉಗ್ರ ದಾಳಿ ನಡೆಸುವುದಕ್ಕೆ ಡಿ ಕಂಪನಿಯು ವಿಶೇಷ ಘಟಕವನ್ನು ಸ್ಥಾಪಿಸಿದೆ. ಪ್ರಸಿದ್ಧರ ಪಟ್ಟಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು ಸೇರಿಕೊಂಡಿದ್ದಾರೆ. ಈ ಕುರಿತು ತನಿಖಾ ಸಂಸ್ಥೆಗೆ ಸಾಕ್ಷ್ಯಗಳು ದೊರೆತಿವೆ ಎಂದು ತನಿಖಾ ಏಜೆನ್ಸಿ ಹೇಳಿಕೊಂಡಿರುವುದಾಗಿ ವರದಿ ವಿವರಿಸಿದೆ.

ಇಬ್ರಾಹಿಂ ಮತ್ತು ಆತನ ಆಪ್ತ ಛೋಟಾ ಶಕೀಲ್‌ ಇಬ್ಬರು ಕೂಡ ಚಾರ್ಜ್‌ಶೀಟ್‌ನ ಪ್ರಕಾರ ಆರೋಪಿಗಳು. ಇವರಿಬ್ಬರ ಹೊರತಾಗಿ, ಆರೀಫ್‌ ಅಬುಬಕರ್‌ ಶೇಖ್‌, ಶಬ್ಬೀರ್‌ ಅಬುಬಕರ್‌ ಶೇಖ್‌ ಮತ್ತು ಮೊಹಮ್ಮದ್‌ ಸಲೀಂ ಖುರೇಶಿ ಕೂಡ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳು. ಈ ಮೂವರು ಮುಂಬಯಿ ನಿವಾಸಿಗಳು ಎಂದು ವರದಿ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ