logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Food Prices : ಆಹಾರ ಪದಾರ್ಥಗಳ ಬೆಲೆ ಭಾರೀ ಏರಿಕೆ! ಇದೇ ಕಾರಣವೇ?

Food prices : ಆಹಾರ ಪದಾರ್ಥಗಳ ಬೆಲೆ ಭಾರೀ ಏರಿಕೆ! ಇದೇ ಕಾರಣವೇ?

HT Kannada Desk HT Kannada

Jul 30, 2022 10:13 AM IST

google News

ಭತ್ತದ ಬೆಳೆ (ಫೋಟೋ-ಸಂಗ್ರಹ)

  • Food price in India: ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಸಾಧ್ಯತೆ ಇದೆ. ಪೂರ್ವ ಮತ್ತು ಉತ್ತರ ಭಾರತದಲ್ಲಿ ಮಳೆಯ ಕೊರತೆ ಎದುರಾಗಿದೆ. ಇದೇ ರೀತಿ ಮುಂದುವರಿದರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ ಎಂದು ಐಎಂಡಿ ಅಭಿಪ್ರಾಯ ಪಟ್ಟಿದೆ.

ಭತ್ತದ ಬೆಳೆ (ಫೋಟೋ-ಸಂಗ್ರಹ)
ಭತ್ತದ ಬೆಳೆ (ಫೋಟೋ-ಸಂಗ್ರಹ)

ನವದೆಹಲಿ: ಉತ್ತರ ಮತ್ತು ಪೂರ್ವ ಭಾರತದಲ್ಲಿ ನೈಋತ್ಯ ಮಾನ್ಸೂನ್ ಕೊರೆತೆಯಾಗಿದೆ. ಇದರಿಂದ ಸಕಾಲಕ್ಕೆ ಬೆಳೆ ಕೈಗೆ ಸಿಗದಂತಾಗಬಹುದು ಎಂಬ ಊಹಾಪೋಹಗಳಿವೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ದೇಶಾದ್ಯಂತ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಭಿಪ್ರಾಯಪಟ್ಟಿದೆ.

ಆಗಸ್ಟ್ ಮೊದಲ ವಾರದವರೆಗೆ ಇಂಡೋ-ಗಂಗಾ ಪ್ರದೇಶದಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಬಹಿರಂಗಪಡಿಸಿದೆ. ಮುಂಗಾರು ಹಂಗಾಮಿನಲ್ಲಿ ಬಿರುಗಾಳಿ ಸಹಜ ಸ್ಥಿತಿಯಿಂದ ಉತ್ತರದತ್ತ ಮುಖ ಮಾಡಿದ್ದು, ಮಳೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ದೇಶದಾದ್ಯಂತ ಮಳೆ ಬೀಳುವಲ್ಲಿ ಮಾನ್ಸೂನ್ ಜಲಾನಯನ ಪ್ರದೇಶವು ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯ ಸ್ಥಾನದಿಂದ ಸ್ವಲ್ಪ ದಕ್ಷಿಣದಲ್ಲಿದ್ದರೆ, ದೇಶದಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತದೆ. ಆದರೆ ಉತ್ತರ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ ಎಂದರ್ಥ.

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ನೈರುತ್ಯ ಮುಂಗಾರು ಇನ್ನೂ ಒಂದು ವಾರ ದುರ್ಬಲವಾಗಿರಲಿದೆ. ಇದರಿಂದ ಬಿತ್ತನೆ ಕಾರ್ಯ ವಿಳಂಬವಾಗುವ ಸಂಭವವಿದ್ದು, ಹೀಗಾದರೆ ನಾನಾ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹಣದುಬ್ಬರದಿಂದ ಉಸಿರುಗಟ್ಟಿಸುತ್ತಿರುವ ಜನರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.

ಭಾರತದಲ್ಲಿ ಮಳೆ: ಐಎಂಡಿ ಲೆಕ್ಕಾಚಾರದ ಪ್ರಕಾರ ಇದುವರೆಗೆ ದೇಶಾದ್ಯಂತ ಶೇ.9ರಷ್ಟು ಅಧಿಕ ಮಳೆ ದಾಖಲಾಗಿದೆ. ಆದರೆ ಪೂರ್ವ-ಈಶಾನ್ಯ ಭಾರತದಲ್ಲಿ ಶೇ.16ರಷ್ಟು ಮಳೆಯ ಕೊರತೆಯಿದೆ. ವಾಯುವ್ಯ ಭಾರತದಲ್ಲಿ ಶೇಕಡಾ 21 ಮತ್ತು ದಕ್ಷಿಣ ಪೆನಿನ್ಸುಲಾದಲ್ಲಿ ಶೇಕಡಾ 28 ರಷ್ಟು ಹೆಚ್ಚಿನ ಮಳೆ ದಾಖಲಾಗಿದೆ.

ಜುಲೈ ತಿಂಗಳೊಂದರಲ್ಲೇ ಶುಕ್ರವಾರದವರೆಗೆ ಶೇ.19.1ರಷ್ಟು ಅಧಿಕ ಮಳೆ ದಾಖಲಾಗಿದೆ. ಆದರೆ ಪೂರ್ವ-ಈಶಾನ್ಯ ಭಾರತದಲ್ಲಿ ಶೇ.47.3ರಷ್ಟು ಕೊರತೆಯಿದೆ. ಇಂಡೋ-ಗಂಗಾ ಪ್ರದೇಶದಲ್ಲಿ ಭತ್ತದ ಬೆಳೆಗಳು ಹೇರಳವಾಗಿವೆ. ಶುಕ್ರವಾರದ ವೇಳೆಗೆ ಶೇ.40 ರಷ್ಟು ಕೊರತೆ ಕಂಡುಬಂದಿದೆ.

ಜಾರ್ಖಂಡ್‌ನಲ್ಲಿ ಶೇ.50, ಬಿಹಾರದಲ್ಲಿ ಶೇ.41, ಪೂರ್ವ ಉತ್ತರ ಪ್ರದೇಶದಲ್ಲಿ ಶೇ.52 ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಶೇ.47 ರಷ್ಟು ಮಳೆ ಕೊರತೆಯಾಗಿದೆ. ಎರಡು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಆರ್.ಕೆ.ಜೆನಮಣಿ ಹೇಳಿದ್ದಾರೆ. ಮುಂಗಾರು ಹಂಗಾಮು ಸಹಜ ಸ್ಥಿತಿಗೆ ಬದಲಾಗಿ ಉತ್ತರದತ್ತ ಸಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಮತ್ತು ಪೂರ್ವದಲ್ಲಿ ಮಳೆಯ ಕೊರತೆಯಾಗಿದ್ದು, ಇತ್ತ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಳೆಯ ಆತಂಕ (Rain in Karnataka)ಎದುರಾಗಿದ್ದು, ಬೆಂಗಳೂರು, ಕರಾವಳಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನಗಳಲ್ಲಿ ಆಗಸ್ಟ್‌ 2ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಹಾಗೂ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೇಂಜ್‌ ಅಲಾರ್ಟ್‌ ಮತ್ತು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹಳದಿ ಅಲಾರ್ಟ್‌ ಘೋಷಿಸಲಾಗಿದೆ.

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಅತಿ ಮಳೆಯಾಗಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯಲಿದ್ದು, ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಕರಾವಳಿಯಲ್ಲಿ ಇನ್ನೂ 5 ದಿನ ಗಾಳಿಯ ವೇಗ ಹೆಚ್ಚಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ