logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೈಲ್ವೇ ಉದ್ಯೋಗಾಸಕ್ತರ ಗಮನಕ್ಕೆ; 190 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಂಕಣ ರೈಲ್ವೇ, ವೇತನ ಶ್ರೇಣಿ ಹೀಗಿದೆ ನೋಡಿ

ರೈಲ್ವೇ ಉದ್ಯೋಗಾಸಕ್ತರ ಗಮನಕ್ಕೆ; 190 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಂಕಣ ರೈಲ್ವೇ, ವೇತನ ಶ್ರೇಣಿ ಹೀಗಿದೆ ನೋಡಿ

Jayaraj HT Kannada

Aug 21, 2024 02:20 PM IST

google News

ರೈಲ್ವೇ ಉದ್ಯೋಗಾಸಕ್ತರ ಗಮನಕ್ಕೆ; 190 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಂಕಣ ರೈಲ್ವೇ

    • ಕೊಂಕಣ ರೈಲ್ವೇ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪ್ರಮುಖ ಹುದ್ದೆಗಳಿಗೆ ಆರಂಭಿಕ ವೇತನ 45 ಸಾವಿರ ರೂಪಾಯಿವರೆಗೂ ಇದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 6ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದು.
ರೈಲ್ವೇ ಉದ್ಯೋಗಾಸಕ್ತರ ಗಮನಕ್ಕೆ; 190 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಂಕಣ ರೈಲ್ವೇ
ರೈಲ್ವೇ ಉದ್ಯೋಗಾಸಕ್ತರ ಗಮನಕ್ಕೆ; 190 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೊಂಕಣ ರೈಲ್ವೇ

ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) ಒಟ್ಟು 190 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸೆಪ್ಟೆಂಬರ್ 16ರಿಂದ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಲಿವೆ. ವಿವಿಧ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹತಾ ಮಾನದಂಡಗಳು, ಆಯ್ಕೆ ವಿಧಾನ, ವೇತನ ಶ್ರೇಣಿ ಸೇರಿದಂತೆ ಎಲ್ಲಾ ಮಾಹಿತಿ ಇಲ್ಲಿದೆ. ಒಟ್ಟು 190 ಹುದ್ದೆಗಳಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್, ಟೆಕ್ನಿಷಿಯನ್, ಅಸಿಸ್ಟೆಂಟ್ ಲೊಕೊ ಪೈಲಟ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಕಮರ್ಷಿಯಲ್ ಸೂಪರ್‌ವೈಸರ್, ಟ್ರ್ಯಾಕ್ ಮೇಂಟೇನರ್ ಮತ್ತು ಪಾಯಿಂಟ್ಸ್ ಮ್ಯಾನ್ ಹುದ್ದೆಗಳು ಸೇರಿವೆ. ರೈಲ್ವೆಯಲ್ಲಿ ಉದ್ಯೋಗ ಬಯಸುವವರು ಆನ್‌ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ.

ಸೆಪ್ಟೆಂಬರ್ 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಕೊಂಕಣ ರೈಲ್ವೆಯ ಅಧಿಕೃತ ವೆಬ್‌ಸೈಟ್‌ (https://konkanrailway.com/) ಮೂಲಕ ಅರ್ಜಿ ಹಾಕಬಹುದು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ವಬ್‌ಸೈಟ್‌ನಲ್ಲಿ ಫಾರ್ಮ್ ಭರ್ತಿ ಮಾಡುವುದಕ್ಕೂ ಮೊದಲು, ಕೆಆರ್‌ಸಿಎಲ್ ಸೂಚಿಸಿರುವ ಅರ್ಹತಾ ಮಾನದಂಡಗಳನ್ನು ತಿಳಿದುಕೊಳ್ಳಿ. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಿವಾಸಿಗಳು ಮತ್ತು ಈಗಾಗಲೇ ಕೆಆರ್‌ಸಿಎಲ್‌ನಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ಹುದ್ದೆಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ಯಾವೆಲ್ಲಾ ಹುದ್ದೆಗಳಿವೆ?

  • ಸೀನಿಯರ್ ಸೆಕ್ಷನ್ ಇಂಜಿನಿಯರ್ -10
  • ಟೆಕ್ನಿಷಿಯನ್ I, II (Electrical) -15
  • ಟೆಕ್ನಿಷಿಯನ್‌ (ಮೆಕ್‌ಯಾನಿಕಲ್‌ -20
  • ಅಸಿಸ್ಟೆಂಟ್ ಲೊಕೊ ಪೈಲಟ್ -15
  • ಸ್ಟೇಷನ್ ಮಾಸ್ಟರ್ -10
  • ಗೂಡ್ಸ್ ಟ್ರೈನ್ ಮ್ಯಾನೇಜರ್ -5
  • ಕಮರ್ಷಿಯಲ್ ಸೂಪರ್‌ವೈಸರ್ -5
  • ಟ್ರ್ಯಾಕ್ ಮೇಂಟೇನರ್ -35
  • ಪಾಯಿಂಟ್ಸ್ ಮ್ಯಾನ್ -60

ಅರ್ಜಿ ಶುಲ್ಕ

ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ 885 ರೂ. (ಅರ್ಜಿ ಶುಲ್ಕ+GST) ಪಾವತಿಸಬೇಕಾಗುತ್ತದೆ. ಒಂದು ವೇಳೆ ಅಭ್ಯರ್ಥಿಯು SC, ST, ಮಾಜಿ ಸೈನಿಕ, ಸ್ತ್ರೀ, ಅಲ್ಪಸಂಖ್ಯಾತರು ಅಥವಾ EBC, ಮತ್ತು PwBD ವರ್ಗಗಳಿಗೆ ಸೇರಿದವರಾಗಿದ್ದರೆ, CBTಯಲ್ಲಿ ಕಾಣಿಸಿಕೊಂಡ ಬಳಿಕ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

  • ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಸೆಪ್ಟೆಂಬರ್ 16, 2024
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 6, 2024
  • ಕೊಂಕಣ ರೈಲ್ವೆ ಪರೀಕ್ಷಾ ದಿನಾಂಕ: ನವೆಂಬರ್ 2024 (ಬದಲಾವಣೆ ಸಾಧ್ಯತೆ)

ಅರ್ಹತೆ

ಸೀನಿಯರ್ ಸೆಕ್ಷನ್‌ ಇಂಜಿನಿಯರ್, ತಂತ್ರಜ್ಞ ಅಥವಾ ಯಾವುದೇ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು 2024ರ ಆಗಸ್ಟ್ 1ರಂತೆ 18ರಿಂದ 36 ವರ್ಷ ವಯಸ್ಸಿನವರಾಗಿರಬೇಕು. ವಿವಿಧ ಪೋಸ್ಟ್‌ಗಳಿಗೆ ವಿವಿಧ ವಿದ್ಯಾರ್ಹತೆಗಳ ಅಗತ್ಯವಿದೆ. ಈ ಕುರಿತು ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು.

ವೇತನ ಶ್ರೇಣಿ

ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ನೇಮಕಗೊಂಡ ನಂತರ ಅವರವರ ಕೆಲಸಕ್ಕೆ ಅನುಗುಣವಾಗಿ ಮಾಸಿಕ ಆರಂಭಿಕ ವೇತನವನ್ನು ಪಡೆಯುತ್ತಾರೆ. ಹಿರಿಯ ಸೆಕ್ಷನ್ ಇಂಜಿನಿಯರ್‌ಗೆ ಆರಂಭಿಕ ವೇತನವೇ ತಿಂಗಳಿಗೆ 44,900 ರೂಪಾಯಿ ನಿಗದಿಪಡಿಸಲಾಗಿದೆ. ಉಳಿದಂತೆ ಸೆಕ್ಷನ್‌ ಮಾಸ್ಟರ್‌ ಹಾಗೂ ಕಮರ್ಷಿಯಲ್‌ ಸೂಪರ್‌ವೈಸರ್‌ಗೆ 35400 ರೂಪಾಯಿ ವೇತನ ನೀಡಲಾಗುತ್ತದೆ. ಟಿಕ್ನಿಷಿಯನ್‌ ಮತ್ತು ಅಸಿಸ್ಟೆಂಟ್‌ ಲೋಕೊ ಪೈಲಟ್‌ಗೆ 19000 ವೇತನ ಇರಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ