logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಫಲಿತಾಂಶ; ಆರಂಭಿಕ ಹಂತದ ಮತ ಎಣಿಕೆ, ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ, ಕಾಂಗ್ರೆಸ್‌ನ ಅಜಯ್ ರಾಯ್‌ ಮುನ್ನಡೆ

ಲೋಕಸಭಾ ಫಲಿತಾಂಶ; ಆರಂಭಿಕ ಹಂತದ ಮತ ಎಣಿಕೆ, ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ, ಕಾಂಗ್ರೆಸ್‌ನ ಅಜಯ್ ರಾಯ್‌ ಮುನ್ನಡೆ

Umesh Kumar S HT Kannada

Jun 04, 2024 10:48 AM IST

google News

ಲೋಕಸಭಾ ಫಲಿತಾಂಶ; ಆರಂಭಿಕ ಹಂತದ ಮತ ಎಣಿಕೆ, ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ, ಕಾಂಗ್ರೆಸ್‌ನ ಅಜಯ್ ರಾಯ್‌ ಮುನ್ನಡೆ

  • ಲೋಕಸಭಾ ಫಲಿತಾಂಶ ಪ್ರಕಟವಾಗುತ್ತಿದ್ದು, ಆರಂಭಿಕ ಹಂತದ ಮತ ಎಣಿಕೆ ಪ್ರಗತಿಯಲ್ಲಿದೆ. ಉತ್ತರ ಪ್ರದೇಶಧ ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್‌ನ ಅಜಯ್ ರಾಯ್‌ ಮುನ್ನಡೆ ಉಂಟಾಗಿದ್ದು, ಆರಂಭಿಕ ಮತ ಎಣಿಕೆಯ ವಿವರ ಇಲ್ಲಿದೆ.

ಲೋಕಸಭಾ ಫಲಿತಾಂಶ; ಆರಂಭಿಕ ಹಂತದ ಮತ ಎಣಿಕೆ, ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ, ಕಾಂಗ್ರೆಸ್‌ನ ಅಜಯ್ ರಾಯ್‌ ಮುನ್ನಡೆ
ಲೋಕಸಭಾ ಫಲಿತಾಂಶ; ಆರಂಭಿಕ ಹಂತದ ಮತ ಎಣಿಕೆ, ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ, ಕಾಂಗ್ರೆಸ್‌ನ ಅಜಯ್ ರಾಯ್‌ ಮುನ್ನಡೆ

ವಾರಾಣಸಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರಂಭಿಕ ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜಯ್ ರಾಯ್‌ ವಿರುದ್ಧ ಬೆಳಗ್ಗೆ 9.30ರ ವೇಳೆಗೆ 1600ಕ್ಕೂ ಹೆಚ್ಚು ಮತಗಳ ಅಂತರ ಹಿನ್ನಡೆ ಅನುಭವಿಸಿದ್ದಾರೆ.

ಚುನಾವಣಾ ಆಯೋಗದ ಆರಂಭಿಕ ಮಾಹಿತಿ ಪ್ರಕಾರ, ಬೆಳಗ್ಗೆ 9.55ರ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು 19924 ( -1628) ಮತಗಳಿಸಿದ್ದಾರೆ. ಕಾಂಗ್ರೆಸ್‌ನ ಅಜಯ್ ರಾಯ್ ಅವರು 21552 (+ 1628) ಮತ ಗಳಿಸಿದ್ದಾರೆ. ಅಜಯ್ ರಾಯ್ ಅವರು 1628 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಳಿದವರ ಸ್ಪರ್ಧೆ ಇಲ್ಲಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ. ಪ್ರಧಾನಿ ಮೋದಿ ಮತ್ತು ಅಜಯ್ ರಾಯ್ ನಡುವೆ ನೇರ ಸ್ಪರ್ಧೆ ಕಂಡುಬಂದಿದೆ.

ಆರಂಭಿಕ ಹಿನ್ನಡೆಯ ಬಳಿಕ ಬೆಳಗ್ಗೆ 10 ಗಂಟೆಗೆ ಚುನಾವಣಾ ಆಯೋಗದ ಮಾಹಿತಿ ಅಪ್ಡೇಟ್ ಆಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು 438 ಮತಗಳ ಮುನ್ನಡೆ ದಾಖಲಿಸಿದ್ದಾರೆ. ಮೋದಿ 28719 (+ 436) ಮತಗಳಿಸಿದರೆ, ಅಜಯ್ ರಾಯ್ 28283 ( -436) ಗಳಿಸಿದ್ದಾರೆ.

(ಸುದ್ದಿ ಅಪ್ಡೇಟ್ ಆಗ್ತಾ ಇದೆ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ