Board exams: ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ, ಶಿಕ್ಷಣ ಸಚಿವಾಲಯದಿಂದ ಮಹತ್ವದ ಘೋಷಣೆ
Jan 09, 2024 07:28 PM IST
ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ
- Board exams twice a year: ಶಾಲಾ ವಿದ್ಯಾರ್ಥಿಗಳಿಗೆ ಸಮಯ ಮತ್ತು ಅವಕಾಶ ಎರಡನ್ನೂ ನೀಡುವ ಸಲುವಾಗಿ ವರ್ಷಕ್ಕೆ ಎರಡು ಬಾರಿ ಅಂತಿಮ ಪರೀಕ್ಷೆಗಳನ್ನು ನಡೆಸಬೇಕು ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ನವದೆಹಲಿ: ಶಾಲಾ ವಿದ್ಯಾರ್ಥಿಗಳಿಗೆ ಸಮಯ ಮತ್ತು ಅವಕಾಶ ಎರಡನ್ನೂ ನೀಡುವ ಸಲುವಾಗಿ ವರ್ಷಕ್ಕೆ ಎರಡು ಬಾರಿ ಅಂತಿಮ ಪರೀಕ್ಷೆಗಳನ್ನು ನಡೆಸಬೇಕು ಎಂದು ಶಿಕ್ಷಣ ಸಚಿವಾಲಯ ಘೋಷಿಸಿದೆ. ವಿದ್ಯಾರ್ಥಿಗಳು ಯಾವಾಗ ಪರೀಕ್ಷೆ ಎದುರಿಸಲು ಸಿದ್ಧರಾಗಿದ್ದಾರೆಯೋ ಆವಾಗ ಪರೀಕ್ಷೆ ಬರೆಯಬಹುದು ಎಂದು ಸಚಿವಾಲಯ ತಿಳಿಸಿದೆ.
ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ (NCF ಅಥವಾ ನ್ಯಾಷನಲ್ ಕರಿಕ್ಯುಲಮ್ ಫ್ರೇಮ್‌ವರ್ಕ್) 2023ನಡಿ ಈ ರೀತಿ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಸೂಕ್ತವಾದ ಸಾಫ್ಟ್‌ವೇರ್ ರಚಿಸಿ ಪರೀಕ್ಷೆಗಳನ್ನು ಸಿದ್ಧಪಡಿಸಬಹುದು ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.
ಎನ್‌ಇಪಿಯಲ್ಲಿ ಅವಕಾಶ ನೀಡಿದಂತೆ ಬೇಡಿಕೆಯ ಪರೀಕ್ಷೆ ವ್ಯವಸ್ಥೆಗಳತ್ತ ಸಾಗಲು ಅನುವು ಮಾಡಿಕೊಡಲಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.
ಈಗ ವರ್ಷಕ್ಕೆ ಒಂದು ಬಾರಿ ಬೋರ್ಡ್ ಎಕ್ಸಾಂ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ತಾವು ಯಾವಾಗ ರೆಡಿ ಇದ್ದೇವೆಯೋ ಆಗ ಪರೀಕ್ಷೆ ಬರೆಯಲು ಅವಕಾಶ ದೊರಕುವುದಿಲ್ಲ. ಮೊದಲ ಅವಕಾಶ ತಪ್ಪಿಸಿಕೊಂಡರೆ ಎರಡನೇ ಅವಕಾಶ ದೊರಕುವುದಿಲ್ಲ. ಆದರೆ, ವರ್ಷಕ್ಕೆ ಎರಡು ಬಾರಿ ಅಂತಿಮ ಪರೀಕ್ಷೆ ನಡೆಸುವ ಮೂಲಕ ಈ ಅವಕಾಶ ಪಡೆಯಬಹುದು ಎಂದು ಎನ್‌ಸಿಎಫ್ ತಿಳಿಸಿದೆ.
ಈಗಿನ ಬೋರ್ಡ್ ಎಕ್ಸಾಂಗಳ ಸವಾಲುಗಳ ಕುರಿತು ಎನ್‌ಸಿಎಫ್ ತಿಳಿಸಿದೆ. ಈಗಿನ ಪರೀಕ್ಷೆಯು ಕಲಿತ ಸಂಗತಿಗಳನ್ನು ಪುನರ್‌ಉತ್ಪಾದಿಸುವ ವಿದ್ಯಾರ್ಥಿಗಳ ಸಾಮರ್ಥ್ಯದ ಮೇಲೆ ಮಾತ್ರ ಈಗಿನ ಪರೀಕ್ಷೆ ಗಮನ ಹರಿಸಿದೆ. ಆದರೆ, ಪರೀಕ್ಷೆ ಅಂದರೆ ಏನೆಂಬುದರ ಕುರಿತು ಗಮನ ಹರಿಸಿಲ್ಲ ಎಂದಿದೆ.
"ಹೆಚ್ಚಿನ ಪರೀಕ್ಷೆಗಳು ಮೌಖಿಕ ಸ್ಮರಣೆಯನ್ನು ಹೆಚ್ಚಾಗಿ ಪರೀಕ್ಷಿಸುವುದರಿಂದ, ಬಹಳ ಕಿರಿದಾದ ಶ್ರೇಣಿಯ ಸಾಮರ್ಥ್ಯಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳ ಕಲಿಕೆಯ ಅಪೂರ್ಣ ಅಥವಾ ತಪ್ಪಾದ ಚಿತ್ರವನ್ನು ನೀಡುತ್ತದೆ" ಎಂದು ಎನ್‌ಸಿಎಫ್ ತಿಳಿಸಿದೆ.
ನ್ಯಾಯೋಚಿತ ಮತ್ತು ವಿಶ್ವಾಸಾರ್ಹ ಪರೀಕ್ಷಾ ಪ್ರಕ್ರಿಯೆ ಮತ್ತು ಸಾಮರ್ಥ್ಯಗಳ ಸಾಧನೆಗಳನ್ನು ನಿರ್ಣಯಿಸಲು ಸೂಕ್ತವಾದ ವಿಧಾನಗಳನ್ನು ವಿನ್ಯಾಸಗೊಳಿಸುವಂತಹ ಜವಾಬ್ದಾರಿ ಮಂಡಳಿಯದ್ದಾಗಿರುತ್ತದೆ. ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯೂ ಮಂಡಳಿಗಿದೆ ಎಂದು ಎನ್‌ಸಿಎಫ್ ತಿಳಿಸಿದೆ.
ಎರಡು ಭಾಷೆಗಳ ಕಲಿಕೆ
11 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಒಂದು ಭಾಷೆಯನ್ನು ಕಲಿಯುವ ಬದಲು ಎರಡು ಭಾಷೆಯನ್ನು ಅಧ್ಯಯನ ಮಾಡುವ ಅಗತ್ಯವಿದೆ. ಇವುಗಳಲ್ಲಿ ಒಂದು ಭಾರತೀಯ ಭಾಷೆಯಾಗಿರಬೇಕು ಎಂದು ನ್ಯಾಷನಲ್ ಕರಿಕ್ಯುಲಮ್ ಫ್ರೇಮ್‌ವರ್ಕ್ ತಿಳಿಸಿದೆ. ಇದೇ ರೀತಿ 11 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಎಂಬ ಸ್ಟ್ರೀಮ್‌ಗಳ ಮಿತಿ ಇರಬಾರದು. ಅವರಿಗೆ ಯಾವ ವಿಷಯಗಳನ್ನು ಕಲಿಯಬೇಕೆಂದು ಅನಿಸುತ್ತದೆಯೋ ಅದನ್ನು ಕಲಿಯಲು ಅವಕಾಶ ಇರಬೇಕು ಎಂದು ಎನ್‌ಸಿಎಫ್ ತಿಳಿಸಿದೆ.
ವಿಭಾಗ