logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ, ಜನವರಿ 1-19ರಂದು ಎಗ್ಸಾಮ್‌, ಅರ್ಜಿ ಸಲ್ಲಿಸುವ ಮುನ್ನ ಇಲ್ಲಿ ವಿವರ ಪಡೆಯಿರಿ

ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ, ಜನವರಿ 1-19ರಂದು ಎಗ್ಸಾಮ್‌, ಅರ್ಜಿ ಸಲ್ಲಿಸುವ ಮುನ್ನ ಇಲ್ಲಿ ವಿವರ ಪಡೆಯಿರಿ

Praveen Chandra B HT Kannada

Nov 20, 2024 10:38 AM IST

google News

ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ

    • UGC NET December 2024: ಯುಜಿಸಿ ನೆಟ್‌ 2024 ಡಿಸೆಂಬರ್‌ ಪರೀಕ್ಷೆಯ ಅಧಿಸೂಚನೆ ಪ್ರಕಟವಾಗಿದೆ. ಡಿಸೆಂಬರ್‌ 11ರ ಮೊದಲು ನಿಗದಿತ ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. 85 ವಿಷಯಗಳಿಗೆ ಜನವರಿ 1-19, 2025ರಲ್ಲಿ ನೆಟ್‌ ಎಗ್ಸಾಮ್‌ ನಡೆಯಲಿದೆ. ನೆಟ್‌ ಎಗ್ಸಾಮ್‌ ಬರೆಯಲು ಉದ್ದೇಶಿಸಿರುವವರು ugcnet.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ
ಯುಜಿಸಿ ನೆಟ್‌ ಡಿಸೆಂಬರ್‌ 2024ರ ಪರೀಕ್ಷೆಗೆ ನೋಂದಣಿ ಆರಂಭ

UGC NET December 2024: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಯುಜಿಸಿ ನೆಟ್‌ ಡಿಸೆಂಬರ್‌ 2024 ಪರೀಕ್ಷೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ನೆಟ್‌ ಎಗ್ಸಾಮ್‌ ಬರೆಯಲು ಉದ್ದೇಶಿಸಿರುವವರು ugcnet.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

  1. ನೆಟ್‌ ಎಗ್ಸಾಮ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್‌ 10, 2024, ರಾತ್ರಿ 11:50 ಗಂಟೆ
  2. ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಡಿಸೆಂಬರ್‌ 11, 2024, ರಾತ್ರಿ 11:50 ಗಂಟೆ
  3. ಕರೆಕ್ಷನ್‌ ವಿಂಡೋ ಸಮಯ: ಡಿಸೆಂಬರ್‌ 12-13, 2024, ರಾತ್ರಿ 11:50 ಗಂಟೆ
  4. ಪರೀಕ್ಷೆ ನಡೆಯುವ ನಗರಗಳು: ಮಾಹಿತಿ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ
  5. ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡುವ ಸಮಯ: ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ
  6. ಪರೀಕ್ಷೆ ದಿನಾಂಕ: ಜನವರಿ 1-19, 2025

ಅರ್ಜಿ ಶುಲ್ಕ ಎಷ್ಟು?

ಜನರಲ್‌/ ಅನ್‌ರಿಸರ್ವ್ಡ್‌ ವಿಭಾಗ: 1,150 ರೂ, ಜನರಲ್‌- ಇಡಬ್ಲ್ಯುಎಸ್‌, ಒಬಿಸಿ- ಎನ್‌ಸಿಎಲ್‌ಗೆ 600 ರೂ ಮತ್ತು ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ, ತೃತೀಯ ಲಿಂಗ ಅಭ್ಯರ್ಥಿಗಳಿಗೆ 325 ರೂಪಾಯಿ.

ಅರ್ಜಿ ಸಲ್ಲಿಸುವುದು ಹೇಗೆ?

ಯುಜಿಸಿ ನೆಟ್‌ 2024 ಡಿಸೆಂಬರ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವವರು https://ugcnetdec2024.ntaonline.in/site/login ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಒಬ್ಬರು ಒಂದು ಅರ್ಜಿ ನಮೂನೆ ಭರ್ತಿ ಮಾಡಲು ಮಾರತ್ರ ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವ ಹಂತಹಂತದ ಪ್ರಕ್ರಿಯೆ ಈ ಮುಂದೆ ನೀಡಲಾಗಿದೆ.

  • ಮೊದಲಿಗೆ ugcnet.nta.ac.in ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮುಖಪುಟದ ಕೆಳಗೆ ಯುಜಿಸಿ ಅಪ್ಲಿಕೇಷನ್‌ ಫಾರ್ಮ್‌ ಲಿಂಕ್‌ ಕಾಣಿಸುತ್ತದೆ. ಅದನ್ನು ಕ್ಲಿಕ್‌ ಮಾಡಿ
  • ನ್ಯೂ ರಿಜಿಸ್ಟ್ರೇಷನ್‌ ಕ್ಲಿಕ್‌ ಮಾಡಿ
  • ಅರ್ಜಿ ನಮೂನೆ ಭರ್ತಿ ಮಾಡಿ.
  • ಪಾಸ್‌ಪೋರ್ಟ್‌ ಫೋಟೋಗ್ರಾಫ್‌, ಸಿಗ್ನೇಚರ್‌ ಅಪ್ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ
  • ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆ ಮಾಡಿದ ಪ್ರತಿಯನ್ನು ಡೌನ್‌ಲೋಡ್‌ ಮಾಡಿಡಿ.

ಏನಿದು ಯುಜಿಸಿ ಪರೀಕ್ಷೆ?

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಯುಜಿಸಿ ನೆಟ್‌ ಪರೀಕ್ಷೆ ನಡೆಸುತ್ತದೆ. 'ಸಹಾಯಕ ಪ್ರೊಫೆಸರ್ ' ಮತ್ತು 'ಜೂನಿಯರ್ ರಿಸರ್ಚ್ ಫೆಲೋಶಿಪ್'ಗಾಗಿ ಅರ್ಹತೆ ಪರೀಕ್ಷೆ ನಡೆಸುತ್ತಿದೆ. 2018ರವರೆಗೆ ಯುಜಿಸಿ ಪರೀಕ್ಷೆಯಲ್ಲಿ ಮೂರು ಪೇಪರ್‌ಗಳಿದ್ದವು. 2019ರಲ್ಲಿ ಇದನ್ನು ಎರಡು ಪೇಪರ್‌ ಮಾಡಲಾಯಿತು. ಯುಜಿಸಿ ನೆಟ್‌ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ